KSRTC Revenue: ಚೇತರಿಕೆಯತ್ತ ಕೆಎಸ್​ಆರ್​ಟಿಸಿ ಆರ್ಥಿಕ ಸ್ಥಿತಿ; ದಸರಾ ನೀಡ್ತು ಕೋಟಿ ಕೋಟಿ ಆದಾಯ


  ಸಾಂದರ್ಭಿಕ ಚಿತ್ರ

KSRTC: ದಸರಾದ 10 ದಿನದ ಅವಧಿಯಲ್ಲಿ ಕೆಎಸ್ಆರ್ಟಿಸಿಗೆ 2.75 ಕೋಟಿ ಆದಾಯ ಬಂದಿದ್ರೆ, ಅಕ್ಟೋಬರ್ 1 ರಿಂದ 10ರವರೆಗೆ 6.5 ಲಕ್ಷ ಜನರು ಕೆಎಸ್ಆರ್ಟಿಸಿ ಸೇವೆ ಪಡೆದುಕೊಂಡಿದ್ದಾರೆ

 ಕೋವಿಡ್-19 ಬಿಕ್ಕಟ್ಟಿನ ಬಳಿಕ  ಕೆಎಸ್ಆರ್ಟಿಸಿ (KSRTC) ಆರ್ಥಿಕ ಪರಿಸ್ಥಿತಿ (Finance Condition) ಹಂತ ಹಂತವಾಗಿ ಸುಧಾರಣೆ ಆಗ್ತಿದೆ. ಎರಡು ವರ್ಷಗಳ ಬಳಿಕ ನಡೆದ ಮೈಸೂರು ದಸರಾ (Mysuru Dasara) ಸಾರಿಗೆ ಸಂಸ್ಥೆಗೆ ಕೋಟಿ ಕೋಟಿ ಆದಾಯವನ್ನು ತಂದು ನೀಡಿದೆ. ಈಗ ಸಾಲು ಸಾಲು ಹಬ್ಬಗಳ ಹಿನ್ನೆಲೆ ಕೆಎಸ್ಆರ್ಟಿಸಿ ಪ್ರಯಾಣಿಕರ (KSRTC Passengers) ಸಂಖ್ಯೆ ಏರಿಕೆಯಾಗಿದೆ. ಆದ್ದರಿಂದ ಕೆಎಸ್ಆರ್ಟಿಸಿಯ ಬೊಕ್ಕಸಕ್ಕೆ ಹಣ (KSRTC Income) ಹರಿದು ಬರುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ದೀಪಾವಳಿ (Deepavali 2022) ಹಬ್ಬ ಇರೋ ಕಾರಣ ಸಾರಿಗೆ ಸಂಸ್ಥೆಗಳ ಬಸ್ಗಳಲ್ಲಿ ಆಸನಗಳನ್ನು ಪ್ರಯಾಣಿಕರು ಮುಂಗಡವಾಗಿ (Ticket Booking) ಕಾಯ್ದಿರಿಸಿಕೊಳ್ಳುತ್ತಿದ್ದಾರೆ. ದೀಪಾವಳಿ ಸಾರಿಗೆ ಸಂಸ್ಥೆಗೆ ಮತ್ತಷ್ಟು ಆರ್ಥಿಕ ಚೇತರಿಕೆ ನೀಡುವ ಲಕ್ಷಣಗಳು  ಸ್ಪಷ್ಟವಾಗಿ ಗೋಚರವಾಗುತ್ತಿವೆ. ಸೋಮವಾರ ಸಾರಿಗೆ ಸಂಸ್ಥೆ 22.56 ಕೋಟಿ ರೂ ಗರಿಷ್ಠ ಆದಾಯ ಗಳಿಸಿದ್ದು, ಇದು ಕೆಎಸ್ಆರ್ಟಿಸಿ ಇತಿಹಾಸದಲ್ಲಿ ಅತ್ಯಧಿಕ ಒಂದು ದಿನದ ಆದಾಯವಾಗಿದೆ. ಸಾಮಾನ್ಯವಾಗಿ ಕೆಎಸ್ಆರ್ಟಿಸಿಗೆ ಒಂದು ದಿನಕ್ಕೆ 12 ಕೋಟಿ ಆದಾಯ ಸಂಗ್ರಹವಾಗುತ್ತಿತ್ತು. ಸೋಮವಾರದ ಆದಾಯ (KSRTC One Day Revenue) ಎಲ್ಲಾ ದಾಖಲೆಯನ್ನು ಬ್ರೇಕ್ ಮಾಡಿದೆ

ದಸರಾ ಸಮಯದಲ್ಲಿ ಅಂದ್ರೆ 10 ದಿನದಲ್ಲಿ ಲಕ್ಷಾಂತರ ಪ್ರಯಾಣಿಕರು ಕೆಎಸ್ಆರ್ಟಿಸಿ ನೀಡಿದ ವಿವಿಧ ಸೇವೆಗಳ ಲಾಭ ಪಡೆದುಕೊಂಡಿದ್ದಾರೆ. ಈ ಬಾರಿ ದಸರಾ ಹಿನ್ನೆಲೆ ಕೆಎಸ್ಆರ್ಟಿಸಿ ಜಲದರ್ಶಿನಿ, ಗಿರಿದರ್ಶಿನಿ ಪ್ಯಾಕೇಜ್‌ ನೀಡಿತ್ತು. ಜನರು ಈ ಸೇವೆಗಳಿಗೆ ತಮ್ಮ ಮೊದಲ ಆದ್ಯತೆಯನ್ನು ನೀಡಿದ್ದಾ

10 ದಿನದಲ್ಲಿ 2.75 ಕೋಟಿ ಆದಾ

ದಸರಾದ 10 ದಿನದ ಅವಧಿಯಲ್ಲಿ ಕೆಎಸ್ಆರ್ಟಿಸಿಗೆ 2.75 ಕೋಟಿ ಆದಾಯ ಬಂದಿದ್ರೆ, ಅಕ್ಟೋಬರ್ 1 ರಿಂದ 10ರವರೆಗೆ 6.5 ಲಕ್ಷ ಜನರು ಕೆಎಸ್ಆರ್ಟಿಸಿ ಸೇವೆ ಪಡೆದುಕೊಂಡಿದ್ದಾ

ಒಂದು ದಿನಕ್ಕೆ 250ಕ್ಕೂ ಅಧಿಕ ಟ್ರಿ

ಇನ್ನು ದಸರಾ ಹಿನ್ನೆಲೆ ಮಡಿಕೇರಿ, ಮೈಸೂರು ನಗರಕ್ಕೆ ತೆರಳುವವರ ಸಂಖ್ಯೆ ಹೆಚ್ಚಾಗಿತ್ತು. ಬೆಂಗಳೂರು ಮತ್ತು ಮೈಸೂರು ನಡುವೆ ದಶಪಥ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಪ್ರಯಾಣದ ದರ ಸಹ ಏರಿಕೆಯಾಗಿತ್ತು. ಸಾಮಾನ್ಯ ದಿನಗಳಲ್ಲಿ 150 ಟ್ರಿಪ್ ಆಗುತ್ತಿತ್ತು. ದಸರಾ ಸಮಯದಲ್ಲಿ ಒಂದು ದಿನಕ್ಕೆ 250ಕ್ಕೂ ಅಧಿಕ ಟ್ರಿಪ್ ಗಳಾಗಿವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ, ಹೊಳಲ್ಕೆರೆ ಶಾಸಕ ಎ. ಚಂದ್ರಪ್ಪ ತಿಳಿಸಿದ್ದಾ


ರೆ. ಪ್ರೆ.ಯರೆ...ತಿಳಿಸಿದ್ದಾರೆ.ಸಾಂದರ್ಭಿಕ ಚಿತ್ರ

ಮಡಿಕೇರಿ ಮಾರ್ಗದ ಕಡೆ ಸಾಮಾನ್ಯ ದಿನಗಳಲ್ಲಿ 75 ಟ್ರಿಪ್ ಆಗುತ್ತಿತ್ತು. ಮಡಿಕೇರಿಯಲ್ಲಿಯೂ ದಸರಾವನ್ನು ಅದ್ಧೂರಿಯಾಗಿ ಆಚರಣೆ ಮಾಡುವ ಕಾರಣ ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಹಿನ್ನೆಲೆ ಟ್ರಿಪ್​ಗಳು 100ರ ಗಡಿ ದಾಟಿದ್ದವು. ಮಡಿಕೇರಿ ಮಾರ್ಗವಾಗಿ ಹೆಚ್ಚು ವಾಹನಗಳು ಸಂಚರಿಸಿವೆ.

ಇದನ್ನೂ ಓದಿ: Madrasa Education: ಮದರಸಾ ರಹಸ್ಯ; ದಾಖಲೆಗಳಲ್ಲಿರೋದು ಒಂದು, ವಾಸ್ತವದಲ್ಲಿ ಬೇರೆನೇ ಇದೆಯಾ?

ಹೊಸ ಬಸ್ ಖರೀದಿಗೆ ನಿರ್ಧಾರ

ಈ ತಿಂಗಳೊಳಗೆ ಸಾರಿಗೆ ಸಂಸ್ಥೆ 350 ಎಲೆಕ್ಟ್ರಿಕ್ ಬಸ್ ಖರೀದಿ ಮಾಡಲಾಗುತ್ತದೆ. ಅಕ್ಟೋಬರ್ 15ರೊಳಗೆ ಎಲೆಕ್ಟ್ರಿಕ್ ಬಸ್​ಗಳು ಪ್ರಾಯೋಗಿಕವಾಗಿ ಸಂಚರಿಸಲಿವೆ ಎಂದು ಎ. ಚಂದ್ರಪ್ಪ ಮಾಹಿತಿ ನೀಡಿದ್ದಾರೆ.

650 ಹೊಸ ಬಸ್ ಖರೀದಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಖರೀದಿಸುತ್ತಿರುವ ಇ-ಬಸ್​ಗಳು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದು, ಮೊದಲ ಹಂತದಲ್ಲಿ 50 ಬಸ್​ಗಳು ಬರಲಿವೆ. ಒಂದು ಬಾರಿ ಚಾರ್ಜ್​ ಮಾಡಿದ್ರೆ 450 ಕಿಮೀ ಚಲಿ ಸುವ ಸಾಮರ್ಥ್ಯ


ವನ್ನು ಸಿಸಾಂದರ್ಭಿಕ ಚಿತ್ರ

ವೇತನ ಹೆಚ್ಚಳಕ್ಕೆ ಸಿಬ್ಬಂದಿ ಮನವಿ

ಸದ್ಯ ನಿಗಮದಲ್ಲಿ 30 ಸಾವಿರ ಬಸ್, 1.30 ಲಕ್ಷ ನೌಕರರು ಇದ್ದಾರೆ. ಕಳೆದ ಮೂರು ವರ್ಷಗಳಿಂದ ಪ್ರಯಾಣ ದರ ಏರಿಕೆ ಮಾಡಿಲ್ಲ. ನಾನು ಅಧ್ಯಕ್ಷ ಆದಾಗಿನಿಂದ ತಿಂಗಳ ಮೊದಲ ದಿನವೇ ಸಂಬಳ ನೀಡಲಾಗುತ್ತಿದೆ. ಸಾರಿಗೆ ನೌಕರರು ಆರನೇ ವೇತನ ಆಯೋಗದಂತೆ ಸಂಬಳ ಹೆಚ್ಚಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಪ್ರಸ್ತಾವನೆಯು ಸರ್ಕಾರದ ಮಟ್ಟದಲ್ಲಿದೆ ಎಂದು ಚಂದ್ರಪ್ಪ ತಿಳಿಸಿದರು.‘

ಇದನ್ನೂ ಓದಿ:  Siddaramaiah: ಮಾಜಿ ಸಿಎಂ ಸಿದ್ದರಾಮಯ್ಯ‌ ವಿರುದ್ಧ ಲೋಕಾಯುಕ್ತಕ್ಕೆ ದೂರು; RSS ವಿರುದ್ಧ ಅವಾಚ್ಯ ಪದ ಬಳಸಿ ಕೂಗು

ದೀಪಾವಳಿ ಟೂರ್ ಪ್ಯಾಕೇಜ್ಸ

ದೀಪಾವಳಿ ಹಿನ್ನೆಲೆ ಅ.21 ರಿಂದ 27ರ ವರೆಗೆ ವಿಶೇಷ ಟೂರ್‌ ಪ್ಯಾಕೇಜ್​ಗಳನ್ನು ವಾರಂತ್ಯದಲ್ಲಿ ನೀಡಲಾಗುತ್ತಿದೆ. ಕಾರ್ಮಿಕರಿಗೆ ಪ್ರಥಮ ಹಂತದಲ್ಲಿ ಒಂದು ಲಕ್ಷ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡಲಾಗುವುದು. ಕಟ್ಟಡ ಕಾರ್ಮಿಕರು ನಿಗಧಿತ ಸ್ಥಳದಿಂದ 45 ಕಿಮೀ ದೂರದವರೆಗೆ ಪ್ರಯಾಣಿಸಬಹುದಾಗಿದೆ..ಬಹುದಾಗಿದೆ..

Post a Comment

Previous Post Next Post