ಸಾಂದರ್ಭಿಕ ಚಿತ್ರ
ಪುರುಷರಲ್ಲಿ ಪ್ರಾಸ್ಟೇಟ್ ಗ್ರಂಥಿಯು ಊದಿಕೊಂಡಾಗ ಮೂತ್ರವು ಸಂಪೂರ್ಣವಾಗಿ ಹೊರ ಬರಲು ಸಾಧ್ಯವಾಗಲ್ಲ. ಆಗ ಮೂತ್ರವು ಅಲ್ಲಿಯೇ ಉಳಿದು ಬಿಡುತ್ತದೆ. ಆಗ ಉಳಿದಿರುವ ಮೂತ್ರದಲ್ಲಿ ಇರುವ ಬ್ಯಾಕ್ಟೀರಿಯಾಗಳು ಬೆಳವಣಿಗೆಯಾಗುತ್ತವೆ. ಆಗ ಮೂತ್ರನಾಳದ ಸೋಂಕಿನ ಅಪಾಯ ಮತ್ತಷ್ಟು ಹೆಚ್ಚುತ್ತದೆ
ಸಾಮಾನ್ಯವಾಗಿ ನೀವು ಹೆಣ್ಣು ಮಕ್ಕಳಲ್ಲಿ (Women’s) ಮೂತ್ರದ ಸೋಂಕು (Urine Infection) ಕಾಯಿಲೆ (Disease) ಬಗ್ಗೆ ಕೇಳಿರಬಹುದು. ಕೇವಲ ಮಹಿಳೆಯರು ಮಾತ್ರವಲ್ಲದೇ, ಪುರುಷರಲ್ಲಿಯೂ (Men’s) ಈ ಮೂತ್ರದ ಸೋಂಕು ಸಮಸ್ಯೆ ಕಾಡುತ್ತದೆ. ಹಾಗಾದರೆ ಪುರುಷರಲ್ಲಿ ಕಾಣಿಸಿಕೊಳ್ಳುವ ಮೂತ್ರದ ಸೋಂಕು ಎಂದರೇನು? ಇದಕ್ಕೆ ಕಾರಣಗಳು ಯಾವವು? ಹಾಗೂ ಪುರುಷರ ಮೂತ್ರದ ಸಮಸ್ಯೆ ನಿವಾರಣೆಗೆ ಕೆಲವು ಮನೆಮದ್ದುಗಳು ಸಹಾಯ ಮಾಡುತ್ತವೆ. ಅವುಗಳ ಬಗ್ಗೆ ನಾವು ಇಲ್ಲಿ ತಿಳಿಯೋಣ. ಅಂದ ಹಾಗೇ, ಪುರುಷರಲ್ಲಿ ಮೂತ್ರವು ಮೂತ್ರಪಿಂಡ, ಮೂತ್ರಕೋಶ, ಮೂತ್ರನಾಳ ಸೇರಿ ಅನೇಕ ಅಂಗಗಳ ಮೂಲಕ ಹಾದು ಹೋಗುತ್ತದೆ. ಹಾಗಾಗಿ ಈ ಎಲ್ಲಾ ಅಂಗಗಳ ಜಾಲವನ್ನು ಮೂತ್ರನಾಳ ಎಂದು ಕರೆಯುತ್ತಾರೆ
ಪುರುಷರಲ್ಲಿ ಕಾಣಿಸಿಕೊಳ್ಳುವ ಮೂತ್ರದ ಸೋಂಕು ಎಂದರೇ
ಪುರುಷರಲ್ಲಿ ಮೂತ್ರದ ಸೋಂಕು ಅಂದ್ರೆ, ಪುರುಷರಲ್ಲಿ ಮೂತ್ರವು ಮೂತ್ರಪಿಂಡ, ಮೂತ್ರಕೋಶ, ಮೂತ್ರನಾಳ ಸೇರಿ ಅನೇಕ ಅಂಗಗಳ ಮೂಲಕ ಹಾದು ಹೋಗುತ್ತದೆ. ಈ ಎಲ್ಲಾ ಅಂಗಗಳ ಜಾಲವನ್ನು ಮೂತ್ರನಾಳ ಎಂದು ಕರೆಯುತ್ತಾರೆ. ಇಲ್ಲಿ ಸಮಸ್ಯೆ ಆದ್ರೆ ಅದನ್ನು ಮೂತ್ರದ ಸೋಂಕು ಅಥವಾ ಮೂತ್ರನಾಳದ ಸೋಂಕು ಅಂತಾ ಕರೆಯುತ್ತಾರೆ
ಮೂತ್ರದ ಸೋಂಕು ಪದೇ ಪದೇ ಯಾಕೆ ಉಂಟಾಗುತ್ತ
ಪುರುಷರಲ್ಲಿ ಪದೇ ಪದೇ ಮೂತ್ರದ ಸೋಂಕು ಕಾಯಿಲೆ ಕಂಡು ಬರಲು ಅನೇಕ ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾಗಿ ಯುವಕರಲ್ಲಿ ಲೈಂಗಿಕ ರೋಗಗಳು, ಪ್ರಾಸ್ಟೇಟ್ ಗ್ರಂಥಿಯ ಹಿಗ್ಗುವಿಕೆ, ಮಧುಮೇಹ ಮುಖ್ಯ ಕಾರಣಗಳಾಗಿವೆ. ಇನ್ನು ಪುರುಷರಲ್ಲಿ ಮೂತ್ರದ ಸೋಂಕು ಕಂಡು ಬರುವಾಗ ಕೆಲವು ಲಕ್ಷಣಗಳನ್ನು ತೋರಿಸುತ್ತದೆ
ಪುರುಷರಲ್ಲಿ ಮೂತ್ರದ ಸೋಂಕು ಉಂಟಾಗಲು ಕಾರಣಗಳು ಹೀಗಿ
ಪುರುಷರಲ್ಲಿ ಪ್ರಾಸ್ಟೇಟ್ ಗ್ರಂಥಿಯು ಊದಿಕೊಂಡಾಗ ಮೂತ್ರವು ಸಂಪೂರ್ಣವಾಗಿ ಹೊರ ಬರಲು ಸಾಧ್ಯವಾಗಲ್ಲ. ಆಗ ಮೂತ್ರವು ಅಲ್ಲಿಯೇ ಉಳಿದು ಬಿಡುತ್ತದೆ. ಆಗ ಉಳಿದಿರುವ ಮೂತ್ರದಲ್ಲಿ ಇರುವ ಬ್ಯಾಕ್ಟೀರಿಯಾಗಳು ಬೆಳವಣಿಗೆಯಾಗುತ್ತ
ಆಗ ಮೂತ್ರನಾಳದ ಸೋಂಕಿನ ಅಪಾಯ ಮತ್ತಷ್ಟು ಹೆಚ್ಚುತ್ತದೆ. ಪುರುಷರು ಈ ರೋಗ ಲಕ್ಷಣಗಳನ್ನು ನಿರ್ಲಕ್ಷಿಸಿದರೆ ಇದು ಪ್ರಾಸ್ಟೇಟ್ ಸೋಂಕು ಉಂಟು ಮಾಡುತ್ತ
ಪುರುಷರಲ್ಲಿ ಕಂಡು ಬರುವ ಮೂತ್ರದ ಸೋಂಕಿನ ಲಕ್ಷಣಗಳು ಯಾವ
ಪುರುಷರಲ್ಲಿ ಉಂಟಾಗುವ ಮೂತ್ರದ ಸೋಂಕಿನ ಲಕ್ಷಣಗಳಲ್ಲಿ ಪ್ರಮುಖವಾಗಿ ಮೂತ್ರ ವಿಸರ್ಜನೆ ವೇಳೆ ನೋವು ಮತ್ತು ಸುಡುವಿಕೆ ಅನುಭವ, ಆಗಾಗ್ಗೆ ಮೂತ್ರ ವಿಸರ್ಜನೆ ಆಗುವುದು, ಹಠಾತ್ ಮೂತ್ರ ವಿಸರ್ಜನೆಗೆ ಪ್ರಚೋದನೆಯಾಗುವುದು, ಕೆಳ ಹೊಟ್ಟೆಯ ಮಧ್ಯ ಭಾಗದಲ್ಲಿ ನೋವು, ಮೂತ್ರದಲ್ಲಿ ರಕ್ತ ಹೋಗುವುದು ಲಕ್ಷಣಗಳು ಕಂಡು ಬರುತ್ತವೆ
. ವು?ದೆ.ವೆ.ವೆದೆ?.ನು?..ಲಕ್ಷಣಗಳು ಕಂಡು ಸಾಂದರ್ಭಿಕ ಚಿತ್ರ
ಮೂತ್ರದ ಸೋಂಕು ಆರೋಗ್ಯಕ್ಕೆ ಹೇಗೆ ಹಾನಿಯುಂಟು ಮಾಡುತ್ತದೆ?
ಪುರುಷರಲ್ಲಿ ವೀರ್ಯ ಉತ್ಪಾದನೆಯ ದ್ರವ ತಯಾರಿಸುವ ಕೆಲಸ ಪ್ರಾಸ್ಟೇಟ್ ಗ್ರಂಥಿಯದ್ದು. ಪುರುಷರಲ್ಲಿ ಮೂತ್ರದ ಸೋಂಕು ಸಮಸ್ಯೆ ಕಂಡು ಬಂದರೆ ಅದು ಈ ಪ್ರಾಸ್ಟೇಟ್ ಸೋಂಕು ಉಂಟು ಮಾಡುತ್ತದೆ. ಆಗ ಜ್ವರ, ದೇಹ ತಂಪಾಗುವುದು, ಆಯಾಸ ಉಂಟಾಗುವುದು, ಮೂತ್ರ ಹೊರ ಹಾಕಲು ಸಾಧ್ಯವಾಗದಿರುವುದು, ಶ್ರೋಣಿ ನೋವು ಉಂಟಾಗುತ್ತದೆ.
ಪುರುಷರಲ್ಲಿ ಕಂಡು ಬರುವ ಮೂತ್ರದ ಸೋಂಕು ಕಾಯಿಲೆಗೆ ಮನೆಮದ್ದು ಹೀಗಿದೆ
ಪುರುಷರು ಮತ್ತು ಮಹಿಳೆಯರಲ್ಲಿ ಮೂತ್ರದ ಸೋಂಕನ್ನು ಗುಣಪಡಿಸುವ ಕೆಲವು ಮನೆಮದ್ದುಗಳ ಬಗ್ಗೆ ರಾಷ್ಟ್ರೀಯ ಜೈವಿಕ ತಂತ್ರಜ್ಞಾನ ಮಾಹಿತಿ ಕೇಂದ್ರ ತಿಳಿಸಿದೆ. ಮೂತ್ರದ ಸೋಂಕನ್ನು ಉಂಟು ಮಾಡುವ ಬ್ಯಾಕ್ಟೀರಿಯಾ ತಡೆಯಲು ಹಲಸಿನ ಹಣ್ಣಿನ ಸಿಪ್ಪೆ ಮತ್ತು ಸೌತೆಕಾಯಿ ಬೀಜ ಪರಿಣಾಮಕಾರಿ ಎಂದು ಹೇಳಲಾಗಿದೆ.
ಇದನ್ನೂ ಓದಿ: ಅಧಿಕ ರಕ್ತದೊತ್ತಡ ಸಮಸ್ಯೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ ಬೀಟ್ರೂಟ್ !
ಇದು ಆಗಾಗ್ಗೆ ಮೂತ್ರ ವಿಸರ್ಜನೆ ಸಮಸ್ಯೆಗೆ ಪರಿಹಾರ ನೀಡುತ್ತದೆ. ಚಿಮುಯಿ ಸಸ್ಯದ ಬೇರು, ಎಲೆ ಮತ್ತು ಶತಾವರಿ ಬೇರು, ಸಣ್ಣ ಹಾಲಿನ ಹುಲ್ಲಿನ ಬಳಕೆಯಿಂದ ಮೂತ್ರದಲ್ಲಿ ರಕ್ತ ಸಮಸ್ಯೆ ಗುಣಪಡಿಸಬಹುದು..


Post a Comment