ಬೆಂಗಳೂರು: ರಾಜ್ಯದ ಶಾಲಾ ವಿದ್ಯಾರ್ಥಿಗಳ (School Students) ಪಠ್ಯಪುಸ್ತಕ ಪರಿಷ್ಕರಣೆ ವಿವಾದ (Textbook revision controversy) ಭಾರೀ ಸುದ್ದಿಯಾಗಿದ್ದು ಗೊತ್ತೇ ಇದೆ. ರೋಹಿತ್ ಚಕ್ರತೀರ್ಥ (Rohit Chakrateertha) ಸಮಿತಿಯ (Committee) ಪಠ್ಯಪುಸ್ತಕವನ್ನು ಯಾವುದೇ ಕಾರಣಕ್ಕೂ ಶಾಲೆಗಳಲ್ಲಿ ಬೋಧಿಸಬಾರದು ಅಂತ ಹಲವು ಪ್ರಗತಿಪರರು, ಸಾಹಿತಿಗಳು, ವಿವಿಧ ಸಂಘಟನೆಗಳು ಪಟ್ಟು ಹಿಡಿದಿದ್ದವು. ಪರಿಷ್ಕೃತ ಪಠ್ಯ ಪುಸ್ತಕ ವಿರೋಧಿಸಿ ಹಲವೆಡೆ ಪ್ರತಿಭಟನೆಗಳೂ (Protest) ನಡೆದಿದ್ದವು. ಈ ನಡುವೆ ಹೊಸ ಪುಸ್ತಕವನ್ನು ಶಾಲೆಗಳಲ್ಲಿ ಬೋಧಿಸದಂತೆ ಮಾಜಿ ಪ್ರಧಾನಿ (Former Prime Minister) ಎಚ್‌ಡಿ ದೇವೇಗೌಡ ಅವರು ಸರ್ಕಾರಕ್ಕೆ ಮನವಿ ಮಾಡಿದ್ದರು. ಇದೀಗ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai), ದೇವೇಗೌಡರ ಸಲಹೆಯನ್ನು (Suggestions) ಸರ್ಕಾರ (Government) ಪರಿಗಣಿಸುವುದಾಗಿ ಹೇಳಿದ್ದಾರೆ.
ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದ ಎಚ್‌ಡಿ
ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು ಪಠ್ಯಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಪತ್ರ ಬರೆದು, ಸರ್ಕಾರಕ್ಕೆ ಸಲಹೆ ನೀಡಿದ್ದರು. ಅಂಬೇಡ್ಕರ್ ಮತ್ತು ರಾಷ್ಟ್ರಕವಿ ಕುವೆಂಪು ಅವರು ಸಾರಿದ ಸಾಮಾಜಿಕ ನ್ಯಾಯ, ಸಮಾನತೆ, ಜಾತ್ಯಾತೀತತೆ ಮತ್ತು ವಿಶ್ವಮಾನವತ್ವದ ಪರಿಕಲ್ಪನೆಗಳನ್ನು ಕಡೆಗಣಿಸಿರುವುದು ಪಠ್ಯ ಪನರ್ ಪರಿಷ್ಕರಣೆಯಲ್ಲಿ ಎದ್ದು ಕಾಣುತ್ತದೆ. ಪಠ್ಯ ಪುಸ್ತಕಗಳಲ್ಲಿನ ಅಸಂಖ್ಯಾತ ದೋಷ ಮತ್ತು ಅನ್ಯಾಯಗಳನ್ನು ಕೇವಲ ತಪ್ಪೋಲೆ ಅಥವಾ ಪ್ರತ್ಯೇಕ ಪುಟಗಳ ಮುದ್ರಣದಿಂದ ಸರಿಪಡಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಪುನರ್ ಪರಿಷ್ಕರಣೆಯ ಪಠ್ಯ ಪುಸ್ತಕಗಳನ್ನು ಹಿಂಪಡೆಯಬೇಕು. ಹಿಂದೆ ಬರಗೂರು ರಾಮಚಂದ್ರ ಅವರ ನೇತೃತ್ವದ 27 ಸಮಿತಿಗಳು ಪರಿಷ್ಕರಿಸಿದ ಪಠ್ಯಗಳನ್ನೇ ಮುಂದುವರಿಸುವುದು ಸೂಕ್ತವೆಂದು ನನ್ನ ಅಭಿಪ್ರಾಯ ಅಂತ ಪತ್ರದಲ್ಲಿ ವಿವರಿಸಿದ್ದರು
“ದೇವೇಗೌಡರ ಸಲಹೆಯನ್ನು ಪರಿಗಣಿಸುತ್ತೇ
ಇನ್ನು ದೇವೇಗೌಡರ ಪತ್ರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ದೇವೇಗೌಡರು ಪಠ್ಯ ಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಬರೆದ ಪತ್ರದ ಬಗ್ಗೆ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ಮಾಡುತ್ತೇನೆ ಅಂತ ಹೇಳಿದ್ದಾ
ಇದನ್ನೂ ಓದಿ: Viral Marksheet: ಗಣಿತದಲ್ಲಿ ಬರೀ 36 ಅಂಕ! IAS ಆಫೀಸರ್ SSLC ಮಾರ್ಕ್ ಕಾರ್ಡ್ ವೈ
“ದೇವೇಗೌಡರ ಪತ್ರಕ್ಕೆ ಉತ್ತರ ಬರೆಯುತ್ತೇ
ಮಾಜಿ ಪ್ರಧಾನಿಗಳು ನಮಗೆಲ್ಲರಿಗೂ ಹಿರಿಯರು. ಅವರು ಪಠ್ಯ ಕ್ರಮದ ಬಗ್ಗೆ ಪತ್ರ ಬರೆದಿದ್ದಾರೆ. ನಾನು ನಾಳೆ ಶಿಕ್ಷಣ ಇಲಾಖೆ ಮುಖ್ಯಸ್ಥರ ಜತೆ ಚರ್ಚಿಸ್ತೇನೆ. ದೇವೇಗೌಡರು ಬರೆದಿರುವ ಪತ್ರದ ಸಾರವನ್ನು ಸಂಪೂರ್ಣವಾಗಿ ಅವಲೋಕಿಸುತ್ತೇವೆ ಎಂದಿದ್ದಾರೆ. ದೇೇವಗೌಡರು ಏನೆಲ್ಲ ಸಲಹೆ ಕೊಟ್ಟಿದ್ದಾರೋ ಅವುಗಳನ್ನು ಗಂಭೀರವಾಗಿ ಪರಿಗಣಿಸ್ತೇವೆ. ಏನೆಲ್ಲ ಬದಲಾವಣೆ ಮಾಡಲು ಸಾಧ್ಯವೋ ಅದರ ಸಂಬಂಧ ತೀರ್ಮಾನಗಳನ್ನು ಮಾಡ್ತೇವೆ. ಅವರಿಗೆ ಉತ್ತರವನ್ನು ಗೌರವಪೂರ್ವಕವಾಗಿ ಬರೆಯುತ್ತೇನೆ ಎಂದು ತಿಳಿಸಿದ್ದಾರೆ
SSLC ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರ
ಶಿಕ್ಷಣ ಇಲಾಖೆ ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆಯ (SSLC Supplementary exam) ವೇಳಾಪಟ್ಟಿಯನ್ನು ಪ್ರಕಟಿಸಿದೆ. 2022 ಜೂನ್ 26 ರಿಂದ 2022 ಜುಲೈ 04 ರಿಂದ ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆ ನಡೆಯಲಿದೆ. ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಅನುತ್ತೀರ್ಣವಾದ ವಿದ್ಯಾರ್ಥಿಗಳು ಮೇ. 20 ರಿಂದ ಮೇ. 30 ರೊಳಗೆ ಆನ್‌ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಸೂಚಿಸಲಾ
ಇದನ್ನೂ ಓದಿ: SSLC ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ; ಜೂನ್ 27 ರಿಂದ ಜುಲೈ 4ರವರೆಗೆ ಎಕ್ಸಾಂ
ಶಿಕ್ಷಣ ಇಲಾಖೆಯಿಂದ ಸಹಾ
ಪೂರಕ ಪರೀಕ್ಷೆಗೆ ಸಂಬಂಧಿಸಿದಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸಹಾಯವಾಣಿಯನ್ನು ತೆರೆದಿದೆ. ಪೋಷಕರು ಹಾಗೂ ವಿದ್ಯಾರ್ಥಿಗಳು ಈ ಕೆಳಕಂಡ ಸಂಖ್ಯೆಗಳಿಗೆ ಕರೆ ಮಾಡಿ ಇರುವ ಗೊಂದಲಗಳನ್ನು ಪರಿಹರಿಸಿಕೊಂಡು ಮಾಹಿತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. 080- 23310075, 23310076, 23562267 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಯವಾಣಿಗಿದೆ.ಕಟ.ನೆ”ರಲ್ರೆ.ವೆ”.ಡಿ267 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು
Post a Comment