Congress Bus Yatra: ನಿಮ್ಮ ಊರಿಗೂ ಬರುತ್ತೆ ಕಾಂಗ್ರೆಸ್ ಬಸ್​! ರಾಜ್ಯದ ಮೂಲೆ ಮೂಲೆಗೂ ಬರ್ತಾರೆ ಕೈ ನಾಯಕರು ಇದಾದ ಬಳಿಕ ಡಿಕೆಶಿ ಕೆಲ ದಿನಗಳ ನಂತರ ಎಲ್ಲಿಗೆ ಪಾದಯಾತ್ರೆ ನಿಲ್ಲಿಸಿದ್ದರೋ, ಅಲ್ಲಿಂದಲೇ ಮತ್ತೆ ಕಹಳೆ ಊದಿದ್ದರು. ಇದೀಗ ರಾಜ್ಯ ಕಾಂಗ್ರೆಸ್​ ಮತ್ತೊಂದು ಮಹಾ ಪ್ಲ್ಯಾನ್ (Plan) ಮಾಡಿಕೊಂಡಿದೆ.


 ರಾಜ್ಯದಲ್ಲಿ ಕಾಂಗ್ರೆಸ್ (Congress) ಈಗಿನಿಂದಲೇ ಚುನಾವಣೆ (Election) ಗೆ ರೆಡಿಯಾಗುತ್ತಿದ್ದಾರೆ. ಹೇಗಾದರೂ ಮಾಡಿ ರಾಜ್ಯದ ಅಧಿಕಾರ ಪಡೆಯಬೇಕೆಂಬ ಆಸೆಯಿಂದ ಈಗಿನಿಂದಲೇ ಸಕಲ ತಯಾರಿ ಮಾಡುತ್ತಿದೆ. ಒಂದು ಕಡೆ  ಜೆಡಿಎಸ್ (JDS) ಈ ಬಾರಿ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ಹೇಳಿಕೊಂಡು ತಿರುಗುತ್ತಿದೆ. ಇತ್ತ ಕಾಂಗ್ರೆಸ್ ನಾಯಕರು (Congress Leaders) ಬಿಜೆಪಿ ನಾಯಕರನ್ನು ಟೀಕೆ ಮಾಡುತ್ತಾ ಸಾಗಿದ್ದಾರೆ. ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) , ಮೇಕೆ ದಾಟು (Mekedatu)ಯೋಜನೆಗಾಗಿ ಪಾದಯಾತ್ರೆ ಮಾಡಿ ದೇಶದ ಗಮನ ಸೆಳೆಯುವಂತೆ ಮಾಡಿದ್ದರು. ಅದು ರಾಜಕೀಯವಾಗಿ ಅಲ್ಲ, ಕೊರೋನಾ (Corona) ಹಬ್ಬಿಸಿ ಸುದ್ದಿಯಾಗಿದ್ದರು. ಹೀಗಾಗಿ ಸೋನಿಯಾ ಗಾಂಧಿ ಡಿಕೆಶಿ ಅವರಿಗೆ ಪಾದಯಾತ್ರೆ (Padayathre) ನಿಲ್ಲಿಸುವಂತೆ ಹೇಳಿದ್ದರು. ಇದಾದ ಬಳಿಕ ಡಿಕೆಶಿ ಕೆಲ ದಿನಗಳ ನಂತರ ಎಲ್ಲಿಗೆ ಪಾದಯಾತ್ರೆ ನಿಲ್ಲಿಸಿದ್ದರೋ, ಅಲ್ಲಿಂದಲೇ ಮತ್ತೆ ಕಹಳೆ ಊದಿದ್ದರು. ಇದೀಗ ರಾಜ್ಯ ಕಾಂಗ್ರೆಸ್ ಮತ್ತೊಂದು ಮಹಾ ಪ್ಲ್ಯಾನ್ (Plan)  ಮಾಡಿಕೊಂಡಿದೆ.

ಆಗಸ್ಟ್ 15 ರ ಬಳಿಕ ರಾಜ್ಯ ಕಾಂಗ್ರೆಸ್ನಿಂದ ಬಸ್ ಯಾತ್ರೆ ಹೌದು, ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಮಾಡಿದ್ದ ಜನಾಶೀರ್ವಾದ ಯಾತ್ರೆ ಮಾದರಿಯಲ್ಲೇ ಮತ್ತೊಂದು ಮಹಾ ಯಾತ್ರೆಗೆ ಕಾಂಗ್ರೆಸ್ ಸಜ್ಜಾಗಿದೆ. ಆಗಸ್ಟ್ 15 ರ ಬಳಿಕ ರಾಜ್ಯ ಕಾಂಗ್ರೆಸ್ ಬಸ್ ಯಾತ್ರೆ ಮಾಡಲು ಸಜ್ಜಾಗುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವೈಫಲ್ಯಗಳನ್ನು ಹೊತ್ತು, ರಾಜ್ಯದ ನಾಲ್ಕು ವಿಭಾಗಗಳಿಗೂ ಈನ ಕಾಂಗ್ರೆಸ್ ಬಸ್ಗಳು ಸಂಚರಿಸಲಿವೆ. ಈಗಾಗಲೇ ಈ ಸಂಚಾರಕ್ಕಾಗಿ ಕಾಂಗ್ರೆಸ್ನಲ್ಲಿ ನಾಲ್ಕು ತಂಡಗಳು ಕೂಡ ರಚನೆಯಾಗಿದೆ. ರಾಜ್ಯ ಕಾಂಗ್ರೆಸ್ ಪ್ರಮುಖ ನಾಯಕರು, ಶಾಸಕರು, ಪರಿಷತ್ ಸದಸ್ಯರನ್ನು ಸೇರಿಕೊಂಡು ತಂಡ ರಚಿಸಿದ್ದಾ

ನಾಲ್ಕು ತಂಡಗಳಿಗೂ ಒಬ್ಬೊಬ್ಬ ಸಾರಥಿ

ಈ ಬಸ್ ಯಾತ್ರೆ ಬಗ್ಗೆ ಕೈ ನಾಯಕರು ರೂಟ್ ಮ್ಯಾಪ್ ಸಿದ್ದಪಡಿಸುತ್ತಿದ್ದಾರೆ. ನಾಲ್ಕು ತಂಡಗಳಿಗೂ ಒಬ್ಬೊಬ್ಬ ಸಾರಥಿ ಇರಲಿದ್ದಾರೆ. ರಾಜ್ಯದ ಪ್ರತಿಯೊಂದು ಕ್ಷೇತ್ರಕ್ಕೂ ಬಸ್ಗಳು ಸಂಚಾರ ಮಾಡಲಿದೆ. ಎಲ್ಲಾ ಕ್ಷೇತ್ರಗಳಿಗೂ ತೆರಳಿ ಬಹಿರಂಗ ಸಭೆ ಮಾಡಿ ಬಿಜೆಪಿ ಸರ್ಕಾರ ವಿರುದ್ಧ ತೊಡೆ ತಟ್ಟಲು ಕಾಂಗ್ರೆಸ್ ನಾಯಕರು ಸಿದ್ಧರಾಗಿದ್ದಾರೆ. ಈಗಾಗಲೇ ಬಸ್ಗಳನ್ನು ಸಂಪೂರ್ಣವಾಗಿ ಸ್ಟಿಕ್ಕರಿಂಗ್ ಮಾಡಿಸಲಾಗುತ್ತಿ

ಇದನ್ನೂ ಓದಿ: ಭಿಕ್ಷೆ ಬೇಡಿ ಶಾಲಾ ಮಕ್ಕಳಿಗೆ ಯೂನಿಫಾರ್ಮ್ ಕೊಡ್ತೀವಿ - ಬಿ ಸಿ ನಾಗೇಶ್ಗೆ ಟಾಂ ಬಿಜೆಪಿ ವಿರುದ್ಧ ತೊಡೆ ತಟ್ಟಿದ್ರಾ ಕೈ ನಾಯಕರು

ಒಂದೆಡೆ ರಾಜ್ಯ ಸರ್ಕಾರ ವೈಫಲ್ಯಗಳು, 40% ಕಮಿಷನ್ ಆರೋಪ, PSI ಅಕ್ರಮ ನೇಮಕಾತಿ ,ಅಗತ್ಯ ವಸ್ತುಗಳು ಬೆಲೆ ಏರಿಕೆ,ತೈಲ ಬೆಲೆ ಏರಿಕೆ, ಗ್ಯಾಸ್ ಬೆಲೆ ಹೆಚ್ಚಳದ ಬಗ್ಗೆ ಮಾಹಿತಿ ಕಲೆ ಹಾಕಿರುವ ಕಾಂಗ್ರೆಸ್ ನಾಯಕರು ಚುನಾವಣೆ ಅಖಾಡಕ್ಕೆ ಶೀಘ್ರದಲ್ಲೇ ಎಂಟ್ರಿಯಾಗತ್ತಿದ್ದಾ

ಇದನ್ನೂ ಓದಿ: ಜಮೀರ್ ಅಹ್ಮದ್ ವಿರುದ್ಧ ಎಸಿಬಿ ಎಫ್ಐಆರ್, ಶಾಸಕರಿಗೆ ಉರುಳಾಯ್ತಾ ಅಕ್ರಮ ಆಸ್ತಿ ಪ್ರ

ಸಿದ್ದು-ಡಿಕೆಶಿ ಸಮಾಲೋಚ

ಇಂದು ಡಿಕೆಶಿಗೆ ತಮ್ಮ ನಿವಾಸಕ್ಕೆ ಬರುವಂತೆ ಸಿದ್ದರಾಮಯ್ಯ ಆಹ್ವಾನ ನೀಡಿದ್ದರು. ಸಿದ್ದು ನಿವಾಸಕ್ಕೆ ಡಿಕೆಶಿ ಭೇಟಿ ನೀಡಿ, ಹಲವಾರು ವಿಚಾರಗಳ ಕುರಿತು ಚರ್ಚೆ ಮಾಡಿದ್ದಾರೆ. ಚರ್ಚೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆಶಿ, ಈ ತಿಂಗಳ 15 ರಂದು ಶಾಸಕರ ಸಭೆ ಇದೆ.  ಎಐಸಿಸಿ ಕೆಲವು ಕಾರ್ಯಕ್ರಮ ಕೊಟ್ಟಿದೆ. ನಿನ್ನೆ ಪದಾಧಿಕಾರಿಗಳು ಬಂದಿದ್ದರು. ಸಂಘಟನೆಯ ವಿಚಾರದಲ್ಲಿ ನಿನ್ನೆ ಸಿದ್ದರಾಮಯ್ಯ ಅವರು ಸಹ ಕೆಲವು ಸಲಹೆ ನೀಡಿದ್ದಾರೆ.  ನಿನ್ನೆ ಸಭೆಯ ಕೆಲ ಮಾಹಿತಿ ಯನ್ನು ಸಿದ್ದರಾಮಯ್ಯ ಅವರಿಗೆ ತಿಳಿಸಬೇಕಿತ್ತು ಎಂದಿದ್ದಾರೆ. ನೆ!ಕರಣ?ರೆ.?ಗ್ದೆ.ಗಳು!ರೆ.ಸಬೇಕಿತ್ತು ಎಂದಿದ್ದಾರೆ.

Post a Comment

Previous Post Next Post