ಸಾಂದರ್ಭಿಕ ಚಿತ್ರ
ಇಸ್ಲಾಮಿಕ್ ಸ್ಟೇಟ್ ವಕ್ತಾರ ಅಲ್-ಮುಜಾಹಿರ್, ಭಯವು ನಿಮ್ಮನ್ನು ತಿನ್ನುತ್ತಿದೆ. ಆದ್ದರಿಂದ ನಿಮ್ಮ ಧರ್ಮದ ಪರವಾಗಿ ನಿಲ್ಲುವ, ಶತ್ರುಗಳ ವಿರುದ್ಧ ಹೋರಾಡುವ ಧೈರ್ಯವನ್ನು ನೀವು ಕಳೆದುಕೊಂಡಿದ್ದೀರಿ ಎಂದು ಹೇಳಿದ್ದಾನೆ
ದೆಹಲಿ: ಭಾರತದ ವಿರುದ್ಧ ದಾಳಿ ನಡೆಸಲು ಇಸ್ಲಾಮಿಕ್ ಸ್ಟೇಟ್ (Islamic State) ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಮುಸ್ಲಿಮರಿಗೆ (Asian Muslims) ಕರೆ ನೀಡಿದೆ. ಅಬು ಉಮರ್ ಅಲ್-ಮುಜಾಹಿರ್ ಎಂಬ ಹೆಸರಿನ ಇಸ್ಲಾಮಿಕ್ ಸ್ಟೇಟ್ ಜಾಗತಿಕ ವಕ್ತಾರ, ಇಸ್ಲಾಮಿಕ್ ಸ್ಟೇಟ್ ಭಾರತದಲ್ಲಿ ಇಸ್ಲಾಂ ಧರ್ಮವನ್ನು (Islam) ರಕ್ಷಿಸಲು ಬದ್ಧವಾಗಿದೆ ಎಂದು ಹೇಳಿದ್ದಾನೆ. ಅಲ್ಲದೇ ಭಾರತದಲ್ಲಿ ಮುಸ್ಲಿಂ ಧರ್ಮೀಯರು ಸರ್ಕಾರದಿಂದ ದಾಳಿಗೆ ಒಳಗಾಗಿದ್ದಾರೆ ಎಂದು ಆರೋಪ ಹೊರಿಸಿದ್ದಾನೆ. ಇಸ್ಲಾಮಿಕ್ ಸ್ಟೇಟ್ ಭಾರತೀಯ ಜನತಾ ಪಕ್ಷದ ಉಚ್ಛಾಟಿತ ನಾಯಕಿ ನೂಪುರ್ ಶರ್ಮಾ ಅವರ ಪ್ರವಾದಿ ಮುಹಮ್ಮದ್ ಅವರ ಮೇಲಿನ ಧರ್ಮನಿಂದೆಯ ಹೇಳಿಕೆಗಳಿಗೆ ಪ್ರತೀಕಾರ ತೀರಿಸಿಕೊಳ್ಳಲು ದೆಹಲಿಯಲ್ಲಿ ಕೋಮು ಹಿಂಸಾಚಾರ ನಡೆಸುವ ಬೆದರಿಕೆಯನ್ನು ಸಹ ಹಾಕಿತ್ತು
ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಫಿಲಿಪೈನ್ಸ್, ಮಲೇಷಿಯಾ, ಇಂಡೋನೇಷ್ಯಾದಲ್ಲಿ ಮುಸ್ಲಿಮರನ್ನು ಉದ್ದೇಶಿಸಿ 32 ನಿಮಿಷಗಳ ಅರೇಬಿಕ್ ಭಾಷೆಯಲ್ಲಿ ಭಾಷಣ ಮಾಡಿರುವ ಇಸ್ಲಾಮಿಕ್ ಸ್ಟೇಟ್ ವಕ್ತಾರ ಅಲ್-ಮುಜಾಹಿರ್, "ಭಯವು ನಿಮ್ಮನ್ನು ತಿನ್ನುತ್ತದೆ. ಆದ್ದರಿಂದ ನಿಮ್ಮ ಧರ್ಮದ ಪರವಾಗಿ ನಿಲ್ಲುವ ಮತ್ತು ಅದರ ಶತ್ರುಗಳ ವಿರುದ್ಧ ಹೋರಾಡುವ ಧೈರ್ಯವನ್ನು ನೀವು ಕಳೆದುಕೊಂಡಿದ್ದೀರಿ" ಎಂದು ಹೇಳಿದ್ದಾ
ISIS ಗೆ ನೂತನ ಮುಖ್ಯಸ್ಥ! ಅಬು ಅಲ್ ಹಸನ್ ಅಲ್ ಹಾಶಿಮಿ ಅಲ್ ಖುರೇಷಿಗೆ ಉಗ್ರ ಸಂಘಟನೆಯ ನೇತೃತ್ವ
ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ ಭಯೋತ್ಪಾದಕ ಸಂಘಟನೆ ತನ್ನ ನೂತನ ಮುಖ್ಯಸ್ಥನ ಹೆಸರನ್ನು ಬಹಿರಂಗಪಡಿಸಿದೆ. ಈ ಹಿಂದಿನ ಮುಖ್ಯಸ್ಥನಾಗಿದ್ದ ಅಬು ಇಬ್ರಾಹಿಂ ಅಲ್ ಹಾಶಿಮಿ ಅಲ್ ಖುರೇಷಿ ಮತ್ತು ವಕ್ತಾರ ಅಬು ಹಮ್ಜಾ ಅಲ್ ಖುರೇಷಿ ಇಬ್ಬರೂ ಮೃತಪಟ್ಟಿದ್ದಾಗಿ ಐಸಿಸ್ ತಿಳಿಸಿದ್ದು, ನೂತನ ಮುಖ್ಯಸ್ಥನನ್ನಾಗಿ ಅಬು ಅಲ್ ಹಸನ್ ಅಲ್ ಹಾಶಿಮಿ ಅಲ್ ಖುರೇಷಿ ಎಂಬುವನನ್ನು ನೇಮಕ ಮಾಡಿದ್ದಾಗಿ ಘೋಷಿಸಿದೆ. ಇರಾಕಿನ ಮಾಜಿ ನಾಯಕ ಸದ್ದಾಂ ಹುಸೇನ್‌ನ ಸೇನೆಯ ಧಾರ್ಮಿಕ ವಿದ್ವಾಂಸ ಮತ್ತು ಸೈನಿಕನಾಗಿ ಎರಡು ವರ್ಷಗಳ ಕಾಲ ಐಸಿಸ್ ಅನ್ನು ಮುನ್ನಡೆಸಿದ ಖುರೇಶಿಯನ್ನು 2022ರ ಫೆಬ್ರವರಿಯಲ್ಲಿ ಅಮೆರಿಕ ಸೇನಾಪಡೆ ಸಿರಿಯಾದಲ್ಲಿ (Syria) ಹತ್ಯೆಗೈದಿದೆ
ಇದನ್ನೂ ಓದಿ: Viral News: ಮಹಿಳೆಗೆ ರೈಲಿನಲ್ಲೇ ಹೆರಿಗೆ! ವೈದ್ಯಕೀಯ ವಿದ್ಯಾರ್ಥಿನಿಗೆ ಭೇಷ್ ಅನ್ನಲೇಬೇ
ಈ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಈಗಾಗಲೇ ಮಾಹಿತಿ ನೀಡಿದ್ದರು. ಉತ್ತರ ಸಿರಿಯಾದಲ್ಲಿ ಅಮೆರಿಕ ಪಡೆಗಳು ನಡೆಸಿದ ವೈಮಾನಿಕ ದಾಳಿಯಲ್ಲಿ ಆತ ಮತ್ತು ಆತನ ಕುಟುಂಬ ಮೃತಪಟ್ಟಿದ್ದಾಗಿ ಅಮೆರಿಕ ಆಡಳಿತ ಹೇಳಿತ್ತು
ಅಮೆರಿಕವೇ ಕಾರಣವಾ
ಇದೀಗ ಐಸಿಸ್, ಹಾಶಿಮಿ ಅಲ್ ಖುರೇಷಿ ಮೃತಪಟ್ಟಿದ್ದಾಗಿ ತಿಳಿಸಿದ್ದರೂ ಕೂಡ ಆತನನ್ನು ಕೊಂದಿದ್ದು ಅಮೆರಿಕ ಸೇನೆ ಎಂಬುದನ್ನು ಎಲ್ಲಿಯೂ ಹೇಳಿಲ್ಲ. ಈಶಾನ್ಯ ಸಿರಿಯಾದ ನಗರವಾದ ಹಸಾಕಾದ ಘುವೈರಾನ್ ಜೈಲಿನ ಮೇಲೆ ನಡೆಸಲಾದ ದಾಳಿಯಲ್ಲಿ ಎಂದು ತಿಳಿಸಿದ್ದಾರೆ
ಇದನ್ನೂ ಓದಿ: UP Dalit Sisters Death: ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ದಲಿತ ಸಹೋದರಿಯರ ಮೃತದೇಹ ಪತ್ತೆ; ಊರಿಗೆ ಊರೇ ತಲ್ಲ
ದಾಳಿಯಲ್ಲಿ ಮೃತಪಟ್ಟವರೆಷ್ಟು
ಈ ದಾಳಿ ಜನವರಿಯಲ್ಲಿ ನಡೆದಿತ್ತು. ಬಂಧಿತ ಉಗ್ರರನ್ನು ಬಿಡುಗಡೆ ಮಾಡುವಂತೆ ಐಸಿಸ್ ಭಯೋತ್ಪಾದಕರು ಜೈಲಿನ ಮೇಲೆ ದಾಳಿ ಮಾಡಿದ್ದರು. ಇದರಲ್ಲಿ ಸುಮಾರು 200ಕ್ಕೂ ಹೆಚ್ಚು ಕೈದಿಗಳು, 30ಕ್ಕೂ ಅಧಿಕ ಭದ್ರತಾ ಸಿಬ್ಬಂದಿ ಮತ್ತೂ ಕೆಲವು ಭಯೋತ್ಪಾದಕರೂ ಸಾವನ್ನಪ್ಪಿದ್ದರು ಎಂದು ಹೇಳಿದ್ದಾರೆ. ?ಣ.ಯಿತಾ?.ಕು!.ನೆ...ರು ಎಂದು ಹೇಳಿದ್ದಾರೆ.

Post a Comment