ಸಾಂದರ್ಭಿಕ ಚಿತ್ರ
ನನ್ನ ಗಂಡ ಈಗಾಗಲೇ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾನೆ. ಆದರೆ ನನಗೆ ವಿಚ್ಛೇದನ ನೀಡಲು ಇಷ್ಟವಿಲ್ಲ ಎಂದು ನಜ್ಮಾ ಗೋಳು ತೋಡಿಕೊಂಡಿದ್ದಾಳೆ.
ಮೀರತ್: ಮದುವೆಯ ನಂತರ ಹೆಂಡತಿಯ ತೂಕ ಹೆಚ್ಚಾಗಿದೆ ಎಂದು ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಮನೆಯಿಂದ ಹೊರಹಾಕಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಅಮಾನವೀಯ ದುಷ್ಕೃತ್ಯ ನಡೆದಿದೆ. ತನ್ನ ಪತಿ ಸಲ್ಮಾನ್ ನಾನು ದಪ್ಪ ಇರುವುದನ್ನು (Gains Weight) ಹಂಗಿಸುತ್ತಿದ್ದ. ಆಗಾಗ ಅವಮಾನ ಮಾಡುತ್ತಿದ್ದ. ಬೇಕಾಬಿಟ್ಟಿ ಹೊಡೆಯುತ್ತಿದ್ದ ಎಂದು ಪತ್ನಿ ನಜ್ಮಾ ಆರೋಪಿಸಿದ್ದಾಳೆ. ಅಲ್ಲದೇ ತಾನು ದಪ್ಪ ಆಗಿರುವ ಕಾರಣಕ್ಕೆ ಒಂದು ತಿಂಗಳ ಹಿಂದೆ ತನ್ನ ಗಂಡ ಸಲ್ಮಾನ್ ತನ್ನನ್ನು ಮನೆಯಿಂದ ಹೊರಹಾಕಿದ್ದಲ್ಲದೇ ವಿಚ್ಛೇದನ ಪತ್ರವನ್ನು(Divorce) ಕಳುಹಿಸಿದ್ದಾಗಿ ಆಕೆ ಹೇಳಿದ್ದಾಳೆ. ಮದುವೆ ಆದಮೇಲೆ ತಾನು ದಪ್ಪ ಆಗಿದ್ದಕ್ಕೆ ಗಂಡ ತಲಾಖ್ (Weight Gain Talaq) ನೀಡುವ ಕುರಿತು ನಜ್ಮಾ ತನ್ನ ಗಂಡನ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ.
ಮೀರತ್‌ನ ಝಾಕಿರ್ ಕಾಲೋನಿಯ ನಿವಾಸಿ ನಜ್ಮಾ ಎಂಟು ವರ್ಷಗಳ ಹಿಂದೆ ಫತೇಪುರ್‌ನಲ್ಲಿ ವಾಸಿಸುವ ಸಲ್ಮಾನ್‌ನನ್ನು ಮದುವೆಯಾಗಿದ್ದಳು. ಈ ದಂಪತಿಗೆ 7 ವರ್ಷದ ಮಗನೂ ಇದ್ದಾನೆ.
ನನಗೆ ವಿಚ್ಚೇದನ ಬೇಡ
ನನ್ನ ತೂಕ ಹೆಚ್ಚಿದ್ದರಿಂದ ನನ್ನೊಂದಿಗೆ ಬದುಕಲು ಬಯಸುವುದಿಲ್ಲ ಎಂದು ನನ್ನ ಗಂಡ ಸಲ್ಮಾನ್ ಹೇಳಿದ್ದಾಗಿ ನಜ್ಮಾ ಆರೋಪ ಮಾಡಿದ್ದಾರೆ. ಅಲ್ಲದೇ ನನ್ನ ಗಂಡ ಈಗಾಗಲೇ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾನೆ. ಆದರೆ ನನಗೆ ವಿಚ್ಛೇದನ ನೀಡಲು ಇಷ್ಟವಿಲ್ಲ ಎಂದು ನಜ್ಮಾ ಗೋಳು ತೋಡಿಕೊಂಡಿದ್ದಾಳೆ.
ಗಂಡನ ವಿರುದ್ಧ ಪೊಲೀಸ್ ಕೇಸ್
ಆಕೆ ತನ್ನ ಗಂಡನ ವಿರುದ್ಶ ಈ ಕುರಿತು ದೂರು ನೀಡಿದ ನಂತರ ಪೊಲೀಸರು ಸಲ್ಮಾನ್ ವಿರುದ್ಧ ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆ, 2019 ರ ಸೆಕ್ಷನ್ 3/4 ಮತ್ತು ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆಗಸ್ಟ್ 28 ರಂದು ಸಲ್ಮಾನ್ ಇತರ ಐದು ಮಂದಿಯೊಂದಿಗೆ ತನ್ನ ಪೋಷಕರ ಮನೆಗೆ ಹೋಗಿ ತನಗೆ ಥಳಿಸಿದ್ದಾರೆ ಎಂದು ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ತ್ರಿವಳಿ ತಲಾಖ್ ಹೇಳಿ ಅಲ್ಲಿಂದ ತೆರಳಿದ್ದ ಎಂದು ಸಹ ನಜ್ಮಾ ತನ್ನ ಪೊಲೀಸ್ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಮಹಿಳೆ ನೀಡಿದ ದೂರನ್ನು ಆಧರಿಸಿ ತನಿಖೆ ನಡೆಯುತ್ತಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು. ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು ಎಂದು ಕೊತ್ವಾಲಿ ಮೀರತ್ ವೃತ್ತದ ಅಧಿಕಾರಿ ಅರವಿಂದ್ ಕುಮಾರ್ ಚೌರಾಸಿಯಾ ತಿಳಿಸಿದ್ದಾರೆ.

Post a Comment