LPG Cylinder Price: ಸೆಪ್ಟೆಂಬರ್ ತಿಂಗಳ ಮೊದಲ ದಿನವೇ ಒಂದು ಒಳ್ಳೆಯ ಸುದ್ದಿ ಬಂದಿದೆ. ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಭಾರೀ ಇಳಿಕೆಯಾಗಿದೆ. ಈ ವಿಚಾರ ಜನಸಾಮಾನ್ಯರ ಮುಖದಲ್ಲಿ ಸಂತಸ ಮೂಡಿಸಿದೆ.
ತೈಲ ಕಂಪನಿಗಳು ಪ್ರತಿ ತಿಂಗಳ 1 ರಂದು ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಪರಿಷ್ಕರಿಸುತ್ತವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಇಂಧನ ಬೆಲೆಯನ್ನು ಗಮನದಲ್ಲಿಟ್ಟುಕೊಂಡು ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಅದೇ ರೀತಿ ಇವತ್ತು ತೈಲ ಕಂಪನಿಗಳು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಸಹ ಪರಿಷ್ಕರಿಸಿವೆ. ಬೆಲೆ ಇಳಿಕೆಯಾಗಿದ್ದು, ಜನರ ಜೇಬಿನಲ್ಲಿರುವ ಹಣಕ್ಕೆ ಕೊಂಚ ರಿಲೀಫ್ ಸಿಕ್ಕಿದೆ
.ದೇಶೀಯ ತೈಲ ಕಂಪನಿಗಳು ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಇಳಿಸಿವೆ. ಸೆಪ್ಟೆಂಬರ್ 1 ರಂದು ಇಂಡಿಯನ್ ಆಯಿಲ್ ಬಿಡುಗಡೆ ಮಾಡಿದ ಬೆಲೆಗಳ ಪ್ರಕಾರ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರವನ್ನು 91.5 ರೂಪಾಯಿ ಕಡಿಮೆ ಮಾಡಲಾಗಿದೆ. (ಸಾಂಕೇತಿಕ ಚಿತ್ರ)ಇತ್ತೀಚಿನ ರಿಯಾಯಿತಿಯೊಂದಿಗೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ವಾಣಿಜ್ಯ ಸಿಲಿಂಡರ್‌ಗೆ ರೂ.1885 ಪಾವತಿಸಬೇಕಾಗುತ್ತದೆ. ಈ ಹಿಂದೆ ಇದರ ಬೆಲೆ 1976.50 ರೂಪಾಯಿ ಆಗಿತ್ತು.ಇದು ಸತತ ಐದನೇ ಬಾರಿ ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆಯಾಗಿದೆ. ಮೇ ತಿಂಗಳಲ್ಲಿ ದಾಖಲೆಯ ಗರಿಷ್ಠ ರೂ.2354 ತಲುಪಿದೆ. ಆ ನಂತರ ಕ್ರಮೇಣ ಕಡಿಮೆಯಾಗುತ್ತಿದೆ. (ಸಾಂಕೇತಿಕ ಚಿತ್ರ)ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿನ್ನೆಯವರೆಗೆ 1976.50 ಇತ್ತು. ಈಗ 1885 ರೂಪಾಯಿಗೆ ಇಳಿಕೆಯಾಗಿದೆ. ಅದೇ ರೀತಿ ಕೋಲ್ಕತ್ತಾದಲ್ಲಿ 2095.50 ರಿಂದ 1995.50 ಕ್ಕೆ ಇಳಿದಿದೆ. ಮುಂಬೈನಲ್ಲಿ 1936.50 ರಿಂದ 1844 ಕ್ಕೆ ಕುಸಿದಿದೆ. ಚೆನ್ನೈನಲ್ಲಿ ರೂ.2141 ಬದಲಿಗೆ 2045 ರೂಪಾಯಿ ಆಗಿದೆ(ಸಾಂಕೇತಿಕ ಚಿತ್ರ)ಇನ್ನೂ ಬೆಂಗಳೂರಿನಲ್ಲಿ 19 ಕೆಜಿಯ ವಾಣಿಜ್ಯ ಸಿಲಿಂಡರ್ 2100 ರೂಪಾಯಿ ಆಗಿದೆ. ಹೈದರಾಬಾದ್ ನಲ್ಲಿ 19 ಕೆಜಿಯ ವಾಣಿಜ್ಯ ಸಿಲಿಂಡರ್ 2099.5 ರೂಪಾಯಿಗೆ ತಲುಪಿದೆ. (ಸಾಂಕೇತಿಕ ಚಿತ್ರ)14.2 ಕೆಜಿ ಗೃಹಬಳಕೆಯ ಸಿಲಿಂಡರ್‌ಗಳ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ. ದೇಶೀಯ LPG ಸಿಲಿಂಡರ್ ಬೆಲೆಗಳು ಸ್ಥಿರವಾಗಿರುತ್ತವೆ. ಅಂತಿಮವಾಗಿ ಜುಲೈ 6 ರಂದು ಮಾತ್ರ 50 ರೂಪಾಯಿ ಹೆಚ್ಚು ಮಾಡಲಾಗಿತ್ತು. (ಸಾಂಕೇತಿಕ ಚಿತ್ರ)ಬೆಂಗಳೂರಿನಲ್ಲಿ ಗೃಹ ಬಳಕೆ ಎಲ್ಪಿಜಿ ದರ 1055 ರೂಪಾಯಿಯಿದೆ. ದೆಹಲಿಯಲ್ಲಿ 14.2 ಕೆಜಿ ಗ್ಯಾಸ್ ಸಿಲಿಂಡರ್ 1053 ರೂ.ಗೆ ಲಭ್ಯವಿದೆ. ಮುಂಬೈನಲ್ಲಿ 1052.50 ಮತ್ತು ಚೆನ್ನೈನಲ್ಲಿ 1068.50 ನಲ್ಲಿ ಸ್ಥಿರವಾಗಿದೆ. ಕೋಲ್ಕತ್ತಾದಲ್ಲಿ ದೇಶೀಯ LPG ಸಿಲಿಂಡರ್ ಬೆಲೆ ರೂ.1079 ಕ್ಕೆ ಲಭ್ಯವಿದೆ. (ಸಾಂಕೇತಿಕ ಚಿತ್ರ)

.jpg)



.jpg)
.jpg)
Post a Comment