Karnataka HC: ಮಹತ್ವದ ತೀರ್ಪು ನೀಡಿದ ಹೈಕೋರ್ಟ್, ಪತ್ನಿಯನ್ನು ಹಣ ನೀಡುವ ATMನಂತೆ ಬಳಸಿಕೊಂಡ ಪತಿ


  ಕರ್ನಾಟಕ ಹೈಕೋರ್ಟ್ಯಿಂ

 ಯಾವುದೇ ಭಾವನಾತ್ಮಕ ಬಾಂಧವ್ಯವಿಲ್ಲದೆ ಹೆಂಡತಿಯನ್ನು "ಆದಾಯದ ಮೂಲ ಮತ್ತು ಎಟಿಎಂ" ಎಂಬಂತಹ ರೀತಿಯಲ್ಲಿ ನಡೆಸಿಕೊಳ್ಳುವುದು ಮಾನಸಿಕ ಕಿರುಕುಳಕ್ಕೆ ಸಮಾನವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ತನ್ನ ಮಹತ್ವದ ತೀರ್ಪಿನಲ್ಲಿ ಹೇಳಿದೆ. ಪ್ರಕರಣವೊಂದರಲ್ಲಿ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದು ಮಾಡಿ ಮಹಿಳೆಗೆ ಗಂಡನಿಂದ ವಿಚ್ಛೇದನ ಅನುಮತಿಸಿರುವ ಹೈಕೋರ್ಟ್ ಈ ರೀತಿಯಾದ ಹೇಳಿಕೆ ನೀಡಿ

 ಯಾವುದೇ ಭಾವನಾತ್ಮಕ ಬಾಂಧವ್ಯವಿಲ್ಲದೆ ಹೆಂಡತಿಯನ್ನು "ಆದಾಯದ ಮೂಲ ಮತ್ತು ಎಟಿಎಂ (ATM)" ಎಂಬಂತಹ ರೀತಿಯಲ್ಲಿ ನಡೆಸಿಕೊಳ್ಳುವುದು ಮಾನಸಿಕ ಕಿರುಕುಳಕ್ಕೆ ಸಮಾನವಾಗಿದೆ ಎಂದು ಕರ್ನಾಟಕ ಹೈಕೋರ್ಟ್ (Karnataka High Court) ತನ್ನ ಮಹತ್ವದ ತೀರ್ಪಿನಲ್ಲಿ ಹೇಳಿದೆ. ಪ್ರಕರಣವೊಂದರಲ್ಲಿ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದು ಮಾಡಿ ಮಹಿಳೆಗೆ (Women) ಗಂಡನಿಂದ ವಿಚ್ಛೇದನ (Divorce) ಅನುಮತಿಸಿರುವ ಹೈಕೋರ್ಟ್ ಈ ರೀತಿಯಾದ ಹೇಳಿಕೆ ನೀಡಿದೆ. ಪತಿಯಿಂದ ವಿಚ್ಛೇದನ ನೀಡದ ಕೌಟುಂಬಿಕ ನ್ಯಾಯಾಲಯದ (Family Court) ಆದೇಶದ ವಿರುದ್ಧ ಮಹಿಳೆಯೊಬ್ಬರು ಹೈಕೋರ್ಟ್‌ನ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟಿನ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಜೆ.ಎಂ.ಖಾಜಿ ಅವರಿದ್ದ ವಿಭಾಗೀಯ ಪೀಠವು ಈ ಆದೇಶ ಹೊರಡಿಸಿದೆ

ಪತ್ನಿಯನ್ನು ಹಣ ನೀಡುವ ಎಟಿಎಂ ಆಗಿ ಬಳಸಿಕೊಂಡ 

ವ್ಯಾಪಾರ ಆರಂಭಿಸುವ ನೆಪದಲ್ಲಿ ಪತಿಯು ಪತ್ನಿಯಿಂದ 60 ಲಕ್ಷ ರೂಪಾಯಿ ಪಡೆದಿದ್ದಾನೆ. ಇಲ್ಲಿ ಪತಿಯು ತನ್ನ ಪತ್ನಿಯೊಂದಿಗೆ ಯಾವುದೇ ಭಾವನಾತ್ಮಕ ಬಾಂಧವ್ಯವನ್ನು ಹೊಂದಿಲ್ಲ. ಕೇವಲ ಯಾಂತ್ರಿಕವಾಗಿ ತನ್ನ ಪಾತ್ರವನ್ನು ನಿರ್ವಹಿಸಿದ್ದಾನೆ. ಮಹಿಳೆಯನ್ನು ಆತ ಕೇವಲ ಹಣ ನೀಡುವ ಎಟಿಎಂ ಆಗಿ ಬಳಸಿಕೊಂಡಿದ್ದಾನೆ. ಗಂಡನ ಈ ವರ್ತನೆಯಿಂದ ಹೆಂಡತಿ ಮಾನಸಿಕ ಆಘಾತಕ್ಕೆ ಒಳಗಾಗಿರುತ್ತಾಳೆ ಮತ್ತು ಭಾವನಾತ್ಮಕವಾಗಿ ಕುಗ್ಗಿರುತ್ತಾಳೆ. ಹೆಂಡತಿಯನ್ನು ಎಟಿಎಂನಂತೆ ಬಳಸುವುದು, ಹಾಲು ನೀಡುವ ಹಸು ರೀತಿಯಲ್ಲಿ ನಡೆಸಿಕೊಳ್ಳುವುದು ಮಾನಸಿಕ ಕಿರುಕುಳಕ್ಕೆ ಸಮನಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದ್ದು, ಮಹಿಳೆಗೆ ಪತಿಯಿಂದ ವಿಚ್ಛೇದನ ಸಹ ನೀಡಿದೆ

ಈ ಪ್ರಕರಣದಲ್ಲಿ ಪತಿಯಿಂದ ಪತ್ನಿಗೆ ಆಗಿರುವ ನೋವನ್ನು ಮಾನಸಿಕ ಕಿರುಕುಳ ಎಂದು ಪರಿಗಣಿಸಬಹುದು. ಈ ಎಲ್ಲ ಅಂಶಗಳನ್ನು ಪರಿಗಣಿಸಲು ಕೌಟುಂಬಿಕ ನ್ಯಾಯಾಲಯ ವಿಫಲವಾಗಿದೆ. ಇದಲ್ಲದೆ, ನ್ಯಾಯಾಲಯವು ಅರ್ಜಿದಾರರ ಪತ್ನಿಯ ಅಡ್ಡ ಪರೀಕ್ಷೆಯನ್ನು ಮಾಡಿಲ್ಲ ಮತ್ತು ಅವರ ಹೇಳಿಕೆಯನ್ನು ದಾಖಲಿಸಿಲ್ಲ,” ಎಂದು ಪೀಠವು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಪತ್ನಿಯ ವಾದವನ್ನು ಪರಿಗಣಿಸಿ ಆಕೆಗೆ ವಿಚ್ಛೇದನ ನೀಡಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ. ಕೌಟುಂಬಿಕ ಕಲಹದ ಪ್ರಕರಣಗಳಲ್ಲಿ, ಕ್ರೌರ್ಯದ ಆರೋಪಗಳನ್ನು ಪ್ರಕರಣದ ಅರ್ಹತೆಯ ಮೇಲೆ ಪರಿಶೀಲಿಸಬೇಕು ಎಂದು ಪೀಠವು ಒತ್ತಿಹೇಳಿದೆ

ದಂಪತಿ ನಡುವೆ ಬಿರುಕು ಮೂಡಿದ್ದೇ

ಪ್ರಕರಣದ ಅರ್ಜಿದಾರರು ಮೇ 17, 1999ರಂದು ಚಿಕ್ಕಮಗಳೂರಿನಲ್ಲಿ ವಿವಾಹವಾಗಿದ್ದರು ಮತ್ತು 2001ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹೀಗೆ ಸಾಗುತ್ತಿದ್ದ ದಾಂಪತ್ಯ ಜೀವನದಲ್ಲಿ ಕ್ರಮೇಣ ಹಣ ವಿಚಾರ ಬಂದು ಸಂಬಂಧದಲ್ಲಿ ಬಿರುಕು ಮೂಡಿತು. ಪತಿ ಸಹ ವ್ಯಾಪಾರದಲ್ಲಿ ನಷ್ಟ ಅನುಭವಿಸುತ್ತಲೇ ಇದ್ದನು. ಈ ವಿಚಾರ ಗಂಡ-ಹೆಂಡತಿಯ ನಡುವೆ ಜಗಳಕ್ಕೆ ಕಾರಣವಾಯಿತು. ನಂತರ ಜೂನ್ 8, 2017ರಂದು, ಮಹಿಳೆ ವಿಚ್ಛೇದನಕ್ಕಾಗಿ ಸೆಕ್ಷನ್ 10 ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು

ಇದನ್ನೂ ಓದಿ: Murder: ಬೈಕ್ನಲ್ಲಿ ಪ್ರೇಯಸಿ ರುಂಡದ ಜೊತೆ ಠಾಣೆಗೆ ಬಂದ ಪ್ರಿಯಕರ; ಮದ್ವೆಯಾದ್ರೂ ಯುವತಿ ಮೇಲೆ 

ಈ ಅರ್ಜಿಯಲ್ಲಿ ತನ್ನ ಪತಿ ವ್ಯಾಪಾರ ನಡೆಸುವ ನೆಪದಲ್ಲಿ ತನ್ನಿಂದ 60 ಲಕ್ಷ ರೂಪಾಯಿ ಪಡೆದಿದ್ದಾನೆ ಮತ್ತು ನಮ್ಮ ಮೇಲೆ ಯಾವುದೇ ರೀತಿಯ ಬಾಂಧವ್ಯ ಹೊಂದಿಲ್ಲ, ನನ್ನ ಮಗಳ ಬಗ್ಗೆಯೂ ಕಾಳಜಿ ವಹಿಸುವುದಿಲ್ಲ ಎಂದು ಉಲ್ಲೇಖಿಸಿದ್ದರು. ಅಲ್ಲದೇ ತನ್ನ ಪತಿಗೆ ದುಬೈನಲ್ಲಿ ಸಲೂನ್ ತೆರೆಯಲು 2008ರಲ್ಲಿ ಲಕ್ಷಗಟ್ಟಲೇ ಹಣ ನೀಡಿದ್ದೆ. ಆದರೆ ಅಲ್ಲಿಯೂ ನಷ್ಟ ಅನುಭವಿಸಿದ ಪತಿ ಖಾಲಿ ಕೈಯ್ಯಲ್ಲಿ ಭಾರತಕ್ಕೆ ಹಿಂದಿರುಗಿದ್ದರು. ದುಬೈನಿಂದ ಬಂದ ಬಳಿಕವೂ ಹಣ ನೀಡಲು ಪೀಡಿಸುತ್ತಿದ್ದ ಪತಿಯಿಂದ ಮಹಿಳೆ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ

 ಮಹಿಳೆಯ ಪರ ತೀರ್ಪು ನೀಡಿದ ಹೈಕೋರ್ಟ್ 

2012ರ ಹೊತ್ತಿಗೆ ಮಹಿಳೆಗೆ ತನ್ನ ಗಂಡ ತನ್ನನ್ನು ಕೇವಲ ಹಣ ಪಡೆದುಕೊಳ್ಳುವ ಸಲುವಾಗಿ ನನ್ನನ್ನು ತಮ್ಮ ಬಳಿ ಇರಿಸಿಕೊಂಡಿದ್ದಾರೆ ಎಂಬುವುದು ಅರಿವಿಗೆ ಬಂತು. ಅಷ್ಟರಲ್ಲಿ ಮಹಿಳೆ ಆರ್ಥಿಕ ಮತ್ತು ಮಾನಸಿಕವಾಗಿ ಕುಗ್ಗಿ ಹೋಗಿದ್ದಳು. ಗಂಡನ ಅತಿರೇಕದ ವರ್ತನೆ ಮಹಿಳೆಯು 2017ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ಕಾರಣವಾಯಿತು

ಇದನ್ನೂ ಓದಿ:  Chitradurga: ಶಾಲೆಯಲ್ಲಿ ಬಿಸಿಯೂಟ ತಿಂದು 50 ಮಕ್ಕಳು ಅಸ್ವ

ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳದ ಕೌಟುಂಬಿಕ ನ್ಯಾಯಾಲಯ ಪತ್ನಿಯ ಅರ್ಜಿಯನ್ನು ವಜಾ ಗೊಳಿಸಿತ್ತು. ಹೀಗಾಗಿ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಹೈಕೋರ್ಟ್ ಮಹಿಳೆಯ ಪರ ತೀರ್ಪು ನೀಡಿದ್ದು, ಪತಿಯಿಂದ ವಿಚ್ಛೇದನ ಕೊಡಿಸಿದೆ. ಸ್ಥ. ರು.ಮೋಹ.ಕೆ?..ಪತಿ .ದೆ.ದ ವಿಚ್ಛೇದನ ಕೊಡಿಸಿದೆ.

Post a Comment

Previous Post Next Post