Mallikarjun Kharge: ದೇಶಕ್ಕಾಗಿ ನಿಮ್ಮ ಮನೇಲಿ ಒಂದು ನಾಯಿಯಾದ್ರೂ ಸತ್ತಿದ್ಯಾ ಎಂದಿದ್ದಕ್ಕೆ ಬಿಜೆಪಿ ಗರಂ, ಕ್ಷಮೆಯಾಚಿಸೋದಿಲ್ಲ ಎಂದ ಖರ್ಗೆ!


  ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

 ನವದೆಹಲಿ: ಸಂಸತ್ತಿನಲ್ಲಿ ಕಾಂಗ್ರೆಸ್ (Congress) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ನೀಡಿದ್ದ ನಾಯಿ ಎಂಬ ಹೇಳಿಕೆಗೆ ಕ್ಷಮೆಯಾಚಿಸಬೇಕೆಂದು ಬಿಜೆಪಿಗರು ಒತ್ತಾಯಿಸಿದ್ದಾರೆ. ಆದರೆ ಮಲ್ಲಿಕಾರ್ಜುನ ಖರ್ಗೆ ಅವರು ತಾವು ನೀಡಿದ್ದ ಹೇಳಿಕೆಗೆ ಕ್ಷಮೆ ಕೇಳಲು ನಿರಾಕರಿಸಿದ್ದಾರೆ. ಇದರಿಂದ ಕೆಲಹೊತ್ತು ಸಂಸತ್ತಿನಲ್ಲಿ (Parliament) ಭಾರೀ ಗದ್ದಲ ಏರ್ಪಟ್ಟಿತ್ತು. ರಾಹುಲ್ ಗಾಂಧಿಯವರ (Rahul Gandhi) ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ (Bharat Jodo Yatra) ಯಾತ್ರೆ ಕುರಿತಂತೆ ಭಾರತ್ ತೋಡೋ ಎಂದು ಲೇವಡಿ ಮಾಡಿದ್ದ ಬಿಜೆಪಿಗರಿಗೆ ನಿನ್ನೆ ಮಲ್ಲಿಕಾರ್ಜುನ ಖರ್ಗೆ ಅವರು ತಿರುಗೇಟು ನೀಡಿದ್ದರು. ಇಂದಿರಾ ಗಾಂಧಿ (Indira Gandhi) ಮತ್ತು ರಾಜೀವ್ ಗಾಂಧಿ (Rajeev Gandhi) ಅವರಂತಹ ಮಹಾ ನಾಯಕರು ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಆದರೆ ನಿಮ್ಮ ಮನೆಯಲ್ಲಿ ಒಂದು ನಾಯಿಯಾದರೂ (Dog) ದೇಶಕ್ಕಾಗಿ ಸತ್ತಿದ್ಯಾ ಎಂದು ಪ್ರಶ್ನಿಸಿದ್ದರು

 ಹೌದು, ನಿನ್ನೆ ರಾಜಸ್ಥಾನದ ಅಲ್ವಾರ್ನಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಖರ್ಗೆ ಅವರು, ಈ ವೇಳೆ ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟಿದೆ. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರಂತಹ ಮಹಾ ನಾಯಕರು ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಆದರೆ ನಿಮ್ಮ ಮನೆಯಲ್ಲಿ ಒಂದು ನಾಯಿಯಾದರೂ ದೇಶಕ್ಕಾಗಿ ಸತ್ತಿದ್ಯಾ? ಬಿಜೆಪಿಯವರು ದೇಶಭಕ್ತರೆಂದು ಹೇಳಿಕೊಂಡು ಓಡಾಡುತ್ತಾರೆ. ಆದರೆ ನಾವು ಏನನ್ನಾದರೂ ಹೇಳಿದರೆ ನಮ್ಮನ್ನು ದೇಶದ್ರೋಹಿಗಳು, ರಾಷ್ಟ್ರ ವಿರೋಧಿಗಳು ಎಂದು ಕರೆಯುತ್ತಾರೆ ಎಂದು ವಾಗ್ದಾಳಿ ನಡೆಸಿದ್ದರು


.ಮಾಜಿ ಪ್ರಧಾನಿ ಇಂದಿರಾ ಗಾಂಧಿ

 ಬಿಜೆಪಿಗರು ಮೇಲ್ನೋಟಕ್ಕೆ ಸಿಂಹ, ಆದ್ರೆ ವರ್ತಿಸೋದು ಇಲಿಯಂತೆ

ಅಲ್ಲದೇ ಸಂಸತ್ತಿನಲ್ಲಿ ಚೀನಾದೊಂದಿಗಿನ ಗಡಿ ಘರ್ಷಣೆಯ ಬಗ್ಗೆ ಮಾತನಾಡಲು ಅವಕಾಶ ನೀಡದಿದ್ದಕ್ಕಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಮಲ್ಲಿಕಾರ್ಜುನ ಖರ್ಗೆ ಅವರು, ಬಿಜೆಪಿಗರು ಮೇಲ್ನೋಟಕ್ಕೆ ಸಿಂಹದಂತೆ ಮಾತನಾಡುತ್ತಾರೆ, ಆದರೆ ನೋಡಿದರೆ ಇಲಿಯಂತೆ ವರ್ತಿಸುತ್ತಾರೆ ಎಂದು ವ್ಯಂಗ್ಯವಾಡಿದ್ದರು. ಆದರೆ, ಇಂದು ಸಂಸತ್ತಿನಲ್ಲಿ ಚರ್ಚೆ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ವಿರುದ್ಧ ಟೀಕಿಸಿದ್ದ ಮಲ್ಲಿಕಾರ್ಜುನ ಖರ್ಗೆ ಅವರು, ಕ್ಷಮೆಯಾಚಿಸಬೇಕು ಎಂದು ಬಿಜೆಪಿಗರು ಧ್ವನಿ ಎತ್ತಿದರು.

ಇದನ್ನೂ ಓದಿ: Karnataka Congress: 2023ರ ಚುನಾವಣೆ ಗೆಲ್ಲಲು ಕರ್ನಾಟಕ ಕಾಂಗ್ರೆಸ್​ಗೆ ಖರ್ಗೆ ದಶಸೂತ್ರ; ಸಭೆಯಲ್ಲಿ ಮಹತ್ವದ ನಿರ್ಧಾರಗಳು

ಖರ್ಗೆ ಹೇಳಿಕೆಯನ್ನು ಖಂಡಿಸುತ್ತೇವೆ ಅಂದ ಪಿಯೂಷ್ ಘೋಷಲ್

ಸಭೆಯಲ್ಲಿ ಮಾತನಾಡಿದ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು, ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಅವಹೇಳನಕಾರಿ ಭಾಷೆ ಬಳಸಿದ ಮತ್ತು ಸುಳ್ಳು ಹೇಳಲು ಪ್ರಯತ್ನಿಸಿದ್ದಾರೆ. ಹೀಗಾಗಿ ಅವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: Karnataka Election 2023: ಖರ್ಗೆಗೆ ತವರು ಗೆಲ್ಲುವ ಸವಾಲು; ಕರ್ನಾಟಕ ಟೀಂ ಜೊತೆ ಇಂದು ಮೀಟಿಂಗ್

ಸದನದಲ್ಲಿ ಗೊಂದಲ ಏಳುತ್ತಿದ್ದಂತೆ ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರು ಗಲಾಟೆ ಮಾಡುವವರು ಸಂಸತ್ತಿನಿಂದ ಹೊರಗೆ ಹೋಗಿ ಎಂದು ಕಿಡಿಕಾರಿದರು. ದೇಶದ 135 ಕೋಟಿ ಜನರು ನಮ್ಮನ್ನು ಗಮನಿಸುತ್ತಿದ್ದಾರೆ. ಹೊರಗೆ ಯಾರೋ ಏನೋ ಹೇಳಿರಬಹುದು. ಆದರೆ ನೀವು ಮಕ್ಕಳಲ್ಲ ಎಂದು ಆಕ್ರೋ


ಶ ಹೊರಹಾಕಿದರು.ದೇಶಕ್ಕಾಗಿ ಇಂದಿರಾಗಾಂಧಿ, ರಾಜೀವ್ ಗಾಂಧಿ ಪ್ರಾಣ ಕೊಟ್ಟರು

ಇನ್ನೂ ಕ್ಷಮೆಯಾಚಿಸುವಂತೆ ಬಿಜೆಪಿಗರು ಒತ್ತಾಯಿಸಿದ್ದಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು, ನಾನು ಮತ್ತೆ ನಿನ್ನೆ ಹೇಳಿದ ಮಾತನ್ನೇ ಹೇಳಿದರೆ ಇಲ್ಲಿರುವವರಿಗೆ ಕಷ್ಟವಾಗುತ್ತದೆ. ಏಕೆಂದರೆ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಕ್ಷಮೆಯಾಚಿಸಿದವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಕ್ಷಮೆಯಾಚಿಸಲು ಕೇಳುತ್ತಿದ್ದಾರೆ.

ಕಾಂಗ್ರೆಸ್ ‘ಭಾರತ ತೋಡೋ (ವಿಭಜಿತ ಭಾರತ) ಯಾತ್ರೆ ನಡೆಸುತ್ತಿದೆ ಎಂದು ಹೇಳಿದವರಿಗೆ ಕಾಂಗ್ರೆಸ್ ಯಾವಾಗಲೂ ಭಾರತ್ ಜೋಡೋ (ಭಾರತವನ್ನು ಒಂದುಗೂಡಿಸುವ) ಕೆಲಸವನ್ನು ಮಾಡುತ್ತದೆ ಎಂದು ಎಂದು ಹೇಳಲು ಬಯಸುತ್ತೇನೆ. ದೇಶಕ್ಕಾಗಿ ಇಂದಿರಾಗಾಂಧಿ, ರಾಜೀವ್ ಗಾಂಧಿ ಪ್ರಾಣ ಕೊಟ್ಟರು. ನೀವು ಏನು ಮಾಡಿದ್ದೀರಿ? ದೇಶಕ್ಕಾಗಿ ಯಾರು ತ್ಯಾಗ ಮಾಡಿದ್ದಾರೆಂದು ನಿಮಗೆ ತಿಳಿದಿದೆ ಎಂದು ಟಾಂಗ್ ನೀಡಿದರು.

Post a Comment

Previous Post Next Post