ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ
ಗಲಾಟೆ ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ಪೊಲೀಸರು ಮತ್ತು ಪ್ರತಿಭಟನಾನಿರತರ ನಡುವೆ ತಳ್ಳಾಟ ನೂಕಾಟ ನಡೆಯುತ್ತಿದೆ ಶಿವಮೊಗ್ಗ: ಒಳ ಮೀಸಲಾತಿ (Reservation) ಕೇಂದ್ರಕ್ಕೆ ಶಿಫಾರಸ್ಸು ವಿರೋಧಿಸಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (Former CM BS Yediyurappa) ನಿವಾಸದ ಮೇಲೆ ಕಲ್ಲು ತೂರಾಟ (Stone Pelting) ನಡೆಸಲಾಗಿದೆ. ಶಿಕಾರಿಪುರದ (Shikaripura) ತಾಲೂಕು ಬಂಜಾರ ಸಮಾಜ (Banjara Community) ವತಿಯಿಂದ ಪ್ರತಿಭಟನೆ ನಡೆಸಲಾಗುತ್ತಿತ್ತು. ಪ್ರತಿಭಟನಾನಿತರನ್ನು ನಿಯಂತ್ರಿಸಲು ಪೊಲೀಸರು (Police) ಲಾಠಿ ಸಹ ಬೀಸಿದ್ದಾರೆ. ಗಲಾಟೆ ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ಪೊಲೀಸರು ಮತ್ತು ಪ್ರತಿಭಟನಾನಿರತರ ನಡುವೆ ತಳ್ಳಾಟ ನೂಕಾಟ ನಡೆಯುತ್ತಿದೆ.ಇಂದು ಒಳ ಮೀಸಲಾತಿ ವಿರೋಧಿಸಿ ತಾಲೂಕು ಬಂಜಾರ ಸಮುದಾಯ ಪ್ರತಿಭಟನೆಗೆ ಕರೆ ನೀಡಿತ್ತು. ಈ ಹಿನ್ನೆಲೆ ಶಿಕಾರಿಪುರದಲ್ಲಿ ಸೇರಿದ ಪ್ರತಿಭಟನಾ ನಿರತರು ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು.ಕಿಟಕಿ ಗಾಜುಗಳು ಪುಡಿ ಪುಡಿಈ ವೇಳೆ ಕೆಲ ಉದ್ರಿಕ್ತರು ಶಿಕಾರಿಪುರದಲ್ಲಿದ್ದ ಮಾಜಿ ಸಿಎಂ ಯಡಿಯೂರಪ್ಪ ನಿವಾಸ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಪೊಲೀಸರು ಅವಕಾಶ ನೀಡದ್ದಕ್ಕೆ ಕಲ್ಲು ತೂರಾಟ ನಡೆಸಿ ಕಿಟಕಿಯ ಗಾಜುಗಳನ್ನು ಒಡೆದಿದ್ದಾರೆ. ಯಡಿಯೂರಪ್ಪ ನಿವಾಸದ ಮುಂದೆ ಹಾಕಲಾಗಿದ್ದ ಬ್ಯಾನರ್ಗಳನ್ನು ಸಹ ಹರಿದು ಹಾಕಲಾಗಿದೆ. ನಿವಾಸದ ಮೇಲೆ ಚಪ್ಪಲಿ ಎಸೆದು ಆಕ್ರೋಶ ಹೊರಹಾಕಿದರು.ಪೊಲೀಸರಿಗೂ ಗಾಯಕಲ್ಲು ತೂರಾಟದ ವೇಳೆ ಕೆಲ ಪೊಲೀಸರು ಗಾಯಗೊಂಡಿದ್ದಾರೆ. ಇನ್ನು ಮತ್ತೊಂದು ಕಡೆ ತಾಲೂಕು ಕಚೇರಿ ಮುಂದೆಯೂ ಅಪಾರ ಸಂಖ್ಯೆಯಲ್ಲಿ ಸೇರಿರುವ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.ಇದನ್ನೂ ಓದಿ: Karnataka Election 2023: ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್ ಶಾ ಅಭಯ; ಫುಲ್ ಖುಷಿ ಆದ್ರಂತೆ ಚುನಾವಣಾ ಚಾಣಕ್ಯಪ್ರತಿಭಟನೆ ನಿಯಂತ್ರಣಕ್ಕೆ ಬರದ ಹಿನ್ನೆಲೆ ಪೊಲೀಸರು ಲಾಠಿ ಬೀಸಿ ಕೆಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಇಂದು ರಾಜ್ಯದ ಹಲವೆಡೆ ಬಂಜಾರ ಸಮುದಾಯ ಇದೇ ವಿಷಯವಾಗಿ ಪ್ರತಿಭಟನೆ ನಡೆಸುತ್ತಿದೆ.

Post a Comment