ಕೇಂದ್ರ ಸರಕಾರದ ಸಿಎಎ, ಎನ್.ಆರ್.ಸಿ ಕಾಯ್ದೆ ವಿವಾದದ ಬಳಿಕ ಉಗ್ರರ ಸ್ಲೀಪರ್ ಸೆಲ್ ಎಂದೇ ಗುರುತಿಸಲ್ಪಟ್ಟಿರುವ ಮಂಗಳೂರಿನಲ್ಲಿ ಮತ್ತೆ ಉಗ್ರರ ಚಟುವಟಿಕೆಗಳು (Terrorist activity) ಆರಂಭಗೊಂಡಿದೆಯೋ ಎನ್ನುವ ಸಂಶಯಗಳು ಮೂಡಲಾರಂಭಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಾಡುಪ್ರದೇಶಗಳಲ್ಲಿ ದೇಶದಲ್ಲಿ ನಿಷೇಧವಿರುವ ಸ್ಯಾಟಲೈಟ್ (Sate light) ಫೋನ್ ಗಳ ಬಳಕೆಯಾಗುತ್ತಿರುವ ಮಾಹಿತಿ ಇದೀಗ ಮತ್ತೆ ಕೇಂದ್ರ ಗುಪ್ತಚರ (Intelligence) ಇಲಾಖೆಯ ಗಮನಕ್ಕೆ ಬಂದಿದೆ. ಅಲ್ಲದೆ ಮಂಗಳೂರು ಮತ್ತು ಕೇರಳವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕೆಲವು ಗೂಡಂಗಡಿಗಳು ಉಗ್ರರಿಗೆ ಮಾಹಿತಿ ನೀಡುವ, ಶಸ್ತ್ರಾಸ್ತ್ರಗಳನ್ನು ದಾಸ್ತಾನಿಡುವ ಕೇಂದ್ರಗಳಾಗಿ ರೂಪುಗೊಳ್ಳುತ್ತಿವೆ ಎನ್ನುವ ಮಾಹಿತಿಯನ್ನು ಗುಪ್ತಚರ ಇಲಾಖೆ ಹೊರಹಾಕಿದೆ.
ಮಂಗಳೂರಲ್ಲೇ ಬಾಂಬ್ ತಯಾರಿ
ಉಗ್ರರ ಸ್ಲೀಪರ್ ಸೆಲ್ ಎಂದು ಗುರುತಿಸಲ್ಪಟ್ಟಿರುವ ಮಂಗಳೂರಿನಲ್ಲಿ ಇಂಡಿಯನ್ ಮುಜಾಹಿದೀನ್ ಸಂಘಟನೆಯ ರಿಯಾಝ್ ಭಟ್ಕಳ್ ಆದಿಯಾಗಿ ಹಲವಾರು ಉಗ್ರರು ತನ್ನ ಕಾರ್ಯಾಚರಣೆಯನ್ನು ನಡೆಸಿದ್ದರು. ಮಂಗಳೂರಿನಲ್ಲೇ ತಯಾರಾದ ಬಾಂಬ್ ಗಳು ದೇಶದ ವಿವಿಧೆಡೆಗಳಲ್ಲಿ ನಡೆದ ಸ್ಫೋಟಗಳಲ್ಲಿ ಬಳಸಲಾಗಿದೆ ಎನ್ನುವ ಸತ್ಯವೂ ಈಗಾಗಲೇ ಬಹಿರಂಗಗೊಂಡಿದೆ. ಈ ನಡುವೆ ಇದೀಗ ಇಂಥಹುದೇ ಒಂದು ಸ್ಫೋಟಕ ಮಾಹಿತಿಯನ್ನು ಕೇಂದ್ರ ಗುಪ್ತಚರ ಇಲಾಖೆ ಹೊರಹಾಕಿದ್ದು, ಆತಂತಕ್ಕೆ ಕಾರಣವಾಗಿದೆ
ಕಡಲ ನಗರಿಯಲ್ಲಿ ಮತ್ತೆ ಉಗ್ರರ ಸಪ್ಪಳ ಕೇಳಿಸಲಿದೆಯೇ ಎನ್ನುವ ಸಂಶಯಗಳು ಮೂಡಲಾರಂಭಿಸಿದೆ. ಬಹುತೇಕ ಎಲ್ಲಾ ನಟೋರಿಯಸ್ ಉಗ್ರ ಸಂಘಟನೆಗಳ ಸ್ಲೀಪರ್ ಸೆಲ್ ಎಂದೇ ಗುರುತಿಸಿಕೊಂಡಿರುವ ಮಂಗಳೂರಿನಲ್ಲೇ ದೇಶದ ವಿವಿಧೆಡೆಗಳಲ್ಲಿ ನಡೆದ ಸ್ಪೋಟಗಳ ಬಾಂಬ್ ತಯಾರಿಯಾಗುತ್ತಿತ್ತು ಅನ್ನೋದು ಈಗಾಗಲೇ ಬಹಿರಂಗಗೊಂಡ ಸತ್ಯವೂ ಆಗಿದೆ. ಇಂಡಿಯನ್ ಮುಜಾಹಿದೀನ್ ಸಂಘಟನೆಯ ರಿಯಾಜ್ ಭಟ್ಕಲ್ , ಇಕ್ಬಾಲ್ ಭಟ್ಕಳ ಇದೇ ಮಂಗಳೂರಿನಲ್ಲಿ ವರ್ಷಗಳ ಕಾಲ ತಂಗಿದ್ದು, ದೇಶದೆಲ್ಲೆಡೆ ನಡೆದ ಸ್ಪೋಟದ ಪ್ಲಾನ್ ತಯಾರಿಸಿಕೊಂಡಿದ್ದ
ಉಗ್ರರಿಗೆ ಸಹಕಾರಿ ಸ್ಲೀಪರ್
ಈ ಉಗ್ರರಿಗೆ ಸಹಕಾರಿಯಾಗುವಂತಹ ವ್ಯಕ್ತಿಗಳೇ ಸ್ಲೀಪರ್ ಸೆಲ್ ಗಳಾಗಿದೆ. ಈ ಸ್ಲೀಪರ್ ಸೆಲ್ ಗಳು ಯಾವ ರೂಪದಲ್ಲೂ ಇರಬಹುದಾಗಿದ್ದು, ಸೇಲ್ಸ್ ಮ್ಯಾನ್, ಬೀದಿ ಬದಿ ವ್ಯಾಪಾರಿಯೂ ಆಗಿರಬಹುದು. ತಮ್ಮ ಬಾಸ್ ನಿಂದ ಬರುವ ಸೂಚನೆಯ ಮೇರೆಗೆ ಈ ಸ್ಲೀಪರ್ ಸೆಲ್ ಗಳು ನಿರ್ದಿಷ್ಟ ಸಂದರ್ಭಕ್ಕಾಗಿ ಕಾಯುವ ಹಾಗೂ ಅಗತ್ಯ ಬಿದ್ದಾಗ ಬಾಂಬ್ ಸ್ಪೋಟದಂತಹ ಇಲ್ಲವೇ ಇತರ ಗಲಭೆಗಳಂತಹ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತದೆ. ತಮಗೆ ವಹಿಸಿದ ಟಾಸ್ಕ್ ಅನ್ನು ಪೂರ್ಣಗೊಳಿಸಲು ವರ್ಷಗಟ್ಟಲೆಯೂ ಕಾಯುವ ಈ ಸೆಲ್ ಗಳು ಮೇಲ್ನೋಟಕ್ಕೆ ಸಾಮಾನ್ಯರಂತೆ ಕಂಡರೂ ಇವರ ಅಜೆಂಡಾ ಮಾತ್ರ ಆತನ ಮುಖ್ಯಸ್ಥನ ಆಜ್ಞೆಯನ್ನು ಪಾಲಿಸುವುದೊಂದೇ ಆಗಿರುತ್ತ
ಮಂಗಳೂರಿನಲ್ಲಿ ಇಂಥಹ ಹಲವು ಸೆಲ್ ಗಳು ಈ ಹಿಂದೆ ಕಾರ್ಯಾಚರಿಸುತ್ತಿದ್ದು, ಉಳ್ಳಾಲ, ಚೆಂಬುಗುಡ್ಡೆ, ಅತ್ತಾವರ ಮೊದಲಾದ ಕಡೆಗಳಲ್ಲಿ ಪೋಲೀಸರು ದಾಳಿ ನಡೆಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ತಾವಿರುವ ಪ್ರದೇಶದ ಪ್ರತಿಯೊಂದು ಇಂಚಿಂಚಿನ ಮಾಹಿತಿಯನ್ನು ಕಲೆ ಹಾಕುವಲ್ಲೂ ಈ ಸ್ಲೀಪರ್ ಸೆಲ್ ಗಳು ಪರಿಣಿತವಾಗಿದ್ದು, ಒರ್ವ ಗುಪ್ತಚರನ ರೀತಿಯಲ್ಲಿ ಇದು ಕಾರ್ಯಾಚರಿಸುತ್ತ
ರಾಷ್ಟ್ರೀಯ ಹೆದ್ದಾರಿಯ ಅಕ್ಕ-ಪಕ್ಕ ಗೂಡಂಗಡಿಗಳ ಬಳ
ಇದೀಗ ಈ ಸಾಲಿಗೆ ಮಂಗಳೂರು ಮತ್ತು ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಹೆಚ್ಚಾಗಿ ಕಾರ್ಯಾರಂಭಿಸಿರುವ ಗೂಡಂಗಡಿಗಳೂ ಸೇರ್ಪಡೆಗೊಂಡಿದೆ ಎನ್ನುವ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದೆ. ಕೇರಳದಿಂದ ಈಗಾಗಲೇ ಹಲವು ಯುವಕರು ಉಗ್ರ ಸಂಘಟನೆಗಳಿಗೆ ನಿಯುಕ್ತಿಗೊಂಡಿದ್ದು, ಈ ಉಗ್ರರಿಗೆ ಮಾಹಿತಿ ನೀಡುವ ಮತ್ತು ಉಗ್ರ ಚಟುವಟಿಕೆ ನಡೆಸಲು ಬೇಕಾದ ಶಸ್ತ್ರಾಸ್ತಗಳ ಪೂರೈಕೆ ಮತ್ತು ದಾಸ್ತಾನಿಗೆ ಈ ಗೂಡಂಗಡಿಗಳು ಬಳಕೆಯಾಗುತ್ತಿವೆ ಎನ್ನುವ ಮಾಹಿತಿ ಲಭ್ಯವಾಗಿ
ರಾತ್ರಿ ಸಮಯದಲ್ಲಿ ಇಂಥಹ ಗೂಡಂಗಳಿಗಳ ಬಳಿ ಐಷಾರಾಮಿ ಕಾರುಗಳು ನಿಲ್ಲುವುದನ್ನೂ ಗುಪ್ತಚರ ಇಲಾಖೆ ಗಮನಿಸಿದ್ದು, ಈ ಬಗ್ಗೆ ಈಗಾಗಲೇ ಇಲಾಖೆ ತನಿಖೆಯನ್ನು ಆರಂಭಿಸಿದೆ. ಕೇಂದ್ರ ಸರಕಾರದ ಸಿಎಎ ಹಾಗೂ ಎನ್.ಆರ್.ಸಿ ವಿರುದ್ಧ ಮಂಗಳೂರಿನಲ್ಲಿ ನಡೆದ ಭಾರೀ ಪ್ರತಿಭಟನೆಗಳ ಜೊತೆಗೇ ಈ ಸ್ಲೀಪರ್ ಸೆಲ್ ಗಳೂ ಆಕ್ಟೀವ್ ಆಗಿರೋದರ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ. ಕೇಂದ್ರ ಸರಕಾರದ ವಿರುದ್ಧ ಭಾರೀ ಆಕ್ರೋಶ ಭುಗಿಲೆಲೆದ್ದಿರುವ ಈ ಸಮಯದಲ್ಲಿ ಉಗ್ರ ಸಂಘಟನೆಗಳಿಗೆ ಸಪೋರ್ಟ್ ದೊರಕುವ ಉದ್ದೇಶದಿಂದಲೂ ಈ ಸ್ಲೀಪರ್ ಸೆಲ್ ಗಳು ತಮ್ಮ ಇರುವಿಕೆಯನ್ನು ಸಾಬೀತುಪಡಿಸಲು ದುಷ್ಕೃತ್ಯಗಳಲ್ಲಿ ಕೈ ಹಾಕುವ ಸಾಧ್ಯತೆಗಳೂ ಇದೆ ಎನ್ನುವುದು ಗುಪ್ತಚರ ಇಲಾಖೆಯ ಅನುಮಾನವಾಗಿ
ಈ ನಡುವೆ ದಕ್ಷಿಣಕನ್ನಡ ಹಾಗು ಚಿಕ್ಕಮಗಳೂರು ಜಿಲ್ಲೆಯನ್ನು ಆವರಿಸಿಕೊಂಡ ದಟ್ಟಾರಣ್ಯಗಳಲ್ಲಿ ನಿಷೇಧಿತ ಸ್ಯಾಟಲೈಟ್ ಫೋನ್ ಗಳು ಮತ್ತೆ ಬಳಕೆಯಾಗುತ್ತಿರುವ ಬಗ್ಗೆಯೂ ಗುಪ್ತಚರ ಇಲಾಖೆ ಮಾಹಿತಿ ಸಂಗ್ರಹಿಸಿದೆ.ದೆ.ದೆ.ಕೆದೆದೆ.ಸೆಲ್ರು..ಕೆ ಮಾಹಿತಿ ಸಂಗ್ರಹಿಸಿದೆ.

Post a Comment