75 ವರ್ಷ ಬದುಕುವುದೇ ಕಷ್ಟ, ನಾವೆಲ್ಲಾ ಇರುತ್ತೇವೋ, ಇಲ್ಲವೋ, ವ್ಯಕ್ತಿ ಪೂಜೆ ಸಿದ್ದರಾಮಯ್ಯಗೆ ಇಷ್ಟ ಇದೆಯೋ, ಇಲ್ಲವೋ, ಆದರೆ ಕೆಲವರು ಅದನ್ನು ಮಾಡುತ್ತಲೇ ಇರುತ್ತಾರೆ. ಚುನಾವಣಾ ವರ್ಷದಲ್ಲಿ ಕಾರ್ಯಕರ್ತರಿಗೆ ಹಾಗೂ ಜನರಿಗೆ ಕೆಟ್ಟ ಸಂದೇಶ ಹೋಗದಂತೆ ಕಾರ್ಯಕ್ರಮ ಮಾಡಬೇಕು ಎಂದು ಡಿ.ಕೆ ಸುರೇಶ್ ಹೇಳಿದ್ದಾರೆ
ಬೆಂಗಳೂರು (ಜು.13): ಸಿದ್ದರಾಮಯ್ಯ ಅಮೃತ ಮಹೋತ್ಸವ ಹಿನ್ನಲೆ ಇಂದು ಅರಮನೆ ಮೈದಾನದಲ್ಲಿ ಪೂರ್ವಭಾವಿ ಸಭೆ (Preliminary Meeting) ನಡೆಯಿತು. ಸಭೆಯಲ್ಲಿ ಸಿದ್ದರಾಮಯ್ಯ (Siddaramaiah), ಆರ್ ವಿ ದೇಶಪಾಂಡೆ, ಜಿ ಪರಮೇಶ್ವರ್, ಈಶ್ವರ ಖಂಡ್ರೆ ಸೇರಿ ಹಲವು ನಾಯಕರು ಭಾಗಿಯಾಗಿದ್ರು. ಆದ್ರೆ ಸಭೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಗೈರಾಗಿದ್ರು. ಡಿಕೆ ಶಿವಕುಮಾರ್ ಗೈರಿನ ಬಗ್ಗೆ ಯಾರು ಅನ್ಯತಾ ಭಾವಿಸಬೇಡಿ, ಪೂರ್ವಭಾವಿ ಸಭೆ ಆಗಿರೋದ್ರಿಂದ ಗೈರಾಗಿದ್ದಾರೆ. ಸಿದ್ದರಾಮಯ್ಯ ಅವ್ರಿಗೂ ಬರಬೇಕೋ ಬೇಡವೋ ಎಂಬ ಗೊಂದಲ ಇತ್ತು ಎಂದು ಸಭೆಯಲ್ಲಿ ಬಿ.ಎಲ್ ಶಂಕರ್ ಹೇಳಿದ್ರು
ಡಿಕೆಶಿಗೆ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಟಾಂ
ಸಿದ್ದರಾಮಯ್ಯ ಅಮೃತ ಮಹೋತ್ಸವ ಸಿದ್ದತಾ ಸಭೆಯಲ್ಲಿ ಡಿ.ಕೆ ಶಿವಕುಮಾರ್ಗೆ ಮಾಜಿ ಸಚಿವ ಹೆಚ್.ಸಿ. ಮಹದೇವಪ್ಪ ಟಾಂಗ್ ಕೊಟ್ಟಿದ್ದಾರೆ. ಹುಟ್ಟು ಹಬ್ಬ ಆಚರಣೆಗೆ ಸಿದ್ದರಾಮಯ್ಯ ಒಪ್ಪಿರಲಿಲ್ಲ. ಅವರ ಸ್ನೇಹಿತರು ಸೇರಿ ಒತ್ತಡ ಹಾಕಿದ ಮೇಲೆ ಒಪ್ಪಿಕೊಂಡಿದ್ದಾರೆ. ನಾವು ಸಿದ್ದರಾಮಯ್ಯಗೆ ಹೊಗಳು ಭಟ್ಟರಲ್ಲ, ವ್ಯಕ್ತಿ ಪೂಜೆಯೂ ಮಾಡುವವರೂ ಅಲ್ಲ. ಸದ್ಯ ರಾಜಕೀಯ ಪರಿಸ್ಥಿತಿ ಗಳ ಬಗ್ಗೆ ಚರ್ಚಿಸಲು ಒಂದು ಅವಕಾಶ ಸಿಗುತ್ತೆ. ಆ ಕಾರಣಕ್ಕೆ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ನನಗೆ ವ್ಯಕ್ತಿ ಪೂಜೆಗಿಂತ, ಪಕ್ಷ ಪೂಜೆ ಮುಖ್ಯ ಎಂದಿದ್ದ ಡಿ.ಕೆ ಶಿವಕುಮಾರ್ಗೆ ಮಹದೇವಪ್ಪ ತಿರುಗೇಟು ಕೊಟ್ರು
ಸಿದ್ದರಾಮೋತ್ಸವ ಪ್ರಚಾರಕ್ಕೆ ಡಿಕೆ ಸುರೇಶ್ ಟಾಂ
ಬಳಿಕ ಮಾತಾಡಿ ಸಂಸದ ಹಾಗೂ ಸಮಿತಿ ಉಪಾಧ್ಯಕ್ಷ ಡಿ.ಕೆ ಸುರೇಶ್, 75 ನೇ ವರ್ಷದ ಆಚರಣೆ ಮಾಡಬೇಕು ಎಂದು ಅವರ ಅಭಿಮಾನಿಗಳು, ಹಿತೈಷಿಗಳು ತೀರ್ಮಾನ ಮಾಡಿದ್ದಾರೆ. ಈ ಹುಟ್ಟು ಹಬ್ಬ ಕಾಕತಾಳಿಯಂತೆ ಭಾರತ ದೇಶದ ಅಮೃತ ಮಹೋತ್ಸವ ನಡೆಯುತ್ತಿದೆ. ಇವರೆಡನ್ನು ಜೊತೆಗೆ ಬಿಂಬಿಸುತ್ತಾ ಕಾರ್ಯಕ್ರಮ ಮಾಡುವುದು ಸೂಕ್ತ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ನಮಗೆ ಇಷ್ಟ ಇದೆಯೋ, ಇಲ್ಲವೋ ಆದ್ರೆ ಮಾಧ್ಯಮಗಳು ಸಿದ್ದರಾಮೋತ್ಸವ ಎಂದು ಪ್ರಚಾರ ಮಾಡುತ್ತಿ
ಇದನ್ನೂ ಓದಿ: PSI Recruitment Scam: ವಿಧಾನಸೌಧ ವ್ಯಾಪಾರ ಸೌಧವಾಗಿದೆ; ಸರ್ಕಾರಕ್ಕೆ ಪ್ರಿಯಾಂಕ್ ಖರ್ಗೆ ಪ್ರಶ್ನೆಗಳ ಸುರಿ
75 ವರ್ಷ ಬದುಕೋದೇ ಕಷ್ಟ
ನಮ್ಮ ನಾಯಕರ ಹುಟ್ಟುಹಬ್ಬ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಇದನ್ನ ನಿರಾಕರಿಸಿದರೇ ಲಾಭವೇನು ಇಲ್ಲ. ಏನು ಬಿಂಬಿಸಲು ಹೋಗುತ್ತಿದ್ದೇವೆ, ಯಾರದ್ದೋ ನಾಯಕತ್ವ ಬಿಂಬಿಸಲು ಹೋಗುತ್ತಿದ್ದೇವೆ ಎಂಬುದಲ್ಲ. 75 ವರ್ಷ ಬದುಕುವುದೇ ಕಷ್ಟ, ನಾವೆಲ್ಲಾ ಇರುತ್ತೇವೋ, ಇಲ್ಲವೋ, ವ್ಯಕ್ತಿ ಪೂಜೆ ಸಿದ್ದರಾಮಯ್ಯಗೆ ಇಷ್ಟ ಇದೆಯೋ, ಇಲ್ಲವೋ, ಆದರೆ ಕೆಲವರು ಅದನ್ನು ಮಾಡುತ್ತಲೇ ಇರುತ್ತಾರೆ. ಚುನಾವಣಾ ವರ್ಷದಲ್ಲಿ ಕಾರ್ಯಕರ್ತರಿಗೆ ಹಾಗೂ ಜನರಿಗೆ ಕೆಟ್ಟ ಸಂದೇಶ ಹೋಗದಂತೆ ಕಾರ್ಯಕ್ರಮ ಮಾಡಬೇಕು. ಇದರಿಂದ ಪಕ್ಷ ಲಾಭ ಆಗಬೇಕು, ಆ ರೀತಿ ಕಾರ್ಯಕ್ರಮ ಮಾಡಬೇಕು ಎಂದು ಸಿದ್ದರಾಮಯ್ಯ ಆಪ್ತರಿಗೆ ಡಿ.ಕೆ. ಸುರೇಶ್ ಟಾಂಗ್ ಕೊಟ್ಟಿದ್ದಾ
ಇದನ್ನೂ ಓದಿ: Timber Smugglers: ಸ್ಲೀಪರ್ ಬಸ್ ನಲ್ಲಿ ತೇಗದ ಮರ ಕಳ್ಳಸಾಗಾಣಿಕೆ; ಅಸಲಿ ಜೀವನದ ‘ಪುಷ್ಪಾ’ ಬಗ್ಗೆ ಅಧಿಕಾರಿಯ ಫನ್ನಿ ಟ್ವೀ
ವೇದಿಕೆಯಲ್ಲಿ ಸಿದ್ದು-ಪರಂ ತಮಾಷೆ
ನಾನು ಅವರ ಜೊತೆ 8 ವರ್ಷ ಕೆಪಿಸಿಸಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಅವರನ್ನ ಸಂಪೂರ್ಣ ಅರ್ಥ ಮಾಡಿಕೊಳ್ಳದೇ ಇದ್ದರೂ ಸಹ , ಶೇಕಡಾ 50ರಷ್ಟು ಅದರೂ ಅರ್ಥ ಮಾಡಿಕೊಂಡಿದ್ದೇನೆ ಎಂದು ಪರಮೇಶ್ವರ್ ಹೇಳ್ತಿದ್ದಂತೆ ಇಲ್ಲ ಇನ್ನೂ ಜಾಸ್ತಿ ಅರ್ಥ ಮಾಡಿಕೊಂಡಿದ್ದೀರಾ ಎಂದು ಭಾಷಣದ ಮಧ್ಯೆ ಪ್ರವೇಶಿಸಿ ಹೇಳಿದ್ರು. ಇನ್ನು ಜಾಸ್ತಿನಾ ಸರ್? ಎಂದು ಪರಮೇಶ್ವರ್ ತಮಾಷೆ ಮಾಡಿದ್ರು. ಬಳಿಕ ಭಾಷಣ ಮುಂದುವರಿಸಿದ ಅವ್ರು ಸಿದ್ದರಾಮಯ್ಯ ಅವರು ಡಾ. ಅಂಬೇಡ್ಕರ್ ಅವರ ಆಶಯವನ್ನ ಮೈಗೂಡಿಸಿಕೊಂಡು ಜೀವನದಲ್ಲಿ ಅಳವಡಿಸಿಕೊಂಡು ನಡೆದುಕೊಂಡು ಬಂದಿದ್ದಾರೆ ಎಂದ್ರು ಮಾತುಟ್ರೆ.ಮಳೆವೆ.ಗ್.ಗ್.ಬಂದಿದ್ದಾರೆ ಎಂದ್ರು

Post a Comment