ವಶಕ್ಕೆ ಪಡೆದ ಎಲೆಕ್ಟ್ರಾನಿಕ್ ಉತ್ಪನ್ನಗಳು
ಕೆಪಿಟಿಸಿಎಲ್ ಅಕ್ರಮದಲ್ಲಿ ಭಾಗಿಯಾದವರ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ. ಆರೋಪಿಗಳನ್ನು ಹೆಡೆಮುರಿ ಕಟ್ಟಲು ಪೊಲೀಸರು ಕಾರ್ಯಪ್ರವೃತರಾಗಿದ್ದಾರೆ. ಇನ್ನುಳಿದ ಆರೋಪಿಗಳಿಗೂ ಢವಢವ ಶುರುವಾಗಿದ್ದು, ಇತ್ತ ಪೊಲೀಸರ ಕಾರ್ಯಕ್ಕೂ ಪ್ರಶಂಸೆ ವ್ಯಕ್ತವಾಗ್ತಿದೆ
ಬೆಳಗಾವಿ: ಇದು ರಾಜ್ಯದ ಗಮನ ಸೆಳೆಯುತ್ತಿರುವ ನೇಮಕಾತಿ ಅಕ್ರಮ (Recruitment Scam) ಪ್ರಕರಣ. ಪೊಲೀಸರೂ (Belagavi Police) ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಕಳೆದೊಂದು ತಿಂಗಳಿಂದ ಅಕ್ರಮ ಪ್ರಕರಣದ ಆರೋಪಿಗಳನ್ನು (Accused) ಪೊಲೀಸರು ಜಾಲಾಡುತ್ತಿದ್ದಾರೆ. ಇದೀಗ ಮುಖ್ಯ ಆರೋಪಿಯೇ ಪೊಲೀಸರ ಖೆಡ್ಡಾಕ್ಕೆ ಬಿದ್ದಿದ್ದಾನೆ. ಶಾಲಾ-ಕಾಲೇಜಿನಲ್ಲಿ ಚೆನ್ನಾಗಿ ಓದಬೇಕು. ಉತ್ತಮ ಅಂಕ ಪಡೆಯಬೇಕು. ಸ್ಪರ್ಧಾತ್ಮಕ ಪರೀಕ್ಷೆ (Competitive Exams) ಎದುರಿಸಿ ಒಂದು ಸರ್ಕಾರಿ ಉದ್ಯೋಗ (Government Job) ಪಡೆಯಬೇಕು. ಇದು ಎಂಬುದು ಅಸಂಖ್ಯಾತ ಯುವಕರ ಡ್ರೀಮ್. ಆದರೆ ಹಣಕ್ಕಾಗಿ ಪರೀಕ್ಷೆಗಳಲ್ಲಿ ಅಕ್ರಮ (Exams Scam) ಎಸಗುವವರ ಸಂಖ್ಯೆಯೂ ಹೆಚ್ಚಾಗ್ತಿದೆ. ಹೀಗಾಗಿ ಪ್ರತಿಭಾವಂತರ ಪ್ರಯತ್ನಗಳಿಗೆ ಫಲ ಸಿಗ್ತಿಲ್ಲ. ಹೀಗೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿರುವ ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿಯಲ್ಲಿ (KTCL Exam Scam) ಅಕ್ರಮ ಬೆಳಕಿಗೆ ಬಂದಿದೆ.
ಅಕ್ರಮದ ಜಾಲಾಡುತ್ತಿರುವ ಪೊಲೀಸರು ಆರೋಪಿತರನ್ನು ಖೆಡ್ಡಾಕ್ಕೆ ಕೆಡುವುತ್ತಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ನಡೆದ ವಿವಿಧ ನೇಮಕಾತಿ ನಡೆದಿವೆ. ಈ ಪರೀಕ್ಷೆಗಳಲ್ಲಿ ಅಕ್ರಮ ಎಸಗಲು ಎಲೆಕ್ಟ್ರಾನಿಕ್ ಉಪಕರಣಗಳನ್ನು ಪೂರೈಸುತ್ತಿದ್ದ ಪ್ರಮುಖ ಆರೋಪಿಯನ್ನು ಬೆಳಗಾವಿ ಪೊಲೀಸರ ಬೆಂಗಳೂರಿನಲ್ಲಿ ಬಂಧಿಸಿದ್ದಾ
ಬೆಂಗಳೂರಿನ ದೇವಸಂದ್ರದ ನಿವಾಸಿ, ಎಸ್ಪಿ ರಸ್ತೆಯಲ್ಲಿ ‘ಸ್ಪೈ ಜೋನ್’ ಎಂಬ ಎಲೆಕ್ಟ್ರಾನಿಕ್ ಮಳಿಗೆ ಇಟ್ಟುಕೊಂಡ ಮಹಮ್ಮದ್ ಅಜೀಮುದ್ದೀನ್ (37) ಬಂಧಿತ
ಇಡೀ ಮಳಿಗೆ ಸೀ
ವಿವಿಧ ನೇಮಕಾತಿ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳಿಗೆ ಅಕ್ರಮ ಎಸಗಲು ಪೂರೈಸಿದ ಹಲವು ಎಲೆಕ್ಟ್ರಾನಿಕ್ ಉಪಕರಣಗಳನ್ನೂ ಈತನಿಂದ ವಶಕ್ಕೆ ಪಡೆಯಲಾಗಿದ್ದು, ಮಳಿಗೆ ಸೀಜ್ ಮಾಡಲಾಗಿ
ದೆ. ಜ್.ರೆ. .ಡಲಾಗಿದೆ.ದೆಹಲಿ, ಹೈದರಾಬಾದ್ನಿಂದ ವಸ್ತುಗಳ ಖರೀದಿ
ಈಚೆಗೆ ನಡೆದ ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷಾ ಅಕ್ರಮದ ಆರೋಪಿಗಳನ್ನು ಜಾಲಾಡಲು ಹೋದ ಪೊಲೀಸರಿಗೆ ಈ ಜಾಲದ ಮುಖ್ಯ ಆರೋಪಿಯೇ ಸಿಕ್ಕಿಬಿದ್ದಿದ್ದಾನೆ. ಈತ ಎಲೆಕ್ಟ್ರಾನಿಕ್ ಸೂಕ್ಷ್ಮ ಉಪಕರಣಗಳನ್ನು ದೆಹಲಿ, ಹೈದರಾಬಾದ್‌ನ ಡೀಲರ್‌ಗಳಿಂದ ಅಕ್ರಮವಾಗಿ ಖರೀದಿ ಮಾಡಿಕೊಂಡು ಬರುತ್ತಿದ್ದ.
ಮಾಹಿತಿ ನೀಡಿದ್ದ ಸಂಜೀವ್ ಭಂಡಾರಿ
ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ಬ್ಲೂಟೂತ್, ಸ್ಮಾರ್ಟ್ ವಾಚ್ ಪೂರೈಸಿದ್ದ. ಪ್ರಕರಣದ ಕಿಂಗ್‌ಪಿನ್ ಸಂಜೀವ್ ಭಂಡಾರಿ ಮೂಲಕ ಅಭ್ಯರ್ಥಿಗಳಿಗೆ ಈತ ಉಪಕರಣ ಪೂರೈಸುತ್ತಿದ್ದ. ಈಗಾಗಲೇ ಸಂಜೀವ ಭಂಡಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತ ನೀಡಿದ ಮಾಹಿತಿ ಆಧರಿಸಿ ಮೂಲಕ್ಕೆ ಕೈ ಹಾಕಿದ್ದ ಪೊಲೀಸರು ಇಡೀ ಎಲೆಕ್ಟ್ರಾನಿಕ್ ಮಳಿಗೆಯನ್ನೇ ಜಾಲಾಡಿದರು.
ಇದನ್ನೂ ಓದಿ: Kodimutt Swamiji: ನೀಚಂಗೆ ದೊರೆತನುವು, ಹೇಡಿಂಗೆ ಹಿರಿತನವೂ, ಮೂಡಂಗೆ ಗುರುತನ; ವಿಷಜಂತುಗಳ ಆಗಮನ: ಮತ್ತೆ ಭವಿಷ್ಯ ನುಡಿದ ಶ್ರೀ
179 ವಸ್ತುಗಳು ವಶಕ್ಕೆ
ಬಂಧಿತನಿಂದ ಎರಡು ಮೊಬೈಲ್, ವಿವಿಧ ಬಗೆಯ ಎಲೆಕ್ಟ್ರಾನಿಕ್ ಉಪಕರಣ ಸೇರಿ ಒಟ್ಟು 179 ವಸ್ತುಗಳು, ಎಲೆಕ್ಟ್ರಾನಿಕ್ ಡಿವೈಸ್ ಅಳವಡಿಸಿದ ಏಳು ಎನ್–95 ಮಾಸ್ಕ್, ಎಲೆಕ್ಟ್ರಾನಿಕ್ ಡಿವೈಸ್ ಅಳವಡಿಸಿದ ಬನಿಯನ್ ಒಟ್ಟು 41, ವಿವಿಧ ಬಗೆಯ ಇಲೆಕ್ಟ್ರಾನಿಕ್ ಇಯರ್ ಪಿಸ್ ಒಟ್ಟು 445, ವಿವಿಧ ಬಗೆಯ ಚಾರ್ಜಿಂಗ್ ಕೇಬಲ್ ಒಟ್ಟು 554, ವಾಕಿಟಾಕಿ ಒಟ್ಟು 06 ಇವುಗಳನ್ನು
ಜಪ್ತಿ ಮಾಡಿದ್ದಾರೆ.ವಶಕ್ಕೆ ಪಡೆದ ಎಲೆಕ್ಟ್ರಾನಿಕ್ ಉತ್ಪನ್ನಗಳು
ಇನ್ನುಳಿದವರ ಬಂಧನಕ್ಕಾಗಿ ಪೊಲೀಸರ ಬಲೆ
ಕೆಪಿಟಿಸಿಎಲ್ ಅಕ್ರಮದಲ್ಲಿ ಭಾಗಿಯಾದವರ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ. ಆರೋಪಿಗಳನ್ನು ಹೆಡೆಮುರಿ ಕಟ್ಟಲು ಪೊಲೀಸರು ಕಾರ್ಯಪ್ರವೃತರಾಗಿದ್ದಾರೆ. ಇನ್ನುಳಿದ ಆರೋಪಿಗಳಿಗೂ ಢವಢವ ಶುರುವಾಗಿದ್ದು, ಇತ್ತ ಪೊಲೀಸರ ಕಾರ್ಯಕ್ಕೂ ಪ್ರಶಂಸೆ ವ್ಯಕ್ತವಾಗ್ತಿದೆ.
ಇದನ್ನೂ ಓದಿ: Rain Effect: ಮಳೆ ಅಬ್ಬರಕ್ಕೆ 1.20 ಲಕ್ಷ ಹೆಕ್ಟೇರ್ ಬೆಳೆ ಹಾನಿ; ಪರಿಹಾರಕ್ಕಾಗಿ ರೈತರ ಪರದಾಟ
ಬಾಲಕನ ಮೇಲೆ ಬಿಸಿ ನೀರು ಎರಚಿದ ಶಿಕ್ಷಕ
ಬಾಲಕನೊಬ್ಬ ಶಾಲಾ ಸಮವಸ್ತ್ರದಲ್ಲಿ (School Uniform) ಮಲವಿಸರ್ಜನೆ ಮಾಡಿರುವ ವಿಚಾರವಾಗಿ ಕೋಪಗೊಂಡ ಶಿಕ್ಷಕನೊಬ್ಬ ಮಗುವಿನ ಮೇಲೆ ಬಿಸಿನೀರು ಸುರಿದಿದ್ದಾನೆ. ಹೌದು ರಾಯಚೂರು (Raichuru) ಜಿಲ್ಲೆ ಮಸ್ಕಿ ತಾಲೂಕಿನ ಸಂತೆಕೆಲ್ಲೂರು ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಘನಮಠೇಶ್ವರ ಗ್ರಾಮೀಣ ಸಂಸ್ಥೆಯ ಪ್ರಾಥಮಿಕ ಶಾಲೆಯ ಶಿಕ್ಷಕ ಹುಲಿಗೆಪ್ಪ ಎಂಬಾತನೇ ಈ ರಾಕ್ಷಸ ಕೃತ್ಯ ಮೆರೆದ ವ್ಯಕ್ತಿ. ಸದ್ಯ ಬಿಸಿ ನೀರಿನ ದಾಳಿಗೊಳಗಾದ 2ನೇ ತರಗತಿಯ ವಿದ್ಯಾರ್ಥಿ ಎಂಟು ವರ್ಷದ ಅಖಿತ್ ಸ್ಥಿತಿ ಗಂಭೀರವಾಗಿದೆ. ಲಿಂಗಸೂಗೂರು ತಾ. ಮಿಟ್ಟಿಕೆಲ್ಲೂರು ಗ್ರಾಮದ ಮಗು ಕೋಚಿಂಗ್ ಕ್ಲಾಸ್ ಗೆ ಹೋದಾಗ ಈ ಕೃತ್ಯ ನಡೆದಿದೆ.



Post a Comment