Dalit Family: ದಲಿತ ಕಾರ್ಮಿಕರನ್ನು ಹಲ್ಲೆಗೈದು ಕೊಠಡಿಯಲ್ಲಿ ಕೂಡಿ ಹಾಕಿದ ಮಾಲೀಕ; ತೀವ್ರ ರಕ್ತಸ್ರಾವವಾಗಿ ಮಹಿಳೆಗೆ ಗರ್ಭಪಾತ


  ಹಲ್ಲೆಗೊಳಗಾದ ಕುಟುಂಬ

ಇದೀಗ ಬಾಳೆಹೊನ್ನೂರು ಠಾಣೆಯಲ್ಲಿ ಜಗದೀಶ್ ಹಾಗೂ ತಿಲಕ್ ವಿರುದ್ಧ ಸೆಕ್ಷನ್ 504, 320 ಹಾಗೂ 342 ಸೇರಿದಂತೆ ಎಸ್.ಸಿ-ಎಸ್.ಟಿ.ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

 ಚಿಕ್ಕಮಗಳೂರು: ಕಾಫಿ ತೋಟದ ಮಾಲೀಕನೋರ್ವ (Coffee plant Owner) ಆರು ಕುಟುಂಬದ 14 ಕೂಲಿ ಕಾರ್ಮಿಕರನ್ನು (Worker Family) ಇಡೀ ದಿನ ಕೊಠಡಿಯಲ್ಲಿ ಕೂಡಿ ಹಾಕಿ ಬೀಗ ಹಾಕಿರುವ ಅಮಾನವೀಯ ಘಟನೆ ಚಿಕ್ಕಮಗಳೂರು (Chikkamagalur) ತಾಲೂಕಿನ ಜೇನುಗದ್ದೆ ಗ್ರಾಮದಲ್ಲಿ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಜೇನುಗದ್ದೆ ಸಮೀಪದ ಪುರ ಗ್ರಾಮದಲ್ಲಿ ಆರು ಕುಟುಂಬಗಳು ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿವೆ. ತೋಟದ ಲೈನ್ ಮನೆಯಲ್ಲಿ ಚಿಕ್ಕ ಮಕ್ಕಳ ಜಗಳ ದೊಡ್ಡವರನ್ನ ತಲುಪಿ ಮಾಲೀಕರ ಬಳಿಯೂ ಹೋಗಿತ್ತು. ಆಗ ಮಾಲೀಕರು ಹುಡುಗರ ಗಲಾಟೆ ಎಂದು ಸುಮ್ಮನಾಗಬಹುದಿತ್ತು. ಆದರೆ ಕೂಲಿ ಕಾರ್ಮಿಕರು ಹಾಗೂ ಮಹಿಳೆಯರ (Women) ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾಗಿ ಗರ್ಭಪಾತವಾದ ಗರ್ಭಿಣಿ ಆರೋಪಿಸಿದ್ದಾರೆ. ಹಲ್ಲೆ ಮಾಡಿದ್ದಷ್ಟೇ ಅಲ್ಲದೆ, ಆರು ಕುಟುಂಬದ 14 ಕೂಲಿ ಕಾರ್ಮಿಕರನ್ನು ಇಡೀ ಒಂದು ದಿನ ಕೊಠಡಿಯಲ್ಲಿ ಕೂಡಿ ಹಾಕಿ ಕೊಠಡಿಯ ಬೀಗ ಹಾಕಿದ್ದಾರೆ.

ಕಾರ್ಮಿಕರು ಇಡೀ ದಿನ ಉಪವಾಸವಿದ್ದು ಕೊಠಡಿಯಲ್ಲಿ ಕಳೆದಿದ್ದಾರೆ. ತೋಟದ ಮಾಲೀಕ ಜಗದೀಶ್, ಹಲ್ಲೆ ಮಾಡುವ ವೇಳೆ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಾರೆಂದು ಕಾರ್ಮಿಕರ ಮೊಬೈಲ್‍ಗಳನ್ನ ಕಿತ್ತುಕೊಂಡು ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ಕಾರ್ಮಿಕರು ಆರೋಪಿಸಿದ್ದಾರೆ.

 ಬಾಗಿಲು ತೆಗೆಸಿದ ಅರ್ಪಿತಾ ತಾಯಿ

ತೋಟದ ಮಾಲೀಕ ಜಗದೀಶ್ ಅರ್ಪಿತಾಗೆ ಹಲ್ಲೆ ಮಾಡುವಾಗ ಆಕೆಯ ಗಂಡ ಬಿಡಿಸಲು ಮುಂದಾಗಿದ್ದಾನೆ. ಆದರೆ, ಜಗದೀಶ್ ಆತನ ಮೇಲೂ ಹಲ್ಲೆ ಮಾಡಿದ್ದಾನಂತೆ. ಕೂಡಲೇ ಆತ ಅರ್ಪಿತ ತಾಯಿ ಗೀತಾಳಿಗೆ ಫೋನ್ ಮಾಡಿದ್ದಾರೆ. ಸ್ಥಳಕ್ಕೆ ಬಂದ ಗೀತಾ ಏಕೆ ಸಾಹುಕಾರರೇ, ಎಂದು ಕಾಡಿ-ಬೇಡಿ ಬಾಗಿಲು ತೆಗೆಸಿದ್ದಾರೆ. ಹಲ್ಲೆಯಿಂದ ತೀವ್ರ ಅಸ್ವಸ್ಥರಾಗಿದ್ದ ಅರ್ಪಿತಾಳನ್ನು ಕಡಬಗೆರೆ ಆಸ್ಪತ್ರೆಗೆ ಕೊಂಡೊಯ್ದಿ


ದ್ದಾರೆ.ಹೆಚ್ಚಿನ ಚಿಕಿತ್ಸೆಗಗಾಗಿ ಚಿಕ್ಕಮಗಳೂರು ಆಸ್ಪತ್ರೆಗೆ ಹೋಗಿ ಎಂದಾಗ ಅಲ್ಲಿಂದ ತಂದು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಆದರೆ, ತೀವ್ರ ರಕ್ತಸ್ರಾವವಾಗಿ ಅರ್ಪಿತಾಗೆ ಗರ್ಭಪಾತವಾಗಿದೆ. ಜಗದೀಶ್ ಅವರ ಹಲ್ಲೆಯಿಂದಲೇ ನನ್ನ ಮಗಳಿಗೆ ಈ ರೀತಿ ಆಗಿದೆ ಎಂದು ಅರ್ಪಿತ ತಾಯಿ ಗೀತಾ ಆರೋಪಿಸಿದ್ದಾರೆ.

ಇದೀಗ ಬಾಳೆಹೊನ್ನೂರು ಠಾಣೆಯಲ್ಲಿ ಜಗದೀಶ್ ಹಾಗೂ ತಿಲಕ್ ವಿರುದ್ಧ ಸೆಕ್ಷನ್ 504, 320 ಹಾಗೂ 342 ಸೇರಿದಂತೆ ಎಸ್.ಸಿ-ಎಸ್.ಟಿ.ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿ


ದೆ.ಬೀಗ ಹಾಕಿರೋದು

ಒಟ್ಟಾರೆ ಜಗದೀಶ್ ಕೂಲಿ ಕಾರ್ಮಿಕರ ಮೇಲೆ ಹಲ್ಲೆ ಮಾಡಿದ್ರೋ-ಇಲ್ವೋ ಗೊತ್ತಿಲ್ಲ. ಹಲ್ಲೆಗೊಳಗಾದವರು ಹೊಡೆದರು ಎಂದು ಆರೋಪಿಸಿದ್ದಾರೆ. ಒಂದು ವೇಳೆ ಜಗದೀಶ್ ಕಾರ್ಮಿಕರ ಮೇಲೆ ಹಲ್ಲೆ ಮಾಡಿದ್ದರೆ ನಿಜಕ್ಕೂ ಅಪರಾಧ.

ತನಿಖೆ ಆರಂಭಿಸಿರುವ ಪೊಲೀಸರು

ಕಾರ್ಮಿಕರು ಕೆಲಸಕ್ಕೆ ಕಾರ್ಮಿಕರಷ್ಟೇ ಮಾಲೀಕರಿಗಲ್ಲ. ಹಾಗಾಗಿ ಪ್ರಕರಣ ದಾಖಲಿಸಿಕೊಂಡಿರೋ ಬಾಳೆಹೊನ್ನೂರು ಪೊಲೀಸರ ನಿಷ್ಪಕ್ಷಪಾತವಾದ ತನಿಕೆಯಿಂದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕಿದೆ. ಪೊಲೀಸರು ಯಾವ ರೀತಿ ತನಿಖೆ ಮಾಡುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

ಇದನ್ನೂ ಓದಿ: Fake Astrologer: ಕೊಳ್ಳೇಗಾಲದಲ್ಲಿ ಮಂತ್ರ ಕಲಿತೆ ಅಂತ ಪುಂಗಿ ಊದಿದ, ಮಹಿಳೆಯ 1 ಲಕ್ಷ ರೂಪಾಯಿ ನುಂಗಿ ನೀರು ಕುಡಿದ!

ರೇಪ್ ಅಂಡ್ ಮರ್ಡರ್!?

ಟ್ಯೂಷನ್‌ಗೆ ಹೋಗಿದ್ದ 11 ವರ್ಷದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ಘಟನೆ ನಡೆದಿದೆ. ಟ್ಯೂಶನ್​ಗೆ ಹೋಗಿದ್ದ 11 ವರ್ಷದ ಬಾಲಕಿ ಮನೆಗೆ ವಾಪಸ್‌ ಬರದಿದ್ದಾಗ ಪೋಷಕರು ಆತಂಕಕ್ಕೊಳಗಾಗಿದ್ರು. ಪೋಷಕರು ಹುಡುಕಾಟ ನಡೆಸಿದ್ದಾಗ ನಿರ್ಮಾಣ ಹಂತದ ಕಟ್ಟಡದ ಸಂಪಿನಲ್ಲಿ 11 ವರ್ಷದ ಬಾಲಕಿಯ ಶವ ಪತ್ತೆಯಾಗಿದೆ.

ಇದನ್ನೂ ಓದಿ: Karnataka Weather Report: ಮತ್ತೆ ಮೂರು ದಿನ ವರುಣನ ಅಬ್ಬರ, ಯಾದಗಿರಿಯಲ್ಲಿ ಅತಿ ಹಚ್ಚು ಮಳೆ

ಬಾಲಕಿ ಮೇಲೆ ಅತ್ಯಾಚಾರ ಎಸಗಿ ನಂತ್ರ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗ್ತಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿದ್ದು, ಪೊಲೀಸರು ರಹಸ್ಯ ಸ್ಥಳದಲ್ಲಿ ವಿಚಾರಣೆ ಮಾಡ್ತಿದ್ದಾರೆ. ಬಾಲಕಿಯ ಮೃತದೇಹವನ್ನು ಮಳವಳ್ಳಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.

Post a Comment

Previous Post Next Post