ರಾಜ್ಯದ ಮಾರುಕಟ್ಟೆಗೆ Amul ಲಗ್ಗೆ: ಸೇವ್ ನಂದಿನಿ, ಗೋ ಬ್ಯಾಕ್ ಅಮುಲ್ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್


 #GoBackAmul, #SaveNandini ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗುತ್ತಿವೆ. ಅಮುಲ್ ಅನ್ನು ಬಹಿಷ್ಕರಿಸುವ ಸದ್ದು ಜೋರಾಗಿಯೇ ಸಾಮಾಜಿಕ ತಾಣದಲ್ಲಿ ರಿಂಗಣಿಸುತ್ತಿದೆ. ನಂದಿನಿ ವಸರ್ಸ್ ಅಮುಲ್ ಗುಜರಾತ್ (Gujarat) ಮೂಲದ ಹಾಲು (Milk) ಉತ್ಪಾದಕರ ಸಹಕಾರ ಸಂಘ ಅಮುಲ್ ಕರ್ನಾಟಕದ ಮಾರುಕಟ್ಟೆಗೆ ಆಗಮಿಸುವ ಎಲ್ಲಾ ಲಕ್ಷಣ ನಿಖರವಾಗುತ್ತಿದ್ದು ಈ ಹಿನ್ನೆಲೆಯಲ್ಲಿ #GoBackAmul, #SaveNandini ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗುತ್ತಿವೆ. ಅಮುಲ್ (Amul) ಅನ್ನು ಬಹಿಷ್ಕರಿಸುವ ಸದ್ದು ಜೋರಾಗಿಯೇ ಸಾಮಾಜಿಕ ತಾಣದಲ್ಲಿ ರಿಂಗಣಿಸುತ್ತಿದೆಭರ್ಜರಿಯಾಗಿ ಪ್ರಚಾರ ನೀಡುತ್ತಿರುವ ಅಮುಲ್ ಬ್ರ್ಯಾಂಅಮುಲ್ ನಿಮಗೆ ಹಾಲು ಹಾಗೂ ಮೊಸರಿನ ರೂಪದಲ್ಲಿ ಹೊಸ ತಾಜಾತನದ ಅನುಭವ ನೀಡಲಿದೆ. ತ್ವರಿತ ವಾಣಿಜ್ಯ ಪ್ಲಾಟ್‌ಫಾರ್ಮ್‌ಗಳಲ್ಲಿ ಶೀಘ್ರದಲ್ಲೇ ಲಭ್ಯ, ನಿಮ್ಮ ಮನೆಬಾಗಿಲಿಗೆ ಪೂರೈಕೆಯಾಗುವಂತೆ ಆರ್ಡರ್ ಮಾಡಬಹುದು, ಬೆಂಗಳೂರಿಗೆ ಶೀಘ್ರದಲ್ಲೇ ತಾಜಾ ಉತ್ಪನ್ನಗಳು, ಕೆಂಗೇರಿಯಿಂದ ವೈಟ್‌ಫೀಲ್ಡ್‌ವರೆಗೆ ತಾಜಾತನದ ಅನುಭವ ನಿಮ್ಮದಾಗಿಸಿ ಮೊದಲಾದ ಪ್ರೋಮೋಗಳು ಈಗ ಅಲ್ಲಲ್ಲಿ ಕಂಡುಬರುತ್ತಿದ್ದು ಸಾಮಾಜಿಕ ತಾಣದಲ್ಲಿ ಕಳವಳ ಸೃಷ್ಟಿಸಿದ್ದಂತೂ ಸುಳ್ಳಲ್ಲಇದನ್ನೂ ಓದಿ: Curd: ಇನ್ಮೇಲೆ ಕರ್ನಾಟಕದಲ್ಲಿ ದಹಿ ಸಿಗಲ್ಲ, ಬರೀ ಮೊಸರು ಮಾಸಾಮಾಜಿಕ ತಾಣದಲ್ಲಿ ಹ್ಯಾಶ್‌ಟ್ಯಾಗ್ ವಾಕರ್ನಾಟಕದ ಮಾರುಕಟ್ಟೆಗೆ ಅಮುಲ್ ಹಾಲು ಕಾಲಿಟ್ಟರೆ ರಾಜ್ಯದ ಸ್ಥಳೀಯ ಬ್ರ್ಯಾಂಡ್ ಆಗಿರುವ ನಂದಿನಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಆತಂಕದ ಹಿನ್ನಲೆಯಲ್ಲಿಯೇ ಹ್ಯಾಶ್‌ಟ್ಯಾಗ್ ವಾರ್ ಆರಂಭಗೊಂಡಿದೆ. ಮಂಡ್ಯದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅಮುಲ್ ಮತ್ತು ನಂದಿನಿ ಇವೆರಡೂ ಬ್ರ್ಯಾಂಡ್‌ಗಳನ್ನು ಕರ್ನಾಟಕದ ಜನತೆ ಸಮಾನವಾಗಿ ಸ್ವೀಕರಿಸಬೇಕು ಹಾಗೂ ಅಮುಲ್‌ಗೆ ಸಹಕಾರ ನೀಡಬೇಕು ಎಂಬ ಹೇಳಿಕೆಯ ನಂತರ ಈ ಬೆಳವಣಿಗೆ ಆರಂಭವಾಗಿನಂದಿನಿ ಬ್ರ್ಯಾಂಡ್‌ನ ವಿಚಾರದಲ್ಲಿ ಅಸಡ್ಡೆ ತಾಳಿರುವ ಒಕ್ಕೂಕರ್ನಾಟಕದ ಡೈರಿ ಮಾರುಕಟ್ಟೆಗೆ ಅಮುಲ್ ಪ್ರವೇಶವು ವಿಶೇಷವಾಗಿ ಹೈನುಗಾರರು, ವಿರೋಧ ಪಕ್ಷದ ನಾಯಕರು ಹಾಗೂ ಕನ್ನಡ ಪರ ಸಂಘಟನೆಗಳ ಕಣ್ಣು ಕೆಂಪಗಾಗಿಸಿವೆ ಹಾಗೂ ಅಮೂಲ್ ಗುಜರಾತ್‌ಗೆ ಪುನಃ ಮರಳಲಿ ಎಂಬ ಒತ್ತಾಯ ಹೆಚ್ಚಾಗುತ್ತಿಹೈನುಗಾರರು ಮತ್ತು ಕೆಎಂಎಫ್ ಅಧಿಕಾರಿಗಳು ನಂದಿನಿ ನಿಧಾನವಾಗಿ ತನ್ನ ಮಹತ್ವ ಕಳೆದುಕೊಳ್ಳುತ್ತಿದೆಯೇ ಎಂಬ ಆತಂಕಕ್ಕೆ ಒಳಗಾಗಿದ್ದಾರೆ. ಹಾಲು ಒಕ್ಕೂಟವು ಬ್ರ್ಯಾಂಡ್‌ನ ಪ್ರಚಾರದ ವಿಷಯದಲ್ಲಾಗಲೀ ಬ್ರ್ಯಾಂಡ್‌ನ ಮೌಲ್ಯವನ್ನು ಹೆಚ್ಚಿಸುವ ವಿಷಯದಲ್ಲಾಗಲೀ ಸಾಕಷ್ಟು ಕೆಲಸ ಮಾಡುತ್ತಿಲ್ಲ ಎಂದು ಕೆಎಂಎಫ್ ನಿರ್ದೇಶಕರಲ್ಲಿ ಒಬ್ಬರಾದ ಆನಂದ್ ಕುಮಾರ್ ತಿಳಿಸಿದ್ದಾರೆ. ಸರಕಾರ ಹೈನುಗಾರರಿಗೆ ಬೇಡಿಕೆಗೆ ಅನುಗುಣವಾಗಿ ಬೆಲೆ ನಿಗದಿಪಡಿಸುವ ಅರ್ಹತೆಯನ್ನು ನೀಡಬೇಕು ಎಂದು ತಿಳಿಸಿದ್ದಾಜಾಹೀರಾತಿನಿಂದಲೇ ನೆಲೆ ಗಟ್ಟಿ ಮಾಡಿಕೊಳ್ಳುತ್ತಿರುವ ಅಮುಅಮೂಲ್‌ಗಿಂತಲೂ ಉತ್ತಮ ಗುಣಮಟ್ಟದ ಹಾಲನ್ನು ಹೊಂದಿದ್ದರೂ ನಂದಿನಿ ಬ್ರ್ಯಾಂಡ್‌ನ ಮಾರುಕಟ್ಟೆ ಹಾಗೂ ಪ್ರಚಾರದಲ್ಲಿ ನಾವು ತುಂಬಾ ಹಿಂದುಳಿದಿದ್ದೇವೆ ಹಾಗಾಗಿಯೇ ನಂದಿನಿಯನ್ನು ಉಳಿಸುವ ಕೆಲಸ ಮಾಡಬೇಕಾಗಿದೆ ಎಂದು ಆನಂದ್ ತಿಳಿಸಿದ್ದಾಅಮುಲ್ ಹಾಲಿನ ಬಳಕೆಯು ಕೇವಲ ಶೇಕಡಾ 10 ರಷ್ಟಿದ್ದರೂ, ಅವರ ಜಾಹೀರಾತು ಶೇಕಡಾ 90 ರಷ್ಟಿದೆ, ಇದು ಕರ್ನಾಟಕದ ಹೈನುಗಾರರಿಗೆ ದೊಡ್ಡ ಆತಂಕವನ್ನು ಸೃಷ್ಟಿಸಿದೆ. ಅಮೂಲ್ ಬ್ರ್ಯಾಂಡ್ ಜಾಹೀರಾತಿನ ಮೂಲಕವೇ ಜನಪ್ರಿಯತೆ ಗಳಿಸುತ್ತಿದೆ ಎಂಬುವುದು ಆನಂದ್ ಮಾತಾಗಿದೆ. ನಂದಿನಿಯ ಬ್ರ್ಯಾಂಡ್ ಮೌಲ್ಯವನ್ನು ಹೆಚ್ಚಿಸಲು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ನಾವು ದೃಢವಾದ ಜಾಹೀರಾತು ಅಭಿಯಾನವನ್ನು ಜಾರಿಗೊಳಿಸಬೇಕಾಗಿದೆ ಎಂಬುದು ಅವರ ಅಭಿಪ್ರಾಯವಾಗಿಅಮುಲ್ ವಿರುದ್ಧ ಪ್ರತಿಭಟನೆ ಕೈಗೊಳ್ಳುವುದಾಗಿ ಎಚ್ಚಸಬ್ಸಿಡಿಗಾಗಿ ಹೈನುಗಾರರು ಸರಕಾರವನ್ನು ಅವಲಂಬಿಸಿರುವುದೇ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ ಎಂಬುದು ಕೆಲವು ಅಧಿಕಾರಿಗಳ ಮಾತಾಗಿದೆ. ನಂದಿನಿ ಉತ್ಪನ್ನಗಳ ಬೆಲೆ ನಿಗದಿಯಲ್ಲಿ ಅಮುಲ್‌ನಂತೆ ಹೈನುಗಾರರಿಗೂ ಮುಕ್ತ ಅವಕಾಶ ನೀಡಬೇಕು ಎಂದು ತಿಳಿಸಿದ್ದಾರೆ. ಸರಕಾರವು ಹಾಲಿಗೆ ಲೀಟರ್‌ಗೆ 5-10 ರೂ ನೀಡಲಿ ಎಂದು ಅಧಿಕಾರಿಗಳು ಆಗ್ರಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ವಿಷಯದ ಕುರಿತು ಆಡಳಿತ ಮಂಡಳಿ ಸಭೆಯಲ್ಲಿ ಪ್ರಸ್ತಾಪಿಸುತ್ತೇವೆ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ಅಮುಲ್ ವಿರುದ್ಧ ಪ್ರತಿಭಟನೆ ಕೂಡ ಕೈಗೊಳ್ಳುತ್ತೇವೆ ಎಂದು ಆನಂದ್ ಎಚ್ಚರಿಕೆ ನೀಡಿದ್ದಾಇದನ್ನೂ ಓದಿ: Hindi Imposition: ನಂದಿನಿ ಕನ್ನಡಿಗರ ಸ್ವಾಭಿಮಾನ; ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಹೆಚ್ಡಿಬಿಜೆಪಿ ಸರಕಾರದ ಮೇಲೆ ಸಿದ್ಧರಾಮ್ಯ ವಾಗ್ಧಾಟ್ವಿಟರ್‌ನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕರ್ನಾಟಕ ಬಿಜೆಪಿ ಸರ್ಕಾರ ಅಮುಲ್‌ಗೆ ಪ್ರವೇಶ ನೀಡಲು ಅವಕಾಶ ಒದಗಿಸಿದ್ದಕ್ಕಾಗಿ ಕಟುವಾಗಿ ಟೀಕಿಸಿದ್ದಾರೆ. ಅಮುಲ್ ಕರ್ನಾಟಕಕ್ಕೆ ಬಂದರೆ ಕನ್ನಡಿಗರ ಆಸ್ತಿಗೆ ಧಕ್ಕೆಯಾಗಲಿದೆ ಎಂಬ ಎಚ್ಚರಿಕೆ ನೀಡಿದ್ದಾರೆ. @PMOIndia @narendramodi, @HMOIndia @AmitShah ಡಬಲ್ ಇಂಜಿನ್ ಸರಕಾರದ ಬಗ್ಗೆ ಎಚ್ಚರಿಕೆಯಿಂದಿರಿ ಎಂದು ರಾಜ್ಯದ ಜನತೆಗೆ ಎಚ್ಚರಿಕೆ ನೀಡಿದ್ದಾಕೇಂದ್ರ ಸಹಕಾರಿ ಸಚಿವ ಅಮಿತ್‌ಶಾ ಅವರು KMF ಮತ್ತು ಅಮುಲ್ ವಿಲೀನದ ಸಾಧ್ಯತೆಯ ಬಗ್ಗೆ ಮಾತನಾಡಿದ ದಿನದಿಂದ ರಾಜ್ಯದ ಹಾಲು ಉತ್ಪಾದನೆಯು ಪರಿಣಾಮ ಬೀರಿದೆ ಎಂದು ಸಿದ್ಧರಾಮಯ್ಯ ತಿಳಿಸಿದ್ದಾರೆ. ರೆ.ಳಿಕೆರೆ.ರಿಕೆದೆ.ರೆ.ಲ್ರೆ.ದೆ.ಟದೆ.ರ್ತ್ರ!.ಡ್. ಪರಿಣಾಮ ಬೀರಿದೆ ಎಂದು ಸಿದ್ಧರಾಮಯ್ಯ ತಿಳಿಸಿದ್ದಾರೆ.

Post a Comment

Previous Post Next Post