New Rule: ಪೋಷಕರೇ ಎಚ್ಚರ, ಪಿಯು ಮುಗಿಯೋ ತನಕ ಮಕ್ಕಳ ಕೈಯಲ್ಲಿ ಗಾಡಿ ಕೊಟ್ರೆ-ಕೆಟ್ರಿ!


 ಈಗಿನ ಕಾಲದ ಮಕ್ಕಳು ಹಾಗೇ ಇದ್ದಾರೆ. ಕೈಯಲ್ಲಿ ಕಾಸ್ಟ್ಲಿ ಮೊಬೈಲ್ (Costly Mobile) , ಓಡಾಡೋಕೆ ಬೈಕ್ ಬೇಕೇ ಬೇಕು ಎಂದು ಹಠ ಮಾಡುತ್ತಾರೆ. ಪೋಷಕರು (Parents) ಕೊಡಿಸದೇ ಇದ್ದರೆ, ಅವರ ಗಾಡಿಯನ್ನೇ ಓಡಿಸಿಕೊಂಡು ರಸ್ತೆಗೆ ಬರುತ್ತಾರೆ. ಇನ್ಮುಂದೆ ಹೀಗೆ ಮಕ್ಕಳು ಮಾಡಿದರೆ, ಶಿಕ್ಷೆ ಮಾತ್ರ ಪೋಷಕರಿಗೆ. ಮುಂದೆ ನೋಡಿ.

ಎಲ್ಲಿ ನೋಡಿದರೂ ಈಗ ಗಾಡಿ(Vehicle) ಗಳದ್ದೇ ಸದ್ದು. ಸಣ್ಣ ಪುಟ್ಟ ಹುಡುಗ-ಹುಡುಗಿಯರೆಲ್ಲ ಗಾಡಿ ಹತ್ತಿ ರೋಡಿಗೆ ಬರುತ್ತಿದ್ದಾರೆ. ಇನ್ನೂ ಸ್ಕೂಲ್ (School) ಮುಗಿಸಿ ಬಟ್ಟೆ ಕೂಡ ಬದಲಾಯಿಸದೇ ಟು ವಿಲ್ಹರ್ (Two Wheeler) ಗಾಡಿ ಹತ್ತಿ ರೋಡಿಗೆ ಬರುತ್ತಾರೆ. ಹಿಂದಿನ ಕಾಲದಲ್ಲಿ ಎಸ್ಎಲ್ಎಲ್ಸಿ ಎಕ್ಸಾಂ (SSLC Exam) ಪಾಸ್ ಆದರೆ, ಸೈಕಲ್ ಕೊಡಿಸುತ್ತಿದ್ದರು. ಆದರೆ, ಈಗ ಕಾಲ ಬದಲಾದಂತೆ, ಮನುಷ್ಯರು ಮನಸ್ಥಿತಿಗಳು ಬದಲಾಗುತ್ತಿದೆ. ಎಸ್ಎಸ್ಎಲ್ಸಿ ಪಾಸ್ ಆದರೆ, ಆ ಬೈಕ್ (Bike) ಕೊಡಿಸ್ತೀನಿ, ಈ ಬೈಕ್ ಕೊಡಿಸ್ತಿನಿ ಎಂದು ಮಕ್ಕಳಿಗೆ ಆಸೆ ಹುಟ್ಟಿಸುತ್ತಿದ್ದಾರೆ.ಈಗಿನ ಕಾಲದ ಮಕ್ಕಳು ಹಾಗೇ ಇದ್ದಾರೆ. ಕೈಯಲ್ಲಿ ಕಾಸ್ಟ್ಲಿ ಮೊಬೈಲ್ (Costly Mobile) , ಓಡಾಡೋಕೆ ಬೈಕ್ ಬೇಕೇ ಬೇಕು ಎಂದು ಹಠ ಮಾಡುತ್ತಾರೆ. ಪೋಷಕರು (Parents) ಕೊಡಿಸದೇ ಇದ್ದರೆ, ಅವರ ಗಾಡಿಯನ್ನೇ ಓಡಿಸಿಕೊಂಡು ರಸ್ತೆಗೆ ಬರುತ್ತಾರೆ. ಇನ್ಮುಂದೆ ಹೀಗೆ ಮಕ್ಕಳು ಮಾಡಿದರೆ, ಶಿಕ್ಷೆ ಮಾತ್ರ ಪೋಷಕರಿಗೆ. ಮುಂದೆ ನೋಡಿ

ಕಾಲೇಜ್ಗೆ ಗಾಡಿಯಲ್ಲಿ ಬರಂಗಿಲ್ಲ

 ಕರ್ನಾಟಕ ರಾಜ್ಯ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್ ಅವರು ಕಳೆದ ವಾರ ರಸ್ತೆಯಲ್ಲಿ ಗಾಡಿಗಳನ್ನು ತಡೆದು ದಾಖಲೆ ಪರಿಶೀಲನೆ ಮಾಡಬಾರದು ಎಂದು ಆದೇಶ ಹೊರಡಿಸಿದ್ದರು. ಬೆಂಗಳೂರು ನಗರ ಸಂಚಾರ ಕಮಿಷನರ್ ರವಿಕಾಂತೇಗೌಡ ಅವರು ಮತ್ತೊಂದು ಆದೇಶ ಹೊರಡಿಸಿದ್ದಾರೆ. ಅದೇನಪ್ಪಾ ಅಂದರೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕ-ಯುವತಿಯರಿಗೆ ಪೋಷಕರು ಗಾಡಿ ನೀಡಬಾರದು ಎಂದು ಆದೇಶ ನೀಡಿದ್ದಾರೆ. ಕರ್ನಾಟಕ ಮೋಟಾರು ವಾಹನಗಳ ನಿಯಮಗಳ ಪ್ರಕಾರ ಚಾಲನಾ ಪರವಾನಗಿ ಪಡೆಯಲು ಕನಿಷ್ಠ ವಯಸ್ಸಿನ (18 ವರ್ಷಗಳು) ಮಾನದಂಡಗಳನ್ನು ಪೂರೈಸದ ಕಾರಣ ಪಿಯು ವಿದ್ಯಾರ್ಥಿಗಳು ಕಾಲೇಜಿಗೆ ಮೋಟಾರು ವಾಹನಗಳನ್ನು ತೆಗೆದುಕೊಳ್ಳಲು ಅನುಮತಿಸುವುದಿಲ್ಲ

ರೂಲ್ಸ್ ಮೀರಿದ್ರೆ, ಪೋಷಕರಿಗೆ ಆಪ

ಎಷ್ಟೇ ಹಠ ಮಾಡಿದರು ಪಿಯು ಮುಗಿಯೋವರೆಗೂ ಮಕ್ಕಳಿಗೆ ಗಾಡಿ ಕೊಡಿಸಬೇಡಿ. ಅದರಲ್ಲೂ ಇನ್ಮುಂದೆ ಪಿಯು ಮಕ್ಕಳು ಕಾಲೇಜಿಗೆ ವಾಹನ ಓಡಿಸಿಕೊಂಡು ಬರುವ ಹಾಗಿಲ್ಲ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮೋಟಾರು ವಾಹನಗಳನ್ನು ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲು ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಬೆಂಗಳೂರು ನಗರ ಸಂಚಾರ ಕಮಿಷನರ್ ರವಿಕಾಂತೇಗೌಡ ಅವರು ಸ್ಪಷ್ಟ ಪಡಿಸಿದ್ದಾ

ಇದನ್ನೂ ಓದಿ: ಜಮೀರ್ ಅಹ್ಮದ್ ವಿರುದ್ಧ ಎಸಿಬಿ ಎಫ್ಐಆರ್, ಶಾಸಕರಿಗೆ ಉರುಳಾಯ್ತಾ ಅಕ್ರಮ ಆಸ್ತಿ ಪ್ರಕ

ವಿದ್ಯಾರ್ಥಿಗಳನ್ನು ಸೈಕಲ್, ಬಸ್ ಅಥವಾ ಆಟೋದಂತಹ ಇತರ ಸಾರಿಗೆಯಲ್ಲಿ ಕಾಲೇಜಿಗೆ ಬರಬೇಕು.ಈ ಬಗ್ಗೆ ನಾವು ಕಾಲೇಜುಗಳಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ವಿದ್ಯಾರ್ಥಿಗಳು ಒಂದು ವೇಳೆ ಕಾಲೇಜಿಗೆ ಗಾಡಿ ತೆಗೆದುಕೊಂಡು ಬಂದಿರುವುದು ಗೊತ್ತಾದರೆ ವಾಹನ ಜಪ್ತಿ ಮಾಡಿ ಪೋಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಪರಾಧದ ಆಧಾರದ ಮೇಲೆ ಅವರಿಗೆ ದಂಡ ಮತ್ತು ಚಾರ್ಜ್‌ಶೀಟ್ ಹಾಕಲಾಗುತ್ತದೆ" ಎಂದು ರವಿಕಾಂತೇಗೌಡ ಅವರು ತಿಳಿಸಿದ್ದಾರೆ

ಇದನ್ನೂ ಓದಿ: ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ ಹೀಗಿ

ಕರ್ನಾಟಕ ಮೋಟಾರು ವಾಹನ ನಿಯಮಗಳ ಪ್ರಕಾರ, ಗೇರ್ ಇಲ್ಲದ ಮೋಟಾರ್ ಸೈಕಲ್‌ಗಳಿಗೆ ಚಾಲನಾ ಪರವಾನಗಿಯನ್ನು 50 ಸಿಸಿ ಮೀರದ ಎಂಜಿನ್ ಸಾಮರ್ಥ್ಯದ ಸ್ಕೂಟರ್ ಅಥವಾ ಮೊಪೆಡ್‌ಗಳಂತಹ ಗೇರ್ ಇಲ್ಲದೆ ದ್ವಿಚಕ್ರ ವಾಹನಗಳನ್ನು ಓಡಿಸಬಹುದು. ಅಂತಹ ಪರವಾನಗಿಗೆ ಅರ್ಜಿ ಸಲ್ಲಿಸಲು, ಒಬ್ಬ ವ್ಯಕ್ತಿಯು 16 ವರ್ಷಗಳನ್ನು ಪೂರ್ಣಗೊಳಿಸಿರಬೇಕು. ಆದಾಗ್ಯೂ, ಕಾರುಗಳು, ಬೈಕ್‌ಗಳಂತಹ ಲಘು ಮೋಟಾರು ವಾಹನಗಳಿಗೆ ಪರವಾನಗಿಗಾಗಿ ಅರ್ಜಿ ಸಲ್ಲಿಸಲು, ಒಬ್ಬ ವ್ಯಕ್ತಿಯು 18 ವರ್ಷಗಳನ್ನು ಪೂರ್ಣಗೊಳಿಸಿರಬೇಕು. ದೆ.ರಣ?ರೆ.ತ್ತು!.!. ಪೂರ್ಣಗೊಳಿಸಿರಬೇಕು.

Post a Comment

Previous Post Next Post