ಚಿಕ್ಕಮಗಳೂರು: ಅಕ್ರಮ ಗೋಮಾಂಸ ಶೆಡ್ (Cattle slaughter) ಮೇಲೆ ನಗರಸಭೆ ಅಧ್ಯಕ್ಷರ ನೇತೃತ್ವದ ಅಧಿಕಾರಿಗಳು ದಾಳಿ ಮಾಡಿರುವ ಘಟನೆ ಚಿಕ್ಕಮಗಳೂರು (Chikkamagaluru) ನಗರದ ತಮಿಳು ಕಾಲೋನಿಯಲ್ಲಿ ನಡೆದಿದೆ. ಶುಕ್ರವಾರ ಬೆಳಿಗ್ಗೆ ಸಂತೆ ಮೈದಾನದ (Snate Maidan) ಸಮೀಪದಲ್ಲಿರುವ ತಮಿಳು ಕಾಲೋನಿಯಲ್ಲಿ(Tamilu Colony) ಅಕ್ರಮವಾಗಿ ಕಸಾಯಿಖಾನೆ ನಡೆಸುತ್ತಿರೋದು ಬೆಳಕಿಗೆ ಬಂದಿದ್ದು, ಜೆಸಿಬಿಯೊಂದಿಗೆ (JCB) ತೆರಳಿದ ಅಧಿಕಾರಿ ಮತ್ತು ಸಿಬ್ಬಂದಿ ತಂಡ ಶೆಡ್ ಗಳನ್ನು ನಾಶಗೊಳಿಸಿದ್ದಾರೆ. ಶೆಡ್ ಮಾಲೀಕ (Cow Slaughter Shed Owner) ಸೇರಿ ದಂತೆ ಇತರರ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅವರ ನೇತೃತ್ವದಲ್ಲಿ ವಾರ್ಡ್ ೨೨ರಲ್ಲಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಗಿತ್ತು. ಸ್ವಚ್ಛತೆ ಕಾರ್ಯ ಮುಗಿಸಿ ಮನೆಗೆ ತೆರಳುವ ವೇಳೆ ಶೆಡ್ ವೊಂದರಲ್ಲಿ 4 ರಿಂದ 5 ಜನ ಇಣುಕಿ ನೋಡುತ್ತಿದ್ದ
ಶೆಡ್ ಒಳಗೆ ಮೂರು ಹಸುಗಳ ಹತ್ಯೆ
ಇದರಿಂದ ಅನುಮಾನಗೊಂಡ ಅಧಿಕಾರಿಗಳ ತಂಡ ಪೊಲೀಸರಿಗೆ ಮಾಹಿತಿ ನೀಡಿ ಶೆಡ್ ಸಮೀಪ ತೆರಳಿದಾಗ ಕಾಂಪೌಂಡ್ ಎಗರಿ ಸ್ಥಳದಿಂದ ಪರಾರಿಯಾಗಿದ್ದಾರೆ. ಶೆಡ್ ಒಳಗೆ ಪರಿಶೀಲನೆ ನಡೆಸಿದಾಗ 3 ಹಸುಗಳನ್ನು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿ
ಇದನ್ನೂ ಓದಿ: Railway Project: ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಮತ್ತೆ ಜೀವಂತ, ವನ್ಯಜೀವಿ ಮಂಡಳಿ ನಿಲುವೇ
ಸೈಟ್ ಮಾಲೀಕನ ವಿರುದ್ಧ ಪ್ರಕರಣ ದಾ
ಅಕ್ರಮವಾಗಿ ನಿರ್ಮಿಸಿರುವ ಶೆಡ್ ನಲ್ಲಿ ಕಸಾಯಿಖಾನೆ ನಡೆಸುತ್ತಿರುವುದು ಕಂಡು ಬಂದಿದ್ದು, ಪೊಲೀಸ್ ಸಿಬ್ಬಂದಿಗಳ ಸಮ್ಮುಖದಲ್ಲಿ ಶೆಡ್ ತೆರವುಗೊಳಿಸಿ ಸೈಟ್ ಮಾಲೀಕ ಹಾಗೂ ಇತರರ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿ
ಕಳೆದ ಕೆಲವು ದಿನಗಳ ಹಿಂದೆ ಇದೇ ಜಾಗದಲ್ಲಿ ಪೊಲೀಸರು ದಾಳಿ ನಡೆಸಿ ಗೋಹತ್ಯೆ ಮಾಡಿದ ಆರೋಪದಡಿಯಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ದಾಳಿ ವೇಳೆ ನಗರಸಭೆ ಪೌರಾಯುಕ್ತ ಬಸವರಾಜ್, ಆರೋಗ್ಯ ನಿರೀಕ್ಷಕರಾದ ಶಶಿಧರ್, ಈಶ್ವರ, ರಂಗಪ್ಪ ಇದ್ದರು
ಈ ಹಿಂದೆಯೂ ದಾಳಿ ನಡೆದಿ
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ನಗರದಲ್ಲಿ ಅಕ್ರಮ ಕಸಾಯಿಖಾನೆ ನಡೆಸುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಇಂದು ದಾಳಿ ನಡೆಸಿ 2 ಶೆಡ್ ಗಳನ್ನು ಜೆಸಿಬಿ ಬಳಸಿ ತೆರವುಗೊಳಿಸಲಾಗಿದೆ. ಇಂದಿನಿಂದಲೇ ಗೋಹತ್ಯೆಯನ್ನು ನಿಲ್ಲಿಸದಿದ್ದರೇ ಮುಂದಿನ ದಿನಗಳಲ್ಲಿ ದಾಳಿ ನಡೆಸಿ ಕಸಾಯಿಖಾನೆ ನಡೆಸುತ್ತಿರುವ ಶೆಡ್ ಗಳನ್ನು ತೆರವುಗೊಳಿಸಲಾಗುವುದು ಎಂದಪ್ರಕರಣದ ಬಗ್ಗೆ ನಗರಸಭೆ ಆಯುಕ್ತರಿಂದ ಮಾಹಿತಿ
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಗರಸಭೆ ಆಯುಕ್ತ ಬಸವರಾಜ್, ವಾರ್ಡ್ 22ರಲ್ಲಿ ಸ್ವಚ್ಛತೆ ಕಾರ್ಯ ನಡೆಸಲು ನಗರಸಭೆ ಸಿಬ್ಬಂದಿ ಮತ್ತು ಅಧಿಕಾರಿಗಳ ತಂಡ ತಮಿಳು ಕಾಲೋನಿಗೆ ತೆರಳಲಾಗಿತ್ತು. ಸ್ವಚ್ಛತೆ ಕಾರ್ಯ ಮುಗಿಸಿ ತೆರಳುವ ವೇಳೆ ಶೆಡ್ ವೊಂದರಲ್ಲಿ 4 ರಿಂದ 5 ಜನರು ಅನುಮಾನಸ್ಪದವಾಗಿ ನಡೆದುಕೊಳ್ಳುತ್ತಿರುವುದು ಕಂಡು ಬಂದಿದ್ದು, ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಶೆಡ್ ಮೇಲೆ ದಾಳಿ ನಡೆಸಲಾಯಿ
ಅಧಿಕಾರಿಗಳ ತಂಡ ಶೆಡ್ ಬಳಿ ತೆರಳುತ್ತಿದ್ದಂತೆ ಅಲ್ಲಿದ್ದವರು ಓಡಿ ಹೋಗಿದ್ದು, ಶೆಡ್ ಪ್ರವೇಶಿಸಿ ನೋಡಿದಾಗ ಅಕ್ರಮವಾಗಿ ಗೋ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ. ಅಕ್ರಮ ಶೆಡ್ ತೆರವುಗೊಳಿಸಲಾಗಿದೆ. ಜಾಗದ ಮಾಲೀಕ ಸೇರಿದಂತೆ ಇತರರ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದ
ಇದನ್ನೂ ಓದಿ: Monsoon ಆರಂಭಕ್ಕೂ ಮುನ್ನ ಕೊಡಗಿಗೆ ಆಗಮಿಸಿದ NDRF ತಂಡ; ಪ್ರವಾಹ, ಭೂಕುಸಿತ ಸ್ಥಳಗಳ ಗುರುತಿಸುವಿ
ಶೆಡ್ ಯಾರದ್ದು, ಈ ಜಾಗದ ಮಾಲೀಕರು ಯಾರು ಎಂಬುದರ ಮಾಹಿತಿ ಲಭ್ಯವಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಕೆರು.ನಿಖೆತು.ರು.ತ್ತು.ದೆ.ಖಲುನು?ದೆ.ರು.ಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Post a Comment