[8/14, 4:57 PM] Public Vahini News: Chamarajapete Eidgah Maidan: ಒಟ್ಟಾರೆ ಚಾಮರಾಜಪೇಟೆ ಈದ್ಗಾ ಮೈದಾನ ಹಲವು ತಿರುವು ಮುರುವುಗಳನ್ನು ಕಂಡು ಇದೀಗ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಬಂದು ನಿಂತಿದೆ. ಆಗಸ್ಟ್ 15ರ ಸಂಭ್ರಮಾಚರಣೆ ಯಾವುದೇ ಅಡೆತಡೆಗಳು ಇಲ್ಲದೆ ನಡೆಯಲಿ ಅಂತ ಖಾಕಿ ಹಗಲು ರಾತ್ರಿ ಎಚ್ಚೆತ್ತುಕೊಂಡು ಕೂತಿದೆ.
[8/14, 4:57 PM] Public Vahini News: ಕೊನೆಗೂ ಚಾಮರಾಜಪೇಟೆ (Chamarajapete) ಈದ್ಗಾ ಮೈದಾನದಲ್ಲಿ ( Eidgah Maidan) ತ್ರಿವರ್ಣ ಧ್ವಜ (Flag) ಹಾರಾಡಲು ಕ್ಷಣಗಣನೆ ಶುರುವಾಗಿದೆ. ವಿವಾದದ ಉತ್ತುಂಗದಲ್ಲಿದ್ದ ಚಾಮರಾಜಪೇಟೆ ಈದ್ಗಾ ಮೈದಾನ ಈಗ ಕಂದಾಯ ಇಲಾಖೆಯ ತೆಕ್ಕೆಯಲ್ಲಿದೆ. ಹೀಗಾಗಿ ಇದೇ ಮೊದಲ ಬಾರಿಗೆ ಇಲ್ಲಿ ಸರ್ಕಾರದಿಂದಲೇ (Government) ಧ್ವಜಾರೋಹಣ ನಡೆಯುತ್ತಿದ್ದು, ಈ ಬಗ್ಗೆ ಕಂದಾಯ ಸಚಿವ ಆರ್ ಅಶೋಕ್ (R Ashok) ಭದ್ರತಾ ಪರಿಶೀಲನೆ ನಡೆಸಿದ್ದಾರೆ
ಯಾವ ಸಂಘ ಸಂಸ್ಥೆಗಳಿಗೂ ಇಲ್ಲ ಅವಕಾಶ, ಸರ್ಕಾರದಿಂದಲೇ ಅದ್ದೂರಿ ಕಾರ್ಯಕ್ರ
[8/14, 4:58 PM] Public Vahini News: ಹಿಂದೂ ಪರ ಸಂಘಟನೆಗಳು ಅದ್ಯಾವಾಗ ಇದು ಬಿಬಿಎಂಪಿ ಮೈದಾನ, ವಕ್ಫ್ ಬೋರ್ಡ್ ಜಾಗ ಅಲ್ಲ ಅಂತ ವಾದ ಆರಂಭಿಸಿತೋ ಆಗಿನಿಂದಲೇ ಚಾಮರಾಜಪೇಟೆ ಈದ್ಗಾ ಮೈದಾನ ರಾಜ್ಯದ ಜನತೆಯ ಗಮನ ಸೆಳೆಯಿತು. ಚಾಮರಾಜಪೇಟೆ ನಾಗರೀಕರು ಕೂಡ ಇದಕ್ಕೆ ಕೈ ಜೋಡಿಸಿದ ಬೆನ್ನಲ್ಲೇ ವಿವಾದ ಮತ್ತಷ್ಟು ಜಟಿಲವಾಯ್ತು. ಅದಾಗಿ ಹಲವು ದಿನಗಳ ವಿಚಾರಣೆಯ ಬಳಿಕ ವಿವಾದಿತ ಮೈದಾನವನ್ನು ಬಿಬಿಎಂಪಿ ಕಂದಾಯ ಇಲಾಖೆಗೆ ವರ್ಗಾಯಿಸಿ, ಕಂದಾಯ ಇಲಾಖೆ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಆದೇಶ ಮಾಡಿತು. ಅಲ್ಲಿಗೆ ಈ ವಿವಾದ ಸರ್ಕಾರದ ಹತೋಟಿಗೆ ಬಂತು. ಹೀಗಾಗಿ ಬಹಳ ಗೊಂದಲಗೊಂಡಿದ್ದ ಈ ಪ್ರಕರಣ ಬಹಳ ಸ್ಪಷ್ಟವಾಗಿದೆ, ಇದೀಗ ಈ ವಿವಾದಿತ ಮೈದಾನದಲ್ಲಿ ಸ್ವತಃ ಸರ್ಕಾರವೇ ಮುಂದೆ ನಿಂತು ಆಗಸ್ಟ್ 15ಕ್ಕೆ ಧ್ವಜಾರೋಹಣ ಮಾಡಲು ಮುಂದಾಗಿದೆ. ಅಲ್ಲಿಗೆ ಎಲ್ಲಾ ಸಂಘ ಸಂಸ್ಥೆಗಳ ರೋಷಾವೇಷ ತಣ್ಣಗಾಗಿದೆ
. ಮ.ದೆ.[8/14, 4:59 PM] Public Vahini News: ಆಗಸ್ಟ್ 15ಕ್ಕೆ ಧ್ವಜಾರೋಹಣ, ರಾಷ್ಟ್ರ ಗೀತೆ, ನಾಡಗೀತೆ ಜೊತೆಗೆ ಅದ್ದೂರಿ ಆಚರಣೆ
ಆಗಸ್ಟ್ 15ರಂದು ಚಾಮರಾಜಪೇಟೆಯ ಮೈದಾನದಲ್ಲಿ ಬೆಳಗ್ಗೆ 10 ಗಂಟೆಗೆ ಕಂದಾಯ ಇಲಾಖೆಯ ಕಾರ್ಯದರ್ಶಿ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಜೊತೆಗೆ ರಾಷ್ಟ್ರ ಗೀತೆ ಹಾಗೂ ನಾಡ ಗೀತೆಯೂ ಮೊಳಗಲಿದೆ. ಈ ಕಾರ್ಯಕ್ರಮಕ್ಕೆ 500 ಶಾಲಾ ಮಕ್ಕಳು, 200 ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತಿದೆ. ಸಂಘಟನೆ, ಸಂಸ್ಥೆ ಎಂಬ ಬೇಧಭಾವವಿಲ್ಲದೆ ಎಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕರೆ ನೀಡಲಾಗಿದೆ. ಧ್ವಜಾರೋಹಣದ ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯಲಿದೆ.
[8/14, 4:59 PM] Public Vahini News: ಇದನ್ನೂ ಓದಿ: ಕೆಂಪುಕೋಟೆಯಲ್ಲಿ ಹಾರಾಡೋ ಧ್ವಜ ತಯಾರಾಗೋದು ನಮ್ಮ ಕರ್ನಾಟಕದಲ್ಲಿ! ವಿಶೇಷ ಏನು ನೋಡಿ
ವಿವಾದಿತ ಮೈದಾನಕ್ಕೆ ಖಾಕಿ ಸರ್ಪಗಾವಲು, ಸಿಸಿಟಿವಿ ಕಟ್ಟೆಚ್ಚರ
ಇನ್ನು ಮೈದಾನದಕ್ಕೆ ನಗರ ಪೊಲೀಸ್ ಇಲಾಖೆ ಬಿಗಿ ಬಂದೋ ಬಸ್ತ್ ಒದಗಿಸಿದೆ. ಮೈದಾನದ ಸುತ್ತ ಬ್ಯಾರಿಕೇಡ್ ಹಾಕಲಾಗಿದೆ. ಮೈದಾನದ ನಾಲ್ಕೂ ಮೂಲೆಯಲ್ಲೂ ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಜೊತೆಗೆ ಮೈದಾನದ ಸುತ್ತ ಅಲ್ಲಲ್ಲಿ ಸಿಸಿಟಿವಿ ಅಳವಡಿಕೆ ಮಾಡಿ, ಹೆಚ್ಚಿನ ನಿಗಾ ಇಡಲಾಗಿದೆ. ಅಲ್ಲದೇ, ಮೈದಾನದ ಸುತ್ತಲಿರುವ ಎತ್ತರದ ಕಟ್ಟಡಗಳ ಮೇಲೆ ಸಿಬ್ಬಂದಿಗಳ ನೇಮಕ ಮಾಡಿ ಭದ್ರತೆ ಮತ್ತಷ್ಟು ಬಿಗಿಗೊಳಿಸಲು ಪೊಲೀಸ್ ಇಲಾಖೆ ತೀರ್ಮಾನಿಸಿದೆ. ರಾಷ್ಟ್ರ ಧ್ವಜಕ್ಕೆ ಅಗೌರವ ತರುವ ರೀತಿಯಲ್ಲಿ ಸಾರ್ವಜನಿಕರು ನಡೆದುಕೊಂಡರೆ ಅಂಥವರನ್ನು ನೇರವಾಗಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸುವ ಎಚ್ಚರಿಕೆ ಕೊ
ಡಲಾಗಿದೆ.ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೊರೋನಾ, ಆಸ್ಪತ್ರೆಯಲ್ಲಿ ಬೆಡ್ ಮೀಸಲಿಗೆ ಸೂಚನೆ!
ಒಟ್ಟಾರೆ ಚಾಮರಾಜಪೇಟೆ ಈದ್ಗಾ ಮೈದಾನ ಹಲವು ತಿರುವು ಮುರುವುಗಳನ್ನು ಕಂಡು ಇದೀಗ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಬಂದು ನಿಂತಿದೆ. ಆಗಸ್ಟ್ 15ರ ಸಂಭ್ರಮಾಚರಣೆ ಯಾವುದೇ ಅಡೆತಡೆಗಳು ಇಲ್ಲದೆ ನಡೆಯಲಿ ಅಂತ ಖಾಕಿ ಹಗಲು ರಾತ್ರಿ ಎಚ್ಚೆತ್ತುಕೊಂಡು ಕೂತಿದೆ.



Post a Comment