Tax Collection: 2 ತಿಂಗಳಲ್ಲಿ 2 ಸಾವಿರ ಕೋಟಿ ಕಲೆಕ್ಷನ್​; ಬಿಬಿಎಂಪಿಯಿಂದ ಭರ್ಜರಿ ಬೇಟೆ ಆರ್ಥಿಕ ವರ್ಷದ ಆರಂಭದ ತಿಂಗಳಾದ ಏಪ್ರಿಲ್ ಅಂತ್ಯಕ್ಕೆ 1,455 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಲಾಗಿತ್ತು. ಮೇ ತಿಂಗಳಿನಲ್ಲಿ ಬರೋಬ್ಬರಿ 545 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದೆ

: ತೆರಿಗೆ ಸಂಗ್ರಹ (Tax Collection) ಮಾಡಲು ಹೆಣಗಾಡುತ್ತಿದ್ದ ಬಿಬಿಎಂಪಿ ಇದೀಗ ಸಾರ್ವಕಾಲಿಕ ದಾಖಲೆ (Record) ಬರೆದಿದೆ.‌ ಹೌದು, ಪಾಲಿಕೆ ಇತಿಹಾಸದಲ್ಲಿ ಕೇವಲ ಎರಡು ತಿಂಗಳಲ್ಲಿ ಬರೋಬ್ಬರಿ 2 ಸಾವಿರ ಕೋಟಿಗೂ ಅಧಿಕ ಮೊತ್ತದ ಆಸ್ತಿ ತೆರಿಗೆ ಸಂಗ್ರಹ ಮಾಡುವ ಮೂಲಕ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ. ಆರ್ಥಿಕ ವರ್ಷದ (Financial Year) ಮೊದಲ ತಿಂಗಳಾದ ಏಪ್ರಿಲ್‌ನಲ್ಲಿ ಆಸ್ತಿ ತೆರಿಗೆ ಪಾವತಿದಾರರಿಗೆ 5% ರಷ್ಟು ರಿಯಾಯಿತಿ ನೀಡಿತ್ತು. ಕೊರೋನಾ (Corona) ಹಿನ್ನೆಲೆಯಲ್ಲಿ ಮತ್ತೊಂದು ತಿಂಗಳು ಅಂದರೆ ಮೇ ಅಂತ್ಯದ ವರೆಗೆ 5%ರಷ್ಟು ರಿಯಾಯಿತಿ ವಿಸ್ತರಿಸಲಾಗಿತ್ತು.

ಸರ್ಕಾರ ಮತ್ತು ಬಿಬಿಎಂಪಿ ನೀಡಿದ ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಂಡಿರುವ ಬೆಂಗಳೂರಿನ ಆಸ್ತಿ ಮಾಲೀಕರು ಪಾಲಿಕೆಗೆ 2022 - 23ನೇ ಸಾಲಿನ ವಾರ್ಷಿಕ ಆಸ್ತಿ ತೆರಿಗೆ ಪಾವತಿಸಿ, ಪಾಲಿಕೆ ಹಿಂದೆಂದೂ ಕಾಣದ ರೀತಿಯಲ್ಲಿ ತೆರಿಗೆ ಗುಡ್ಡೆ ಹಾಕಿದೆ. 2022 - 23ನೇ ಸಾಲಿನಲ್ಲಿ ಆಸ್ತಿ ತೆರಿಗೆಯಿಂದ 3,475 ಕೋಟಿ ರೂ. ಆದಾಯ ಸಂಗ್ರಹ ಗುರಿಯನ್ನು ಪಾಲಿಕೆ ಇಟ್ಟುಕೊಂಡಿದೆ. ಮೊದಲ ಎರಡು ತಿಂಗಳಲ್ಲಿ 2 ಸಾವಿರ ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದೆ. ಈ ಮೂಲಕ ವರ್ಷದ ಗುರಿಯ 58% ರಷ್ಟು ಆಸ್ತಿ ತೆರಿಗೆ ಸಂಗ್ರಹ ಮಾಡಿದಂತಾಗಿದೆ. ಉಳಿದ 42% ರಷ್ಟು ಆಸ್ತಿ ತೆರಿಗೆಯನ್ನು ಮುಂದಿನ 10 ತಿಂಗಳಲ್ಲಿ ಸಂಗ್ರಹಿಸಬೇಕಿ: ಆನ್ ಲೈನ್ ನಲ್ಲೇ ಆಸ್ತಿ ತೆರಿಗೆ ಕಟ್ಟುವವರ ಸಂಖ್ಯೆ ಹೆಚ್ಚು 

ಇನ್ನು ವರ್ಷದಿಂದ ವರ್ಷಕ್ಕೆ ಆನ್‌ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿ ಪ್ರಮಾಣ ಹೆಚ್ಚಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ 1,073 ಕೋಟಿ ರೂ. ಆಸ್ತಿ ತೆರಿಗೆ ಆನ್‌ಲೈನ್ ಮೂಲಕ ಪಾವತಿ ಆಗಿದೆ. ಉಳಿದ 937 ಕೋಟಿ ರೂ, ಮಾತ್ರ ನಗದು ಸೇರಿದಂತೆ ಒಟ್ಟು 2,009 ಕೋಟಿ ರೂ. ಪಾವತಿ ಆಗಿ

ಏಪ್ರಿಲ್ ನಲ್ಲೇ ಅತಿ ಹೆಚ್ಚು ಆಸ್ತಿ ತೆರಿಗೆ ಸಂಗ್ರಹಿಸಿದ ಬಿಬಿಎಂಪಿ

ಆರ್ಥಿಕ ವರ್ಷದ ಆರಂಭದ ತಿಂಗಳಾದ ಏಪ್ರಿಲ್ ಅಂತ್ಯಕ್ಕೆ 1,455 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಲಾಗಿತ್ತು. ಮೇ ತಿಂಗಳಿನಲ್ಲಿ ಬರೋಬ್ಬರಿ  545 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದೆ. ಈ ಹಿಂದಿನ ವರ್ಷದಲ್ಲಿ 5% ರಷ್ಟು ರಿಯಾಯಿತಿ ನೀಡಿದರೂ ಈ ಪ್ರಮಾಣದ ಆಸ್ತಿ ತೆರಿಗೆ ಸಂಗ್ರಹವಾಗಿರಲಿಲ್ಲ ಎಂದು ಕಂದಾಯ ವಿಭಾಗದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಿಬಿಎಂಪಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೇವಲ ಎರಡು ತಿಂಗಳಲ್ಲಿ 2 ಸಾವಿರ ಕೋಟಿ ರೂಪಾಯಿಗೂ ಅಧಿಕ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಈ ಬಾರಿ ಬಿಬಿಎಂಪಿ ಬಜೆಟ್‌ನಲ್ಲಿ ಹಾಕಿಕೊಂಡ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಸಾಧಿಸುತ್ತೇವೆ ಎಂದು ಕಂದಾ ವಿಭಾಗದ ವಿಶೇಷ ಆಯುಕ್ತ ದೀಪಕ್‌ !ದೆ.!ದೆ.ಯುಕ್ತ ದೀಪಕ್‌



Post a Comment

Previous Post Next Post