ಎಷ್ಟೋ ಸಾರಿ ನಾವು ಬಸ್ ನಲ್ಲಿ (Bus) ಪ್ರಯಾಣಿಸುತ್ತಿರುವಾಗ (Travel) ಬಸ್ ನಲ್ಲಿದ್ದಂತಹ ಕಂಡೆಕ್ಟರ್ (Conductor) ಸುಮಾರು ಸಾರಿ ಪ್ರಯಾಣಿಕರಿಗೆ ‘ಟಿಕೆಟ್ ಯಾರು ತಗೊಂಡಿಲ್ಲ, ಅವರು ಬೇಗ ತಗೊಳ್ಳಿ ಮರೆತು ಹಾಗೆ ಪ್ರಯಾಣಿಸಬೇಡಿ’ ಅಂತ ಹೇಳುವುದನ್ನು ಮತ್ತು ಪದೇ ಪದೇ ಪ್ರತಿಯೊಂದು ನಿಲುಗಡೆಯ ನಂತರವೂ ಕಂಡೆಕ್ಟರ್ ಅವರು ಬಸ್ ನಲ್ಲಿದ್ದ ಪ್ರಯಾಣಿಕರ ಸಂಖ್ಯೆಯನ್ನು ದೃಢಪಡಿಸಿಕೊಳ್ಳಲು ತಲೆಗಳನ್ನು ಲೆಕ್ಕಹಾಕುವುದನ್ನು ನಾವು ನೋಡಿರುತ್ತೇವೆ. ಇಷ್ಟಾದರೂ ಸಹ ಕೆಲವು ಜನರು ಟಿಕೆಟ್ (Ticket) ತೆಗೆದುಕೊಳ್ಳಲು ಮರೆತು ಹಾಗೆಯೇ ಕುಳಿತು ಪ್ರಯಾಣಿಸುತ್ತಿರುತ್ತಾರೆ ಮತ್ತು ಇನ್ನೂ ಕೆಲವರು ಬೇಕಂತಲೇ ಟಿಕೆಟ್ ತೆಗೆದುಕೊಳ್ಳುವುದಿಲ್ಲ.
ಕಂಡೆಕ್ಟರ್ ಅವರಿಗೆ ಟಿಕೆಟ್ ಅಂತ ಕೇಳಿದರೆ ದೂರದಿಂದಲೇ ‘ಪಾಸ್’ ಇದೆ ಅಂತ ಹೇಳ್ತಾರೆ. ಇದು ಕೆಲವು ತುಂಟಾಟ ಮಾಡುವ ಜನರಿಗೆ ಕೇಳಲು ತುಂಬಾನೇ ಮೊಜಿನ ಸಂಗಾತಿಯಾಗಿರಬಹುದು, ಆದರೆ ಇದು ಕಂಡೆಕ್ಟರ್ ಅವರ ಹುದ್ದೆಗೆ ಕುತ್ತು ತರುವಂತದ್ದು ಅಂತ ಬಹುತೇಕರಿಗೆ ತಿಳಿದೇ ಇರುವುದಿಲ್ಲ
ಬಸ್ಸಿನಲ್ಲಿ ಪ್ರಯಾಣಿಸುವ ಪ್ರಾಣಿ, ಪಕ್ಷಿಗಳಿಗೆ ಟಿಕೆಟ್ ಕಡ್ಡಾ
ಅರೇ ಇದೇಕೆ ಈಗ ನಾವು ಇದರ ಬಗ್ಗೆ ಮಾತಾಡುತ್ತಿದ್ದೇವೆ ಅಂತ ನಿಮಗೆ ಆಶ್ಚರ್ಯವಾಗಬಹುದು ಅಲ್ಲವೇ? ಇತ್ತೀಚೆಗೆ ಒಂದು ಘಟನೆ ನಡೆದಿದೆ ನೋಡಿ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಕೆಲಸ ಮಾಡುತ್ತಿರುವ ಈ ಕಂಡಕ್ಟರ್ ಗೆ ಭಾರಿ ದಂಡವನ್ನು ವಿಧಿಸಲಾಗಿದೆ. ಹೈದರಾಬಾದ್ ನಿಂದ ಬೀದರ್ ಜಿಲ್ಲೆಯ ಔರಾದ್ ಪಟ್ಟಣಕ್ಕೆ ಪ್ರಯಾಣಿಸುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಕನೊಬ್ಬ ಪಂಜರದಲ್ಲಿ ಈ ಲವ್ ಬರ್ಡ್ಸ್ ಅಂತಾರಲ್ಲ ಆ ಪಕ್ಷಿಗಳನ್ನು ತೆಗೆದುಕೊಂಡು ಹೋಗುತ್ತಿದ್ದನು. ನಿಯಮದ ಪ್ರಕಾರ, ಕಂಡಕ್ಟರ್ ಅಶೋಕ್ ಹಿಲಾಲಾಪುರ, ಆ ಜೋಡಿ ಹಕ್ಕಿಗಳನ್ನು ಕೊಂಡೊಯ್ಯುತ್ತಿದ್ದ ವ್ಯಕ್ತಿಗೆ ತಲಾ ಅರ್ಧ ಟಿಕೆಟ್ ಖರೀದಿಸುವಂತೆ ಮನವಿ ಮಾಡಿಕೊಂಡರು, ಆದರೆ ಆ ಪ್ರಯಾಣಿಕ ಮಾತ್ರ ಅದನ್ನು ಒಪ್ಪಲೇಯಿಲ್ಲ
ಇದನ್ನೂ ಓದಿ: Hubballi: ಹಿಂದೂ ಮುಖಂಡನ ಜೊತೆ ಜಗಳ, ಪೊಲೀಸ್ ಅಧಿಕಾರಿ ದಿಢೀರ್ ವರ್ಗಾ
ಇದಕ್ಕೆ ಸಹ-ಪ್ರಯಾಣಿಕರಿಂದ ಆ ಪ್ರಯಾಣಿಕರಿಗೆ ತಕ್ಷಣದ ಬೆಂಬಲ ಸಿಕ್ಕಿತು, ಪಕ್ಷಿಗಳು ಬಸ್ ನಲ್ಲಿ ಯಾವುದೇ ಸ್ಥಳವನ್ನು ಆಕ್ರಮಿಸದೇ ತನ್ನ ಮಾಲೀಕರ ತೊಡೆ ಮೇಲೆ ಪಂಜರದಲ್ಲಿ ಕುಳಿತುಕೊಳ್ಳುತ್ತವೆ. ಹೀಗಿರುವಾಗ ಅವಕ್ಕೆ ಏಕೆ ಚಾರ್ಜ್ ಮಾಡುತ್ತೀರಿ ಎಂದು ಹೇಳಿ ಇತರೆ ಪ್ರಯಾಣಿಕರು ನಕ್ಕರು. ಇನ್ನೂ ಅಷ್ಟು ಜನ ಪ್ರಯಾಣಿಕರು ಹೇಳಿದ ಮೇಲೆ ಏನು ಮಾಡೋದು ಅಂತ ಕಂಡೆಕ್ಟರ್ ಸುಮ್ಮನಾಗಿಬಿಟ್ಟ
ಕಂಡಕ್ಟರ್ ಅನ್ನು ಅಮಾನತುಗೊಳಿಸಿದ ಬೀದರ್ ವಿಭಾಗೀಯ ನಿಯಂತ್ರ
ಕೊನೆಗೂ ಬಸ್ ಕಂಡಕ್ಟರ್ ಆ ಪಕ್ಷಿಗಳಿಗೆ ಉಚಿತವಾಗಿ ಸವಾರಿ ಮಾಡಲು ಅವಕಾಶ ನೀಡಿದರು. ಆದರೆ ದುರದೃಷ್ಟವಶಾತ್ ಆಗಿ ದಾರಿ ಮಧ್ಯೆದಲ್ಲಿ ಟಿಕೆಟ್ ಚೆಕ್ ಮಾಡುವ ಸಿಬ್ಬಂದಿಗಳು ಬಸ್ ಹತ್ತಬೇಕೇ? ಅವರು ಬಸ್ ನಲ್ಲಿದ್ದ ಎಲ್ಲಾ ಪ್ರಯಾಣಿಕರ ಟಿಕೆಟ್ ಗಳನ್ನು ಚೆಕ್ ಮಾಡಿದರು. ನಂತರ ಅವರಿಗೆ ಆ ವ್ಯಕ್ತಿ ಹೊತ್ತೊಯ್ಯುತ್ತಿದ್ದ ಪಕ್ಷಿಗಳಿಗೆ ಯಾವುದೇ ರೀತಿಯ ಟಿಕೆಟ್ ತೆಗೆದುಕೊಂಡಿಲ್ಲವೆಂಬುದು ಟಿಕೆಟ್ ಚೆಕ್ ಮಾಡುವ ಸಿಬ್ಬಂದಿಯ ಗಮನಕ್ಕೆ ಬಂದಿದೆ
ಇದನ್ನೂ ಓದಿ: Chamrajnagar: ಶಾಲೆಗೆ ಮಕ್ಕಳು ಚಕ್ಕರ್ ಹೊಡೆದ್ರೆ ಮನೆ ಮುಂದೆ ಕುದುರೆ ಮಾಮ ಹಾಜರ್, ಸ್ಕೂಲ್ಗೆ ಉಚಿತ ಕುದುರೆ ಸವಾಅವರು ಕಂಡಕ್ಟರ್ ನನ್ನು ತರಾಟೆಗೆ ತೆಗೆದುಕೊಂಡರು ಮತ್ತು ಈ ವಿಷಯದ ಬಗ್ಗೆ ವರದಿಯನ್ನು ಮೇಲಧಿಕಾರಿಗಳಿಗೆ ಕಳುಹಿಸಿದರು. ವರದಿಯ ಮೇರೆಗೆ ಬೀದರ್ ವಿಭಾಗೀಯ ನಿಯಂತ್ರಕರು ಕಂಡಕ್ಟರ್ ಅನ್ನು ಅಮಾನತುಗೊಳಿಸಿದ್ದಾರೆ. ಈಗ 24 ವರ್ಷಗಳಿಂದ ಸೇವೆಯಲ್ಲಿರುವ ಅಶೋಕ್ ಅವರು ಈ ಇಡೀ ಘಟನೆಯ ಬಗ್ಗೆ ವಿವರಿಸುತ್ತಾ "ಪ್ರಯಾಣಿಕನು ಪಕ್ಷಿಗಳಿಗೆ ತಲಾ 114 ರೂಪಾಯಿಗಳ ಅರ್ಧ ಟಿಕೆಟ್ ಗಳನ್ನು ಖರೀದಿಸಬೇಕಾಗಿತ್ತು. ಆದರೆ ಪ್ರಯಾಣಿಕರೆಲ್ಲಾ ಸೇರಿ ಮಾತಾಡಿ ಟಿಕೆಟ್ ತೆಗೆದುಕೊಂಡಿಲ್ಲ ಮತ್ತು ವಿಚಕ್ಷಣಾ ಸಿಬ್ಬಂದಿ ತಮ್ಮ ಕೆಲಸವನ್ನು ಮಾಡಿದರು. ಸಿಬ್ಬಂದಿಯವರು ಆ ಪ್ರಯಾಣಿಕನಿಗೆ ದಂಡ ವಿಧಿಸಬಹುದಿತ್ತು, ಆದರೆ ಅವರು ನನಗೆ ಶಿಕ್ಷೆ ನೀಡಿದರು" ಎಂದು ಹೇಳಿದರು
ಈ ಬಗ್ಗೆ ಬೀದರ್ ವಿಭಾಗೀಯ ನಿಯಂತ್ರಕ ಹೇಳಿದ್ದೇ
ಬೀದರ್ ವಿಭಾಗೀಯ ನಿಯಂತ್ರಕರಾದ ನಾರಾಯಣ ಗೌಡಗೇರಿ ಅವರು ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿ, ಪ್ರಯಾಣಿಕರು ತಮ್ಮ ಜೊತೆಯಲ್ಲಿ ಕರೆದುಕೊಂಡು ಬರುವ ಯಾವುದೇ ಸಾಕುಪ್ರಾಣಿಗಳಿದ್ದರೂ, ಅವರು ಅದಕ್ಕೆ ಟಿಕೆಟ್ ಖರೀದಿಸಬೇಕು. ಹೀಗೆ ಮಾಡದೆ ಇದ್ದಲ್ಲಿ ಪ್ರಯಾಣಿಕರಿಗೆ ಟಿಕೆಟ್ ಶುಲ್ಕದ 10 ಪಟ್ಟರಷ್ಟು ದಂಡವನ್ನು ವಿಧಿಸಬಹುದು ಮತ್ತು ಕಂಡಕ್ಟರ್ ಅನ್ನು ಅಮಾನತುಗೊಳಿಸಬಹುದು ಎಂದು ಅವರು ಸ್ಪಷ್ಟಪಡಿಸಿದರು. ನಿಗಮದ ಹಣವನ್ನು ಕದಿಯುವ ಯಾವುದೇ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಹೇಳಿದರು.ನು?.ರಿ!.ಕರುರು.ವಣೆ!.ಯ.ವುದು ಎಂದು ಅವರು ಹೇಳಿದರು.

Post a Comment