PM Modi In Mangaluru: ಮಂಗಳೂರಲ್ಲಿ ಪ್ರಧಾನಿ ಮೋದಿ; ಲೇಟೆಸ್ಟ್ ಅಪ್​ಡೇಟ್ ಇಲ್ಲಿದೆ


 ಮಲ್ಲಿಗೆ ಹಾರ, ಉಡುಪಿ ಶ್ರೀಕೃಷ್ಣ, ಶಾಲು ಹಾರ, ಪರಶುರಾಮ ಪುತ್ಥಳಿ ಹಾಕಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸನ್ಮಾನಿಸಲಾಗಿದೆ.

 ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ (PM Narendra Modi In Karnataka) ಮಂಗಳೂರಿಗೆ ಬಂದಿಳಿದಿದ್ದಾರೆ. ಪ್ರಧಾನಿ ಮೋದಿ ಇದ್ದ ವಿಮಾನ ಮಂಗಳೂರಿನ ಬಜಪೆ ವಿಮಾನ ನಿಲ್ದಾಣದಲ್ಲಿ (Mangaluru Airport) ಬಂದಿಳಿದಿದೆ.  ಮಂಗಳೂರಿನ ಬಂಗ್ರಕೂಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi in Mangaluru) ಬೃಹತ್ ಕಾರ್ಯಕ್ರಮದಲ್ಲಿ ಭಾಷಣ ಮಾಡಲಿದ್ದಾರೆ. ಮಲ್ಲಿಗೆ ಹಾರ, ಉಡುಪಿ ಶ್ರೀಕೃಷ್ಣ, ಶಾಲು ಹಾರ, ಪರಶುರಾಮ ಪುತ್ಥಳಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿ ಸನ್ಮಾನಿಸಲಾಗಿದೆ. ಅಸಂಖ್ಯಾತ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು, ಮಂಗಳೂರಿನ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. 

ಮಂಗಳೂರಿನಲ್ಲಿ ವಿವಿಧ ಯೋಜನೆಗಳಿಗೆ ಮೋದಿ ಶಿಲಾನ್ಯಾಸ ನಡೆಸಲಿದ್ದಾರೆ.

ಒಟ್ಟು 3,700 ಕೋಟಿ ವೆಚ್ಚದ ಯೋಜನೆಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ.

ಗೋಲ್ಡ್ ​ಫಿಂಚ್​​ ಸಿಟಿ ಮೈದಾನದಲ್ಲಿ ಬೃಹತ್ ಸಮಾವೇಶ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ.

 ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿರುವ ಯೋಜನೆಗಳ ಮಾಹಿತಿ ಇಲ್ಲಿದೆ

ಬಂದರಿನ 14ನೇ ಬರ್ತ್ ಯಾಂತ್ರೀಕರಣ ಲೋಕಾರ್ಪಣೆ: ₹281 ಕೋಟಿ

ಬಂದರು ಬಿಟುಮಿನ್ ಸಂಗ್ರಹಗಾರದ ಶಿಲಾನ್ಯಾಸ : ₹100 ಕೋಟಿ

ಪಿಎಂ ಗತಿಶಕ್ತಿ ಯೋಜನೆಯಡಿ ಹೆದ್ದಾರಿ ಅಭಿವೃದ್ಧಿಗೆ ಚಾಲನೆ

ಶೇಖರಣಾ ಟ್ಯಾಂಕ್, ತೈಲ ಸಂಗ್ರಹಗಾರದ ಶಿಲಾನ್ಯಾಸ: ₹100 ಕೋಟಿ

MRPLನ ಶುದ್ಧ ನೀರಿನ ಪ್ಲಾಂಟ್​ ಉದ್ಘಾಟನೆ: ₹677 ಕೋಟಿ

MRPL 6ನೇ ಇಂಧನ ಸ್ಥಾವರ ಘಟಕ ಉದ್ಘಾಟನೆ:₹1,829 ಕೋಟಿ

MRPL ಎಲ್​ಪಿಜಿ ಸ್ಟೋರೇಜ್​ ಘಟಕ ಉದ್ಘಾಟನೆ: ₹500 ಕೋಟಿ

ಕುಳಾಯಿ ಮೀನುಗಾರಿಕಾ ಜೆಟ್ಟಿ ನಿರ್ಮಾಣ ಘಟಕ: ₹200 ಕೋಟಿ

ಇದನ್ನೂ ಓದಿ: INS Vikrant Photos: 20 ಸಾವಿರ ಕೋಟಿಯಲ್ಲಿ ನಿರ್ಮಿಸಿದ ಐಎನ್​ಎಸ್ ವಿಕ್ರಾಂತ್ 2 ಫುಟ್​ಬಾಲ್ ಗ್ರೌಂಡ್​ಗಿಂದ ದೊಡ್ಡದು!

ಮೀನುಗಾರಿಕೆ-ಬಂದರು ಅಭಿವೃದ್ಧಿ

 ಕುಳಾಯಿನಲ್ಲಿ ಇಪಿಸಿ ಮಾದರಿಯಲ್ಲಿ ಮೀನುಗಾರಿಕೆ ಬಂದರು ಅಭಿವೃದ್ಧಿ

ಯೋಜನೆ ವೆಚ್ಚ: ₹196.51 ಕೋಟಿ

8,500 ಜನರಿಗೆ ಉದ್ಯೋಗಾವಕಾಶ

₹192 ಕೋಟಿ ವಾರ್ಷಿಕ ಆದಾಯದ ನಿರೀಕ್ಷೆ

ಪಿಎಂ ಮತ್ಸ್ಯ ಸಂಪದ ಯೋಜನೆ

₹120 ಕೋಟಿ ವೆಚ್ಚದಲ್ಲಿ ಉತ್ಪಾದನೆ, ರಫ್ತು

100 ಆಳ ಸಮುದ್ರ ದೋಣಿಗಳಿಗೆ ಅನುಮೋದನೆ

ಉತ್ತರ ಕನ್ನಡದ ಮಜಲಿಯಲ್ಲಿ ಮೀನುಗಾರಿಕಾ ಬಂದರು ಅಭಿವೃದ್ಧಿ

ಸಾಗರಮಾಲಾ, PMMSY ಯೋಜನೆ ಬಂದರು ಅಭಿವೃದ್ಧಿ

₹276 ಕೋಟಿ ವೆಚ್ಚದಲ್ಲಿ ಕಾರವಾರ ಬಂದರು ಅಭಿವೃದ್ಧಿ

8 ಮೀನುಗಾರಿಕಾ ಬಂದರುಗಳಲ್ಲಿ ಹೂಳೆತ್ತುವ ಕಾರ್ಯ

ಹಳೇ ಮಂಗಳೂರು ಬಂದರಿನಲ್ಲಿ ಕರಾವಳಿ ಬರ್ತ್ ನಿರ್ಮಾಣ

₹65 ಕೋಟಿ ವೆಚ್ಚದಲ್ಲಿ 350 ಮೀ. ಕರಾವಳಿ ಬರ್ತ್ ನಿರ್ಮಾಣ

₹30.35 ಕೋಟಿ ವೆಚ್ಚದಲ್ಲಿ ಸಮುದ್ರಯಾನ ತರಬೇತಿ ಸಂಸ್ಥೆ ಸ್ಥಾಪನೆ

ಇದನ್ನೂ ಓದಿ: Explained: ಭಾರತದ INS ವಿಕ್ರಾಂತ್​ ನೋಡಿ ಅಮೆರಿಕಾ, ಚೀನಾಗೆ ನಡುಕ! ಈ ಯುದ್ಧನೌಕೆಯ ಶಕ್ತಿ ಅಸಾಧಾರಣ

ಮೋದಿ ಕಾರ್ಯಕ್ರಮಕ್ಕೆ ಭದ್ರತೆ ಹೀಗಿದೆ

ಮಂಗಳೂರು ಪೊಲೀಸ್ ‌ಕಮಿಷನರ್ ನೇತೃತ್ವದಲ್ಲಿ ಭದ್ರತೆ

SPG,NSG ಪಡೆಗಳ ಜೊತೆ 3,000 ಪೊಲೀಸರ ನಿಯೋಜನೆ

100 ಅಧಿಕಾರಿಗಳು, 2,000 ಪೊಲೀಸರು, 1,000 ಇತರೆ ಸಿಬ್ಬಂದಿ

ಮಂಗಳೂರಿನ 50ಕ್ಕೂ ಹೆಚ್ಚು ಕಡೆ ಸಿಸಿಟಿವಿ ಅಳವಡಿಕೆ ಮೋದಿ

Post a Comment

Previous Post Next Post