ಸ್ವಂತ ಚಿಕ್ಕಪ್ಪನಿಗೆ ಮಥೀನ್ ಖಾನ್ ಚಾಕು ಇರಿದಿದ್ದಾನೆ. ರಾಜಕೀಯವಾಗಿ ನಮ್ಮನ್ನು ಬೆಳೆಯೋಕೆ ಬಿಡ್ತಿಲ್ಲ ಅಂತ ದಾಳಿ ನಡೆಸಿದ್ದಾನೆ ಎನ್ನಲಾಗ್ತಿದೆ. ಮೇಲ್ನೋಟಕ್ಕೆ ಆಸ್ತಿ ವಿವಾದವೇ ಜಗಳಕ್ಕೆ ಮುಖ್ಯ ಕಾರಣ ಎಂದು ಶಂಕಿಸಲಾಗಿದೆ.ಬೆಂಗಳೂರು: ನಿನ್ನೆ ಚಾಕು ಇರಿತಕ್ಕೆ ಒಳಗಾಗಿದ್ದ ಮಾಜಿ ಕಾರ್ಪೊರೇಟರ್ (BBMP Former Corporator) ಪತಿ ಅಯೂಬ್ ಖಾನ್ (Ayub Khan Murder) ಇಂದು ಸಾವನ್ನಪ್ಪಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಅಯೂಬ್ ಖಾನ್ ವಿಕ್ಟೋರಿಯಾ ಆಸ್ಪತ್ರೆಯ (Victoria Hospital) ಐಸಿಯುನಲ್ಲಿ ಕೊನೆಯುಸಿರೆಳೆದರು. ಆಯೂಬ್ ಖಾನ್ ಸಾವನ್ನಪ್ಪಿರುವ ಹಿನ್ನೆಲೆ ವಿಕ್ಟೋರಿಯಾ ಆಸ್ಪತ್ರೆ ಬಳಿ ಪೊಲೀಸರಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮೂರು KSRP ತುಕಡಿ ಹಾಗೂ ನೂರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಆಸ್ತಿ ವಿಚಾರವಾಗಿ ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ. ಬಿಬಿಎಂಪಿ ಚುನಾವಣೆ ದೃಷ್ಟಿಯಿಂದ ಈ ಕೊಲೆ ನಡೆದಿದೆ ಎಂದು ಆಯೂಬ್ ಖಾನ್ ಬೆಂಬಲಿಗರು ಆರೋಪಿಸುತ್ತಿದ್ದಾರೆ. ಚಿಕ್ಕಪ್ಪನ ಮೇಲೆ ಅಣ್ಣನ ಮಗ ಮಥೀನ್ ಖಾನ್ ದಾಳಿ ನಡೆಸಿದ್ದಾಬೆ ಎನ್ನಲಾಗ್ತಿದೆ. ಸ್ವಂತ ಚಿಕ್ಕಪ್ಪನಿಗೆ ಮಥೀನ್ ಖಾನ್ ಚಾಕು ಇರಿದಿದ್ದಾನೆ. ರಾಜಕೀಯವಾಗಿ ನಮ್ಮನ್ನು ಬೆಳೆಯೋಕೆ ಬಿಡ್ತಿಲ್ಲ ಅಂತ ದಾಳಿ ನಡೆಸಿದ್ದಾನೆ ಎನ್ನಲಾಗ್ತಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರೋ ಚಾಮರಾಜಪೇಟೆ ಪೊಲೀಸರು ಪ್ರಮುಖ ಆರೋಪಿ ಮಥೀನ್ ಖಾನ್ ಹಾಗೂ ಇತರೆ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ
ನಜೀಮಾ ಪತಿ ಆಯೂ
ಬಿಬಿಎಂಪಿ ವಾರ್ಡ್ 139 ಮಾಜಿ ಕಾರ್ಪೋರೇಟರ್ ನಜೀಮಾ ಪತಿ ಆಯೂಬ್ ಮೇಲೆ ನಿನ್ನೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿತ್ತು. ಆಯೂಬ್ ಖಾನ್ ಕುಟುಂಬಸ್ಥರೇ ಹಲ್ಲೆ ನಡೆಸಿದ್ದರು. ಅಣ್ಣನ ಮಕ್ಕಳೇ ಭೀಕರ ಹಲ್ಲೆ ನಡೆಸಿದ್ದರು. ರಕ್ತದ ಮಡುವಿನಲ್ಲಿ ಬಿದ್ದದ್ದ ಆಯೂಬ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಗಿತ್ತು. ಸ್ಥಳಕ್ಕೆ ಕಾಟನ್ ಪೇಟೆ ಪೊಲೀಸರು ದೌಡಾಯಿಸಿದ್ದರು. ಆಸ್ತಿ ವಿವಾದದ ಹಿನ್ನಲೆ ಹಲ್ಲೆ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ
ಆರೋಪಿ ಮಥೀನ್ ಖಾ
ಹೊಟ್ಟೆಗೆ ಚಾಕುವಿನಿಂದ ಇ
ಮೊದಲು ಏಷಿಯನ್ ಆಸ್ಪತ್ರೆಗೆ ದಾಖಲಿಸಿದ್ದ ಆಯೂಬ್ ಅವರನ್ನು ನಂತರ ವಿಕ್ಟೋರಿಯಾ ಆಸ್ಪತ್ರಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆಯೂಬ್ ಕೊನೆಯುಸಿರೆಳೆದಿದ್ದಾರೆ. ಹೊಟ್ಟೆಗೆ ಚಾಕುವಿನಿಂದ ಇರಿದಿದ್ದರಿಂದ ಆಯೂಬ್ ಮಾರಣಾಂತಿಕವಾಗಿ ಗಾಯಗೊಂಡಿದ್ದರು. ಮುಂದಿನ ತನಿಖೆ ಮಾಡಲಾಗ್ತಿದೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್ ನಿಂಬರ್ಗಿ ನ್ಯೂಸ್ 18 ಗೆ ಮಾಹಿತಿ ನೀಡಿದ್ದಾ
ಆಸ್ತಿ ವಿವಾದವೇ ಕೊಲೆ ಕಾರಣವಾಯಿತೇ
ಮೇಲ್ನೋಟಕ್ಕೆ ಆಸ್ತಿ ವಿವಾದವೇ ಜಗಳಕ್ಕೆ ಮುಖ್ಯ ಕಾರಣ ಎಂದು ಶಂಕಿಸಲಾಗಿದೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಅಣ್ಣನ ಮಗನೊಂದಿಗೆ ಪದೇ ಪದೇ ಜಗಳ ನಡೆಯುತ್ತಿತ್ತು. ನಿನ್ನೆ ಸಂಜೆ ಮನೆಗೆ ಹೋಗಿದ್ದ ಅಯೂಬ್ ಅಣ್ಣನ ಮಗನಿಂದ ಜಗಳ ನಡೆದಿತ್ತು. ಜಗಳ ವಿಕೋಪಕ್ಕೆ ಹೋಗಿ ಚಾಕುವಿನಿಂದ ಹೊಟ್ಟೆಗೆ ಇರಿಯಲಾಗಿದೆ ಎಂದು ತಿಳಿದು ಬಂದಿ
ಮಸೀದಿ ಪ್ರೆಸಿಡೆಂಟ್ ಹುದ್ದೆಗಾಗಿ ಜ
ಕೊಲೆಗೆ ಕಾರಣವಾಗಿದ್ದು ಮಸೀದಿಯೊಂದರ ಅಧ್ಯಕ್ಷಗಿರಿ ಪಟ್ಟಕ್ಕಾಗಿ ಎಂಬ ವಿಷಯವೂ ಕೇಳಿ ಬರುತ್ತಿದೆ. ಕಳೆದ ಕೆಲ ವರ್ಷಗಳಿಂದ ಟಿಪ್ಪುನಗರದ ಖುದಾಯತ್ ಮಸೀದಿಗೆ ಪ್ರೆಸಿಡೆಂಟ್ ಆಗಿದ್ದ ಆಯೂಬ್ ಖಾನ್. ಈ ಹುದ್ದೆ ಮೇಲೆ ಅಯೂಬ್ ಖಾನ್ ಸಹೋದರ ಪ್ಯಾರೂಖಾನ್ ಮಗ ಮಥೀನ್ ಖಾನ್ ಕಣ್ಣಿಟ್ಟಿದ್ದ. ಮಸೀದಿಯ ಪ್ರೆಸಿಡೆಂಟ್ ಹುದ್ದೆ ಬಿಟ್ಟುಕೊಡುವಂತೆ ಅಯೂಬ್ ಖಾನ್ ಬಳಿ ಹಲವು ಬಾರಿ ಕೇಳಿದ್ದ. ಇದನ್ನ ನಿರಾಕರಿಸುತ್ತ ಬಂದಿದ್ದ ಮೃತ ಅಯೂಬ್ ಖಾನ್. ಇದೇ ವಿಚಾರವಾಗಿ ಕಳೆದ ಜುಲೈ 12 ರಂದು ಅಯೂಬ್ ಖಾನ್ ಜೊತೆ ಆರೋಪಿ ಜಗಳವಾಡಿದ್ದ. ತನ್ನ ಮಗ ಸಿದ್ದಿಕ್ ಖಾನ್ ನನ್ನ ಮಸೀದಿಗೆ ಪ್ರೆಸಿಡೆಂಟ್ ಮಾಡಲು ಮೃತ ಅಯೂಬ್ ಖಾನ್ ಬಯಸಿದ್ದ. ಕಳೆದ ಆರು ತಿಂಗಳಿನಿಂದ ಇದೇ ವಿಚಾರಕ್ಕೆ ಮೃತ ಅಯೂಬ್ ಹಾಗೂ ಮಥೀನ್ ನಡುವೆ ಜಗಳ ನಡೆದಿತ್ತು. ನೆನ್ನೆ ರಾತ್ರಿ 7:30 ರ ಸುಮಾರಿಗೆ ಟಿಪ್ಪುನಗರದ ಮಸೀದಿಯಿಂದ ನಮಾಜ್ ಮುಗಿಸಿ ಬರೋ ವೇಳೆ ಆಯೂಬ್ ಗೆ ಚಾಕು ಇರಿಯಲಾಗಿದೆ ಎಂದು ಮೃತ ಆಯೂಬ್ ಖಾನ್ ಪತ್ನಿ ನಜೀಮಾ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಚಾಮರಾಜಪೇಟೆ ಪೊಲೀಸರಿಂದ ಎಫ್.ಐ.ಆರ್ ದಾಖಲಿಸಿಕೊಂಡು, ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಗಳ ದೆ.?ರೆ.ರಿತನ್.ಬ್.ಡುಕಾಟ ನಡೆಸಿದ್ದಾರೆ.

Post a Comment