Srirangapatna | Jamia Masjid:10 ದಿನದೊಳಗೆ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಖಾಲಿ ಮಾಡಿಸಿ; ಹಿಂದೂ ಜಾಗರಣ ವೇದಿಕೆಯಿಂದ ಆಗ್ರಹ


  ಜಾಮಿಯಾ ಮಸೀದಿ

ಮದರಸ ಖಾಲಿ ಮಾಡಿಸಿ. ಇಲ್ಲವೇ ನಮಗೂ ಹನುಮಾನ್ ಚಾಲೀಸಾ, ಭಜನೆಗೆ ಅವಕಾಶ ಕೊಡಿ ಎಂದು ಶ್ರೀರಂಗಪಟ್ಟಣ ಹಿಂದೂ ಜಾಗರಣ ವೇದಿಕೆ ಪದಾಧಿಕಾರಿಗಳು ಆಗ್ರಹಿಸಿದ್ದಾರೆ

 ಮಂಡ್ಯ: ರಾಜ್ಯದಲ್ಲಿ ಮತ್ತೆ ಧರ್ಮ ದಂಗಲ್ ನಡೆಯುವ ಲಕ್ಷಣ ಕಂಡುಬರುತ್ತಿದೆ. ಶ್ರೀರಂಗಪಟ್ಟಣದ ಜಾಮಿಯ ಮಸೀದಿಯಲ್ಲಿ (Jamia Masjid)  ಅಕ್ರಮ ಮದರಸ ನಡೆಯುತ್ತಿದೆ. ಮದರಸ ಖಾಲಿ ಮಾಡಿಸಲು 10 ದಿನಗಳ ಗಡುವು ನೀಡಿ. 10 ದಿನಗಳ ಒಳಗೆ ಮದರಸ ಖಾಲಿ ಮಾಡಿಸಿ. ಇಲ್ಲವೇ ನಮಗೂ ಹನುಮಾನ್ ಚಾಲೀಸಾ, ಭಜನೆಗೆ ಅವಕಾಶ ಕೊಡಿ ಎಂದು ಶ್ರೀರಂಗಪಟ್ಟಣ (Srirangapatna) ಹಿಂದೂ ಜಾಗರಣ ವೇದಿಕೆ ಪದಾಧಿಕಾರಿಗಳು, ಕಾರ್ಯಕರ್ತರು ಪ್ರಾಚ್ಯವಸ್ತು ಮತ್ತು ಭಾರತೀಯ ಪರಿವೀಕ್ಷಣಾ ಇಲಾಖೆ ಸಹಾಯಕ ಸಂರಕ್ಷಣಾಧಿಕಾರಿಗೆ ಮನವಿ ಮಾಡಿದ್ದಾರೆ. ಶ್ರೀರಂಗಪಟ್ಟಣದ ಹಿಂದೂ ಜಾಗರಣ ವೇದಿಕೆಯ ಸಂಚಾಲಕ ಚಂದನ್, ಮುಖಂಡ ಬಾಲರಾಜು ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದೆ

ಏನಿದು ಪ್ರಕ

ಟಿಪ್ಪು ಜಾಮಿಯಾ ಮಸೀದಿಗೆ ನುಗ್ಗಲು ಹಿಂದೂ ಸಂಘಟನೆಗಳ ಯತ್ನಿಸಿದ್ದರು. ಹಿಂದೂ ಸಂಘಟನೆಗಳ ಮಸೀದಿ ಪ್ರವೇಶವನ್ನು ಪೊಲೀಸರು ತಡೆದಿದ್ದರು. ಈ ವೇಳೆ ಹಿಂದೂ ಕಾರ್ಯಕರ್ತನಿಗೆ (ಬಾಲಕ) ಪೊಲೀಸರು ಬೆದರಿಕೆ ಹಾಕಿದ್ದರು.. ಬೆದರಿಕೆ ಹಾಕಿದ್ದ ಪೊಲೀಸರ ವಜಾಕ್ಕೆ ಆಗ್ರಹಿಸಿ, ಹಿಂದೂ ಸಂಘಟನೆ ಕಾರ್ಯಕರ್ತರು ಶ್ರೀರಂಗಪಟ್ಟಣ ಪೊಲೀಸ್‌ ಠಾಣೆ ಮುಂದೆಯೇ ಪ್ರತಿಭಟನೆ ನಡೆಸಿದ್ದರು. ಇದೀಗ ಪ್ರತಿಭಟನೆಗೆ ಮಣಿದಿರುವ ಇಲಾಖೆ ಏಳು ಜನರ ವಿರುದ್ಧ ಎಫ್ಐಆರ್  ದಾಖಲಿಸಲಾಗಿತ್ತು

ತಡರಾತ್ರಿ ಏಳು ಪೊಲೀಸರ ವಿರುದ್ಧ FIR ದಾಖಲಾಗಿತ್ತು. ಉಮೇಶ್, ಪ್ರಕಾಶ್, ಕೃಷ್ಣ, ವಿಜಯ್, ಶರತ್, ಹರೀಶ್ ಮತ್ತು ಮಂಜುನಾಥ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು

ಮುಸ್ಲಿಮರ ಪರವಾಗಿ ಬೆದರಿಕೆ ಹಾಕಿರೋ ಆ

ಎರಡು ದಿನಗಳ ಹಿಂದೆ ತಡರಾತ್ರಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತನ ಮನೆಗೆ ಹೋಗಿದ್ದ ಈ 7 ಜನ ಪೊಲೀಸರು ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದರು. ಪೊಲೀಸ್ ಠಾಣೆಗೆ ಕರೆತಂದಾಗ ಮುಸ್ಲಿಮರ ಪರವಾಗಿ ಬೆದರಿಕೆ ಹಾಕಲಾಗಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿದ್ದವು

ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ

ವಿಶ್ವದಲ್ಲಿ 53 ಮುಸ್ಲಿಂ ರಾಷ್ಟ್ರಗಳಿವೆ, ನಿನ್ನ ರುಂಡ ಮುಂಡ ಕತ್ತರಿಸುತ್ತಾರೆಂದು ಪೊಲೀಸರು ಯುವಕನನ್ನು ಹೆದರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರ ಬೆದರಿಕೆ ಹಿನ್ನೆಲೆ ಶನಿವಾರ ಬೆಳಗ್ಗಿನಿಂದ ಹಿಂದೂಪರ ಸಂಘಟನೆ ಕಾರ್ಯಕರ್ತರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದರು

ಇದನ್ನೂ ಓದಿ: Positive Story: ಬ್ಯಾಡಗಿ ಮೆಣಸಿಗೆ ಬಂಗಾರದ ಬೆಲೆ; ಖಾರದಿಂದಲೂ ಸಿಕ್ತು ಸಿ

ರಾತ್ರಿ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆ ಜಾಮಿಯ ಮಸೀದಿ ಬಳಿ ಪ್ರತಿಭಟನಾಕಾರರು ತೆರಳಿದ್ದರು. ಈ ವೇಳೆ ಜಾಮೀಯ ಮಸೀದಿ ಒಳ ನುಗ್ಗಲು ಯತ್ನಿಸಿದ್ದರು. ನಂತರ ಪೊಲೀಸ್ ಮತ್ತು ಹಿಂದೂಪರ ಸಂಘಟನೆ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ತಳ್ಳಾಟ ನೂಕಾಟ ಸಹ ಏರ್ಪಟ್ಟಿತ್ತು. ನಂತರ ಜಾಮೀಯ ಮಸೀದಿ ಬಳಿ ಪ್ರತಿಭಟನೆ ಮುಂದುವರಿಸಲಾಗಿತ್ತು

ಇದನ್ನೂ ಓದಿ: Chamarajangar: ದಕ್ಷಿಣ ಆಫ್ರಿಕಾ ಮೂಲದ ಬೆಳೆಯಿಂದ ಲಾಭ ಪಡೆದ ಚಾಮರಾಜನಗರ ರೈ

ಎಫ್ಐಆರ್ ಬೆನ್ನಲ್ಲೇ ಪ್ರತಿಭಟನೆ ಕೈ ಬಿಟ್ಟ ಕಾರ್ಯಕರ್ತ

ತಡರಾತ್ರಿ ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಪೊಲೀಸ್ ಇಲಾಖೆ 7 ಜನ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸಿ ಸೂಕ್ತ ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿತ್ತು. ಎಫ್ಐಆರ್ ದಾಖಲಾದ ಹಿನ್ನೆಲೆ ಹಿಂದುಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ಕೈಬಿಟ್ಟಿದ್ದರು. ರುತರು!.ಹಿ!..ರೋಪ..ರಣ?..ತಿಭಟನೆ ಕೈಬಿಟ್ಟಿದ್ದರು.

Post a Comment

Previous Post Next Post