Volodymyr Zelensky: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕಾರು ಅಪಘಾತ


  ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ

 Volodymyr Zelensky: ಉಕ್ರೇನ್ ಅಧ್ಯಕ್ಷರು ವೊಲೊಡಿಮಿರ್ ಝೆಲೆನ್ಸ್ಕಿ ರಸ್ತೆ ಅಪಘಾತದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ, ಝೆಲೆನ್ಸ್ಕಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ

 ಕೈವ್(ಸೆ.15): ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Ukraine President Volodymyr Zelensky) ಕಾರು ಅಪಘಾತದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಉಕ್ರೇನ್ ಮಾಧ್ಯಮ ಪೋರ್ಟಲ್ ದಿ ಕೈವ್ ಇಂಡಿಪೆಂಡೆಂಟ್ ಝೆಲೆನ್ಸ್ಕಿಯ ವಕ್ತಾರರನ್ನು ಉಲ್ಲೇಖಿಸಿ, ವೊಲೊಡಿಮಿರ್ ಝೆಲೆನ್ಸ್ಕಿಗೆ ಅಪಘಾತದಲ್ಲಿ (Accident) ಯಾವುದೇ ಗಂಭೀರವಾದ ಗಾಯಗಳಾಗಿಲ್ಲ ಎಂದಿದೆ. ಇನ್ನು ಝೆಲೆನ್ಸ್ಕಿಯ ವಕ್ತಾರ ಸೆರ್ಹಿ ನೈಕಿಫೊರೊವ್  (Serhii Nykyforov) ಅವರು ಸೆಪ್ಟೆಂಬರ್ 15 ರಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಅಧ್ಯಕ್ಷರ ಕಾರಿಗೆ ಕಾರೊಂದು ಡಿಕ್ಕಿ ಹೊಡೆದಿದೆ ಎಂದು ಹೇಳಿದ್ದರು. ಮಾಧ್ಯಮ ಪೋರ್ಟಲ್ ಪ್ರಕಾರ, ಅಪಘಾತದ ನಂತರ, ವೈದ್ಯರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ಪರೀಕ್ಷಿಸಿದ್ದಾರೆ. ಈ ವೇಳೆ ವೈದ್ಯರು ಝೆಲೆನ್ಸ್ಕಿಯ ಚಾಲಕನ ವೈದ್ಯಕೀಯ ಪರೀಕ್ಷೆಯನ್ನು ಸಹ ನಡೆಸಿದ್ದಾರೆನ್ನಲಾಗಿದೆ

ಕೂದಲೆಳೆ ಅಂತರದಲ್ಲಿ ಪಾರಾದ ವೊಲೊಡಿಮಿರ್ ಝೆಲೆನ್ಸ್ಕಿ

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ವಕ್ತಾರ ನೈಕಿಫೊರೊವ್ ಅವರು ಅಪಘಾತದ ಬಗ್ಗೆ ಕಾನೂನು ಜಾರಿ ಸಂಸ್ಥೆ ಸಂಪೂರ್ಣ ತನಿಖೆ ನಡೆಸುತ್ತದೆ ಎಂದು ಹೇಳಿದರು. ಅಪಘಾತದ ಎಲ್ಲಾ ಸಂದರ್ಭಗಳನ್ನು ತನಿಖೆ ಮಾಡಲಾಗುತ್ತದೆ. ಅಧ್ಯಕ್ಷೀಯ ಬೆಂಗಾವಲು ಪಡೆ ಕೈವ್ ಮೂಲಕ ಹಾದು ಹೋಗುತ್ತಿದ್ದಾಗ ಉಕ್ರೇನ್ ನಾಯಕ ವೊಲೊಡಿಮಿರ್ ಝೆಲೆನ್ಸ್ಕಿ ಪ್ರಯಾಣಿಸುತ್ತಿದ್ದ ಕಾರಿಗೆ ಕಾರು ಡಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ, ಅಪಘಾತದಲ್ಲಿ ಅಧ್ಯಕ್ಷರಿಗೆ ಯಾವುದೇ ಗಂಭೀರ ಗಾಯಗಳಾಗಿ

ಇದನ್ನೂ ಓದಿ: ಹಾಸ್ಯ ನಟನೆಯಿಂದ ಅಧ್ಯಕ್ಷ ಪಟ್ಟದವರೆಗೆ; ಉಕ್ರೇನ್ President ನಡೆದು ಬಂದ ಕಥೆ ರೋ

ರಷ್ಯಾ ಉಕ್ರೇನ್ ಯುದ್ಧದಲ್ಲಿ ತಿ

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಈಗ ಹೊಸ ತಿರುವು ಪಡೆದುಕೊಂಡಿದೆ. ಉಕ್ರೇನ್ ರಷ್ಯಾಕ್ಕೆ ಆಳವಾದ ಹೊಡೆತವನ್ನು ನೀಡಿದೆ. ಅಲ್ಲದೇ ರಷ್ಯಾದ ಆಕ್ರಮಣದಿಂದ ದೇಶದ ಅನೇಕ ಭಾಗಗಳನ್ನು ವಿಮೋಚನೆಗೊಳಿಸಿದೆ. ಆರು ತಿಂಗಳ ಆಕ್ರಮಣದ ನಂತರ, ಉಕ್ರೇನ್ ಪಡೆಗಳು ಆಯಕಟ್ಟಿನ ನಗರವಾದ ಇಜಿಯಮ್ ಮತ್ತು ಖಾರ್ಕಿವ್ ಸೇರಿದಂತೆ ಹಲವಾರು ಭಾಗಗಳನ್ನು ಮರಳಿ ವಶಪಡಿಸಿಕೊಂಡ

 ಉಕ್ರೇನ್ನಿಂದ ರಷ್ಯಾ ಪಲಾಯ

ಉಕ್ರೇನ್ ಪಡೆಗಳು ಖಾರ್ಕಿವ್ ಪ್ರದೇಶದ ಮೂಲಕ ಪೂರ್ವಕ್ಕೆ ಹೊಸ ಆಕ್ರಮಣವನ್ನು ಪ್ರಾರಂಭಿಸಿದ ಕೇವಲ ಐದು ದಿನಗಳ ನಂತರ, ರಷ್ಯಾದ ಪಡೆಗಳು ಆಯಕಟ್ಟಿನ ಪೂರ್ವ ನಗರವನ್ನು ಸ್ಥಳಾಂತರಿಸಿವೆ. ಉಕ್ರೇನ್‌ನ ಭೂ ಪಡೆಗಳ ಬೋಹುನ್ ಬ್ರಿಗೇಡ್‌ನ ವಕ್ತಾರರು ಶನಿವಾರ ಮಧ್ಯಾಹ್ನ ಹೇಳಿಕೆಯಲ್ಲಿ, "ರಷ್ಯನ್ನರು ಓಡಿಹೋದರು ಮತ್ತು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಬಿಟ್ಟುಹೋದರು, ಈಗ ನಗರ ಕೇಂದ್ರವು ಮುಕ್ತವಾಗಿದೆ" ಎಂದು ಹೇಳಿದ

ಇದನ್ನೂ ಓದಿ: ಅತ್ತ ರಷ್ಯಾ ಗ್ರೆನೇಡ್ ಎಸೆಯುತ್ತಿದ್ದರೆ ಇತ್ತ ಪತ್ನಿ ಜೊತೆ ಫೋಟೋಶೂಟ್ ಮಾಡ್ತಿದ್ದಾರೆ ಉಕ್ರೇನ್ ಅಧ್ಯ

ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಭಾನುವಾರ ಟೆಲಿಗ್ರಾಮ್ನಲ್ಲಿ ಉಕ್ರೇನ್ ಸೇನೆಯು ಖಾರ್ಕಿವ್ ಪ್ರದೇಶದಲ್ಲಿ ಚ್ಕಾಲೋವ್ಸ್ಕ್ ವಸಾಹತುವನ್ನು ಮುಕ್ತಗೊಳಿಸಿದೆ ಎಂದು ಹೇಳಿದರು. ಕ್ಷರು.ನವು.ರುವುಚಕಲ್ಲ...ಗೊಳಿಸಿದೆ ಎಂದು ಹೇಳಿದರು.

Post a Comment

Previous Post Next Post