ಬಿಬಿಎಂಪಿಯು ಮರುಬಳಕೆ ಮಾಡಬಹುದಾದ ಬಟ್ಟೆ ಚೀಲಗಳು ಮತ್ತು ಕಾಗದದ ಕವರ್‌ಗಳನ್ನು ಬಳಸುವಂತೆ ಮಾರಾಟಗಾರರು ಮತ್ತು ನಾಗರಿಕರಲ್ಲಿ ಜಾಗೃತಿ ಮೂಡಿಸುತ್ತಿದೆ
ಬೆಂಗಳೂರು: ಜುಲೈ 1 ಸಿಂಗಲ್ ಯ್ಯೂಸ್ ಪ್ಲಾಸ್ಟಿಕ್ (Single Use Plastic Ban) ಅನ್ನು ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದೆ. ತರಕಾರಿ-ಹಣ್ಣು, ಮಾಂಸ ತರುತ್ತಿದ್ದ ಪ್ಲಾಸ್ಟಿಕ್ ಕವರ್ ಗಳು (Plastic Cover) ಇನ್ಮುಂದೆ ಕಣ್ಣಿಗೆ ಬಿದ್ದರೆ, ಬಿಬಿಎಂಪಿ (BBMP) ದಂಡ ಹಾಕಲಿದೆ. ಸಾಮಾನ್ಯ ಜನ ರಸ್ತೆಯಲ್ಲಿ ಪ್ಲಾಸ್ಟಿಕ್ ಕವರ್ ಹಿಡಿದುಕೊಂಡು ಹೋಗುತ್ತಿದ್ದರೂ ತಡೆದು ನಿಲ್ಲಿಸಿ ಪಾಲಿಕೆಯವರು ಪ್ರಶ್ನಿಸುತ್ತಿದ್ದಾರೆ. ಇನ್ನು ಅಂಗಡಿಗಳಿಗೆ ಭೇಟಿ ಕೊಟ್ಟು ಪ್ಲಾಸ್ಟಿಕ್ ಕಲರ್ ಬಂಡಲ್ ಗಳನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ. ಜುಲೈ 1 ರಿಂದ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ತನ್ನ ಎಂಟು ವಲಯಗಳಲ್ಲಿ 1,926.8 ಕೆಜಿ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ವಶಪಡಿಸಿಕೊಂಡಿದೆ. ಪ್ಲಾಸ್ಟಿಕ್ ನಿಷೇಧಕ್ಕೆ ಸಂಬಂಧಿಸಿದಂತೆ 1,319 ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿದೆ. ಇದೇ ಅವಧಿಯಲ್ಲಿ 8,36,300 ರೂ. ದಂಡವನ್ನು ಸಂಗ್ರಹಿಸಲಾಗಿದೆ ಎಂದು ನಾಗರಿಕ ಸಂಸ್ಥೆ ಬಿಡುಗಡೆ ಮಾಡಿದ ಅಂಕಿಅಂಶದಿಂದ ತಿಳಿದು ಬಂದಿದೆ
25,000 ರೂಪಾಯಿ
ಈ ಕುರಿತು ಹೇಳಿಕೆ ನೀಡಿರುವ ಬಿಬಿಎಂಪಿ, ನಾಯಂಡಹಳ್ಳಿಯಲ್ಲಿರುವ ಯುನಿಕ್ ಪ್ಲಾಸ್ಟ್ ತಯಾರಿಕಾ ಘಟಕವು 15 ದಿನಗಳ ಹಿಂದೆ ನಿಷೇಧಿತ ಪ್ಲಾಸ್ಟಿಕ್ ತಯಾರಿಸಿ ಸಿಕ್ಕಿಬಿದ್ದಿದೆ. ಆದರೆ ಜುಲೈ 13ರಂದು ಪರಿಶೀಲಿಸಿದಾಗ ಅವರು ನಿಷೇಧಿತ ಪ್ಲಾಸ್ಟಿಕ್ ಅನ್ನು ಇನ್ನೂ ತಯಾರಿಸುತ್ತಿದ್ದರು, ಆದ್ದರಿಂದ ಮಾರ್ಷಲ್‌ಗಳು ಅವರಿಗೆ 25,000 ರೂಪಾಯಿ ದಂಡ ವಿಧಿಸಿ 85 ಕೆಜಿ ಪ್ಲಾಸ್ಟಿಕ್ ಅನ್ನು ವಶಪಡಿಸಿಕೊಂಡಿದ್ದಾರೆ
ಎಲ್ಲೆಲ್ಲಿ, ಎಷ್ಟೆಷ್ಟು ಪ್ರಕರಣಗಳು ದಾಖ
ಬಿಬಿಎಂಪಿ ಪಶ್ಚಿಮ ವಲಯದಲ್ಲಿ 316 ಪ್ರಕರಣಗಳು ದಾಖಲಾಗಿದ್ದು, ಮಹದೇವಪುರ ವಲಯ (272), ಪೂರ್ವ ವಲಯ (273), ದಕ್ಷಿಣ ವಲಯ (91), ಆರ್‌ಆರ್ ನಗರ (170), ಯಲಹಂಕ (61), ದಾಸರಹಳ್ಳಿ (55) ಮತ್ತು ಬೊಮ್ಮನಹಳ್ಳಿ (81) ಪ್ರಕರಣಗಳು ದಾಖಲಾಗಿವೆ. ಬಿಬಿಎಂಪಿ ಮಾರ್ಷಲ್‌ಗಳು ಮಹದೇವಪುರ ವಲಯದಿಂದ 242 ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದಾರೆ, ಇದು ಎಲ್ಲಾ ವಲಯಗಳಲ್ಲಿ ಅತಿ ಹೆಚ್ಚು ಅಂದರೆ ದಾಸರಹಳ್ಳಿ ನಂತರ 233 ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿ
ಇದನ್ನೂ ಓದಿ: Bengaluru: ಬಂದಿದ್ದು ಮನೆಕೆಲಸಕ್ಕೆ, ಮಾಡಿದ್ದು ದರೋಡೆ! ಈ ಕಳ್ಳಿಯರು ಸಿಕ್ಕಿಬಿದ್ದಿದು ಹೇಗೆ ನೋ
ಬಟ್ಟೆ ಚೀಲಗಳು, ಕಾಗದದ ಕವರ್ಗಳ ಬಳಕೆ ಬಗ್ಗೆ ಜಾಗೃ
ಬಿಬಿಎಂಪಿ ಮುಖ್ಯ ಮಾರ್ಷಲ್ ರಾಜ್‌ಬೀರ್ ಸಿಂಗ್ ಮಾತನಾಡಿ, ಸಿಂಗಲ್ ಬಳಕೆಯ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಬಿಬಿಎಂಪಿಯು ಮರುಬಳಕೆ ಮಾಡಬಹುದಾದ ಬಟ್ಟೆ ಚೀಲಗಳು ಮತ್ತು ಕಾಗದದ ಕವರ್‌ಗಳನ್ನು ಬಳಸುವಂತೆ ಮಾರಾಟಗಾರರು ಮತ್ತು ನಾಗರಿಕರಲ್ಲಿ ಜಾಗೃತಿ ಮೂಡಿಸುತ್ತಿದೆ. ಮಾರ್ಷಲ್‌ಗಳು ಅಂಗಡಿಗಳು, ಹೋಟೆಲ್‌ಗಳು, ಉತ್ಪಾದನಾ ಘಟಕಗಳ ಮೇಲೆ ಹಠಾತ್ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಳ್ಳುತ್ತಿದ್ದಾ
ಕೇಂದ್ರ ಸಚಿವಾಲಯದ ಆ
ಜುಲೈ 1 ರಿಂದ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ (MoEF&CC) ಆದೇಶಕ್ಕೆ ಬದ್ಧವಾಗಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ರಾಜ್ಯದಲ್ಲಿ ನಿಷೇಧವನ್ನು ಜಾರಿಗೊಳಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಈ ಹಿಂದೆ ತಿಳಿಸಿತ್ತು. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಜೂನ್ 30 ರಂದು ತನ್ನ ಆದೇಶದಲ್ಲಿ, “ಪಾಲಿಸ್ಟೈರೀನ್ ಮತ್ತು ವಿಸ್ತರಿತ ಪಾಲಿಸ್ಟೈರೀನ್ ಸೇರಿದಂತೆ ಕೆಳಗಿನ ಏಕ-ಬಳಕೆಯ ಪ್ಲಾಸ್ಟಿಕ್‌ಗಳ ತಯಾರಿಕೆ, ಆಮದು, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ಜುಲೈ 1 ರಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ
ಎಂಟು ವಲಯಗಳಲ್ಲಿ 1,926.8 ಕೆಜಿ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ವಶಪಡಿಸಿಕೊಂಡಿದೆ. ಪ್ಲಾಸ್ಟಿಕ್ ನಿಷೇಧಕ್ಕೆ ಸಂಬಂಧಿಸಿದಂತೆ 1,319 ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿದೆ. ಇದೇ ಅವಧಿಯಲ್ಲಿ 8,36,300 ರೂ. ದಂಡವನ್ನು ಸಂಗ್ರಹಿಸಲಾಗಿದೆ. ಬಿಬಿಎಂಪಿಯು ಮರುಬಳಕೆ ಮಾಡಬಹುದಾದ ಬಟ್ಟೆ ಚೀಲಗಳು ಮತ್ತು ಕಾಗದದ ಕವರ್‌ಗಳನ್ನು ಬಳಸುವಂತೆ ಮಾರಾಟಗಾರರು ಮತ್ತು ನಾಗರಿಕರಲ್ಲಿ ಜಾಗೃತಿ ಮೂಡಿಸುತ್ತಿದೆ. .”ದೇಶರೆ.ತಿಡಿದೆ.ಲು?.ದಂಡ.ರಲ್ಲಿ ಜಾಗೃತಿ ಮೂಡಿಸುತ್ತಿದೆ.

Post a Comment