Husband-Wife: ಕುಡಿಬೇಡ ಅಂತ ಹೆಂಡ್ತಿ ಬೈಯ್ದಿದ್ದೇ ತಪ್ಪಾಗೋಯ್ತು! ಕೋಪದಲ್ಲಿ ಗಂಡ ಏನ್​ ಮಾಡ್ದ ಗೊತ್ತಾ?


 ಸಾಂದರರ್ಭಿಕ ಚಿತ್ರ

ವಿನೋದ್ ಜಾದವ್ (48) ಕುಡಿತಕ್ಕೆ ದಾಸನಾಗಿದ್ದ, ಪ್ರತಿನಿತ್ಯ ಮದ್ಯ ಸೇವಿಸುತ್ತಿದ್ದ. ಆತ ಮದ್ಯ ಸೇವಿಸಿ ಮನೆಗೆ ಬಂದಾಗ ಪತ್ನಿ ಮತ್ತು ಪತಿ ನಡುವೆ ಮದ್ಯ ಸೇವಿಸುವ ವಿಚಾರವಾಗಿ ಪ್ರತಿನಿತ್ಯ ಜಗಳ ನಡೆಯುತ್ತಿತ್ತು.ರಾಜಸ್ಥಾನ: ತಾಳ್ಮೆ ಎಂಬುದು ಮನುಷ್ಯನಿಗೆ ಬಗಳ ಮುಖ್ಯ, ಆದರೆ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಈ ತಾಳ್ಮೆ ಎಂಬುದೇ ಕಾಣುತ್ತಿಲ್ಲ. ಸಣ್ಣ ಪುಟ್ಟ ವಿಚಾರಕ್ಕೆ ಜಗಳ (Quarrel1) ಮಾಡಿಕೊಂಡು ಆತ್ಮಹತ್ಯೆ (Suicide) ಮಾಡಿಕೊಳ್ಳುವುದು, ಕೊಲೆ (Murder) ಮಾಡುವುದು, ಗಂಡ- ಹೆಂಡತಿ ವಿಚ್ಛೇದನ (Divorce) ಪಡೆದುಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿವೆ. ರಾಜಸ್ಥಾನದ (Rajastan) ಭರತ್​ಪುರದಲ್ಲಿ ಇಂತಹ ಘಟನೆ ನಡೆದಿದ್ದು, ಕುಡಿತದ ಚಟಕ್ಕೆ ದಾಸನಾಗಿದ್ದ ವ್ಯಕ್ತಿಯೊಬ್ಬ ಪತ್ನಿಯೊಂದಿಗೆ ಜಗಳವಾಡಿ ಟಾಯ್ಲೆಟ್ ಕ್ಲೀನರ್ (Toilet Cleaner) ಕುಡಿದು ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ. ಈತ ಪ್ರತಿನಿತ್ಯ ಮದ್ಯ ಸೇವಿಸುತ್ತಿದ್ದ ಎಂದು ಹೇಳಲಾಗುತ್ತಿದ್ದು, ಇದನ್ನು ಪತ್ನಿ ವಿರೋಧಿಸುತ್ತಿದ್ದಳು. ಈ ವಿಚಾರವಾಗಿ ಇಬ್ಬರೂ ದಿನವೂ ಜಗಳವಾಡುತ್ತಿದ್ದರು. ಇದರಿಂದ ಕೋಪಗೊಂಡು, ಅದೇ ಸಿಟ್ಟಿನಲ್ಲಿ ವಿಷ ಸೇವಿಸಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.ಮದ್ಯದ ವಿಚಾರಕ್ಕೆ ಜಗಳ ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಕುಮ್ಹೇರ್ ಪಟ್ಟಣದಲ್ಲಿ ವಾಸಿಸುತ್ತಿದ್ದ ವಿನೋದ್ ಜಾದವ್ (48) ಕುಡಿತಕ್ಕೆ ದಾಸನಾಗಿದ್ದ, ಪ್ರತಿನಿತ್ಯ ಮದ್ಯ ಸೇವಿಸುತ್ತಿದ್ದ. ಆತ ಮದ್ಯ ಸೇವಿಸಿ ಮನೆಗೆ ಬಂದಾಗ ಪತ್ನಿ ಮತ್ತು ಪತಿ ನಡುವೆ ಮದ್ಯ ಸೇವಿಸುವ ವಿಚಾರವಾಗಿ ಪ್ರತಿನಿತ್ಯ ಜಗಳ ನಡೆಯುತ್ತಿತ್ತು. ಮೇ 26ರಂದು ಪತಿ ಮದ್ಯ ಸೇವಿಸಿ ಸಂಜೆ ಮನೆಗೆ ಬಂದಾಗ ಪತ್ನಿ ಮತ್ತೆ ಜಗಳವಾಡಿದ್ದಾಳೆ. ಜಗಳದಿಂದ ಕೋಪಗೊಂಡ ಪತಿ ಮದ್ಯದ ಅಮಲಿನಲ್ಲಿ ಶೌಚಾಲಯ ಸ್ವಚ್ಛಗೊಳಿಸಲು ಇಟ್ಟಿದ್ದ ಕೆಮಿಕಲ್ ಕುಡಿದಿದ್ದಾನೆ.ಇದನ್ನೂ ಓದಿ: Crime: ಪತ್ನಿ ಚಿಕನ್​ ಮಾಡಿಕೊಡಲಿಲ್ಲ ಎಂದು ಗಂಡನ ಆತುರದ ನಿರ್ಧಾರ! ಕ್ಷಣದಲ್ಲೇ ಹಾರಿಹೋಯ್ತು ಪ್ರಾಣಪಕ್ಷಿಟಾಯ್ಲೆಟ್ ಕ್ಲೀನರ್ ಕುಡಿದ ಪತಿ ಇದಾದ ಕೆಲ ಕ್ಷಣಗಳ ಬಳಿಕ ಟಾಯ್ಲೆಟ್​ ಕ್ಲೀನರ್​ ಸೇವಿಸಿ ವಿನೋದ್​ ಜೋರಾಗಿ ಕೂಗಲು ಶುರು ಮಾಡಿದ್ದಾನೆ. ಬಳಿಕ ಪತ್ನಿ ಕುಟುಂಬಸ್ತರಿಗೆ ಮಾಹಿತಿ ನೀಡಿದ್ದಾಳೆ. ಕುಟುಂಬಸ್ಥರು ಆತನನ್ನು ತಕ್ಷಣವೇ ಆತನನ್ನು ಕರೆದುಕೊಂದು ಹೋಗಿದ್ದಾರೆ. ಆದರೆ, ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.ಕೂಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಮೃತ ಕೂಲಿ ಕೆಲಸ ಮಾಡಿಕೊಂಡು ಬಂದ ಹಣದಲ್ಲಿ ಪ್ರತಿದಿನ ಮದ್ಯ ಸೇವಿಸುತ್ತಿದ್ದ. ಇದೇ ವೇಳೆ ಪತ್ನಿಯೊಂದಿಗೆ ಜಗಳವಾಡಿ ಟಾಯ್ಲೆಟ್ ಕ್ಲೀನರ್ ಕುಡಿದಾಗ ಹೊಟ್ಟೆ ಉರಿಯತೊಡಗಿದೆ. ವಿನೋದ್‌ನ ಪರಿಸ್ಥಿತಿ ನೋಡಿ ಸಂಬಂಧಿಕರು ಕುಮ್ಹೇರ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಅಲ್ಲಿಂದ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಆದರೆ ವಿನೋದ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಚಿಕನ್​ ಮಾಡದಿದ್ದಕ್ಕೆ ಆತ್ಮಹತ್ಯೆಹೆಂಡತಿ ಚಿಕನ್ ಮಾಡಿಕೊಡಲಿಲ್ಲ ಎಂಬ ಕಾರಣಕ್ಕೆ 36 ವರ್ಷದ ವ್ಯಕ್ತಿಯೊಬ್ಬ ನೇಣಿಗೆ ಶರಣಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಪವನ್​ ಫರ್ನಿಚರ್ ಕೆಲಸ ಮಾಡಿಕೊಂಡಿದ್ದ. ಸುಮಾರು 4 ವರ್ಷಗಳ ಹಿಂದೆ ಪ್ರಿಯಾಂಕಾ ಎಂಬಾಕೆಯನ್ನು ಮದುವೆಯಾಗಿದ್ದ. ಆತ ಕೆಲಸ ಮುಗಿಸಿ ಬರುವಾಗ ಚಿಕನ್ ತಂದಿದ್ದು, ಹೆಂಡತಿಗೆ ಅಡುಗೆ ಮಾಡುವಂತೆ ಹೇಳಿದ್ದಾನೆ. ಆದರೆ ಹಲವು ಬಾರಿ ಕೇಳಿಕೊಂಡರೂ ಪ್ರಿಯಾಂಕಾ ಚಿಕನ್ ಮಾಡಲಿಲ್ಲ. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಇದಾದ ನಂತರ ಪ್ರಿಯಾಂಕಾ ಮತ್ತೊಂದು ಕೋಣೆಗೆ ಹೋಗಿ ಮಲಗಿದ್ದಳು. ಇಲ್ಲಿ, ಪವನ್ ತನ್ನ ಕೋಣೆಯ ಬಾಗಿಲು ಮುಚ್ಚಿಕೊಂಡಿದ್ದ ಎಂದು ತಿಳಿದುಬಂದಿದೆ.ಇದನ್ನೂ ಓದಿ: Crocodiles: 72 ವರ್ಷದ ವಯೋವೃದ್ಧನನ್ನು ತಿಂದು ತೇಗಿದ 40 ಮೊಸಳೆಗಳು! ಪ್ರೀತಿಯಿಂದ ಸಾಕಿದ್ದೇ ಮುಳುವಾಯ್ತು!ಕೋಪದಲ್ಲಿ ನೇಣಿಗೆ ಶರಣುಅಣ್ಣ ಕಮಲೇಶ್ ಪ್ರಕಾರ, ಅವರು ಬುಧವಾರ ರಾತ್ರಿ ಟೆರೇಸ್ ಮೇಲೆ ಮಲಗಿದ್ದರಂತೆ. ರಾತ್ರಿ 1 ಗಂಟೆ ಸುಮಾರಿಗೆ ಕೆಳಗೆ ಬಂದಾಗ ಪವನ್ ಕೊಠಡಿಯ ಬಾಗಿಲು ಬಡಿದಿದ್ದಾರೆ. ಪವನ್ ಏನೂ ಪ್ರತಿಕ್ರಿಯಿಸದಿದ್ದಾಗ ತನ್ನ ಮಗಳಿಗೆ ಕಿಟಕಿಯಿಂದ ನೋಡಲು ತಿಳಿಸಿದ್ದಾರೆ. ಆಗ ಆತ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಇದಾದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಪೊಲೀಸರು ಬಂದು ಬಾಗಿಲನ್ನು ಹೊಡೆದು ಪವನ್ ಮೃತದೇಹವನ್ನು ಹೊರ ತೆಗೆದು, ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಪವನ್-ಪ್ರಿಯಾಂಕ ದಂಪತಿಗೆ 2 ವರ್ಷದ ಮಗಳಿದ್ದಾಳೆ.

Post a Comment

Previous Post Next Post