Karnataka Election: ಮಗನಿಗೆ ಟಿಕೆಟ್ ಕೊಟ್ಟು, ಆನಂದ್ ಸಿಂಗ್​ಗೆ ಟಾಸ್ಕ್ ನೀಡಿದ ಬಿಜೆಪಿ ಹೈಕಮಾಂಡ್?


 ಆನಂದ್ ಸಿಂಗ್- ಸಿದ್ಧಾರ್ಥ್ ಸಿಂಗ್

[4/1 ಪುತ್ರ ಸಿದ್ಧಾರ್ಥ್​ ಸಿಂಗ್​ಗೆ ಟಿಕೆಟ್ ಕೊಡುವ ಮೊದಲೇ ಬಿಜೆಪಿ ಕೆಲವು ಷರತ್ತುಗಳನ್ನು ಆನಂದ್ ಸಿಂಗ್ ಮುಂದೆ ಇರಿಸಿತ್ತು ಎನ್ನಲಾಗಿದೆ. ಈ ಷರತ್ತು ಒಪ್ಪಿದ ನಂತರವೇ ಆನಂದ್ ಸಿಂಗ್ ಪುತ್ರನಿಗೆ ಟಿಕೆಟ್​ ಲಭ್ಯವಾಗಿದೆ ಎನ್ನಲಾಗಿದೆ.ಕೊಪ್ಪಳ: ಬಿಜೆಪಿ ಮೊದಲ ಪಟ್ಟಿ (BJP Candidate List) ಹಲವು ಅಚ್ಚರಿಗಳನ್ನು ಒಳಗೊಂಡಿತ್ತು. ಅದರಲ್ಲಿ ಸಚಿವ ಆನಂದ್ ಸಿಂಗ್ (Minister Anand Singh) ಪುತ್ರ ಸಿದ್ದಾರ್ಥ ಸಿಂಗ್​ ಅವರಿಗೆ ವಿಜಯನಗರ (Vijayanagar) ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಸಿಕ್ಕಿದೆ. ಸೈಲೆಂಟ್​ ಆಗಿ ಮಗನಿಗೆ ಟಿಕೆಟ್ ಕೊಡಿಸುವಲ್ಲಿ ಆನಂದ್ ಸಿಂಗ್ ಯಶಸ್ವಿಯಾಗಿದ್ದಾರೆ. ಚುನಾವಣೆಯಿಂದ ಹಿಂದೆ ಸರಿದಿರುವ ಆನಂದ್​ ಸಿಂಗ್​ಗೆ ಬಿಜೆಪಿ ಹೈಕಮಾಂಡ್ (BJP High command)​ ಹೊಸ ಟಾಸ್ಕ್​ ನೀಡಿದೆ ಎಂದು ತಿಳಿದು ಬಂದಿದೆ. ಪುತ್ರ ಸಿದ್ಧಾರ್ಥ್​ ಸಿಂಗ್​ಗೆ ಟಿಕೆಟ್ ಕೊಡುವ ಮೊದಲೇ ಬಿಜೆಪಿ ಕೆಲವು ಷರತ್ತುಗಳನ್ನು ಆನಂದ್ ಸಿಂಗ್ ಮುಂದೆ ಇರಿಸಿತ್ತು ಎನ್ನಲಾಗಿದೆ. ಈ ಷರತ್ತು ಒಪ್ಪಿದ ನಂತರವೇ ಆನಂದ್ ಸಿಂಗ್ ಪುತ್ರನಿಗೆ ಟಿಕೆಟ್​ ಲಭ್ಯವಾಗಿದೆ ಎನ್ನಲಾಗಿದೆ.ಆನಂದ್ ಸಿಂಗ್​ಗೆ ನೀಡಿರುವ ಟಾಸ್ಕ್ ಏನು? ಆನಂದಸಿಂಗ್​ಗೆ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸುವ ಟಾಸ್ಕ್ ನೀಡಲಾಗಿದೆಯಂತೆ. ಈ ಚುನಾವಣೆಯಲ್ಲಿ ವಿಜಯನಗರ, ಗಂಗಾವತಿ, ಕೊಪ್ಪಳ ಕ್ಷೇತ್ರ ಗೆಲ್ಲಿಸುವ ಟಾಸ್ಕ್ ನೀಡಲಾಗಿದೆ ಎಂದು ತಿಳಿದು ಬಂದಿದೆ. ಈ ಬಾರಿ ಗಂಗಾವತಿಯಲ್ಲಿ ಹೊಸ ಪಕ್ಷ ಸ್ಥಾಪಿಸಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಸ್ಪರ್ಧೆ ಮಾಡಿದ್ದಾರೆ.ಒಂದು ವೇಳೆ ಸಂಸದ ಸಂಗಣ್ಣ ಕರಡಿ ವಿಧಾನಸಭಾ ಸ್ಪರ್ಧೆಗಾಗಿ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ರೆ, ಮುಂಬರುವ ಉಪ ಚುನಾವಣೆಗೆ ನೀವೇ ಅಭ್ಯರ್ಥಿಯಾಗಬೇಕೆಂಬ ಷರತ್ತು ಬಿಜೆಪಿ ಹೈಕಮಾಂಡ್ ಇರಿಸಿತ್ತು ಎನ್ನಲಾಗಿದೆ. ಇದನ್ನೂ ಓದಿ:  V Somanna: ಸಿದ್ದರಾಮಯ್ಯ ವಿರುದ್ಧ ಗೆದ್ದು ಬೀಗುತ್ತಾರಾ ಸೋಮಣ್ಣ? ಲಿಂಗಾಯತ ನಾಯಕನ ಏಳುಬೀಳು ಹೇಗಿತ್ತು?ಈ ಎಲ್ಲಾ ನಿಬಂಧನೆಗಳನ್ನು ಒಪ್ಪಿಕೊಂಡ ನಂತರವೇ ಆನಂದ್ ಸಿಂಗ್ ಪುತ್ರ  ಸಿದ್ಧಾರ್ಥ್ ಸಿಂಗ್​ಗೆ ಟಿಕೆಟ್ ನೀಡಲಾಗಿದೆ ಎಂಬ ಮಾತುಗಳು ಬಿಜೆಪಿ ಅಂಗಳದಲ್ಲಿ ಕೇಳಿ ಬರುತ್ತಿವೆ.

Post a Comment

Previous Post Next Post