Belagavi Politics: ಬೈಲಹೊಂಗಲ ಕ್ಷೇತ್ರದಲ್ಲಿ BJP-KJP ಕಲಹ; ರಾಜ್ಯ ನಾಯಕರಿಗೆ ತಲೆನೋವು ಆದ ಸ್ಥಳೀಯ ಗುದ್ದಾಟ


  ಟಿಕೆಟ್ ಫೈಟ್ ಬಿಎಸ್‌ವೈ ಜಾಣ ನಡೆಯಿಂದ ಬೈಲಹೊಂಗಲದಲ್ಲಿ ಪಾಟೀಲ್- ಮೆಟಗುಡ್ಡ ಉಭಯ ನಾಯಕರ ಬೆಂಬಲಿಗರಲ್ಲಿ ತಳಮಳ ಹೆಚ್ಚಿಸಿದೆ. ಇದೇ ರೀತಿಯಲ್ಲಿ ಬಿಜೆಪಿಯಲ್ಲಿನ ಬಣ ರಾಜಕಾರಣ ಮುಂದುವರಿದ್ರೆ ಖಂಡಿತವಾಗಿಯೂ ಇದರ ಲಾಭ ಕಾಂಗ್ರೆಸ್ ಗೆ ಆಗಲಿದೆ.

ಬೆಳಗಾವಿ: ಬಿಜೆಪಿಯಲ್ಲಿ(Belagavi Politics) ಈಗ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ (Former CM BS Yediyurappa) ಕೇಂದ್ರ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಲಾಗಿದೆ. ಆದರೂ ಕೇಸರಿ ಪಾಳ್ಯದಲ್ಲಿ ಬಿಜೆಪಿ- ಕೆಜೆಪಿ (BJP And KJP) ಬಣ ಮಾತ್ರ ರಾಜಕಾರಣ ನಿಂತಿಲ್ಲ. ಇದಕ್ಕೆ ತಾಜಾ ಉದಾಹರಣೆ ಬೆಳಗಾವಿ (Belagavi) ಜಿಲ್ಲೆ ಬೈಲಹೊಂಗಲ ವಿಧಾನಸಭೆ (Bylahongala Assembly Constituency) ಮತಕ್ಷೇತ್ರ. ಬಿಜೆಪಿ ಟಿಕೆಟ್​​ಗಾಗಿ ಮಾಜಿ ಶಾಸಕರಾದ ವಿಶ್ವನಾಥ್ ಪಾಟೀಲ್ (Vishwanath Patil) ಮತ್ತು ಜಗದೀಶ್ ಮೆಟಗುಡ್ (Jagadish Metgud) ಮಧ್ಯೆ ಗುದ್ದಾಟ ಮುಂದುವರಿದಿದೆ. ಈಗಿನಿಂದಲೇ ಬಿಜೆಪಿಗೆ ಮಾಜಿ ಶಾಸಕರ ಗುಂಪುಗಾರಿಕೆ ಬಿಸಿ ತಟ್ಟಿದೆ.

2023ರ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿದ್ದಂತೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಬೈಲಹೊಂಗಲ ವಿಧಾನಸಭೆ ಕ್ಷೇತ್ರದಲ್ಲಿ ಇನ್ನೂ ಆರಿಲ್ಲ ಬಿಜೆಪಿ-ಕೆಜೆಪಿ ಕಿಚ್ಚು. ಇದಕ್ಕೆ ಸಾಕ್ಷಿಯಾಗಿದ್ದಾರೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನ್ನೋದು ವಿಶೇಷ. ಹಾಗೇ ನೋಡಿದ್ರೆ ಬೈಲಹೊಂಗಲ ಬಿಜೆಪಿ ಟಿಕೆಟ್‌ಗಾಗಿ ಜಗದೀಶ್ ಮೆಟಗುಡ್ - ಡಾ. ವಿಶ್ವನಾಥ ಪಾಟೀಲ್ ಮಧ್ಯೆ ಪೈಪೋಟಿ ಆರಂಭವಾಗಿದೆ.

ಇಬ್ಬರು ನಾಯಕರ ಮಧ್ಯೆ ಸೋಲು-ಗೆಲುವಿನ ಆಟ

ಯಾಕೆಂದರೆ 2013ರ ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿ ವಿಶ್ವನಾಥ್ ಪಾಟೀಲ್ ಆಯ್ಕೆಯಾಗಿದ್ದರು. ಅಂದು 2013ರಲ್ಲಿ ಬಿಜೆಪಿ ಅಭ್ಯರ್ಥಿ ಆಗಿ ಸ್ಪರ್ಧಿಸಿದ್ದ ಜಗದೀಶ್ ಮೆಟಗುಡ್ಡ ಪರಾಭವಗೊಂಡಿದ್ದರು. ಆ ಬಳಿಕ 2018ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆದಿದ್ದ ಡಾ. ವಿಶ್ವನಾಥ ಪಾಟೀಲ್ ಸೋಲಿಗೆ ಪಕ್ಷೇತರರಾಗಿ ಸ್ಪರ್ಧಿಸಿದ್ದ ಜಗದೀಶ್ ಮೆಟಗುಡ್ಡ ಕಾರಣವಾಗಿ


 ಬಿಜೆಪಿ ಧ್ವಜ

ಹೀಗಾಗಿ ಬೈಲಹೊಂಗಲ ವಿಧಾನಸಭೆ ಮತಕ್ಷೇತ್ರದಲ್ಲಿ ಬಿಜೆಪಿ -ಕೆಜೆಪಿ ಕಿಚ್ಚು ಇನ್ನೂ ಹಾಗೇ ಇದೇ. ಇದೇ ಕಾರಣಕ್ಕೆ ಬಿಜೆಪಿಯಲ್ಲಿದ್ದರೂ ಪಾಟೀಲ್ ಮತ್ತು ಮೆಟಗುಡ್ಡ ಬಣ ಪರಸ್ಪರ ಕತ್ತಿ ಮಸಿಯುತ್ತಲೇ ಇವೆ. ಇನ್ನೂ ಬಿಜೆಪಿಯಲ್ಲಿನ ಕೆಜೆಪಿ- ಬಿಜೆಪಿ ಬಣಗಳೂ ಇಂದಿಗೂ ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ.

ಉಭಯ ನಾಯಕರ ಮಧ್ಯೆ ಟಿಕೆಟ್ ಫೈಟ್

ಬಿಎಸವೈ ಸಿಎಂ ಆಗಿದ್ದಾಗ ಕೆಜೆಪಿ ಮುಖಂಡರಿಗೆ ಮೊದಲ ಆದ್ಯತೆ ನೀಡಲಾಗುತ್ತಿತ್ತು ಎನ್ನಲಾಗಿದೆ. ಈಗ ಬಿಎಸವೈಯನ್ನ ಸಿಎಂ ಕುರ್ಚಿಯಿಂದ ಕೆಳಗೆ ಇಳದಿದ್ದರೂ ಉಭಯ ಬಣಗಳ ಕಿತ್ತಾಟ ನಿಂತಿಲ್ಲ. ಇದೇ ಕಾರಣಕ್ಕೆ ಬೈಲಹೊಂಗಲದಲ್ಲಿ ಈಗ 2023ರ ಚುನಾವಣೆಯಲ್ಲಿ ಉಭಯ ನಾಯಕರ ಮಧ್ಯೆ ಟಿಕೆಟ್ ಫೈಟ್ ಆರಂಭವಾಗಿದೆ.

ಇದನ್ನೂ ಓದಿ: Karnataka Assembly Elections: ಮಂಗಳೂರು ಉತ್ತರದಲ್ಲಿ ಬಾವಾಗೆ ಹೊಸ ಸ್ಪರ್ಧಿ, ಕಾಂಗ್ರೆಸ್​ನಿಂದ ಯಾರು ಕಣಕ್ಕೆ?

ಬಿಎಸ್​ವೈ ಜಾಣ ನಡೆ

ಇತ್ತೀಚೆಗೆ ಬೈಲಹೊಂಗಲಕ್ಕೆ ಭೇಟಿ ನೀಡಿದ್ದ ಮಾಜಿ ಸಿಎಂ‌ ಬಿಎಸ್‌ವೈ ಜಾಣ ನಡೆಯನ್ನ ಅನುಸರಿಸಿದ್ದಾರೆ. ಗಾಣಿಗ ಸಮಾಜ ಹಾಗೂ ನೌಕರರ ಸಮಾವೇಶಕ್ಕೆಂದು ಬೈಲಹೊಂಗಲಕ್ಕೆ ಬಂದಿದ್ದ ಬಿಎಸ್‌ವೈ ಮೊದಲು ಮಾಜಿ ಶಾಸಕ ಜಗದೀಶ್ ಮೆಟಗುಡ್ಡ ಮನೆಗೆ ಬಿಎಸ್‌ವೈ ಭೇಟಿ ನೀಡಿ ಅವರ ಮನೆಯಲ್ಲಿ ಉಪಹಾರ ಸೇವಿಸಿ ಕಾರ್ಯಕ್ರಮಕ್ಕೆ ತೆರಳಿದ್ರು.

ಅನಂತರ ಕಾರ್ಯಕ್ರಮದ ಬಳಿಕ ಮಾಜಿ ಶಾಸಕ ಡಾ. ವಿಶ್ವನಾಥ್ ಪಾಟೀಲ್ ಮನೆಗೆ ಬಿಎಸ್‌ವೈ ಭೇಟಿ ನೀಡಿದ್ರು. ವಿಶ್ವನಾಥ್ ಪಾಟೀಲ ಮನೆಯಲ್ಲಿ ಭೋಜನ ಸವಿಯುವ ಮೂಲಕ ಬಣ ರಾಜಕಾರಣ ಸ್ಫೋಟಗೊಳ್ಳದಂತೆ ಬ್ಯಾಲನ್ಸ್ ಮಾಡಿ ಹೋಗಿದ್ದಾರೆ

ಇದನ್ನೂ ಓದಿ: Karnataka Assembly Elections: ಬಸವನಗುಡಿಯಲ್ಲಿ ಈ ಬಾರಿ ಗೆಲುವಿನ ಪರಿಷೆ ಯಾರದ್ದು? ರವಿಸುಬ್ರಹ್ಮಣ್ಯಗೆ ಸಿಗುತ್ತಾ ದೊಡ್ಡಗಣಪತಿ ಆಶೀರ್ವಾದ?

ಇಬ್ಬರ ಜಗಳದ ಲಾಭ ಪಡೀತಾರಾ ಕಾಂಗ್ರೆಸ್ ನಾಯಕ?

ಅಲ್ಲದೇ ಬಿಜೆಪಿ ಕಲಹದಿಂದಲೇ 2018ರಲ್ಲಿ ಗೆದ್ದು ಬೀಗಿದ್ದರು ಕಾಂಗ್ರೆಸ್‌ನ ಮಹಾಂತೇಶ್ ಕೌಜಲಗಿ. ಈಗ ಮತ್ತೆ 2023ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ಗಾಗಿ ಮೆಟಗುಡ್ಡ-ವಿಶ್ವನಾ


ಥ ಮಧ್ಯೆ ಪೈಪೋಟಿ ಆರಂಭವಾಗಿದೆಸಾಂದರ್ಭಿಕ ಚಿತ್ರ

ಬಿಎಸ್‌ವೈ ಜಾಣ ನಡೆಯಿಂದ ಬೈಲಹೊಂಗಲದಲ್ಲಿ ಪಾಟೀಲ್-  ಮೆಟಗುಡ್ಡ ಉಭಯ ನಾಯಕರ ಬೆಂಬಲಿಗರಲ್ಲಿ ತಳಮಳ ಹೆಚ್ಚಿಸಿದೆ. ಇದೇ ರೀತಿಯಲ್ಲಿ ಬಿಜೆಪಿಯಲ್ಲಿನ ಬಣ ರಾಜಕಾರಣ ಮುಂದುವರಿದ್ರೆ ಖಂಡಿತವಾಗಿಯೂ ಇದರ ಲಾಭ ಕಾಂಗ್ರೆಸ್ ಗೆ ಆಗಲಿದೆ.

Post a Comment

Previous Post Next Post