IND vs SA: ಅಬ್ಬರಿಸಿದ ಹೆನ್ರಿಕ್ ಕ್ಲಾಸೆನ್, ಟೀಂ ಇಂಡಿಯಾಗೆ ಸತತ 2ನೇ ಸೋಲು ದಕ್ಷಿಣ ಆಫ್ರಿಕಾ ತಂಡ 18.2 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 149 ರನ್ ಗಳಿಸುವ ಮೂಲಕ 4 ವಿಕೆಟ್​ಗಳ ಜಯ ದಾಖಲಿಸಿತು. ಮೂಲಕ ಸೌತ್​ ಆಫ್ರಿಕಾ ತಂಡ 5 ಪಂದ್ಯಗಳ ಸರಣಿಯಲ್ಲಿ 2-0 ಅಂತರದ ಮುನ್ನಡೆಯನ್ನು ಸಾಧಿಸಿದೆ.


  ಭಾರತ ಮತ್ತು ದಕ್ಷಿಣ (IND vs SA) ಆಫ್ರಿಕಾ ನಡುವಿನ 5 ಪಂದ್ಯಗಳ ಟಿ20ಐ ಸರಣಿ ಆರಂಭವಾಗಿದೆ. ಸರಣಿಯ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬೌಮಾ (Temba Bavuma) ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಈ ಮೂಲಕ ಮೊದಲು ಬ್ಯಾಟಿಂಗ್ ಮಾಡಿದ ರಿಷಭ್ ಪಂತ್ (Rishabh Pant) ನಾಯಕತ್ವದ ಟಿಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 148 ರನ್ ಗಳ ಸಾಧಾರಣ ಮೊತ್ತ ಕಲೆಹಾಕಿತು. ಈ ಮೊತ್ತ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ 18.2 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 149 ರನ್ ಗಳಿಸುವ ಮೂಲಕ 4 ವಿಕೆಟ್ಗಳ ಜಯ ದಾಖಲಿಸಿತು. ಮೂಲಕ ಸೌತ್ ಆಫ್ರಿಕಾ ತಂಡ 5 ಪಂದ್ಯಗಳ ಸರಣಿಯಲ್ಲಿ 2-0 ಅಂತರದ ಮುನ್ನಡೆಯನ್ನು ಸಾಧಿಸಿದೆ.

ಸಾಧಾರಣ ಮೊತ್ತ ಕಲೆಹಾಕಿದ ಟೀಂ ಇಂಡಿ

 ಇನ್ನು, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 148 ರನ್ ಗಳ ಸಾಧಾರಣ ಮೊತ್ತ ಕಲೆಹಾಕಿತು. ಆರಂಭಿಕರಾಗಿ ಕಣಕ್ಕಿಳಿದ ರುತಾಜ್ ಗಾಯಕ್ವಾಡ ಕೇವಲ 1 ರನ್ ಗಳಿಸಿ ಫೆವೆಲಿಯನ್ ನತ್ತ ಹೆಜ್ಜೆ ಹಾಕಿದರೆ, ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಇಶಾನ್ ಕಿಶನ್ 34 ರನ್ ಗಳಸಿ ಅಲ್ಪ ಚೇತರಿಕೆ ತಂದರು. ಉಳಿದಂತೆ ಶ್ರೇಯಸ್ ಐಯ್ಯರ್ 40 ರನ್, ನಾಯಕ ರಿಷಭ್ ಪಂತ್ 5 ರನ್, ಹಾರ್ದಿಕ್ ಪಾಂಡ್ಯ 9 ರನ್, ಅಕ್ಷರ್ ಪಟೇಲ್ 10 ರನ್ ದಿನೇಶ್ ಕಾರ್ತಿಕ್ 30 ರನ್ ಮತ್ತುಹರ್ಷಲ್ ಪಟೇಲ್ 12 ರನ್ ಗಳಿಸುವ ಮೂಲಕ ತಂಡವು ಸಾಧಾರಣ ಮೊತ್ತ ಕಲೆಹಾಕುವಲ್ಲಿ ಸಹಾಯಕರಾದರು

ಉತ್ತಮ ಬೌಲಿಂಗ್ ಮಾಡಿದ ಆಫ್ರಿ

ಇನ್ನು, ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಆಫ್ರಿಕಾ ಉತ್ತಮ ಪ್ರದರ್ಶನ ನೀಡಿತು. ಸೌತ್ ಆಫ್ರಿಕಾ ಪರ ಅನ್ರಿಚ್ 2 ವಿಕೆಟ್ ಮತ್ತು ಕಗಿಸೋ ರಬಾಡಾ, ವೈನೆ ಪಾರ್ನವೆಲ್ ಡ್ವೈನ್ ಹಾಗೂ ಕೇಶವ್ ಮಹರಾಜ್ ತಲಾ 1 ವಿಕೆಟ್ ಪಡೆಯುವ ಮೂಲಕ ಭಾರತೀಯ ಬ್ಯಾಟ್ಸ್ಮನ್ ಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದ

ಇದನ್ನೂ ಓದಿ: IND vs SA: ಅಬ್ಬರಿಸಿದ ವ್ಯಾನ್ ಡೆರ್ ಡಸ್ಸೆನ್; ದಕ್ಷಿಣ ಆಫ್ರಿಕಾಗೆ 7 ವಿಕೆಟ್ಗಳ

ಅಬ್ಬರಿಸಿದ ಹೆನ್ರಿಕ್ ಕ್ಲಾಸೆ

ಇನ್ನು, ಟೀಂ ಇಂಡಿಯಾ ನೀಡಿದ 148 ರನ್ ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಸೌತ್ ಆಫ್ರಿಕಾ ತಂಡಕ್ಕೆ ಆರಂಭಿಕ ಆಘಾತ ಆದರೂ ನಂತರ ಹೆನ್ರಿಕ್ ಕ್ಲಾಸೆನ್ ಅಬ್ಬರಕ್ಕೆ 18.2 ಓವರ್ ಗಳಲ್ಲಿ ಗೆಲುವಿನ ನಗೆ ಬೀರಿತು. ದಕ್ಷಿಣ ಆಫ್ರಿಕಾ ಪರ ಹೆನ್ರಿಕ್ ಕ್ಲಾಸೆನ್ 46 ಎಸೆತದಲ್ಲಿ 5 ಸಿಕ್ಸ್ ಮತ್ತು 7 ಫೋರ್ ಗಳ ಮೂಲಕ 81 ರನ್ ಸಿಡಿಸಿ ಮಿಂಚಿದರು. ಉಳಿದಂತೆ ಟೆಂಬಾ ಬುವಾಮಾ 35 ರನ್, ಹೆಂಡ್ರಿಕ್ಸ್ ಮತ್ತು ಡ್ವೈನ್ 4 ರನ್, ದುಸೇನಾ 1 ರನ್ ಡೇವಿಡ್ ಮಿಲ್ಲರ್ 20 ರನ್ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು

ಇದನ್ನೂ ಓದಿ: Cristiano Ronaldo: ಕ್ರಿಸ್ಟಿಯಾನೋ ರೊನಾಲ್ಡೊ ವಿರುದ್ಧ ಅತ್ಯಾಚಾರ ಪ್ರಕರಣ, ಕೋರ್ಟ್ ತೀರ್ಪು ಪ್ರ

ಭುವನೇಶ್ವರ್ ಕುಮಾರ್ ಬೌಲಿಂಗ್ ವ್ಯ

ಟೀಂ ಇಂಡಿಯಾ ಪರ ಬೌಲಿಂಗ್ ನಲ್ಲಿ ಭುವನೇಶ್ವರ್ ಕುಮಾರ್ ಇಂದು ಮಿಂಚು ಹರಿಸಿದರು. ಆದರೆ ಅವರ ಆಟ ತಂಡದ ಗೆಲುವಿಗೆ ಪ್ರಯೀಜನವಾಗಲಿಲ್ಲ. ಭುವನೇಶ್ವರ್ ಕುಮಾರ್ 4 ಓವರ ಮಾಡಿ 13 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು. ಉಳಿದಮತೆ ಚಹಾಲ್ 49 ರನ್ ನೀಡಿ ದುಭಾರಿಯಾದರು ಆದರೆ 1 ವಿಕೆಟ್ ಪಡೆದರು. ಅಕ್ಷರ್ ಪಟೇಲ್ ಸಹ ಕೇವಲ 1 ವಿಕೆಟ್ ಪಡೆದರು. ಉಳಿದ ಯಾವೊಬ್ಬ ಬೌಲರ್ ಸಹ ಸೌತ್ ಆಫ್ರಿಕಾ ಬ್ಯಾಟರ್ಗಳನ್ನು ಕಟ್ಟಿಹಾಕುವಲ್ಲಿ ಸಫಲರಾಗಲಿಲ್ಲ. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಢ ಗೆಲುವಿನ ನಗೆ ಬೀರಿತು.ರ್ಥ:ಕಟ.ನ್: ಜಯರು.ಕಾ:.ಯಾ:ಕಾ ತಂಢ ಗೆಲುವಿನ ನಗೆ ಬೀರಿತು.

Post a Comment

Previous Post Next Post