BJPಗೆ ಟಾರ್ಗೆಟ್ ಆದ್ರಾ ಸಿದ್ದರಾಮಯ್ಯ? 40% ಕಮಿಷನ್ ಆರೋಪದ ಬಗ್ಗೆ ಠಕ್ಕರ್ ಕೊಡಲು ಪ್ಲ್ಯಾನ್!


  ಸಿದ್ದರಾಮಯ್ಯ

 ಸಿದ್ದರಾಮಯ್ಯ ಅವರ ಶಕ್ತಿ ಕುಗ್ಗಿಸಲು ಹಗರಣಗಳ ಅಸ್ತ್ರ ಪ್ರಯೋಗ ಮಾಡಲು ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆಯಂತೆ. ರಾಜ್ಯ ನಾಯಕರ ಪ್ರವಾಸದ ವೇಳೆ ಸಿದ್ದರಾಮಯ್ಯ ಸರ್ಕಾರದ ವೇಳೆ ನಡೆದ ಹಗರಣಗಳನ್ನು ಪ್ರಸ್ತಾಪಿಸಲು ಮೆಗಾ ರಣತಂತ್ರ ರಚನೆಯಾಗಿದೆ ಎನ್ನಲಾಗಿದೆ

ಸದ್ಯ ರಾಜ್ಯ ಬಿಜೆಪಿ ಸರ್ಕಾರದ (Karnataka BJP Government) ವಿರುದ್ಧ ಶೇ.40 ಕಮಿಷನ್ (40% Commission) ಆರೋಪ ಕೇಳಿ ಬಂದಿದೆ. ಇನ್ನು ನಿರಂತರ ಮಳೆಗೆ (Rainfall) ರಸ್ತೆಗಳು ಹಾನಿಗೆ ಒಳಗಾಗುತ್ತಿರೋದಕ್ಕೆ ವಿಪಕ್ಷಗಳು ಸರ್ಕಾರದ ವಿರುದ್ಧ ಭ್ರಷ್ಟಾಚಾರದ (Corruption) ಆರೋಪವನ್ನು ಮಾಡುತ್ತಿವೆ. ಇದೀಗ ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Former CM Siddaramaiah) ಅವರನ್ನು ಕಟ್ಟಿ ಹಾಕಲು ಬಿಜೆಪಿ ಮುಂದಾಗಿರುವ ಮಾಹಿತಿ ಲಭ್ಯವಾಗಿದೆ. 40 ಪರ್ಸೆಂಟ್ ಕಮಿಷನ್ ಆರೋಪಕ್ಕೆ ತಿರುಗೇಟು ನೀಡಲು ಬಿಜೆಪಿ ಹೈಕಮಾಂಡ್ (BJP High command) ಸೂಚನೆ ನೀಡಿದೆಯಂತೆ. ಈ ಸೂಚನೆ ಬೆನ್ನಲ್ಲೇ ಕಮಲ ನಾಯಕರು (BJP Leaders) ಸಿದ್ದರಾಮಯ್ಯ ಅವರನ್ನೇ ಟಾರ್ಗೆಟ್ ಮಾಡಲು ಆರಂಭಿಸಿದ್ದಾರಂತೆ. 40% ಕಮಿಷನ್ ಆರೋಪದ ಬಗ್ಗೆ ಠಕ್ಕರ್ ಕೊಡಲು ಬಿಜೆಪಿ ಪ್ಲ್ಯಾನ್  ಮಾಡಿಕೊಂಡಿದೆ ಎನ್ನಲಾಗಿದೆ

ಬಿಜೆಪಿಯ ಪ್ಲ್ಯಾನ್ ಏ

 ಸಿದ್ದರಾಮಯ್ಯ ಅವರ ಮೇಲಿನ ಹಳೆಯ ಆರೋಪಗಳ ಕೆದಕಲು ತಯಾರಿ ನಡೆಸಿದೆಯಂತೆ. ಸಿದ್ದರಾಮಯ್ಯ ಅವರ ಸರ್ಕಾರದ ಸಮಯದಲ್ಲಿ ನಡೆದ ಸಚಿವರ ಹಗರಣಗಳನ್ನು ಬಯಲಿಗೆ ತರಲು ಬಿಜೆಪಿ ತಂತ್ರ ರೂಪಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ

ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೊತೆಗೆ ಹಲವು ನಾಯಕರ ಹಗರಣಗಳನ್ನು ಹಂತ ಹಂತವಾಗಿ ರಾಜ್ಯದ ಜನರ ಮುಂದೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆಯಂತೆ. ದಾಖಲೆಗಳ ತನಿಖೆಗೆ ಆದೇಶಿಸಿ, ಶಿಕ್ಷೆಗೆ ಗುರಿಪಡಿಸಲು ರೆಡಿ ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ


. .ನು?.. ಬಂದಿದೆಮಾಜಿ ಸಿಎಂ ಸಿದ್ದರಾಮಯ್ಯ


ಹಗರಣಗಳ ಅಸ್ತ್ರ ಪ್ರಯೋಗ

 ಸಿದ್ದರಾಮಯ್ಯ ಅವರ ಶಕ್ತಿ ಕುಗ್ಗಿಸಲು ಹಗರಣಗಳ ಅಸ್ತ್ರ ಪ್ರಯೋಗ ಮಾಡಲು ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆಯಂತೆ. ರಾಜ್ಯ ನಾಯಕರ ಪ್ರವಾಸದ ವೇಳೆ ಸಿದ್ದರಾಮಯ್ಯ ಸರ್ಕಾರದ ವೇಳೆ ನಡೆದ ಹಗರಣಗಳನ್ನು ಪ್ರಸ್ತಾಪಿಸಲು ಮೆಗಾ ರಣತಂತ್ರ ರಚನೆಯಾಗಿದೆ ಎನ್ನಲಾಗಿದೆ.

ಸಿದ್ದರಾಮಯ್ಯ ಟಾರ್ಗೆಟ್ ಏಕೆ?

ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಜನಪ್ರಿಯತೆ ಹೆಚ್ಚಾಗಿದೆ. ಸಿದ್ದರಾಮೋತ್ಸವ ಬಳಿಕ ಸಿದ್ದರಾಮಯ್ಯ ಅವರು ಹೋದಲೆಲ್ಲಾ ಜನಸಾಗರ ಸೇರುತ್ತಿದೆ. ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವಕ್ಕೆ ಸುಮಾರು 5 ಲಕ್ಷಕ್ಕೂ ಹೆಚ್ಚು ಜನರು


ಸೇರಿದ್ದರು.ಸಿದ್ದರಾಮಯ್ಯ ಅವರ ಶಕ್ತಿ ಕುಗ್ಗಿಸಲು ಹಗರಣಗಳ ಅಸ್ತ್ರ ಪ್ರಯೋಗ ಮಾಡಲು ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆಯಂತೆ. ರಾಜ್ಯ ನಾಯಕರ ಪ್ರವಾಸದ ವೇಳೆ ಸಿದ್ದರಾಮಯ್ಯ ಸರ್ಕಾರದ ವೇಳೆ ನಡೆದ ಹಗರಣಗಳನ್ನು ಪ್ರಸ್ತಾಪಿಸಲು ಮೆಗಾ ರಣತಂತ್ರ ರಚನೆಯಾಗಿದೆ ಎನ್ನಲಾಗಿದೆ.

ಸಿದ್ದರಾಮಯ್ಯ ಟಾರ್ಗೆಟ್ ಏಕೆ?

ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಜನಪ್ರಿಯತೆ ಹೆಚ್ಚಾಗಿದೆ. ಸಿದ್ದರಾಮೋತ್ಸವ ಬಳಿಕ ಸಿದ್ದರಾಮಯ್ಯ ಅವರು ಹೋದಲೆಲ್ಲಾ ಜನಸಾಗರ ಸೇರುತ್ತಿದೆ. ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವಕ್ಕೆ ಸುಮಾರು 5 ಲಕ್ಷಕ್ಕೂ ಹೆಚ್ಚು ಜನರು ಸೇರಿ


ದ್ದರು.ಮಾಜಿ ಸಿಎಂ ಸಿದ್ದರಾಮಯ್ಯ

ಟಾರ್ಗೆಟ್ ಸಿದ್ದರಾಮಯ್ಯ ಸಂಪುಟ

ಇನ್ನು ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಆವಾಗಿನ ಸಚಿವರ ಹಗರಣಗಳನ್ನು ಹೊರಗೆ ತರಲು ಸಹ ಬಿಜೆಪಿ ಪ್ಲ್ಯಾನ್ ಮಾಡಿದೆ. ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದ ವೇಳೆ ಈ ಇಲಾಖೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಸುದ್ದಿಗಳು ಬಿತ್ತರವಾಗಿದ್ದವು. ಈ ಅಕ್ರಮಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಸಂಗ್ರಹಿಸಿ ಡಿಕೆ ಶಿವಕುಮಾರ್ ಅವರನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವ ಕುರಿತು, ಬಿಜೆಪಿ ಸಿದ್ಧತೆ ನಡೆಸಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Karnataka Rains: ಬೆಂಗಳೂರಿಗರೇ ಎಚ್ಚರ, ಇನ್ನು ಮೂರು ದಿನ ಸಿಲಿಕಾನ್ ಸಿಟಿಯಲ್ಲಿ ವರುಣನ ಅಬ್ಬರ

ಕೆಂಪಣ್ಣ ವಿರುದ್ಧ ಕಾನೂನು ಸಮರಕ್ಕೆ ಸರ್ಕಾರ ನಿರ್ಧಾರ

ಇನ್ನು ಸರ್ಕಾರದ ವಿರುದ್ಧ 40 ಕಮಿಷನ್ ಆರೋಪ ಮಾಡಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ವಿರುದ್ಧ ಕಾನೂನು ಹೋರಾಟ ನಡೆಸಲು ಬಿಜೆಪಿ ಮುಂದಾಗಬಹುದು. ಕೆಂಪಣ್ಣ ವಿರುದ್ಧ ಕಾನೂನು ಹೋರಾಟಕ್ಕೆ ಬಿಜೆಪಿ ನಿರ್ಧಾರ ಮಾಡಿದೆ ಎನ್ನಲಾಗಿದೆ. ಕೆಂಪಣ್ಣ ವಿರುದ್ಧ ಎಲ್ಲಾ ಜಿಲ್ಲೆಗಳಲ್ಲೂ ದೂರು ನೀಡಲು ನಿರ್ಧಾರ ಮಾಡಿರುವ ಮಾಹಿತಿ ತಿಳಿದು ಬಂದಿದೆ.

Post a Comment

Previous Post Next Post