Bengaluru: ಬಂದಿದ್ದು ಮನೆಕೆಲಸಕ್ಕೆ, ಮಾಡಿದ್ದು ದರೋಡೆ! ಈ ಕಳ್ಳಿಯರು ಸಿಕ್ಕಿಬಿದ್ದಿದು ಹೇಗೆ ನೋಡಿ


 ದಂಪತಿಗಳಿಗೆ ಒಟ್ಟಿನಲ್ಲಿ ಸಂಜೆ ಮನೆಗೆ ಬರುವ ಹೊತ್ತಿಗೆ ಅವರ ಮನೆ ಸ್ವಚ್ಛವಾಗಿದ್ದರಷ್ಟೇ ಸಾಕು ಅಂತ ಅವರ ಅಭಿಪ್ರಾಯ. ಆದರೆ ಕೆಲವೊಮ್ಮೆ ಈ ಮನೆ ಕೆಲಸ ಮಾಡುವ ಮಹಿಳೆಯರು ಮನೆಯನ್ನು ಸ್ವಚ್ಛ ಮಾಡುವ ಬದಲಿಗೆ ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು, ಹಣವನ್ನು ಮತ್ತು ಚಿನ್ನಾಭರಣಗಳನ್ನು ಒಂದು ಬಿಡದಂತೆ ತೆಗೆದುಕೊಂಡು ಹೋಗಿ ಮನೆಯನ್ನು ಖಾಲಿ ಮಾಡಿ ಹೋಗಿರುತ್ತಾರೆ.

ಈಗಂತೂ ಈ ಕಳ್ಳರು ಯಾವ ವೇಷದಲ್ಲಿ ನಮ್ಮ ಮನೆಗೆ ಬರುತ್ತಾರೆ ಎಂದು ಊಹಿಸುವುದಕ್ಕೂ ಸಾಧ್ಯವಾಗುವುದಿಲ್ಲ. ಹೌದು ಈ ಮಹಾನಗರಗಳಲ್ಲಿ ಗಂಡ ಮತ್ತು ಹೆಂಡತಿ ಇಬ್ಬರು ಕೆಲಸಕ್ಕೆ (Work) ಹೋಗುವವರು ತಮ್ಮ ಮನೆಯ ಬೀಗದಕೈಯನ್ನು ತಮ್ಮ ಮನೆಯಲ್ಲಿ ಕೆಲಸ ಮಾಡುವಂತಹ ಮಹಿಳೆಯರಿಗೆ (Women's) ಕೊಟ್ಟು ಹೋಗುವುದನ್ನು ನಾವು ನೋಡಿರುತ್ತೇವೆ. ದಂಪತಿಗಳಿಗೆ ಒಟ್ಟಿನಲ್ಲಿ ಸಂಜೆ ಮನೆಯ ಬರುವ ಹೊತ್ತಿಗೆ ಅವರ ಮನೆ ಸ್ವಚ್ಛವಾಗಿದ್ದರಷ್ಟೇ ಸಾಕು ಅಂತ ಅವರ ಅಭಿಪ್ರಾಯ. ಆದರೆ ಕೆಲವೊಮ್ಮೆ ಈ ಮನೆ ಕೆಲಸ (Home Work) ಮಾಡುವ ಮಹಿಳೆಯರು ಮನೆಯನ್ನು ಸ್ವಚ್ಛ ಮಾಡುವ ಬದಲಿಗೆ ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು, ಹಣವನ್ನು ಮತ್ತು ಚಿನ್ನಾಭರಣಗಳನ್ನು (Gold) ಒಂದು ಬಿಡದಂತೆ ತೆಗೆದುಕೊಂಡು ಹೋಗಿ ಮನೆಯನ್ನು ಖಾಲಿ ಮಾಡಿ ಹೋಗಿರುತ್ತಾರೆ

ಮನೆಕೆಲಸಕ್ಕೆ ಬಂದು ಕಳ್ಳತನ ಮಾಡುವ ಮಹಿಳೆಯ

ಇಂತಹ ಎಷ್ಟೋ ಘಟನೆಗಳು ನಮ್ಮ ಸುತ್ತಮುತ್ತಲೂ ನಡೆಯುತ್ತಿದ್ದರೂ ಸಹ ಇನ್ನೂ ಜನರಿಗೆ ಇದರ ಬಗ್ಗೆ ಪೂರ್ಣ ಪ್ರಮಾಣದ ಅರಿವು ಆದಂತಿಲ್ಲ ಅಂತ ಅನ್ನಿಸುತ್ತದೆ. ಹೌದು.. ಇಲ್ಲಿ ನಡೆದಿರುವ ಈ ಘಟನೆ ನೋಡಿದರೆ ನಿಮಗೆ ಅರ್ಥವಾಗುತ್ತದೆ. ಮುಂಬೈ ಮೂಲದ ಮೂವರು ಮನೆಕೆಲಸ ಮಾಡುವ ಮಹಿಳೆಯರು ಸಾಮಾಜಿಕ ಮಾಧ್ಯಮವಾದ 'ಫೇಸ್‌ಬುಕ್' ನಲ್ಲಿ ತಾವು ಮನೆ ಕೆಲಸವನ್ನು ಮಾಡುತ್ತೇವೆ ಅಂತ ಜಾಹೀರಾತನ್ನು ನೀಡಿ, ನಂತರ ಮನೆಗಳಿಗೆ ಕೆಲಸಕ್ಕೆ ಅಂತ ಬಂದು ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿದ್ದವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ

ಮುಂಬೈ ಮೂಲದ ಕಳ್ಳಿಯರು ಅರೆಸ್ಟ್ 

ಈ ಪೊಲೀಸರ ಬಲೆಗೆ ಸಿಕ್ಕಿಬಿದ್ದಿರುವ ಮೂವರು ಮಹಿಳೆಯರನ್ನು ಮುಂಬೈ ನಿವಾಸಿಗಳೆಂದು ಹೇಳಲಾಗುತ್ತಿದ್ದು, ಇವರನ್ನು ಪ್ರಿಯಾಂಕಾ ರಾಜೇಶ್ ಮೊಗ್ರೆ (29), ಮಹಾದೇವಿ (26) ಮತ್ತು ವನಿತಾ (37) ಎಂದು ಗುರುತಿಸಲಾಗಿದೆ. ಪೊಲೀಸರು ಈ ಮೂವರು ಆರೋಪಿಗಳಿಂದ 250 ಗ್ರಾಂ ಚಿನ್ನ ಮತ್ತು 100 ಗ್ರಾಂ ಬೆಳ್ಳಿಯನ್ನು ಸಹ ವಶಪಡಿಸಿಕೊಂಡಿದ್ದಾರೆ

'ರೆಫರ್ ಹೌಸ್ ಮೇಡ್ಸ್' ನಕಲಿ ಫೇಸ್‌ಬುಕ್ ಪುಟ ರ

ಪೊಲೀಸ್ ಮೂಲಗಳ ಪ್ರಕಾರ, ಈ ಮೂವರು 'ರೆಫರ್ ಹೌಸ್ ಮೇಡ್ಸ್' ಎಂಬ ನಕಲಿ ಫೇಸ್‌ಬುಕ್ ಪುಟವನ್ನು ರಚಿಸಿದ್ದಾರೆ. ಮನೆಗೆಲಸದವರಿಗಾಗಿ ಹುಡುಕುವ ಜನರ ಪ್ರಶ್ನೆಗಳನ್ನು ಸ್ವೀಕರಿಸಿದ ನಂತರ, ಈ ಮೂವರು ಮಹಿಳೆಯರಲ್ಲಿ ಒಬ್ಬರು ಮನೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತಿದ್ದರು ಮತ್ತು ನಂತರ ಎಲ್ಲವನ್ನೂ ನೋಡಿಕೊಂಡು ಮನೆಯಲ್ಲಿರುವಂತಹ ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿದ್ದರು ಎಂದು ಹೇಳಲಾಗಿದೆ

ಇದನ್ನೂ ಓದಿ:  Compound Collapse: ಯಮರೂಪಿ ಮಳೆಗೆ ಬೆಂಗಳೂರಲ್ಲಿ ದುರಂತ, ಶಿಥಿಲಾವಸ್ಥೆಯಲ್ಲಿದ್ದ ಕಾಂಪೌಂಡ್ ಕುಸಿದು ಇಬ್ಬರ ಸಾ

ಇತ್ತೀಚಿನ ಪ್ರಕರಣವೊಂದರಲ್ಲಿ, ಮಹಾದೇವಿ ನಕಲಿ ಆಧಾರ್ ಕಾರ್ಡ್ ಅನ್ನು ನೀಡಿ ಮೇ 5 ರಂದು ಅರವಿಂದ್ ಎಂಬವರ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಮರುದಿನವೇ, ಅರವಿಂದ್ ಅವರ ಕುಟುಂಬವು ಯಾವುದೋ ಕಾರಣಕ್ಕಾಗಿ ಹೊರಗೆ ಹೋದಾಗ ಮಹಾದೇವಿ ಮತ್ತು ಆಕೆಯ ಸಹಚರರು ಮನೆಯಿಂದ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದರು. ಈ ಅಪರಾಧ ಮಾಡಿದ ಸ್ವಲ್ಪ ಸಮಯದ ನಂತರ, ಎಲ್ಲಾ ಅಪರಾಧಿಗಳು ಬೆಂಗಳೂರಿನಿಂದ ಮುಂಬೈಗೆ ಓಡಿ ಹೋ

ಈ ಹಿಂದೆಯೂ ಹಲವಾರು ಬಂಧನಕ್ಕೊಳಗಾದ ಕಳ್ಳಿಯರು

"ಈ ಮೂವರು ಮಹಿಳೆಯರನ್ನು ಮುಂಬೈನಲ್ಲೂ ಅನೇಕ ಬಾರಿ ಬಂಧಿಸಲಾಗಿದೆ ಮತ್ತು ಜಾಮೀನಿನ ಮೇಲೆ ಹೊರ ಬಂದ ನಂತರ ಅವರು ಕಳ್ಳತನವನ್ನು ಹಾಗೆಯೇ ಮುಂದುವರಿಸಿದ್ದಾರೆ. ವನಿತಾ ವಿರುದ್ಧ 37 ಕಳ್ಳತನ ಪ್ರಕರಣಗಳಿವೆ. ಆದರೆ ಮಹಾದೇವಿ ಮತ್ತು ಪ್ರಿಯಾಂಕಾ ವಿರುದ್ಧ ಎಷ್ಟು ಪ್ರಕರಣಗಳು ಬಾಕಿ ಉಳಿದಿವೆ ಎಂಬುದನ್ನು ನಾವು ಇನ್ನೂ ಕಂಡು ಹಿಡಿಯಬೇಕಾಗಿದೆ. ವಜ್ರದ ನೆಕ್ಲೇಸ್, ವಜ್ರದ ಉಂಗುರ ಮತ್ತು ಚಿನ್ನದ ಸರವನ್ನು ಕದ್ದ ಆರೋಪದ ಮೇಲೆ ವನಿತಾ ಅವರನ್ನು 2019 ರಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದರು” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ

"ಮುಂಬೈನಲ್ಲಿ, ಈ ಆರೋಪಿಗಳು ಮನೆಗಳು ಮತ್ತು ಅಪಾರ್ಟ್ಮೆಂಟ್ ಗಳ ಭದ್ರತಾ ಸಿಬ್ಬಂದಿಗೆ ಕೆಲಸ ಹುಡುಕಲು ಸಹಾಯ ಮಾಡಿದರೆ ಅವರ ಮೊದಲ ತಿಂಗಳ ಸಂಬಳವನ್ನು ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಅವರು ಸೇರಿದ ಸ್ವಲ್ಪ ಸಮಯದ ನಂತರ, ಅವರು ಮನೆಯಲ್ಲಿ ಯಾರೂ ಇಲ್ಲದ ಸಮಯಕ್ಕಾಗಿ ಕಾಯುತ್ತಿದ್ದರು ಮತ್ತು ನಂತರ ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿದ್ದರು. ಅವರನ್ನು ಅನೇಕ ಬಾರಿ ಬಂಧಿಸಲಾಯಿತು. ಮುಂಬೈನಲ್ಲಿ ಕಳ್ಳತನ ಮಾಡುವುದು ಅವರಿಗೆ ಕಷ್ಟವಾದಾಗ, ಅವರು ಬೆಂಗಳೂರಿಗೆ ಬಂದಿಳಿ

ಇದನ್ನೂ ಓದಿ:   Evening Digest: ಮಳೆಗೆ ಇಬ್ಬರ ಸಾವು, ಈ ವಾರ ಸ್ಯಾಂಡಲ್‌ವುಡ್‌ನಲ್ಲಿ ಸಿನಿ ಹಬ್ಬ! ಇಂದಿನ ಟಾಪ್‌ ಸುದ್ದಿಗಳು ಇಲ್ಲಿ

ಈ ಮೂವರು ಮಹಿಳೆಯರು ರೈಲಿನಲ್ಲಿ ಬೆಂಗಳೂರಿಗೆ ಬಂದು, ಹೋಟೆಲ್ ಗಳಲ್ಲಿ ಉಳಿದು ಕೊಂಡು ಮನೆಗಳಿಂದ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿ ಮತ್ತೆ ಮುಂಬೈಗೆ ಮರಳುತ್ತಿದ್ದರು. ತನಿಖೆಯ ಸಮಯದಲ್ಲಿ, ಈ ಗ್ಯಾಂಗ್ ಕದ್ದ ಮೊಬೈಲ್ ಫೋನ್ ಬಳಸಿ ಫೇಸ್‌ಬುಕ್ ಪುಟವೊಂದನ್ನು ನಿರ್ವಹಿಸುತ್ತಿದೆ ಎಂದು ಪೊಲೀಸರು ಕಂಡು ಕೊಂಡಿದ್ದಾರೆ. ವೆದರು..ದರು.ವು.ಚನೆ. .ರು .ಪೊಲೀಸರು ಕಂಡು ಕೊಂಡಿದ್ದಾರೆ.

Post a Comment

Previous Post Next Post