BBMP: ಬೆಂಗಳೂರಲ್ಲಿ ವಾರ್ಡ್​ಗಳ ಸಂಖ್ಯೆ 243ಕ್ಕೆ ಏರಿಕೆ; ವಾರ್ಡ್ ನಂ.​ 55ಕ್ಕೆ ಪುನೀತ್​ ರಾಜ್​ಕುಮಾರ್ ಹೆಸರು


 ಸಾರ್ವಜನಿಕರ ಸಲಹೆ ಸೂಚನೆ ಮೇರೆಗೆ 15 ದಿನಗಳ ಕಾಲವಕಾಶ ನೀಡಿದ್ದ ಸರ್ಕಾರ ಇದೀಗ ಅಂತಿಮವಾಗಿ ಬೆಂಗಳೂರು ವಾರ್ಡ್ ಗಳ ಸಂಖ್ಯೆ 243ಕ್ಕೆ ಏರಿಕೆ ಮಾಡಿದೆ ಆದೇಶ ಹೊರಡಿಸಿದೆ

 ಬಿಬಿಎಂಪಿ (BBMP) ಎಲೆಕ್ಷನ್ ನಡೆಸಲು ಕೋರ್ಟ್ ಆದೇಶ ನೀಡುತ್ತಿದ್ದಂತೆ ಸರ್ಕಾರ ಫುಲ್ ಆ್ಯಕ್ಟಿವ್ ಆಗಿದೆ. ಇದೀಗ ಬಿಬಿಎಂಪಿ ವಾರ್ಡ್ ಮರು ವಿಂಗಡಣೆ ಮಾಡಿ ಸರ್ಕಾರ ಅಂತಿಮ ಆದೇಶ ಪ್ರಕಟಿಸಿದೆ. 198 ಇದ್ದ ವಾರ್ಡ್ ಗಳನ್ನು (Ward) ಡಿ ಲಿಮಿಟೇಷನ್ (Delimitation) ಮಾಡಿ‌ 243 ವಾರ್ಡ್ಗಳಾಗಿ ವಿಂಗಡಿಸಿದೆ. ಸಾರ್ವಜನಿಕ ವಲಯದಿಂದ ಬಂದಿದ್ದ 2,500ಕ್ಕೂ ಅಧಿಕ ಆಕ್ಷೇಪಣಾ ಅರ್ಜಿ ವಿಲೇವಾರಿ ಮುಕ್ತಾಯಗೊಂಡಿದೆ. ಸಾರ್ವಜನಿಕರಿಂದ ಸಲಹೆ, ಸೂಚನೆಗಳನ್ನು ಅಳವಡಿಸಿ ಸಣ್ಣ ಪುಟ್ಟ ಬದಲಾವಣೆ ಮಾಡಿ ಡಿ ಲಿಮಿಟೇಷನ್ ಮಾಡಿ ರಾಜ್ಯ ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸಿದೆ. ನಟ ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ (Puneeth Rajkumar) ಅವರಿಗೆ ಮತ್ತೊಮ್ಮೆ ಸರ್ಕಾರ ಗೌರವ ಸಲ್ಲಿಸಿದೆ.  ಬಿಬಿಎಂಪಿ ವಾರ್ಡ್ಗಳ ಮರು ವಿಂಗಡಣೆ ಮಾಡಿ, ವಾರ್ಡ್ ನಂಬರ್ 55ಕ್ಕೆ ದಿವಂಗತ ನಟ ಪುನೀತ್ ರಾಜ್ ಕುಮಾರ್ ಹೆಸರು ನಾಮಕರಣ ಮಾಡಿದೆ

ಬೆಂಗಳೂರು ವಾರ್ಡ್ಗಳ ಸಂಖ್ಯೆ 243ಕ್ಕೆ ಏ

ಸರ್ಕಾರ 29 ಜನವರಿ 2021ರಲ್ಲಿ ಡಿ ಲಿಮಿಟೇಷನ್ ಕಮಿಟಿ ರಚಿಸಿತ್ತು ಈ ಸಮಿತಿಯಿಂದ 09 ಜೂನ್ 2022 ರಂದು ಸರ್ಕಾರಕ್ಕೆ ವಾರ್ಡ್ ಮರುವಿಂಗಡಣಾ ಪಟ್ಟಿ ಸಲ್ಲಿಕೆ ಮಾಡಿತ್ತು. ಬಳಿಕ‌ ಸಾರ್ವಜನಿಕರ ಸಲಹೆ ಸೂಚನೆ ಮೇರೆಗೆ 15 ದಿನಗಳ ಕಾಲವಕಾಶ ನೀಡಿದ್ದ ಸರ್ಕಾರ ಇದೀಗ ಅಂತಿಮವಾಗಿ ಬೆಂಗಳೂರು ವಾರ್ಡ್ ಗಳ ಸಂಖ್ಯೆ 243ಕ್ಕೆ ಏರಿಕೆ ಮಾಡಿದೆ ಆದೇಶ ಹೊರಡಿಸಿದೆ. ರಾಜ್ಯ ಪತ್ರದಲ್ಲಿ 2011ರ ಜನಗಣತಿ ಪ್ರಕಾರ ಡಿ ಲಿಮಿಟೇಷನ್ ಮಾಡಿರುವುದಾಗಿ ಸರ್ಕಾರ ಹೇಳಿತ್ತು.  ಬಿಬಿಎಂಪಿ ಅಧಿನಿಯಮ‌ 2020ರ ಕಲಂ 7ರ ಅಡಿಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್ ವಿಂಗಡಣೆ

ವಾರ್ಡ್ ನಂಬರ್ 55ಕ್ಕೆ ಪವರ್ ಸ್ಟಾರ್ ಪುನೀತ್ ಹೆ

ನಟ ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಗೆ ಮತ್ತೊಮ್ಮೆ ಸರ್ಕಾರ ಗೌರವ ಸಲ್ಲಿಸಿದೆ.  ಬಿಬಿಎಂಪಿ ವಾರ್ಡ್ಗಳ ಮರು ವಿಂಗಡಣೆ ಮಾಡಿ, ವಾರ್ಡ್ ನಂಬರ್ 55ಕ್ಕೆ ದಿವಂಗತ ನಟ ಪುನೀತ್ ರಾಜ್ ಕುಮಾರ್ ಹೆಸರು ನಾಮಕರಣ ಮಾಡಿದೆ. ಡಿ ಲಿಮಿಟೇಷನ್ ಅಂತಿಮಗೊಳಿಸಿ ಹೊರಡಿಸಿದ ರಾಜ್ಯ ಪತ್ರದಲ್ಲಿ ಈ ಬಗ್ಗೆ ಉಲ್ಲೇಖ ಮಾಡಲಾಗಿದೆ. ವಾರ್ಡ್ ಸಂಖ್ಯೆ 55 ಈ ಮೊದಲು ಕಾವೇರಿ ನಗರ ಆಗಿತ್ತು. ಇದೀಗ ಕಾವೇರಿ ನಗರದ ಹೆಸರು ಬದಲಿಸಿ ಪುನೀತ್ ರಾಜ್ ಕುಮಾರ್ ವಾರ್ಡ್ ಎಂದು ನಾಮಕರಣ ಮಾಡಲಾಗಿ

ಇದನ್ನೂ ಓದಿ: Bengaluru: ಬಿಷಪ್ ಕಾಟನ್, ಸೇಂಟ್ ಜಾನ್ಸ್ ಶಾಲೆಗಳ ಪ್ರಾಂಶುಪಾಲರು ಸಸ್ಪೆಂ

ಮೋದಿ ಗಾರ್ಡನ್ ಹೆಸರು ಬದಲಾ

ಜೊತೆಗೆ ವಾರ್ಡ್ 77ನೇ ವಾರ್ಡ್ಗೆ ಹಳೇಯ ಹೆಸರನ್ನೇ ಇಟ್ಟು  ಸರ್ಕಾರ ಅಂತಿಮಗೊಳಿಸಿದೆ. ಬಿಬಿಎಂಪಿ ಡಿ ಲಿಮಿಟೇಷನ್ ಸಮಿತಿ ಸಲ್ಲಿಸಿದ್ದ ಪಟ್ಟಿಯಲ್ಲಿ 77 ವಾರ್ಡ್ ಅನ್ನು ಮೋದಿ ಗಾರ್ಡನ್ ಎಂದು ಹೆಸರು ಬದಲಾವಣೆ ಮಾಡಲಾಗಿದೆ. ಈಗ ಸರ್ಕಾರ ಹೊರಡಿಸಿದ ರಾಜ್ಯ ಪತ್ರದಲ್ಲಿ ಮೋದಿ ಗಾರ್ಡನ್ ಹೆಸರು ಬದಲಿಗೆ ಹಳೆಯ ಹೆಸರು ಅಂತಿಮ ದೇವರ ಜೀವನಹಳ್ಳಿ ಎಂದೇ 77ನೇ ವಾರ್ಡ್ ಗೆ  ಸರ್ಕಾರ ಹೆಸರು ಫೈನಲ್ ಮಾಡಿ

ಇದನ್ನೂ ಓದಿ: Single Use Plastic Ban: ಬೆಂಗಳೂರಿಗರೇ ಅಲರ್ಟ್, ಪ್ಲಾಸ್ಟಿಕ್ ಕವರ್ ನಿಮ್ಮ ಕೈಯಲ್ಲಿದ್ದರೆ ಹಾಕ್ತಾರೆ ದಂ

ಕೆಂಗೇರಿ ಉಪನಗರ ವಾರ್ಡ್ ಬದಲು ಕೆಂಗೇರಿ ವಾ

ಜನರ ಆಕ್ಷೇಪಕ್ಕೆ ಮಣಿದ ಸರ್ಕಾರದಿಂದ ಡಿ ಲಿಮಿಟೇಷನ್ ನಲ್ಲಿ ಕೆಂಗೇರಿ ವಾರ್ಡ್ ನಲ್ಲೂ ಬದಲಾವಣೆ ಮಾಡಿದೆ.  ಕೆಂಗೇರಿ ವಾರ್ಡ್ ಬದಲು ಕೆಂಗೇರಿ ಉಪನಗರ ವಾರ್ಡ್ ಎಂದು ಕರಡು ಪ್ರತಿಯಲ್ಲಿತ್ತು. ಇದೀಗ ಮತ್ತೆ ವಾಪಸ್ ಕೆಂಗೇರಿ ವಾರ್ಡ್ ಅಂತಾನೇ ಉಲ್ಲೇಖ ಮಾಡಲಾಗಿದೆ. ಈ ಹಿಂದೆ ಕೆಂಗೇರಿ ವಾರ್ಡ್ ಹೆಸರು ತೆಗೆದಿದ್ದಕ್ಕೆ ಭಾರೀ ವಿರೋಧ ಕೇಳಿ ಬಂದಿತ್ತು. ಸಾಕಷ್ಟು ಪ್ರತಿಭಟನೆಗಳೂ ನಡೆದಿದ್ವು. ಇದೀಗ ಕೆಂಗೇರಿ ಉಪನಗರ ವಾರ್ಡ್ ತೆಗೆದು ಹಳೆ ಹೆಸರು ಕೆಂಗೇರಿ ವಾರ್ಡ್ ಎಂದು  ಅಂತಿಮಗೊಳಿಸಲಾಗಿದೆ. ರ್ಡ್ಡ!ದೆ.ವಣೆಡ್ದೆ.ಸರುರಿಕೆದು ಅಂತಿಮಗೊಳಿಸಲಾಗಿದೆ.

Post a Comment

Previous Post Next Post