ಪ್ರಯಾಣಿಕರಿಗೆ ಅನುಕೂಲವಾಗುವಂತೆ ಇಂತಹ ಸಂದರ್ಭಗಳಲ್ಲಿ ಇಲಾಖೆ ಕೂಡ ಕೆಲವು ಕ್ರಮಗಳನ್ನು ತೆಗೆದುಕೊಳ್ಳುತ್ತವೆ. ಹೆಚ್ಚುವರಿಯಾಗಿ ರೈಲು, ಬಸ್ ಗಳನ್ನು ಬಿಡುವ ಮೂಲಕ ಅಡಚಣೆಯಾಗದಂತೆ ನೋಡಿಕೊಳ್ಳುತ್ತಾರೆ.
ದೇಶದಾದ್ಯಂತ ಸಂಭ್ರಮದಿಂದ ಎಲ್ಲರೂ ಒಟ್ಟುಗೂಡಿ ಆಚರಿಸುವ ಗಣೇಶ ಚತುರ್ಥಿಗೆ ಕೆಲವೇ ತಿಂಗಳು ಬಾಕಿ ಇದೆ. ಮುಂದಿನ ತಿಂಗಳು ಆಗಸ್ಟ್ ಕೊನೆಗೆ ಬರುವ ಹಬ್ಬಕ್ಕೆ ಪರ ಊರಿನಲ್ಲಿದ್ದವರು ಊರಿಗೆ ಬರಲು ಈಗಾಗ್ಲೇ ಬಸ್, ರೈಲು ಟಿಕೆಟ್ (Train Ticket) ಗಳನ್ನು ಬುಕ್ ಮಾಡುತ್ತಿದ್ದಾರೆ. ಗಣೇಶ ಹಬ್ಬದ (Ganesha Festival) ಅವಧಿಯಲ್ಲಿ ತಕ್ಷಣಕ್ಕೆ ಟಿಕೆಟ್ ಸಿಗುವುದು ತುಂಬಾನೇ ಕಷ್ಟ. ರೈಲಿನಲ್ಲಿ ಹೋಗುವವರು ಮೂರ್ನಾಲ್ಕು ತಿಂಗಳ ಹಿಂದೆಯೇ ತಮ್ಮ ಟಿಕೆಟ್ ಗಳನ್ನು ಬುಕ್ಕಿಂಗ್ (Ticket Booking) ಮಾಡಿಕೊಳ್ಳುತ್ತಾರೆ. ಅಷ್ಟರ ಮಟ್ಟಿಗೆ ಸೀಟ್ ಗಳು ಭರ್ತಿಯಾಗಿರುತ್ತವೆ. ಪ್ರಯಾಣಿಕರಿಗೆ ಅನುಕೂಲವಾಗುವಂತೆ ಇಂತಹ ಸಂದರ್ಭಗಳಲ್ಲಿ ಇಲಾಖೆ ಕೂಡ ಕೆಲವು ಕ್ರಮಗಳನ್ನು ತೆಗೆದುಕೊಳ್ಳುತ್ತವೆ. ಹೆಚ್ಚುವರಿಯಾಗಿ ರೈಲು, ಬಸ್ ಗಳನ್ನು ಬಿಡುವ ಮೂಲಕ ಅಡಚಣೆಯಾಗದಂತೆ ನೋಡಿಕೊಳ್ಳುತ್ತಾರೆ
ಮಂಗಳೂರಿಗೆ ಈಗಾಗ್ಲೇ ಹಬ್ಬದ ಪ್ರಯುಕ್ತ ವಿಶೇಷ ರೈಲು ಸೇವೆಯನ್ನು ಇಲಾಖೆ ಘೋಷಣೆ ಮಾಡಿದೆ. ಬೇರೆ ಕಡೆಯಿಂದ ಬರುವವರಿಗೆ ಅನಾನುಕೂಲವಾಗುವುದನ್ನು ತಪ್ಪಿಸಲು ಮತ್ತು ಗಣಪತಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ನೂಕುನುಗ್ಗಲು ನಿವಾರಿಸಲು ರೈಲ್ವೆ ಇಲಾಖೆಯು ಕೇಂದ್ರ ರೈಲ್ವೆಯ ಸಮನ್ವಯದೊಂದಿಗೆ ಗಣಪತಿ ಹಬ್ಬದ ಅಂಗವಾಗಿ ಹೆಚ್ಚುವರಿ ವಿಶೇಷ ರೈಲುಗಳನ್ನು ಪ್ರಾರಂಭಿಸಲು ಯೋಜಿಸಿದೆ. ಈ ವಿಶೇಷ ರೈಲುಗಳು ಆಗಸ್ಟ್ 13ರಿಂದಲೇ ಆರಂಭವಾಗುತ್ತ
ವಿಶೇಷ ರೈಲುಗಳು
*ರೈಲು ನಂ. 01153 ಲೋಕಮಾನ್ಯ ತಿಲಕ್ (ಟಿ)-ತೋಕೂರ್ ವಿಶೇಷ (ಪ್ರತಿ ನಿತ್ಯ), ಇದು ಲೋಕಮಾನ್ಯ ತಿಲಕ್ (ಟಿ) ನಿಂದ ರಾತ್ರಿ 10.15ಕ್ಕೆ, ಆಗಸ್ಟ್ 13 ರಿಂದ ಸೆಪ್ಟೆಂಬರ್ 11 ರವರೆಗೆ ಪ್ರತಿದಿನ ಹೊರಡಲಿದೆ. ರೈಲು ಮರುದಿನ ಸಂಜೆ 4.30ಕ್ಕೆ ತೋಕೂರ್ ತಲುಪಲಿ
*ರೈಲು ನಂ. 01154 ಥೋಕೂರ್-ಲೋಕಮಾನ್ಯ ತಿಲಕ್ (ಟಿ) ವಿಶೇಷ (ದೈನಂದಿನ) ತೋಕೂರಿನಿಂದ ಪ್ರತಿದಿನ ಆಗಸ್ಟ್ 14 ರಿಂದ ಸೆಪ್ಟೆಂಬರ್ 12 ರವರೆಗೆ ರಾತ್ರಿ 7.30ಕ್ಕೆ ಹೊರಡಲಿದೆ ಮತ್ತು ರೈಲು ಮರುದಿನ ಮಧ್ಯಾಹ್ನ 1.25ಕ್ಕೆ ಲೋಕಮಾನ್ಯ ತಿಲಕ್ (ಟಿ) ನಿಲ್ದಾಣ ತಲುಪಲಿ
ಇದನ್ನೂ ಓದಿ: Idgah Maidana: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶ ವಿಗ್ರಹ ಅಂಈ ರೈಲುಗಳು ಥಾಣೆ, ಪನ್ವೇಲ್, ರೋಹಾ, ಮಂಗಾಂವ್, ಖೇಡ್, ಚಿಪ್ಲುನ್, ಸವಾರ್ದಾ, ಸಂಗಮೇಶ್ವರ ರಸ್ತೆ, ರತ್ನಗಿರಿ, ಅಡವಳಿ, ರಾಜಾಪುರ ರಸ್ತೆ, ವೈಭವವಾಡಿ ರಸ್ತೆ, ಕಂಕಾವಲಿ, ಸಿಂಧುದುರ್ಗ, ಕುಡಾಲ್, ಸಾವಂತವಾಡಿ ರಸ್ತೆ, ತಿವಿಂ, ಕರ್ಮಾಲಿ, ಮಡಗಾಂವ್ ಜೂ., ಕಾರವಾರದಲ್ಲಿ ನಿಲ್ಲುತ್ತದೆ. , ಗೋಕರ್ಣ ರಸ್ತೆ, ಕುಮಟಾ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರಸ್ತೆ ಬೈಂದೂರು (ಎಚ್), ಕುಂದಾಪುರ, ಉಡುಪಿ, ಮುಲ್ಕಿ ಮತ್ತು ಸುರತ್ಕಲ್ ನಿಲ್ದಾಣಗಳ ಮೂಲಕ ಹಾದು ಹೋಗುತ್ತದೆ
ಟಿಕೆಟ್ ಗಳನ್ನು ಮುಂಗಡ ಕಾಯ್ದಿರಿಸಬ
ರೈಲು ಸಂಖ್ಯೆಗಾಗಿ ಬುಕಿಂಗ್‌ಗಳು. 01153 / 01154 ಜುಲೈ 9 ರಿಂದ ಎಲ್ಲಾ ಪ್ರಯಾಣಿಕರ ಮೀಸಲಾತಿ ವ್ಯವಸ್ಥೆಗಳು (PRS), ಇಂಟರ್ನೆಟ್ ಮತ್ತು IRCTC ವೆಬ್‌ಸೈಟ್‌ಗಳಲ್ಲಿ ತೆರೆಯುತ್ತದೆ. ಇಲ್ಲಿ ಪ್ರಯಾಣಿಕರು ಆಗಸ್ಟ್ 13ರಿಂದ ಆರಂಭವಾಗುವ ರೈಲುಗಳಿಗೆ ಮುಂಚಿತವಾಗಿ ತಮ್ಮ ಟಿಕೆಟ್ ಗಳನ್ನು ಮುಂಗಡ ಕಾಯ್ದಿರಿಸಬಹು
214 ವಿಶೇಷ ರೈಲು
ಇನ್ನೂ ಕೇವಲ ಮಂಗಳೂರಿಗೆ ಮಾತ್ರವಲ್ಲದೇ, ಬೇರೆ ಬೇರೆ ಕಡೆ ಭಾರತೀಯ ರೈಲ್ವೆಯು 214 ಗಣಪತಿ ಹಬ್ಬದ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಈ ಬಗ್ಗೆ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. "ಗಣಪತಿ ಬಪ್ಪಾ ಮೋರಿಯಾ, 214 ರೈಲುಗಳನ್ನು ಗಣಪತಿ ಉತ್ಸವ 2022ರ ಅಂಗವಾಗಿ ಯೋಜಿಸಲಾಗಿದೆ" ಎಂದು ಅವರು ಟ್ವೀಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ
ಪ್ರಸ್ತುತ ಗಣೇಶ ಹಬ್ಬದ ಪ್ರಯುಕ್ತ ಘೋಷಿಸಿರುವ ರೈಲು
*ಮುಂಬೈ ಮತ್ತು ಸಾವಂತವಾಡಿ ನಡುವೆ ದೈನಂದಿನ ವಾಪಸಾತಿ ಸೇವೆ
* ಗೋವಾ ಮೂಲಕ ಮುಂಬೈ ಮತ್ತು ಮಂಗಳೂರು (ಥೋಕೂರ್) ನಡುವೆ ದೈನಂದಿನ ವಾಪಸಾತಿ ಸೇವೆ
*ನಾಗ್ಪುರ ಮತ್ತು ಗೋವಾ ನಡುವೆ ವಾರಕ್ಕೊಮ್ಮೆ ರಾತ್ರಿಯ ಎಕ್ಸ್ಪ್ರೆಸ್
*ಪುಣೆ ಮತ್ತು ಕುಡಾಲ್ ನಡುವಿನ ಸಾಪ್ತಾಹಿಕ ವಿಶೇಷತೆ
*ಪುಣೆ - ಥಿವಿಮ್ - ಪನ್ವೆಲ್ - ಕುಡಾಲ್ - ಪುಣೆ ವಾರಾಂತ್ಯದ ಸರ್ಕ್ಯೂಟ್ ಸೇವೆ
ಇದನ್ನೂ ಓದಿ: Chitradurga: ದಲಿತ, ಹಿಂದುಳಿದ ಮಠಾಧೀಶರ ಜೊತೆ RSS ಮುಖ್ಯಸ್ಥ ಮೋಹನ್ ಭಾಗವತ್ ಸಂವಾ
IRCTC ಮತ್ತು ಇತರ ಚಾನಲ್‌ಗಳ ಹೊರತಾಗಿಯೂ ಈ ಎಲ್ಲಾ ವಿಶೇಷ ರೈಲುಗಳಿಗೆ ಜುಲೈ 04, 2022ರಿಂದ ಕಾಯ್ದಿರಿಸುವಿಕೆಗಳು ತೆರೆದಿರುತ್ತವೆ. ಮುಂದಿನ ರೈಲುಗಳನ್ನು ಘೋಷಿಸಿದಾಗ ವೇಳಾ ಪಟ್ಟಿಯನ್ನು ನವೀಕರಿಸಲಾಗುತ್ತದೆ. ದ!ಗಳುಗಳುರೈಲುಗಳುಗಳುಗಳು .ಗಳುದು.ಹುದು.ಗಡಿದೆ.ದೆ.ವೆ..ಳನ್ನು ಘೋಷಿಸಿದಾಗ ವೇಳಾ ಪಟ್ಟಿಯನ್ನು ನವೀಕರಿಸಲಾಗುತ್ತದೆ.

Post a Comment