ACBಗೆ ಬಾಗಿಲು ಎಳೆದ ರಾಜ್ಯ ಸರ್ಕಾರ; ಬಾಕಿ ಪ್ರಕರಣಗಳು ಲೋಕಾಯುಕ್ತಕ್ಕೆ ವರ್ಗಾವಣೆ ಕರ್ನಾಟಕ ಉಚ್ಚ ನ್ಯಾಯಾಲಯ ಆದೇಶದ ಹಿನ್ನೆಲೆ ಭ್ರಷ್ಟಾಚಾರ ನಿಗ್ರಹ ದಳವನ್ನು ರದ್ದುಗೊಳಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶವನ್ನು ಹೊರಡಿಸಿದೆ. ಸೆಪ್ಟೆಂಬರ್ 8 2022ರಂದು ನ್ಯಾಯಾಲಯ ಆದೇಶ ಪ್ರಕಟಿಸಿತ್ತು.


 ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರವನ್ನ ರದ್ದುಗೊಳಿಸಿ ಮಾನ್ಯ ಉಚ್ಚ ನ್ಯಾಯಲಯದಿಂದ ಹೊರಡಿಸಲಾದ ಆದೇಶದಿಂದಾಗಿ ಹೊರಹೊಮ್ಮಿರುವ ತತ್ಪರಿಣಾಮಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.
ಭ್ರಷ್ಟಾಚಾರ ನಿಗ್ರಹ ದಳವನ್ನು ರದ್ದುಗೊಳಿಸಿರೋದರಿಂದ, ಎಸಿಬಿಗೆ ನೀಡಲಾಗಿದ್ದ ಎಲ್ಲಾ ತನಿಖಾಧಿಕಾರ/ಪೊಲೀಸ್ ಠಾಣೆಗಳೆಂದು ಘೋಷಿಸಿ/ ರಾಜ್ಯವ್ಯಾಪ್ತಿ ನೀಡಿರುವ ಅಧಿಕಾರಗಳನ್ನು ಹಿಂಪಡೆಯಲಾಗಿದೆ.
ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಪ್ರಸ್ತುತ ಬಾಕಿಯಿರುವ ತನಿಖೆಗಳು/ವಿಚಾರಣೆಗಳು/ಇತರೆ ಶಿಸ್ತು ಪ್ರಕರಣಗಳು ಹಾಗೂ ಖಾಸಗಿ ದೂರುದಾರರ ಪ್ರಕರಣಗಳನ್ನು ಸಂಪೂರ್ಣವಾಗಿ ಲೋಕಾಯುಕ್ತ ಸಂಸ್ಥೆಗೆ ವರ್ಗಾಯಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಪ್ರಕಟಿಸಿದೆ.

ಎಸಿಬಿ ರಚನೆಗೆ ಲೋಕಾಯುಕ್ತದಿಂದ ವಿರೋಧವಿದೆ. ಕಾನೂನಿನ ಮಾನ್ಯತೆ ಇಲ್ಲ ಎಂದು ವಾದವಿದೆ. ಎಸಿಬಿ ರಚನೆಯನ್ನು ರದ್ದುಗೊಳಿಸಬೇಕು ಎಂದು ಲೋಕಾಯುಕ್ತ ನ್ಯಾಯಾಲಯದ ಮೊರೆ ಹೋಗಿತ್ತು. ಎಸಿಬಿಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಹಲವು ಅರ್ಜಿಗಳು ಸಹ ಸಲ್ಲಿಕೆ ಅಗಿದ್ದವು.
ಎಸಿಬಿಯಲ್ಲಿ ಕಾರ್ಯಾಂಗದ ಹಸ್ತಕ್ಷೇಪವಿದೆ. ಎಸಿಬಿ ಅಧಿಕಾರಿಗಳ ಮೇಲೆ ಸರ್ಕಾರದ ಹಿಡಿತವಿದೆ. ಕಲಂ 14 ಹಾಗೂ 21ಕ್ಕೆ ವಿರುದ್ಧವಾಗಿ ರಚನೆಯಾಗಿದೆ. ಸರ್ಕಾರ, ಗೃಹ ಇಲಾಖೆ ನಿಯಂತ್ರಿಸುತ್ತದೆ ಎಂಬ ಆರೋಪಗಳಿವೆ.
ಎಸಿಬಿಯನ್ನ ಭ್ರಷ್ಟಾಚಾರ ತಡೆಯುವ ಉದ್ದೇಶದಿಂದ ಸ್ಥಾಪಿಸಲಾಗಿದೆಯೇ? ಎಸಿಬಿಯನ್ನ ಭ್ರಷ್ಟರ ರಕ್ಷಣೆಗೆ ಸ್ಥಾಪಿಸಲಾಗಿದೆಯೇ? ನಿಜಕ್ಕೂ ಇದು ನಾಚಿಕೆಗೇಡಿನ ಸಂಗತಿ ಎಸಿಬಿಗೆ ನ್ಯಾ. H.P. ಸಂದೇಶ್ ಚಾಟಿ ಬೀಸಿದ್ದರು.
ಪ್ರತಿವರ್ಷ 250 - 300 ಕೇಸ್ ದಾಖಲು ಆಗುತ್ತದೆ. ಆರು ವರ್ಷಗಳಲ್ಲಿ 2121 ಪ್ರಕರಣ ದಾಖಲಾಗಿವೆ. ಶಿಕ್ಷೆಯಾಗಿರುವುದು ಕೇವಲ 22 ಕೇಸಲ್ಲಿ ಮಾತ್ರ ಎಂಬುವುದು ಅಚ್ಚರಿಯ ವಿಷಯ. ಎಸಿಬಿ ಸ್ಥಾಪನೆಯಾದ ಬಳಿಕ ಈವರೆಗೆ 2,121 ಕೇಸ್ ದಾಖಲಾಗಿದ್ದು. 99 ಪ್ರಕರಣಗಳಲ್ಲಿ ಬಿ ರಿಪೋರ್ಟ್ ಸಲ್ಲಿಸಲಾಗಿದೆ.
First published:
September 10, 2022, 10:07 IST

Post a Comment

Previous Post Next Post