ನಟ ವಿಕ್ರಮ್ ಅವರಿಗೆ ಹೃದಯಾಘಾತವಾಗಿದ್ದು, ಚೆನ್ನೈನ ಕಾವೇರಿ ಆಸ್ಪತ್ರಗೆ ದಾಖಲಿಸಲಾಗಿದೆ. ಅವರ ಆರೋಗ್ಯದ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ. ಆದರೆ ಇದರ ನಡುವೆ ಚಿತ್ರ ವಿಮರ್ಶಕರಾದ ರಮೇಶ್ ಬಾಲಾ ಅವರು ಮಾಡಿರುವ ಟ್ವೀಟ್ ವಿಕ್ರಮ್ ಅಭಿಮಾನಿಗಳಲ್ಲಿ ಅನುಮಾನ ಮೂಡುವಂತಾಗಿದೆ.
ತಮಿಳಿನ ಖ್ಯಾತ ಹೀರೋ (Tamil Hero) ವಿಕ್ರಮ್ ಹೃದಯಾಘಾತ (Vikram Heart attack) ದಿಂದ ಚೆನ್ನೈ (Chennai) ನ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಸದ್ಯದ ಸ್ಥಿತಿ ಇನ್ನಷ್ಟೇ ತಿಳಿಯಬೇಕಿದೆ. ತಮ್ಮ ನೆಚ್ಚಿನ ನಟ ಹೃದಯಾಘಾತ (Heart Attack) ದಿಂದ ಆಸ್ಪತ್ರೆ ಸೇರಿರುವುದರಿಂದ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಆದರೆ ಇದರ ನಡುವೆ ಟ್ವಿಟರ್ ನಲ್ಲಿ ವಿಕ್ರಮ್ ಅವರು ಬೇಗ ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು ಹಾರೈಸಿಕೊಳ್ಳುತ್ತಿದ್ದಾರೆ. ಜೊತೆಗೆ ಗಣ್ಯರು ಸಹ ಅವರ ಆರೋಗ್ಯದ ಅಫ್ಡೇಟ್ಗಳನ್ನು ನೀಡುತ್ತಿದ್ದಾರೆ. ಆದರೆ ಇಲ್ಲೇ ಒಮದು ಹೊಸ ಅನುಮಾನ ಮೂಡುವಂತಾಗಿದೆ. ಹೌದು, ಏಕೆಂದರೆ ಕೆಲವರು ವಿಕ್ರಮ್ ಅವರಿಗೆ ಹೃದಯಾಘಾತವಾಗಿದೆ ಎಂದು ಟ್ವೀಟ್ ಮಾಡುತ್ತಿದ್ದರೆ ಇತ್ತ ಚಿತ್ರ ವಿಮರ್ಶಕರಾದ ರಮೇಶ್ ಬಾಲಾ ಅವರು ವಿಕ್ರಮ್ ಅವರಿಗೆ ಜ್ವರ (Fever) ಎಂದು ಟ್ವೀಟ್ ಮಾಡಿದ್ದು ಹಲವು ಅಭಿಮಾನಿಗಳಲ್ಲಿ ಅನುಮಾನ ಮೂಡುವಂತಾಗಿದೆ
ವಿಕ್ರಮ್ಗೆ ಜ್ವರಾನಾ? ಹೃದಯಾಘಾತವಾ
ಹೌದು, ಇಂತಹದೊಂದು ಅನುಮಾನ ಇದೀಗ ವಿಕ್ರಮ್ ಅಭಿಮಾನಿಗಳಲ್ಲಿ ಮೂಡುತ್ತಿದೆ. ವಿಕ್ರಮ್ ಅವರು ಹೃದಯಾಘಾತವಾಗಿದೆ ಎಂದು ಎಲ್ಲಡೆ ಹರಿದಾಡುತ್ತಿದೆ. ಇದರ ನಡುವೆ ಚಿತ್ರ ವಿಮರ್ಶಕ ರಮೇಶ್ ಬಾಲಾ ಅವರ ಟ್ವೀಟ್ ಈ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇಷ್ಟಕ್ಕೂ ರಮೇಶ್ ಬಾಲಾ ಅವರು ಮಾಡಿರುವ ಟ್ವೀಟ್ ಈ ರೀತಿ ಆಗಿದ್ದು, ‘ನಟ ಚಿಯಾನ್ ವಿಕ್ರಮ್ ತೀವ್ರ ಜ್ವರದಿಂದ ಚೆನ್ನೈ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಜ್ವರ ಈಗ ಕಡಿಮೆಯಾಗಿದೆ. ಅವರು ಶೀಘ್ರವಾಗಿ ಮತ್ತು ಸಂಪೂರ್ಣ ಗುಣಮುಖರಾಗಲಿ ಎಂದು ಹಾರೈಸುತ್ತೇನೆ‘ ಎಂದು ಬರೆದುಕೊಂಡಿದ್ದಾರೆ
ಆದರೆ ಅನೇಕ ಸಿನಿಮಾ ಗಣ್ಯರು ಸೇರಿದಂತೆ ವಿಕ್ರಮ್ ಅವರ ಅಭಿಮಾನಿಗಳೂ ಸಹ ಚಿಯಾನ್ ವಿಕ್ರಮ್ ಅವರಿಗೆ ಹೃದಯಾಘಾತವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಹೀಗಾಗಿ ಅಭಿಮಾನಿಗಳಲ್ಲಿ ಹೊಸ ಗೊಂದಲ ಉಂಟಾಗಿದ್ದು, ತಮ್ಮ ಮೆಚ್ಚಿನ ನಟನಿಗೆ ನಿಜವಾಗಿಯೂ ಏನಾಗಿದೆ ಎಂದು ಅನುಮಾನ ಉಂಟಾಗಿದೆ. ಈ ಕುರಿತು ಸದ್ಯ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ
ಇದನ್ನೂ ಓದಿ: Get Well Soon Vikram: 56ರಲ್ಲೂ ಸಿಕ್ಕಾಪಟ್ಟೆ ಫಿಟ್ ಇದ್ದ ವಿಕ್ರಮ್! ತನ್ನ ಮಕ್ಕಳನ್ನೇ ಮೀರಿಸೋವಷ್ಟು ಹ್ಯಾಂಡ್ಸಮ್
ವಿಕ್ರಮ್ ಆರೋಗ್ಯದ ಬಗ್ಗೆ ಸಿಕ್ತು ಬಿಗ್ ಅಫ್ಡೇಟ್
ವಿಕ್ರಮ್ ಅವರ ಮ್ಯಾನೇಜರ್ ಸೂರ್ಯ ನಾರಾಯಣ್ ಅವರು ವಿಕ್ರಮ್ ಅವರ ಆರೋಗ್ಯದ ಕುರಿತು ಸ್ಪಷ್ಟನೆ ನೀಡಿದ್ದಾರೆ. ಅವರು ಈ ಕುರಿತು ಟ್ವೀಟ್ ಮಾಡಿದ್ದು, ವಿಕ್ರಮ್ ಅವರಿಗೆ ಯಾವುದೇ ರೀತಿಯ ಹೃದಯಾಘಾತವಾಗಿಲ್ಲ ಎಂದು ತಿಳಿಸಿದ್ದಾರೆ. ಟ್ವೀಟ್ ನಲ್ಲಿ ಅವರು ಈ ರೀತಿ ಬರೆದುಕೊಂಡಿದ್ದು, ‘ಆತ್ಮೀಯ ಅಭಿಮಾನಿಗಳು ಮತ್ತು ಹಿತೈಷಿಗಳೇ, ಚಿಯಾನ್ ವಿಕ್ರಮ್ ಅವರಿಗೆ ಎದೆಯಲ್ಲಿ ಸ್ವಲ್ಪ ಅಸ್ವಸ್ಥತೆ ಇತ್ತು ಮತ್ತು ಅದಕ್ಕಾಗಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಹೃದಯಾಘಾತವಾಗಿರಲಿಲ್ಲ. ಈ ರೀತಿಯ ಸುಳ್ಳು ವದಂತಿಗಳನ್ನು ಕೇಳಿ ನಮಗೆ ನೋವಾಗಿದೆ‘ ಎಂದು ಹೇಳಿದ್ದಾ
ಇನ್ನು, ಮುಂದುವರೆದು ಮತ್ತೊಂದು ಟ್ವೀಟ್ ಮಾಡಿರುವ ಅವರು, ‘ಈ ಸಮಯದಲ್ಲಿ ಕುಟುಂಬಕ್ಕೆ ಅಗತ್ಯವಿರುವುದು ಗೌಪ್ಯತೆ. ನಮ್ಮ ಪ್ರೀತಿಯ ಚಿಯಾನ್ ಈಗ ಚೆನ್ನಾಗಿದ್ದಾರೆ. ಒಂದು ದಿನದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ. ಈ ಹೇಳಿಕೆಯು ಸ್ಪಷ್ಟತೆಯನ್ನು ನೀಡುತ್ತದೆ ಎಂದು ನಾವು ಭಾವಿಸುತ್ತೇವೆ ಮತ್ತು ಸುಳ್ಳು ವದಂತಿಗಳನ್ನು ಹಬ್ಬಿಸಬೇಡಿ‘ ಎಂದು ಮನವಿ ಮಾಡಿಕೊಂಡಿದ್ದಾರೆ
ಸಂಜೆ ರಿಲೀಸ್ ಆಗಬೇಕಿದ್ದ ಸಿನಿಮಾದ ಟೀಸರ್
56 ವರ್ಷದ ವಿಕ್ರಮ್ ನಿನ್ನೆ ಸಂಜೆ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರ ಕುಟುಂಬಸ್ಥರು ಆಸ್ಪತ್ರೆಗೆ ದಅಖಲಿಸಿದ್ದರು. ವೈದ್ಯರು ಚಿಯಾನ್ ವಿಕ್ರಮ್ ಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇಂದು ಸಂಜೆ 6 ಗಂಟೆಗೆ ವಿಕ್ರಂ ತಮ್ಮ ಚಿತ್ರ ಪೊನ್ನಿಯಿನ್ ಸೆಲ್ವನ್ ನ ಟ್ರೇಲರ್ ಲಾಂಚ್ ಮಾಡಬೇಕಿತ್ತು. ಆದರೆ ಇದೀಗ ಅವರು ಟೀಸರ್ ಅನ್ನು ಲಾಂಚ್ ಮಾಡಲಿದ್ದಾರಾ? ಅಥವಾ ಇ್ಲಲವೇ? ಎಂಬ ಅನುಮಾನ ಮೂಡಿಸಿ
ಇದನ್ನೂ ಓದಿ: Vikram: ತಮಿಳಿನ ಖ್ಯಾತ ನಟ ವಿಕ್ರಮ್ಗೆ ಹೃದಯಾಘಾತ! ಆಸ್ಪತ್ರೆಗೆ ಶಿಫ್ಟ್, ಅಭಿಮಾನಿಗಳಿಗೆ
ವಿಕ್ರಮ್ ಅನ್ನಿಯನ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಅವರು ತಮಿಳು ಚಿತ್ರಗಳ ಜೊತೆಯಲ್ಲೇ ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲೂ ನಟಿಸಿದ್ದಾರೆ. ಇತ್ತೀಚೆಗೆ ವಿಕ್ರಮ್ ಹಾಗೂ ಅವರ ಕಿರಿಯ ಪುತ್ರ ಮೊಟ್ಟ ಮೊದಲ ಬಾರಿಗೆ ನಟಿಸಿದ್ದ ಮಹಾನ್ ಸಿನಿಮಾ ಸಖತ್ ಸೌಂಡ್ ಮಾಡಿತ್ತು. ಆತಂಕದೆ.: .ರೆ.: ಕೂಡ..?:.ನಿಮಾ ಸಖತ್ ಸೌಂಡ್ ಮಾಡಿತ್ತು.

Post a Comment