Hubballi: ಗಣಪನ ಎದುರು ನಮಾಜ್! ಗಂಡು ಮೆಟ್ಟಿದ ನಾಡಿನಲ್ಲೊಂದು ಸಾಮರಸ್ಯ ಸಂದೇಶ


  ಮುಸ್ಲಿಮರಿಂದ ಗಣೇಶನಿಗೆ ಪೂಜೆ

 ದೇಶದಾದ್ಯಂತ ಸಡಗರ ಸಂಭ್ರಮದಿಂದ ಗಣೇಶ ಚತುರ್ಥಿಯನ್ನು ಜನರು ಆಚರಿಸುತ್ತಿದ್ದಾರೆ. ಮತ್ತೊಂದೆಡೆ ಕೋಮು ಭಾವನೆ ಕಿಚ್ಚು ಹೆಚ್ಚಾಗುತ್ತಿದೆ. ಆದರೆ ಹುಬ್ಬಳ್ಳಿ ತಾಲೂಕಿನ ಈ ಗ್ರಾಮ ಇಡೀ ದೇಶಕ್ಕೆ ಮಾದರಿಯಾಗಿದೆ. ಹೇಗೆ ಅಂತಾ ನೀವೇ ನೋಡಿ

 ದೇಶದಾದ್ಯಂತ ಸಡಗರ ಸಂಭ್ರಮದಿಂದ ಗಣೇಶ ಚತುರ್ಥಿಯನ್ನು (Ganesha Festival) ಜನರು ಆಚರಿಸುತ್ತಿದ್ದಾರೆ. ಮತ್ತೊಂದೆಡೆ ಕೋಮು ಭಾವನೆ (Communal Violence) ಕಿಚ್ಚು ಹೆಚ್ಚಾಗುತ್ತಿದೆ. ಆದರೆ ಹುಬ್ಬಳ್ಳಿ (Hubballi) ತಾಲೂಕಿನ ಈ ಗ್ರಾಮ ಇಡೀ ದೇಶಕ್ಕೆ ಮಾದರಿಯಾಗಿದೆ (Model). ಹುಬ್ಬಳ್ಳಿ ತಾಲೂಕಿನ ಕೊಟಗೊಂಡಿಹುಣಸಿ ಗ್ರಾಮದ ಗಣೇಶೋತ್ಸವ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ. ಇಲ್ಲಿ ಹಿಂದೂ - ಮುಸ್ಲಿಂ (Hindu Muslim) ಜೊತೆಗೂಡಿ ಹಬ್ಬ ಆಚರಣೆ ಮಾಡ್ತಾರೆ. ಮುಸ್ಲಿಮರಿಂದ ಗಣೇಶನಿಗೆ ನಮಾಜ್ ಸಲ್ಲಿಕೆಯಾದರೆ, ಹಿಂದೂ ಬಾಂಧವರಿಂದ ಪೂಜೆ ಸಲ್ಲಿಕೆಯಾಗುತ್ತೆ. ಗಣೇಶ ಹಬ್ಬದಲ್ಲಿ ತಳಿರು ತೋರಣ ಕಟ್ಟೋರು ಮುಸ್ಲಿಮರಾದರೆ, ಇಫ್ತಾರ್ ಗೆ ಊಟ ಬಡಿಸುವವರು ಹಿಂದೂಗಳಾಗಿದ್ದಾರೆ. ಗಣಪತಿ ಪ್ರತಿಷ್ಠಾಪನೆ ಆದಾಗಿನಿಂದಲೂ ಹಿಂದೂ - ಮುಸ್ಲಿಂ ರು ಒಟ್ಟಾಗಿ ಪೂಜೆ ಸಲ್ಲಿಸುತ್ತಾರೆ. ಎರಡೂ ಸಮುದಾಯಗಳು ಮಹಿಳೆಯರು, ಮಕ್ಕಳು ಎಲ್ಲರೂ ಭಾಗಿಯಾಗುತ್ತಾರೆ.

ಹುಬ್ಬಳ್ಳಿ ತಾಲೂಕಿನ ಈ ಗ್ರಾಮ ಇಡೀ ದೇಶಕ್ಕೆ ಮಾದರಿಯಾಗಿದೆ. ಹಿಂದೂ ಹಾಗೂ ಮುಸ್ಲಿಮರು ಇಬ್ಬರು ಸೇರಿಕೊಂಡು ಗಣಪತಿ ಪ್ರತಿಷ್ಠಾಪನೆ ಮಾಡುವ ಮೂಲಕ ಸಹೋದರತ್ವಕ್ಕೆ ಕಾರಣವಾಗಿದ್ದಾರೆ. ಕೊಟಗೊಂಡಹುಣಸಿ ಗ್ರಾಮದ ಕೆಳಗಿನ ಓಣಿಯಲ್ಲಿ ಹಿಂದೂ ಮುಸ್ಲಿಮರು ಒಟ್ಟಿಗೆ ಸೇರಿ ವಿಘ್ನವಿನಾಶಕನಿಗೆ ಪೂಜೆ ಸಲ್ಲಿಸುವ ಮೂಲಕ ಮಾದರಿಯಾಗಿದ್ದಾ


ರೆ.ಗಣಪತಿ ಎದುರು ನಮಾಜ್

ಇಫ್ತಾರ್​ಗೆ ಊಟ ಬಡಿಸೋದು ಹಿಂದೂಗಳು!

ಇಲ್ಲಿ ಗಣೇಶೋತ್ಸವ ಕಾರ್ಯಕ್ರಮಕ್ಕೆ ತಳಿರುತೋರಣ ಕಟ್ಟುವವರು ಮುಸ್ಲಿಮರು. ಇಫ್ತಾರ್ ಗೆ ಊಟ ಬಡಿಸುವವರು ಇಲ್ಲಿನ ಹಿಂದೂಗಳಾಗಿದ್ದಾರೆ. ಗಣಪತಿ ಪ್ರತಿಷ್ಠಾಪನೆ ಬಳಿಕ ನಿತ್ಯವೂ ಹಿಂದೂ ಮುಸ್ಲಿಂ ಮಹಿಳೆಯರು, ಪುರುಷರು ಒಟ್ಟುಗೂಡಿ ಪೂಜೆ ಮಾಡ್ತಾ


ರೆ.ಗಣೇಶ ಹಬ್ಬದಲ್ಲಿ ಸಾಮರಸ್ಯ

ಇದನ್ನೂ ಓದಿ: ವಿಘ್ನೇಶ್ವರನ ಮೂರ್ತಿಯನ್ನೇ ಭಗ್ನ ಮಾಡಿದ ಕಿಡಿಗೇಡಿಗಳು! 9 ಕಡೆ ಗಣಪನ ವಿಗ್ರಹಕ್ಕೆ ಧಕ್ಕೆ

ಗಣೇಶನ ಮುಂದೆ ನಮಾಜ್ ಮಾಡ್ತಾರೆ

ಅಷ್ಟೇ ಅಲ್ಲದೇ ಗಣೇಶನ ಮುಂದೆ ನಮಾಜ್ ಮಾಡುವ ಮೂಲಕ ನಾವೆಲ್ಲರೂ ಒಂದೇ ಎನ್ನುವ ಸಂದೇಶ ನೀಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಕಳೆದ 25 ವರ್ಷಗಳಿಂದ ಸೌಹಾರ್ದ ಗಣೇಶ ಪ್ರತಿಷ್ಠಾಪನೆ ಮಾಡುವ ಮೂಲಕ ನಾವೆಲ್ಲರೂ ಒಂದೇ ಎಂದು ಸಾರುತ್ತಿದ್ದಾರೆ. ವಿಶೇಷವಾಗಿ ಈ ಬಾರಿ ಬೆಳ್ಳಿಹಬ್ಬದ ಹಿನ್ನೆಲೆ ಬೆಳ್ಳಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ.

ಪ್ರತಿವರ್ಷವೂ ನಡೆಯುತ್ತೆ ಪೌರಾಣಿಕ ಬೊಂಬೆ ಆಟ

ಇಲ್ಲಿ ಪ್ರತಿವರ್ಷವೂ ರೇಣುಕಾ ಎಲ್ಲಮ್ಮ, ತಿರುಪತಿ, ಶಬರಿಮಲೆ ಅಯ್ಯಪ್ಪ ದೇವರ ಚರಿತ್ರೆಗಳನ್ನು ಬೊಂಬೆ ಆಟದ ಮೂಲಕ ತಿಳಿಸ್ತಾರೆ. ಆದರೆ ಕೊರೋನಾ ನಂತರ ಗೊಂಬೆ ಆಟವನ್ನು ನಿಲ್ಲಿಸಲಾಗಿದೆ. ಆದರೆ ಮುಂಬರುವ ಹಬ್ಬದಲ್ಲಿ ಮತ್ತೆ ಎಂದಿನಂತೆ ಬೊಂಬೆ ಆಟ ಪ್ರಾರಂಭಿಸಲಾಗುವುದು ಎನ್ನುತ್ತಾರೆ ಗಣೇಶೋತ್ಸವ ಯುವಕ ಮಂ


ಡಳಿಯವರು.ಹಿಂದೂ-ಮುಸ್ಲಿಮರಿಂದ ಗಣೇಶ ಹಬ್ಬ

ನಮ್ಮ ಗ್ರಾಮದಲ್ಲಿ ಎಲ್ಲಾ ಒಗ್ಗಟ್ಟಾಗಿದ್ದೀವಿ ಅಂತಾರೆ ಗ್ರಾಮಸ್ಥರು

ಗ್ರಾಮ ಎಂದಮೇಲೆ ಎಲ್ಲಾ ಸಮುದಾಯದ ಜನರು ಇರುತ್ತಾರೆ. ನಮ್ಮ ನಡುವೆ ಸೌಹಾರ್ದತೆ ಇದ್ದರೆ ಮಾತ್ರ ಗ್ರಾಮದ ಅಭಿವೃದ್ಧಿ ಸಾಧ್ಯ. ಹೀಗಾಗಿಯೇ ನಮ್ಮ ಗ್ರಾಮದಲ್ಲಿ ಎಲ್ಲರೂ ಒಂದಾಗಿ ಗಣೇಶ ಹಬ್ಬ ಆಚರಿಸುತ್ತೇವೆ ಎನ್ನುತ್ತಾರೆ ಗ್ರಾಮದ ಸಿದ್ದಪ್ಪ.

ಕಳೆದ 25 ವರ್ಷಗಳಿಂದ ಕೋಮು ಸಾಮರಸ್ಯ

ಒಟ್ಟಾರೆ ಧರ್ಮ ಧರ್ಮಗಳ ಕಚ್ಚಾಟದ ನಡುವೆ ಈ ಗ್ರಾಮದಲ್ಲಿ ಭಾವೈಕ್ಯತೆಯಿಂದ ಗಣೇಶೋತ್ಸವ ಆಚರಿಸುತ್ತಾರೆ. ಕಳೆದ 25 ವರ್ಷಗಳಿಂದಲೂ ನಡೆದುಕೊಂಡಿರೋ ಸೌಹಾರ್ದತೆ ಈಗಲೂ ಮುಂದುವರಿದಿದೆ. ನಾವೆಲ್ಲರೂ ಒಂದೇ ಅಂತ ಕೊಟಗೊಂಡಹುಣಸಿ ಗ್ರಾಮಸ್ಥರು ದೇಶಕ್ಕೆ ಸೌಹಾರ್ದತೆ ಸಂದೇಶ ಸಾರುತ್ತಿದ್ದಾರೆ.

ಇದನ್ನೂ ಓದಿ: ಮೈಸೂರಲ್ಲಿ ಗಣೇಶ ಮೆರವಣಿಗೆ ವೇಳೆ ನೂಪುರ್ ಶರ್ಮಾ ಫ್ಲೆಕ್ಸ್ ಹಾರಾಟ!

ಮೈಸೂರಲ್ಲಿ ಗಣೇಶ ಮೆರವಣಿಗೆ ವೇಳೆ ನೂಪುರ್ ಶರ್ಮಾ ಫ್ಲೆಕ್ಸ್ ಹಾರಾಟ!

ಮೈಸೂರಲ್ಲಿ ಗಣೇಶನ ವಿಗ್ರಹದ ಜೊತೆಗೆ ನೂಪುರ್ ಶರ್ಮಾರ ಅವರ ಫ್ಲೆಕ್ಸ್ ಕೂಡ ರಾರಾಜಿಸಿದೆ. ಗಣಪತಿ ವಿಸರ್ಜನಾ ಮೆರವಣಿಗೆ ವಾಹನಗಳ ಮೇಲೆ ರಾಷ್ಟ್ರ ನಾಯಕರ ಫ್ಲೆಕ್ಸಗಳ ಜೊತೆ ನೂಪುರ್ ಶರ್ಮಾ ಅವರ ಫ್ಲೆಕ್ಸ್ ಕಾಣಿಸಿಕೊಂಡಿದೆ. ಇತ್ತೀಚಿಗೆ ವಿವಾದಾತ್ಮಕ ಹೇಳಿಕೆ ನೀಡಿ ನೂಪುರ್ ಶರ್ಮಾ ಭಾರಿ ಸುದ್ದಿಯಾಗಿದ್ದರು.

Post a Comment

Previous Post Next Post