ಆನೇಕಲ್ ನ್ಯೂಸ್ತ್
ಏರಿಯಾದಲ್ಲಿ ಪುಡಿ ರೌಡಿ ಹವಾ. ಕರೆದಾಗ ಬರಲಿಲ್ಲ ಎಂದು ಕುಟುಂಬದ ಮೇಲೆ ದಾಳಿ. ಹಲ್ಲೆಯಿಂದ ವೃದ್ಧ ಸಾವು. ಜೀವ ಭಯದಲ್ಲಿ ಕುಟುಂ
ಆನೇಕಲ್ (Anekal News): ವ್ಯಕ್ತಿಯೊಬ್ಬ ಕರೆದಾಗ ಬರಲಿಲ್ಲ ಎಂದಾಗ ಆತನ ಮನೆಗೆ ರೌಡಿಗಳು (Rowdy gang attack) ನುಗ್ಗಿ ದಾಂದಲೆ ನಡೆಸಿ ಹತ್ಯೆ ಮಾಡುವುದನ್ನು ಸಾಮಾನ್ಯವಾಗಿ ಸಿನಿಮಾಗಳಲ್ಲಿ (Cinema) ನೋಡಿರುತ್ತಿರಿ. ಆದ್ರೆ ಇಲ್ಲೊಬ್ಬ ಪುಡಿರೌಡಿ ಏರಿಯಾದಲ್ಲಿ ತನ್ನ ಹವಾ ನಡಿಬೇಕು ಎಂದು ತಾನು ಕರೆದಾಗ ಯುವಕನೋರ್ವ (Youth) ಬರಲಿಲ್ಲ ಎಂಬ ಒಂದೇ ಕಾರಣಕ್ಕೆ ತನ್ನ ಪಟಾಲಂ ಜೊತೆ ಸಿನಿಮಾ ಸ್ಟೈಲ್ನಲ್ಲಿ (Cinema Style) ಆತನ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದು, ಇದೀಗ ಇವರ ಅಟ್ಟಹಾಸಕ್ಕೆ ವ್ಯಕ್ತಿಯೋರ್ವ (Man Died) ಸಾವನ್ನಪ್ಪಿದ್ದು, ಇಡೀ ಕುಟುಂಬ ಜೀವ ಭಯದಲ್ಲಿದೆ
ಇಳಿ ವಯಸ್ಸಿನ ಸೀತಪ್ಪ ಪುಡಿ ರೌಡಿಯೊಬ್ಬನ ಅಟ್ಟಹಾಸಕ್ಕೆ ಬಲಿಯಾದ ಹಿರಿಯ ಜೀವ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಸರ್ಜಾಪುರ ಗ್ರಾಮದ ವಾಸಿಯಾದ ಸೀತಪ್ಪ ತನ್ನದಲ್ಲದ ತಪ್ಪಿಗೆ ಕೊಲೆಯಾಗಿ ಹೋಗಿದ್ದಾ
ಜೈಲಿನಿಂದ ಬಂದಿದ್ದ ಆರೋ
ರೌಡಿಯೊಬ್ಬನ ಹವಾ ಮೆಯಿಂಟೈನ್ಗಿರಿಗೆ ಬಲಿಯಾಗಿದ್ದಾನರೆ. ಹುಡುಗಿಯೊಬ್ಬಳ ಲವ್ ವಿಚಾರಕ್ಕೆ ಮೃತ ಸೀತಪ್ಪನ ಪಕ್ಕದ ಮನೆಯ ಪವನ್ ಎಂಬ ಯುವಕ ಜೈಲಿಗೆ ಹೋಗಿ ಇತ್ತೀಚೆಗೆ ಬಿಡುಗಡೆಯಾಗಿದ್ದಾನೆ. ಜೈಲಿನಿಂದ ಊರಿಗೆ ಬಂದವನೇ ಏರಿಯಾದಲ್ಲಿ ಹವಾ ಮಾಡಲು ಸಿಕ್ಕ ಸಿಕ್ಕವರ ಮೇಲೆ ಗಲಾಟೆಗಿಳಿದಿದ್ದಾ
ಕಳೆದ ತಿಂಗಳು 29 ನೇ ತಾರೀಖು ಸಹ ಪಕ್ಕದ ಮನೆಯ ಹೇಮಂತ್ ಎಂಬ ಯುವಕನನ್ನು ಕರೆದಿದ್ದಾನೆ. ಇವರ ಸಹವಾಸ ಸರಿ ಇಲ್ಲ ಎಂದು ಆತ ಹೋಗಲಿಲ್ಲ. ಅಷ್ಟೇ ಮನೆ ಬಳಿ ಬಂದವನೇ ಹೇಮಂತ್ ಮೇಲೆ ಹಲ್ಲೆ ನಡೆಸಿದ್ದಾ
ನಾನು ಕರೆದಾಗ ಬರಲಿಲ್ಲ ಯಾ
ತನ್ನ ಬಗ್ಗೆ ಗೊತ್ತು ತಾನೇ ಈಗಾಗಲೇ ಒಬ್ಬನಿಗೆ ಚುಚ್ಚಿದ್ದಿನಿ, ನೀನು ನನ್ನ ಶಿಷ್ಯನಾಗಬೇಕು, ಇಲ್ಲದಿದ್ದರೆ ನನ್ನ ಕಥೆ ಗೊತ್ತಲ್ಲ. ಕರೆದಾಗ ಬರಬೇಕು, ಕೇಳಿದ್ದು ಕೊಡಿಸಬೇಕು, ಹೇಳಿದ್ದು ಮಾಡಬೇಕು. ನಾನು ಕರೆದಾಗ ಯಾಕೆ ಬಂದಿಲ್ಲ ಎಂದು ಧಮ್ಮಿ ಹಾಕಿದ್ದಾನೆ ಎಂದು ಕೊಲೆಯಾದ ಸೀತಪ್ಪನ ಮೊಮ್ಮಗ ಹೇಮಂತ್ ತಿಳಿಸಿದ್ದಾನೆ.
ಕೆ?ನೆ.ನೆ.ಪಿರೆ..ಬ. ತಿಳಿಸಿದ್ದಾನೆ.ಮೃತ ಸೀತಪ್ಪ
ಇನ್ನೂ ಅಷ್ಟೊತ್ತಿಗೆ ಹಲ್ಲೆಗೊಳಗಾದ ಹೇಮಂತನನ್ನು ರಕ್ಷಿಸಿದ ಆತನ ತಂದೆ ನನ್ನ ಮಗನನ್ನು ಯಾಕೆ ಹೊಡೆಯುತ್ತಿಯಾ ಎಂದು ಪ್ರಶ್ನಿಸಿದ್ದಾರೆ. ಕುಪಿತಗೊಂಡ ಪವನ್ ನನ್ನ ಏರಿಯಾದಲ್ಲಿ ನನ್ನನ್ನೇ ಎದುರು ಹಾಕಿಕೊಳ್ತಿರಾ? ಸಂಜೆ ಹೊತ್ತಿಗೆ ನಿಮ್ಮ ಇಡೀ ಫ್ಯಾಮಿಲಿಗೆ ಒಂದು ಗತಿ ಕಾಣಿಸುತ್ತಿನಿ ಎಂದು ಹೋದವನು ಸಂಜೆ ಆರು ಗಂಟೆ ಸುಮಾರಿಗೆ ತನ್ನ ರೌಡಿ ಪಟಾಲಂ ಜೊತೆ ಮನೆಗೆ ಎಂಟ್ರಿ ಕೊಟ್ಟು ದಾಂದಲೆ ನಡೆಸಿದ್ದಾನೆ.
ಇದನ್ನೂ ಓದಿ: Chikkamagaluru: ಮುಂದುವರಿದ ಮಳೆಯ ಅಬ್ಬರ; ಬಯಲು ಸೀಮೆ ಭಾಗದಲ್ಲೂ ವರುಣನ ರೌದ್ರ ನರ್ತನ
ಪಟಾಲಂ ಜೊತೆ ಕುಟುಂಬದ ಮೇಲೆ ದಾಳಿ
ದೊಣ್ಣೆ ಮತ್ತು ರಾಡ್ನಿಂದ ಇಡೀ ಕುಟುಂಬದ ಮೇಲೆ ಎರಗಿದ್ದಾನೆ. ಈ ವೇಳೆ ಅಡ್ಡಬಂದ ಕುಟುಂಬದ ಹಿರಿಜೀವ ಸೀತಪ್ಪ ಸೊಂಟಕ್ಕೆ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ್ದು, ಮೂಳೆ ಮುರಿದಿದೆ. ಅಷ್ಟೊತ್ತಿಗೆ ಅಕ್ಕಪಕ್ಕದ ಮನೆಯ ಮಹಿಳೆಯರು ಹಲ್ಲೆಗೊಳಗಾದ ಕುಟುಂಬವನ್ನು ರಕ್ಷಿಸಿದ್ದಾರೆ ಎಂದು ಮೃತ ಸೀತಪ್ಪನ ಸೊಸೆ ನೇತ್ರಾ ತಿಳಿಸಿದ್ದಾರೆ.
ಸೀತಪ್ಪ ಸಾವಿನ ಬಳಿಕ ಪವನ್ ಪಟಾಲಂ ನಾಪತ್ತೆ
ಸದ್ಯ ಇಷ್ಟೆಲ್ಲಾ ದಾಂದಲೆ ದಬ್ಬಾಳಿಕೆ ನಡೆದಿರುವುದು ಸರ್ಜಾಪುರ ಪೊಲೀಸ್ ಠಾಣೆ ಕೂಗಳತೆ ದೂರದಲ್ಲಿ. ಮಾರಣಾಂತಿಕವಾಗಿ ಹಲ್ಲೆಯಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಪ್ರಾರಂಭದಲ್ಲಿ ಸರ್ಜಾಪುರ ಪೊಲೀಸರು ಬೇಲೆಬಲ್ ಸೆಕ್ಷನ್ ಅಡಿ ಎಫ್ಐಆರ್ ದಾಖಲಿಸಿ ಆರೋಪಿಗಳನ್ನು ಬಿಟ್ಟು ಕಳುಹಿಸಿದ್ದರು.
ಇದನ್ನೂ ಓದಿ: Praveeen Nettaru Murder: ಎನ್ಐಎ ತನಿಖೆಯಲ್ಲಿ ಪ್ರವೀಣ್ ಹತ್ಯೆಯ ಉದ್ದೇಶ ಬಹಿರಂಗ
ಆದ್ರೆ ಇದೀಗ ಹಲ್ಲೆಗೊಳಗಾಗಿದ್ದ ಸೀತಪ್ಪ ಸಾವನ್ನಪ್ಪುತ್ತಿದ್ದಂತೆ ಪುಡಿ ರೌಡಿ ಪವನ್ ಅಂಡ್ ಗ್ಯಾಂಗ್ ತಲೆ ಮರೆಸಿಕೊಂಡಿದ್ದು, ಆರೋಪಿಗಳ ಮೇಲೆ ಸರ್ಜಾಪುರ ಪೊಲೀಸರು ಯಾವ ರೀತಿಯ ಕ್ರಮ ವಹಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.


Post a Comment