ಅಕ್ರಮದ ವಿಚಾರವಾಗಿ ಅವರ ಹೆಸರು ಹೇಳಿಕೊಂಡ್ರೆ ಸೂಕ್ತವಾಗಿರುತ್ತೆ. ಈ ರೀತಿ ಒಬ್ಬ ಹಿರಿಯ ಅನುಭವಿ ರಾಜಕಾರಣಿ ನಿರಾಧಾರವಾಗಿ ಇಟ್ ಅಂಡ್ ರನ್ ಕೇಸ್, ಗಾಳಿಯಲ್ಲಿ ಗುಂಡು ಹೊಡೆಯುವಂತ ಆಪಾದನೆ ಮಾಡಬಾರದು ಎಂದು ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಮಂಡ್ಯ (ಜು.13): ಸಿದ್ದರಾಮಯ್ಯ (Siddaramaiah) ಇರೋದೇ ದುರಂತ ಎಂದು ಸಿದ್ದರಾಮಯ್ಯ ವಿರುದ್ಧ ಸಚಿವ ಅಶ್ವತ್ಥ ನಾರಾಯಣ (Ashwath Narayan) ವಾಗ್ದಾಳಿ ನಡೆಸಿದ್ದಾರೆ. PSI ಹಗರಣದಲ್ಲಿ (PSI Scam) ಬಿಜೆಪಿಯ ಕೆಲ ನಾಯಕರ ಹೆಸರು ಪ್ರಸ್ತಾಪ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷಗಳು ಆರೋಪ ಮಾಡುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮೇಲುಕೋಟೆಯ ಮಾತಾಡಿದ ಅಶ್ವತ್ಥ ನಾರಾಯಣ, ಇದನ್ನು ಸಿದ್ದರಾಮಯ್ಯ ಅವರನ್ನೇ ಕೇಳಬೇಕು. ಹುಡುಕಿಕೊಂಡು ಹೋದ್ರೆ ಸಿದ್ದರಾಮಯ್ಯನೆ ಈ ಹಗರಣದಲ್ಲಿ ಸಿಕ್ಕಿಕೊಳ್ತಾರೆ. ಶಾಂತರಾಮ್ ಪ್ರಕರಣದ ತನಿಖೆ ಮಾಡಿದ್ರಾ? ಸಿದ್ದರಾಮಯ್ಯ ಕಾಲದಲ್ಲಿ ಶಾಂತರಾಮ್ ಅನ್ನೋರ ಸ್ಕ್ಯಾಂಡಲ್ ಆಗಿತ್ತು. ಪಬ್ಲಿಕ್ ಪ್ರಾಸಿಕ್ಯೂಟರ್ (Public Prosecutor) ನೇಮಕದ ಅಕ್ರಮ ತನಿಖೆ ಆಯ್ತಾ.? ಅವರು ಎಲ್ಲವನ್ನೂ ಹಾಗೇ ಮುಚ್ಚಿ ಹಾಕಿದ್ರು
ತಪ್ಪಿತಸ್ಥರಿಗೆ ರಕ್ಷಣೆ ಕೊಡುವ ಸರ್ಕಾರ ನಮ್ಮದ
ನಮ್ಮ ಸರ್ಕಾರದಲ್ಲಿ ಸಿದ್ದರಾಮಯ್ಯನ ಹಾಗೆ ಮುಚ್ಚಾಕುವ ಕೆಲಸ ಮಾಡಲ್ಲ. ಅಕ್ರಮಗಳನ್ನ ಬೆಳಕಿಗೆ ತರುವ ಕೆಲಸ ಮಾಡುತ್ತಿದ್ದೇವೆ. ಸಿದ್ದರಾಮಯ್ಯನ ಸರ್ಕಾರ ಬರೀ ಮುಚ್ಚಾಕೋದು. ಎಲ್ಲಾ ಭ್ರಷ್ಟಾಚಾರ, ಅಕ್ರಮವಾಗಿರುವಂತ, ಅಪವಿತ್ರವಾದ ಒಂದು ಸರ್ಕಾರ, ಇಂತಹ ಆಡಳಿತ ಕೊಟ್ಟಂತವರು ಸಿದ್ದರಾಮಯ್ಯ. ನಮ್ಮ ಸರ್ಕಾರ ಪಾರದರ್ಶಕವಾಗಿ ತಪ್ಪನ್ನು ಬಯಲಿಗೆ ಎಳೆಯುವ ಕೆಲಸ ಮಾಡ್ತಿದೆ. ತಪ್ಪಿತಸ್ಥರಿಗೆ ರಕ್ಷಣೆ ಕೊಡುವ ಸರ್ಕಾರ ನಮ್ಮದಲ್ಲ ಎಂದು ಅಶ್ವತ್ಥ ನಾರಾಯಣ ಹೇಳಿದ್ದಾರೆ
ಇಂಥವರು ಇರೋದೆ ದು
ಸಿದ್ದರಾಮಯ್ಯರಿಗೆ ಅವರು ಮಾಡಿದ ಕರ್ಮಕಾಂಡ ಆಗಾಗ ನೆನಪಾಗ್ತಿರುತ್ತೆ. ಅಕ್ರಮದ ವಿಚಾರವಾಗಿ ಅವರ ಹೆಸರು ಹೇಳಿಕೊಂಡ್ರೆ ಸೂಕ್ತವಾಗಿರುತ್ತೆ. ಈ ರೀತಿ ಒಬ್ಬ ಹಿರಿಯ ಅನುಭವಿ ರಾಜಕಾರಣಿ ನಿರಾಧಾರವಾಗಿ ಇಟ್ ಅಂಡ್ ರನ್ ಕೇಸ್, ಗಾಳಿಯಲ್ಲಿ ಗುಂಡು ಹೊಡೆಯುವಂತ ಆಪಾದನೆ ಮಾಡಬಾರದು. ಅವರಿಗೆ 75 ವರ್ಷವಾಗ್ತಿದೆ. ಇಂತಹ ಸಂದರ್ಭದಲ್ಲಿ ಕೀಳು ಮಟ್ಟದ ರಾಜಕಾರಣ ಮಾಡ್ತಿರುವುದು ನಿಜಕ್ಕೂ ದುರಂತ. ಇಂಥವರು ಇರೋದೆ ದುರಂ
ಇದನ್ನೂ ಓದಿ: PSI Recruitment Scam: ವಿಧಾನಸೌಧ ವ್ಯಾಪಾರ ಸೌಧವಾಗಿದೆ; ಸರ್ಕಾರಕ್ಕೆ ಪ್ರಿಯಾಂಕ್ ಖರ್ಗೆ ಪ್ರಶ್ನೆಗಳ ಸುರಿ
ಉತ್ಸವ ಮಾಡಿ ಮನೆಗೆ ಹೋಗುವ ಟೈ
ಸಿದ್ದರಾಮಯ್ಯೋತ್ಸವದ ಬಗ್ಗೆ ಮಾತಾಡಿದ ಅಶ್ವತ್ಥ ನಾರಾಯಣ, ಕಾಂಗ್ರೆಸ್ ನವರು ಸಿದ್ದರಾಮಯ್ಯ ಅವರನ್ನು ಮನೆ ಕಡೆಗೆ ಕಳಿಸುವುದಕ್ಕೆ ಆಗ್ತಿರೋ ಉತ್ಸವ ಎಂದು ಮಂಡ್ಯದ ಮೇಲುಕೋಟೆಯಲ್ಲಿ ಸಚಿವ ಅಶ್ವತ್ಥ ನಾರಾಯಣ್ ವ್ಯಂಗ್ಯ ಮಾಡಿದ್ದಾರೆ. ಸಿದ್ದರಾಮಯ್ಯ ಅವರಿಗೆ 75 ವರ್ಷವಾಗಿದೆ. ಉತ್ಸವ ಮಾಡಿ ಮನೆಗೆ ಹೋಗುವ ಟೈಮ್, ಉತ್ಸವ ಅಂದ್ರೆ ಮನೆಗೆ ಹೋಗು ಅಂತ ಎಂ
ಹಳೇ ಸೈಕಲ್ ತಂದು ಓಡಿಸುವುದು ಸರಿಯ
75 ವರ್ಷ ಆಗಿದೆ, ಸಾಕಪ್ಪ ಸಿದ್ದರಾಮಯ್ಯ, ಸಾಕಷ್ಟು ಸೇವೆ ಮಾಡಿದ್ಯಾ? ಯುವರ್ ಔಟ್ ಡೇಟೆಡ್ ಸಿದ್ದರಾಮಯ್ಯ, ನೀವು ಔಟ್ಡೇಟೆಟ್ ಆಗಿದ್ದೀರಾ? ನಿಮ್ಮ ಪಕ್ಷದಲ್ಲಿ ಹೊಸಬರು ಇರ್ತಾರೆ, ಅವರಿಗೆ ಅವಕಾಶ ಕೊಡಿ. ಇನ್ನೂ ಹಳೇ ಸೈಕಲ್ ತಂದು ಓಡಿಸುವುದು ಸರಿಯಲ್ಲ
ಇದನ್ನೂ ಓದಿ: Siddaramotsava: ಸಭೆಗೆ ಬಾರದ ಡಿಕೆ ಶಿವಕುಮಾರ್ಗೆ ಸಿದ್ದು ಆಪ್ತರ ಟಾಂಗ್; ವೇದಿಕೆ ಮೇಲೆಯೇ ತಿರುಗೇಟು ಕೊಟ್ರು ಡಿಕೆಶಿ ಬ್ರ
ಬೇರೆಯವರೆಲ್ಲಾ ಎಲ್ಲಿ ಹೋಗಬೇ
ಅವರು ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಮೊದಲು ಹೇಳಿಕೆ ಕೊಟ್ಟಿದ್ದು ಏನು? ಮೊದಲು 5 ವರ್ಷ ಪೂರೈಸ್ತೀನಿ, ಮತ್ತೆ ರಾಜಕೀಯದಲ್ಲಿ ಇರಲ್ಲ ಅಂದ್ರು. ಈಗ ಇನ್ನೊಂದು 5 ವರ್ಷ, ಮತ್ತೆ ಇನ್ನೊಂದು 5 ವರ್ಷ ಬೇಕು ಅಂತಾರೆ. ಬೇರೆಯವರೆಲ್ಲಾ ಎಲ್ಲಿ ಹೋಗಬೇಕು? ಏನೋ ಬಾರಿ ಸಾಧನೆ ಮಾಡಿದ್ರೆ ಹೇಳಪ್ಪ? ಏನು ಬಾರಿ ಕೊಡುಗೆ ಕೊಟ್ಟವರೆ? ಇಂತಹ ನಾಯಕ ನಮ್ಮ ನಾಡಿನಲ್ಲೆ ಇಲ್ವಲ್ಲಾ ಅಂತಹದ್ದು ಏನೂ ಇಲ್ಲ. ಇವರು ಇವರಿಗೋಷ್ಕರ ಬದುಕುವುದನ್ನ ಬಿಟ್ಟು, ಸಮಾಜಕ್ಕೆ ಬದುಕಬೇಕು. ಈ ವಯಸ್ಸಿನಲ್ಲಿ ತಮ್ಮ ಸ್ವಾರ್ಥ, ಅತೀ ಸ್ವಾರ್ಥವಾಗಿರುವಂತ ಬದುಕನ್ನ ಬಿಟ್ಟು, 75ನೇ ವರ್ಷದಲ್ಲಾದ್ರೂ ಜ್ಞಾನ ಬರಲಿ ಅವರಿಗೆ ಎಂದು ಸಚಿವ ಅಶ್ವತ್ಥ ನಾರಾಯಣ ಕಿಡಿಕಾರಿದ್ದಾರೆ. ಕು?ದರ್.ಲ್ಲದು.ಮ್ಮಳೆತ.ರಂತ.ಲ್ಲ. ಅಶ್ವತ್ಥ ನಾರಾಯಣ ಕಿಡಿಕಾರಿದ್ದಾರೆ.

Post a Comment