ಮತದಾನ ಜಾಗೃತಿ (ಸಾಂದರ್ಭಿಕ ಚಿತ್ರ)
Karnataka Elections: ರಜಾ ಹಾಕದೆ ಐಟಿ ಬಿಟಿ ಉದ್ಯೋಗಿಗಳು ತಮ್ಮ ಹಕ್ಕನ್ನು ಚಲಾಯಿಸುತ್ತಾರೋ ಅಥವಾ ಮತ್ತೊಂದು ಬಾರಿ ತಮ್ಮ ನಿರಾಸಕ್ತಿ ತೋರಿಸ್ತಾರಾ ಅನ್ನೋದು ಕಾದುನೋಡಬೇಕುಬೆಂಗಳೂರು: ಈಗಾಗಲೇ ವಿಧಾನಸಭಾ ಚುನಾವಣಾ ದಿನಾಂಕ (Karnataka Assembly Election) ಘೋಷಣೆಯಾಗಿದೆ. ಮೇ 10ಕ್ಕೆ ಅಗ್ನಿ ಪರೀಕ್ಷೆಗೆ ಅಭ್ಯರ್ಥಿಗಳು ತಮ್ಮನ್ನು ಒಡ್ಡಿಕೊಳ್ಳಲಿದ್ದಾರೆ. ಬೆಂಗಳೂರಿನ (Bengaluru) 28 ಕ್ಷೇತ್ರಗಳು ಕೂಡ ಸರ್ವಸನ್ನದ್ಧವಾಗಿ ನಿಂತಿದೆ. ಈ ಬಾರಿ ಬೆಂಗಳೂರಲ್ಲಿ ಮತದಾನ ಪ್ರಮಾಣ (Voting Percentage) ಹೆಚ್ಚಿಸಲು ಪಾಲಿಕೆ ಕೂಡ ಕಸರತ್ತು ನಡೆಸುತ್ತಿದೆ. ಬಹುತೇಕ ಅಭ್ಯರ್ಥಿಗಳ ಆಯ್ಕೆ (Candidate Selection) ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ.ಐಟಿ ಬಿಟಿ ರಾಜಧಾನಿಯೆಂದೇ ಹೆಸರಾಗಿರುವ ಬೆಂಗಳೂರಿನಲ್ಲಿ 2018ರಲ್ಲಿ ಆಗಿರುವ ಮತದಾನ ಪ್ರಮಾಣ ಎಷ್ಟು ಗೊತ್ತೇ? ಕೇವಲ 52% ಮಾತ್ರ. ಇದಕ್ಕೆ ಕಾರಣ ಉದ್ಯೋಗಿಗಳ ನಿರಾಸಕ್ತಿ ಮತ್ತು ರಜಾ ಹಾಕಿ ಊರಿಗೆ ಹೋಗೋ ಬಿಬಿಎಂಪಿ ಅಧಿಕಾರಿಗಳಿಗೆ ಟಾಸ್ಕ್ದುಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದಿಂದ ಬೆಂಗಳೂರು ಮತದಾನ ಪ್ರಮಾಣ ಹೆಚ್ಚಿಸಲು ಭರ್ಜರಿ ತಯಾರಿ ನಡೆಯುತ್ತಿದೆ. ಈ ಬಾರಿ ಮತದಾನದ ಪ್ರಮಾಣ ಹೆಚ್ಚಿಸಲು ಬಿಬಿಎಂಪಿ ಚುನಾವಣಾ ಅಧಿಕಾರಿಗಳಿಗೆ ಟಾಸ್ಕ್ ನೀಡಲಾ ಬಿಬಿಎಂಪಿ ಅಧಿಕಾರಿಗಳು ಸರಣಿ ಸಭೆ ಕೈಗೊಂಡಿದ್ದು, ನಗರದ ಅಪಾರ್ಟ್ಮೆಂಟ್ , ಸಂಘ ಸಂಸ್ಥೆಗಳು, ಐಟಿ ಬಿಟಿ ಕಂಪೆನಿಗಳಿಗೆ ಮತದಾನ ಮಹತ್ವದ ಬಗ್ಗೆ ಅರಿವು ಮೂಡಿಸಲಾಗಿದೆ
. ಗಿದೆ.. .ಡಿಸಲಾಗಿದೆ.ಸಾಂದರ್ಭಿಕ ಚಿತ್ರ
ಐಟಿ-ಬಿಟಿ ಕಂಪನಿಗಳ ಜೊತೆ ಬಿಬಿಎಂಪಿ ಸಭೆಐಟಿ ಬಿಟಿ ಹಾಗೂ ಅಪಾರ್ಟ್ಮೆಂಟ್ ಸಂಘಗಳ ಜೊತೆ ಪಾಲಿಕೆ ಅಧಿಕಾರಿಗಳು ನಿರಂತರ ಸಭೆ ನಡೆಸುತ್ತಿದ್ದು, ಮತದಾನ ದಿನ ಕಂಪನಿ ಕೆಲಸಗಾರರಿಗೆ ರಜೆ ನೀಡಬಾರದು ಹಾಗೂ ಮತದಾನ ನಡೆಸಲು ಅವಲಾಶ ಕಲ್ಪಿಸುವಂತೆ ಪಾಲಿಕೆ ಕೋರಿಕೊಂಡಿದೆ.2018ರಲ್ಲಿ ಬೆಂಗಳೂರು ನಗರದಲ್ಲಿ ಅತ್ಯಂತ ಕಡಿಮೆ ಮತದಾನ ಆಗಿರೋ ಹಿನ್ನೆಲೆಯಲ್ಲಿ ಈ ಬಾರಿ ಮತದಾನ ಪ್ರಮಾಣ ಏರಿಸಲು ಬಿಬಿಎಂಪಿ ಕಸರತ್ತು ನಡೆಸುತ್ತಿದೆ. ವಲಯವಾರು ಜಂಟಿ ಆಯುಕ್ತರ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು, ಐಟಿ ಬಿಟಿ ಕಂಪನಿಗಳ ಜೊತೆ ಬಿಬಿಎಂಪಿ ಚೀಫ್ ಕಮಿಷನರ್ ಖುದ್ದು ಸಭೆ ನಡೆಸಿ ಮನವರಿಕೆ ಮಾಡುತ್ತಿದ್ದಾರೆ.ಹೆಚ್ಚುವರಿ ರಜೆ ನೀಡದಂತೆ ಮನವಿಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಹಲವು ಟೆಕ್ ಕಂಪನಿಗಳ ಜೊತೆ ಪಾಲಿಕೆ ಕಮಿಷನರ್ ಈಗಾಗಲೇ ಸಭೆ ನಡೆಸಿದ್ದು, ವೀಕೆಂಡ್ ಜೊತೆಗೆ ಹೆಚ್ಚುವರಿ ರಜೆ ನೀಡಬಾರದು ಎಂದು ಮನವಿ ಮಾಡಿದ್ದಾರೆ. ಮೇ 10, ಬುಧವಾರ ಮತದಾನ ನಡೆಯಲಿದ್ದು, ಐಟಿ ಕಂಪನಿಗಳು ವೀಕೆಂಡ್ ಜೊತೆಗೆ ಎರಡು ಅಡಿಷನಲ್ ರಜೆ ಅಥವಾ ಮನೆಯಿಂದ ಕೆಲಸ ನೀಡುವ ಸಂಭವ ಹೆಚ್ಚಿದೆ.ಹೀಗಾದರೆ ಕಳೆದ ಬಾರಿಯಂತೆ ಈ ವಾರಿಯೂ ಮತದಾನ ಪ್ರಮಾಣ ಕುಸಿತ ಕಾಣುವ ಸಾಧ್ಯತೆ ಇದೆ. ಹೀಗಾಗಿ ಹೆಚ್ಚುವರಿ ರಜೆ ನೀಡಬಾರದು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಅಪಾರ್ಟ್ಮೆಂಟ್ ನಿವಾಸಿಗಳ ಜೊತೆಯಲ್ಲಿಯೂ ಚರ್ಚೆಈ ಬಗ್ಗೆ ಈಗಾಗಲೇ ನಗರ ಐಟಿ ಬಿಟಿ ಕಂಪೆನಿಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದ್ದು, ಮತದಾನ ದಿನದಂದು ಮತ ಚಲಾಯಿಸಲು ಅಲ್ಪ ಅವಧಿಯ ಬಿಡುವು ನೀಡಲು ಮನವಿ ಮಾಡಿಕೊಳ್ಳಲಿದ್ದಾರೆ.ಇನ್ನು ಎಲ್ಲಾ ಪರೀಕ್ಷೆಗಳು ಮುಗಿದು ಮಕ್ಕಳ ಶಾಲೆಗೂ ರಜೆ ಇರಲಿದೆ. ಈ ವೇಳೆ ಜನರು ಊರಿಗೆ ಹೊರಡುವ ಸಾಧ್ಯತೆ ಕೂಡ ದಟ್ಟವಾಗಿರುತ್ತೆ. ಅಪಾರ್ಟ್ಮೆಂಟ್ ನಿವಾಸಿಗಳು ರಜೆ ಹಿನ್ನೆಲೆಯಲ್ಲಿ ಊರಿಗೆ ತೆರಳಿದರೆ ಮತದಾನ ಪ್ರಮಾಣದ ಮೇಲೆ ಹೊಡೆತ ಬೀಳಲಿದೆ. ಹೀಗಾಗಿ ಅಪಾರ್ಟ್ಮೆಂಟ್ ನಿವಾಸಿಗಳಿಗೂ ಆದ್ಯತೆ ಮೇರೆಗೆ ಮತದಾನದ ಬಗ್ಗೆ ಪಾಲಿಕೆ ಮನವರಿಕೆ ಮಾಡಿಕೊಟ್ಟಿದೆ.ಮತದಾನ ಜಾಗೃತಿ ಕಾರ್ಯಕ್ರಮಗಳುಇನ್ನು ಈ ಬಗ್ಗೆ ಮಾತನಾಡಿರುವ ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್, ಕಳೆದ ಬಾರಿ ಬೆಂಗಳೂರಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿತ್ತು. ಈ ಬಾರಿ ಹೀಗಾಗಂತೆ ನೋಡಿಕೊಳ್ಳಲು ಕ್ರಮವಹಿಸಲಾಗಿದೆ. ಇದರ ಭಾಗವಾಗಿ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಪಾಲಿಕೆ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಬಾರಿ ಬೆಂಗಳೂರಲ್ಲಿ ಮತದಾನ ಪ್ರಮಾಣ ಹೆಚ್ಚಳವಾಗುವ ನಿರೀಕ್ಷೆ ಇದೆ.ಇದನ್ನೂ ಓದಿ: YSV Datta: ಕಾಂಗ್ರೆಸ್ ಟಿಕೆಟ್ ಸಿಗದಿದ್ದಕ್ಕೆ ವೈ.ಎಸ್.ವಿ ದತ್ತಾ ಯೂಟರ್ನ್! JDSಗೆ ಘರ್‌ವಾಪ್ಸಿ ಆಗ್ತಾರಾ ‘ಜೆಡಿಎಸ್ ಮೇಷ್ಟ್ರು’?ರಜಾ ಹಾಕದೆ ಐಟಿ ಬಿಟಿ ಉದ್ಯೋಗಿಗಳು ತಮ್ಮ ಹಕ್ಕನ್ನು ಚಲಾಯಿಸುತ್ತಾರೋ ಅಥವಾ ಮತ್ತೊಂದು ಬಾರಿ ತಮ್ಮ ನಿರಾಸಕ್ತಿ ತೋರಿಸ್ತಾರಾ ಅನ್ನೋದು ಕಾದುನೋಡಬೇಕು.


Post a Comment