Basangouda Patil Yatnal: ಸಿಎಂಗೆ ಧಮ್ ಇದ್ದರೆ ಎನ್​​ಕೌಂಟರ್ ಮಾಡಲಿ; ಶಾಸಕ ಯತ್ನಾಳ್


  ಶಾಸಕ ಯತ್ನಾಳ್ ಮತ್ತು ಸಿಎಂ ಬೊಮ್ಮಾಯಿ

ಹಿಂದೂ ಪರ ಮಾತನಾಡಿದವರಿಗೆ ವೋಟ್ ಹಾಕಬೇಕೇ ವಿನಃ ಸಾಬರು ಪರ ಮಾತನಾಡುವರಿಗೆ ಅಲ್ಲ. ವಿಜಯಪುರದಲ್ಲಿ 2.5 ಲಕ್ಷ ಮತಗಳಲ್ಲಿ 1 ಲಕ್ಷ ಜನರು ಅವರಿದ್ದಾರೆ ಎಂದು ಹೇಳುವ ಮೂಲಕ ಮುಸ್ಲಿಂ ತಮಗೆ ಬೇಡ ಎಂದು ಪರೋಕ್ಷವಾಗಿ ಹೇಳಿದರು.

ಇಂದು ಬೆಳಗ್ಗೆ ಯಾದಗಿರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಾಸನ ಬಸನಗೌಡ ಪಾಟೀಲ್ ಯತ್ನಾಳ್ (MLA Basanagouda Patil. Yatnal), ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರಿಗೆ ಧಮ್ ಇದ್ದರೆ ಹಿಂದೂ ಕಾರ್ಯಕರ್ತರನ್ನು ಹತ್ಯೆ (Hindu Activist Murder) ಮಾಡಿದವರನ್ನು ಎನ್​ಕೌಂಟರ್ ಮಾಡಬೇಕು ಎಂದು ಹೇಳಿದರು. ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಧಮ್ ಬಗ್ಗೆ ಕೇಳಬೇಡಿ. ಅವರ ಧಮ್ ಇದ್ದಿದ್ದರೆ ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿದವರನ್ನು ಎನ್​ಕೌಂಟರ್ ಮಾಡಿದ್ದರೆ ಧಮ್ ಗೊತ್ತಾಗುತ್ತದೆ. ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯಾಗುತ್ತಿದೆ. ಕಾರ್ಯಕರ್ತರಿಗೆ ಸರಿಯಾಗಿ ರಕ್ಷಣೆ ಇಲ್ಲದಂತಾಗಿದೆ. ಈ ಸಂಬಂಧ ನಮ್ಮ ಸರಕಾರವಿದ್ದರೂ ಸಿಎಂ, ಗೃಹ ಮಂತ್ರಿಗಳನ್ನು ತರಾಟೆ ತೆಗೆದುಕೊಂಡಿದ್ದೇನೆ ಎಂದು ಹೇಳಿದರು.  

ಸಿಎಂಗೆ ನಿಮ್ಮಲ್ಲಿ ಧಮ್ ಇದ್ದರೆ ಹಿಂದು ಕಾರ್ಯಕರ್ತರನ್ನು ಹತ್ಯೆ ಮಾಡಿದವರಿಗೆ ಎನ್ ಕೌಂಟರ್ ಮಾಡಲು ಹೇಳಿದ್ದೇನೆ. ಬರೀ ಅವರ ಧಮ್ ಇವರು ಧಮ್ ನೋಡುವುದಲ್ಲ. ಪೊಲೀಸರಿಗೆ ಸ್ವಾತಂತ್ರ್ಯ ನೀಡಿ ಧಮ್ ತೋರಿಸಬೇಕು. ಒಂದಕ್ಕೆ ನಾಲ್ಕು ಹೊಡೆದು ಧಮ್ ತೋರಿಸಬೇಕು. ಒಂದು ವೇಳೆ ಈ ಮಾತನ್ನು ತಿಳಿದುಕೊಳ್ಳದಿದ್ದರೆ ಮುಂದೆ ನಮ್ಮ ಧಮ್ ತೋರಿಸುತ್ತೇವೆ ಎಂದು ಹೇಳಿದರು.

ಹಿಂದು ಮಹಾಗಣಪತಿ ವಿಸರ್ಜನೆ ಶೋಭಾ ಯಾತ್ರೆಯಲ್ಲಿ ಭಾಗಿ

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬುಧವಾರ ಯಾದಗಿರಿ ಜಿಲ್ಲೆಯ ಶಹಪುರ ಪಟ್ಟಣದಲ್ಲಿ ಹಿಂದು ಮಹಾಗಣಪತಿ ವಿಸರ್ಜನೆ ಶೋಭಾ ಯಾತ್ರೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಶಹಪುರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮಾತನಾಡಿದ ಶಾಸಕ ಯತ್ನಾಳ್, ಕಾಶಿ ವಿಶ್ವನಾಥನ ಬಗ್ಗೆ ನಿನ್ನೆ ಕೋರ್ಟ್ ಆದೇಶ ನೀ


ಡಿದೆ. ಶೋಭಾ ಯಾತ್ರೆ


ನಾವೆಲ್ಲರೂ ಶಿವನ ಭಕ್ತರು. ಪ್ರಧಾನಿ ನರೇಂದ್ರ ಮೋದಿ ಕಾಲದಲ್ಲಿ ಕಾಶಿ ವಿಶ್ವನಾಥನೂ,,ಮಥುರಾ ಕೃಷ್ಣನೂ ಮುಕ್ತನಾಗುತ್ತಾನೆ. ಎಲ್ಲೆಲ್ಲಿ ನಮ್ಮವೂ ಕೆಡವಿ ಕಟ್ಟಿದ್ದಾರೋ ಅಲ್ಲಿ ಎಲ್ಲಾ ಖುಲ್ಲಾ ಮಾಡುತ್ತೇವೆ. ಇನ್ಮೇಲೆ ಯಾರು ಹಿಂದೂಗಳ ಪರವಾಗಿ ಇರ್ತಾರೆ ಅವರು ಶಾಸಕರಾಗುತ್ತಾರೆ ಎಂದು ಹೇಳಿದರು.

ಮುಸ್ಲಿಂ ಮತ ಬೇಡ ಎಂದ ಯತ್ನಾಳ್

ಹಿಂದೂ ಪರ ಮಾತನಾಡಿದವರಿಗೆ ವೋಟ್ ಹಾಕಬೇಕೇ ವಿನಃ ಸಾಬರು ಪರ ಮಾತನಾಡುವರಿಗೆ ಅಲ್ಲ. ವಿಜಯಪುರದಲ್ಲಿ 2.5 ಲಕ್ಷ ಮತಗಳಲ್ಲಿ 1 ಲಕ್ಷ ಜನರು ಅವರಿದ್ದಾರೆ ಎಂದು ಹೇಳುವ ಮೂಲಕ ಮುಸ್ಲಿಂ ತಮಗೆ ಬೇಡ ಎಂದು ಪರೋಕ್ಷವಾಗಿ ಹೇಳಿದರು.

ದೇಶದಲ್ಲಿ ಇನ್ನೂ 20 ವರ್ಷ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಿರುತ್ತಾರೆ. ದೇಶದಲ್ಲಿ ಓವೈಸಿ ಯಾವ ಮಕ್ಕಳದು ನಡೆಯುವದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಶೋಭಾ ಯಾತ್ರೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಆಂದೋಲ ಸಿದ್ದಲಿಂಗ ಸ್ವಾಮಿ ಭಾಗಿಯಾಗಿದ್ದರು. ಸುಬೇದಾರ್ ಆಸ್ಪತ್ರೆಯಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಶೋಭಾ ಯಾತ್ರೆ ನಡೆಯಿತು.

ಸರ್ಕಾರ ವಿರುದ್ಧ HDK ಕಿಡಿ

ಮಳೆಯಿಂದ ರಾಜ್ಯದಲ್ಲಿ ಉಂಟಾದ ಅನಾಹುತಗಳ ಬಗ್ಗೆ ಮಾತಾಡಿ ಮಾಜಿ ಸಿಎಂ H.D ಕುಮಾರಸ್ವಾಮಿ (Kumaraswamy) ವಿಧಾನಸಭೆಯಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ನಿಯಮ 69ರ ಅಡಿಯಲ್ಲಿ ಅತಿವೃಷ್ಟಿ (Heavy Rain) ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿದ ಕುಮಾರಸ್ವಾಮಿ ರಾಜ್ಯ, ಹಾಗೂ ಕೇಂದ್ರ ಸರ್ಕಾರದ (State And Central Government) ವಿರುದ್ಧ


ಕಿಡಿಕಾರಿದ್ದಾರೆ.ಹೆಚ್ ಡಿ ಕುಮಾರಸ್ವಾಮಿ


ನಮ್ಮ ಬಿಡಿಎ ಮಾಡಿದ ಅನಾಹುತ ಸರಿಪಡಿಸಿಕೊಳ್ಳಲು ಸಾಧ್ಯವಾಗದ ರೀತಿ ಆಗಿದೆ. ಜನರು ಮನೆಗಳಿಗೆ ನೀರು ನುಗ್ಗಿದ್ರಿಂದ ಹೋಟೆಲ್‌ನಲ್ಲಿ ವಾಸ ಮಾಡುವಂತಾಯ್ತು. ನಾನಂತು ಬೆಂಗಳೂರು ನಗರ (Bengaluru City) ವಿಚಾರದಲ್ಲಿ ನಗರಕ್ಕೆ ಮಾರಕ ಆಗುವ ತೀರ್ಮಾನ ತೆಗೆದುಕೊಂಡಿರಲಿಲ್ಲ. ಮನೆಗಳಿಗೆ ನೀರು ನುಗ್ಗಿ ಹೋಟೆಲ್‌ನಲ್ಲಿ ವಾಸವಾಗಿದ್ದಾರೆ ಎಂದು ಹೇಳಿದರು

Post a Comment

Previous Post Next Post