Modi in Karnataka: ಮೋದಿಯವರ ಸಹಕಾರದಿಂದ ನವ ಕರ್ನಾಟಕದ ಕನಸು ನನಸು -ಭಾಷಣದಲ್ಲಿ ಪ್ರಧಾನಿ ಹೊಗಳಿದ ಸಿಎಂ ಬೆಂಗಳೂರಿನ ಕೊಮ್ಮಘಟ್ಟದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, "ಪ್ರಧಾನಿ ನರೇಂದ್ರ ಮೋದಿಯವರ ಸಹಕಾರ ಮತ್ತು ಆಶೀರ್ವಾದದಿಂದ ನವ ಕರ್ನಾಟಕದ ಕನಸು ನನಸಾಗುತ್ತಿದೆ" ಅಂತ ಹೇಳಿದ್ರು.


 ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ತಮ್ಮ ಭಾಷಣದುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿಯವರನ್ನು (PM Narendra Modi) ಹಾಡಿ ಹೊಗಳಿದ್ದಾರೆ. ಬೆಂಗಳೂರಿನ (Bengaluru) ಕೊಮ್ಮಘಟ್ಟದಲ್ಲಿ (Koammaghatta) ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಸಹಕಾರ (Co-Operation) ಮತ್ತು ಆಶೀರ್ವಾದದಿಂದ ನವ ಕರ್ನಾಟಕದ ಕನಸು ನನಸಾಗುತ್ತಿದೆ ಅಂತ ಹೇಳಿದ್ರು. ಇನ್ನು ಕೊಮ್ಮಘಟ್ಟದಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿ, ವಿವಿಧ ಸರ್ಕಾರಿ ಯೋಜನೆಗಳ ಲೋಕಾರ್ಪಣೆ (Government Project Inauguration) ಮಾಡಿದ್ರು. ಜೊತೆಗೆ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

“ಮೋದಿಯವರಿಂದ ನವ ಕರ್ನಾಟಕದ ಕನಸು ನನ

ಕರ್ನಾಟಕದ ಪ್ರಗತಿಯ ಇತಿಹಾಸದಲ್ಲಿ ಇಂದು ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಿದೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ರು. ಇಂದು 33 ಸಾವಿರ ಕೋಟಿ ರೂಪಾಯಿ ಮೊತ್ತದ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರಕು ಚಾಲನೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಸಹಕಾರ ಮತ್ತು ಆಶೀರ್ವಾದದಿಂದ ನವ ಕರ್ನಾಟಕದ ಕನಸು ನನಸಾಗುತ್ತಿದೆ ಅಂತ ಹೇಳಿದ್ರು

“ಮೋದಿಯವರಿಂದ ಭಾರತ ಅಭಿವೃದ್ಧಿಯಾಗಿ

ಇನ್ನು ಪ್ರಧಾನಿ ನರೇಂದ್ರ ಮೋದಿಯವರಿಂದ ಭಾರತ ಅಭಿವೃದ್ಧಿಯಾಗಿದೆ ಅಂತ ಸಿಎಂ ಶ್ಲಾಘಿಸಿದ್ರು. 2047ಕ್ಕೆ ಭಾರತ ಸಮಗ್ರ ಏಳಿಗೆಯ ರಾಷ್ಟ್ರವಾಗಲಿದೆ ಅಂತ ಅವರು ಭರವಲೆ ವ್ಯಕ್ತಪಡಿಸಿದ್ರು. ಇನ್ನು ರಾಜಕಾರಣಿ ಕಣ್ಣು ಮುಂದಿನ ಚುನಾವಣೆ ಮೇಲಿರುತ್ತದೆ, ಆದರೆ ಮುತ್ಸದ್ಧಿ ಕಣ್ಣು ಮುಂದಿನ ಜನಾಂಗದ ಮೇಲಿರುತ್ತೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದ ಮಹಾನ್ ಮುತ್ಸದ್ಧಿ ಅಂತ ಮುಖ್ಯಮಂತ್ರಿಗಳು ಹೊಗಳಿದ್ರು

ಇದನ್ನೂ ಓದಿ:  Narendra Modi: ಬೆಂಗಳೂರಿಗರನ್ನು ಹಾಡಿಹೊಗಳಿದ ಮೋದಿ; ಟ್ರಾಫಿಕ್ ಜಾಮ್ ಆಗಿದ್ದು ನನ್ನಿಂದ, ಕ್ಷಮೆ

33 ಸಾವಿರ ಕೋಟಿ ರೂಪಾಯಿ ಯೋಜನೆಗೆ ಚಾ

 ಇಂದು 33 ಸಾವಿರ ಕೋಟಿ ಮೊತ್ತದ ಯೋಜನೆಗಳಿಗೆ ಚಾಲನೆ ಸಿಕ್ಕಿದೆ. ಸಬ್ ಅರ್ಬನ್ ರೈಲು ಬೆಂಗಳೂರಿಗೆ ಹೊಸ ದಿಕ್ಕು, ಇದು 4 ದಿಕ್ಕಿನಲ್ಲೂ ಬೆಂಗಳೂರನ್ನು ಜೋಡಿಸುತ್ತದೆ. ಜೋಡಿ ರೈಲು ಮಾರ್ಗಗಳು ಜನಸಂಪರ್ಕವನ್ನು ಹೆಚ್ಚಿಸಲಿವೆ ಅಂತ ಸಿಎಂ ಹೇಳಿದ್ರು. ಇನ್ನು ತುಮಕೂರು-ನೆಲಮಂಗಲ ಮಧ್ಯೆ ಹೆದ್ದಾರಿ ಅಭಿವೃದ್ಧಿ, ಬೆಂಗಳೂರು ಸ್ಯಾಟಲೈಟ್ ಟೌನ್ಗೆ ಚಾಲನೆ ಸಿಕ್ಕಿದೆ. ದಾಬಸ್ಪೇಟೆಯಿಂದ 4 ಉಪನಗರಗಳಿಗೆ ಸಂಪರ್ಕ ಕಲ್ಪಿಸಲಾಗುವುದು ಅಂತ ಬಸವರಾಜ ಬೊಮ್ಮಾಯಿ ತಿಳಿಸಿದ್ರು

“ಭಾರತಕ್ಕೆ ಹೊಸ ದಿಕ್ಕು ತೋರಿದ ಪ್ರಧಾ

ಕರ್ನಾಟಕಕ್ಕೆ ಕಿಸಾನ್ ಸಮ್ಮಾನ್ನಲ್ಲಿ 53.83 ಲಕ್ಷ ರೈತರಿಗೆ ಲಾಭವಾಗಿದೆ. 34 ಲಕ್ಷ ಮನೆಗಳಿಗೆ ವಿದ್ಯುತ್ ಸಂಪರ್ಕ ಸಿಕ್ಕಿದ್ದರೆ, 48 ಲಕ್ಷ ಮನೆಗಳಿಗೆ ಕುಡಿಯುವ ನೀರು ಸಂಪರ್ಕ ಸಿಕ್ಕಿದೆ. ಇನ್ನು ಪ್ರತಿ ಮನೆಗೂ ನಲ್ಲಿ ನೀರು ಕೊಡುವ ಗುರಿ ಇದೆ. ಜೊತೆಗೆ ಹೊಸ ಮೆಡಿಕಲ್ ಕಾಲೇಜಿಗೆ ಒಪ್ಪಿಗೆ ನೀಡಿದ್ದಾರೆ ಎಂದು ಬೊಮ್ಮಾಯಿ ಅವರು ತಿಳಿಸಿದ್ದಾರೆ. ಇನ್ನು ಭಾರತಕ್ಕೆ ಮೋದಿ ಹೊಸ ದಿಕ್ಕು ತೋರಿದ್ದಾರೆ ಅಂತ ಅವರು ಮೆಚ್ಚುಗೆಯ ಮಾತನ್ನಾಡಿದ್ರು

ಇದನ್ನೂ ಓದಿ: Narendra Modi: ನಮೋಗೆ ರೇಷ್ಮೆ ನೂಲು, ಬನಾರಸ್ ಮುತ್ತುಗಳಿಂದ ಮಾಡಿದ ಮೈಸೂರು ಪೇಟ; ಸ್ವರ್ಣ ಲೇಪಿತ ಅಕ್ಷರದ ಫೋಟೋ ಗಿ

ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾದ 

2 ದಿನ ಕರ್ನಾಟಕ ಪ್ರವಾಸದಲ್ಲಿರುವ ಮೋದಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಇಂದು ಬೆಂಗಳೂರಿನ ಐಐಎಸ್‌ಸಿಯಲ್ಲಿ ಅವರು ಬ್ರೈನ್ ರಿಸರ್ಚ್ ಇನ್ಸ್‌ಸ್ಟಿಟ್ಯೂಟ್ ಉದ್ಘಾಟಿಸಿದರು. ಬಳಿಕ ಬಾಗ್ಚಿ - ಪಾರ್ಥಸಾರಥಿ ಆಸ್ಪತ್ರೆ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದರು. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ 280 ಕೋಟಿ ರೂ.ಗಳ ವೆಚ್ಚದಲ್ಲಿ ಮಿದುಳು ಸಂಶೋಧನಾ ಕೇಂದ್ರ ನಿರ್ಮಿಸಲಾಗಿದೆ. ಈ ಕೇಂದ್ರಕ್ಕೆ ಪ್ರಧಾನಿಗಳು ಚಾಲನೆ ನೀಡಿದರು. ಇನ್ನು 425 ಕೋಟಿ ರೂ.ಗಳ ವೆಚ್ಚದಲ್ಲಿ ಬಾಗ್ಚಿ- ಪಾರ್ಥಸಾರಥಿ ಆಸ್ಪತ್ರೆ ನಿರ್ಮಾಣವಾಗಲಿದೆ. ಇದಕ್ಕೂ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದರು.ಮೋದಿಫ್ಟ್.ನಿ”.ಲನೆ ಇರಲಿ.ದೆ”.ಸು” ಮೋದಿ ಶಂಕುಸ್ಥಾಪನೆ ನೆರವೇರಿಸಿದರು.

Post a Comment

Previous Post Next Post