ಜಗದೀಶ್ ಶೆಟ್ಟರ್, ಮಾಜಿ ಸಿಎಂ
ಇಂದು ಹೈಕಮಾಂಡ್ ಭೇಟಿ ಮಾಡಿದ ಬಳಿಕವೂ ಎರಡನೇ ಪಟ್ಟಿಯಲ್ಲಿ ಜಗದೀಶ್ ಶೆಟ್ಟರ್ ಹಾಗೂ ಈಶ್ವರಪ್ಪ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಆಗದಿರುವುದು ತೀವ್ರ ಕುತೂಹಲ ಮೂಡಿಸಿದೆ.ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Elections 2024) ಇಂದು ತಡರಾತ್ರಿ 23 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು (BJP Second List) ಬಿಜೆಪಿ ಹೈಕಮಾಂಡ್ ಬಿಡುಗಡೆ ಮಾಡಿದೆ. 23 ವಿಧಾನಸಭಾ ಕ್ಷೇತ್ರಗಳ ಪೈಕಿ, ಮೂವರು ಹಾಲಿ ಶಾಸಕರಿಗೆ ಟಿಕೆಟ್ ಕೊಟ್ಟಿದ್ದು, ಇನ್ನೂ 7 ಕ್ಷೇತ್ರ ಗಳಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ಕೊಟ್ಟಿಲ್ಲ. ಎರಡನೇ ಪಟ್ಟಿಯಲ್ಲೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಅವರ ಹೆಸರು ಮಿಸ್ ಆಗಿದೆ. ಇಂದು ದೆಹಲಿಗೆ (Delhi) ತೆರಳಿದ್ದ ಜಗದೀಶ್ ಶೆಟ್ಟರ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (JP Nadda) ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ಎಲ್ಲಾ ವಿಚಾರಗಳನ್ನು ನಾಯಕರಿಗೆ ತಿಳಿಸಿದ್ದೀನಿ ಎಂದು ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಇತ್ತ ಬಿಎಸ್ ಯಡಿಯೂರಪ್ಪ (BS Yediyurappa) ಅವರು ಕೂಡ ಶೆಟ್ಟರ್ಗೆ ಟಿಕೆಟ್ ನೀಡಲು ಹೈಕಮಾಂಡ್ಗೆ ತಿಳಿಸಿದ್ದೀನಿ ಎಂದು ಹೇಳಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆಯೂ ಎರಡನೇ ಪಟ್ಟಿಯಲ್ಲಿ ಜಗದೀಶ್ ಶೆಟ್ಟರ್ ಹಾಗೂ ಈಶ್ವರಪ್ಪ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಆಗದಿರುವುದು ತೀವ್ರ ಕುತೂಹಲ ಮೂಡಿಸಿದೆ.ಚರ್ಚಿಸಿ ಅಭಿಪ್ರಾಯ ತಿಳಿಸುವುದಾಗಿ ಹೇಳಿದ್ದಾರೆ; ಮಾಜಿ ಸಿಎಂ ಜಗದೀಶ್ ಶೆಟ್ಟರ್ನಾನು ನನ್ನ ಮನಸ್ಸಿನಲ್ಲಿದ್ದ ಎಲ್ಲಾ ಅಭಿಪ್ರಾಯ ಹೇಳಿದ್ದೇನೆ. ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ, ಈ ಬಾರಿಗೂ ಸ್ಪರ್ಧಿಸಬೇಕು ಎಂದುಕೊಂಡಿದ್ದೇನೆ. ನನ್ನ ಭಾವನೆ ಹಂಚಿಕೊಂಡಿದ್ದೇನೆ. ಅವರು ಎಲ್ಲವನ್ನು ಆಲಿಸಿದ್ದಾರೆ. ಹಿರಿಯ ನಾಯಕರ ಜೊತೆಗೆ ಚರ್ಚಿಸಿ ಅಭಿಪ್ರಾಯ ತಿಳಿಸುವುದಾಗಿ ನಡ್ಡಾ ಹೇಳಿದ್ದಾರೆ ಎಂದು ಸಭೆಯ ಬಳಿಕ ನವದೆಹಲಿಯಲ್ಲಿ ಜಗದೀಶ್ ಶೆಟ್ಟರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.ಇದನ್ನೂ ಓದಿ: BJP Second list: 23 ಅಭ್ಯರ್ಥಿಗಳ BJP 2ನೇ ಪಟ್ಟಿ ಪ್ರಕಟ; 6 ಹಾಲಿ ಶಾಸಕರಿಗೆ ಟಿಕೆಟ್ ಮಿಸ್ ಜಗದೀಶ್ ಶೆಟ್ಟರ್ಗೆ ಟಿಕೆಟ್ ನೀಡಲು ಹೇಳಿದ್ದೇನೆಪಕ್ಷ ಸ್ಥಳೀಯರ ಅಭಿಪ್ರಾಯದಂತೆ ಅಭ್ಯರ್ಥಿಗಳ ಘೋಷಣೆ ಮಾಡಿದೆ. ಎಲ್ಲಿಲ್ಲಿ ಬೇಸರ ಆಗಿದೆ ಅವರನ್ನು ಕರೆದು ಮಾತನಾಡಿಸುತ್ತೇವೆ. ಎಲ್ಲವೂ ಇವತ್ತು ನಾಳೆ ಸರಿ ಹೋಗುತ್ತದೆ. ಜಗದೀಶ್ ಶೆಟ್ಟರ್ ಡೆಲ್ಲಿಗೆ ಹೋಗಿದ್ದಾರೆ. ಅವರಿಗೆ ಪಕ್ಷ ಟಿಕೆಟ್ ಕೊಟ್ಟೆ ಕೊಡುತ್ತದೆ. ಅವರಿಗೆ ಟಿಕೆಟ್ ಕೊಡುವಂತೆ ನಾನು ವರಿಷ್ಠರಿಗೂ ಹೇಳಿದ್ದೇನೆ.ಆದರೆ ಸವದಿಯವರಿಗೆ ಎಲ್ಲಾ ಸ್ಥಾನಮಾನ ಕೊಟ್ಟರು ಕೂಡ ಈ ರೀತಿ ತೀರ್ಮಾನ ಮಾಡಿರುವುದು ಅವರೇ ಯೋಚನೆ ಮಾಡಬೇಕು. ಅವರಿಗೆ ಪಕ್ಷ ಎಲ್ಲವನ್ನೂ ಸ್ಥಾನಮಾನ ಕೊಟ್ಟಿದೆ. ಈಶ್ವರಪ್ಪನವರು ನನ್ನಂತೆ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಶಿವಮೊಗ್ಗ ನಗರದಲ್ಲಿ ಯಾರಿಗೆ ಟಿಕೆಟ್ ಎಂಬುದನ್ನು ವರಿಷ್ಠರು ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದ್ದರು.

Post a Comment