BMTC ಪ್ರಯಾಣಿಕರಿಗೆ ಶಾಕಿಂಗ್​ ನ್ಯೂಸ್​; ಶೇ.35ರಷ್ಟು ಬಿಎಂಟಿಸಿ ಬಸ್ ಪ್ರಯಾಣ ದರ ಏರಿಕೆ ಸಾಧ್ಯತೆ ಬಿಎಂಟಿಸಿ ಬಸ್​ ಪ್ರಯಾಣ ದರ ಏರಿಕೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಸದ್ಯ ಈ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಸಮ್ಮತಿ ಸೂಚಿಸಿದ್ರೆ ಬಿಎಂಟಿಸಿ ಬಸ್​ ಪ್ರಯಾಣ ದರ ಏರಿಕೆಯಾಗೋ ಸಾಧ್ಯತೆ ಇದೆ.

 ಬೆಂಗಳೂರು (ಜೂ.11): ದಿನಬಳಕೆ ವಸ್ತುಗಳು ಗಗನಕ್ಕೇರಿ ಆಯ್ತು, ಪೆಟ್ರೋಲ್ ಹಾಗೂ ಡೀಸೆಲ್ (Petrol And diesel) ಬೆಲೆ ಅಂತೂ ಬಲು ದುಬಾರಿ ಆಗಿದೆ. ಪೆಟ್ರೋಲ್ ಡಿಸೇಲ್ ದರ ಹೆಚ್ಚಾದ ಹಿನ್ನೆಲೆ ಬಿಎಂಟಿಸಿ ಪ್ರಯಾಣಿಕರ ಮೇಲೆ ಮತ್ತಷ್ಟು ಹೊರೆ ಬೀಳೋ ಸಾಧ್ಯತೆ ಇದೆ. ಬಿಎಂಟಿಸಿ (BMTC) ಬಸ್ ಪ್ರಯಾಣ ದರ ಏರಿಕೆ (Price Hike) ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಸದ್ಯ ಈ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಸಮ್ಮತಿ ಸೂಚಿಸಿದ್ರೆ ಬಿಎಂಟಿಸಿ ಬಸ್ ಪ್ರಯಾಣ ದರ ಏರಿಕೆಯಾಗೋ ಸಾಧ್ಯತೆ ಇದೆ. ಇಂಧನ ಬೆಲೆ, ಹೋಟೆಲ್ ತಿಂಡಿ, ಔಷಧಿಗಳ ಬೆಲೆ ಏರಿಕೆ ಬೆನ್ನಲ್ಲೇ ಇದೀಗ ಬಸ್ ಪ್ರಯಾಣಿಕರಿಗೆ ಟಿಕೆಟ್ ಬೆಲೆ ಏರಿಕೆ ಶಾಕ್ ಕೊಡಲು ರಾಜ್ಯ ಸರ್ಕಾರ (Government) ಮುಂದಾಗಿದೆ. ಇನ್ನು ಈಗಾಗಲೇ ನಷ್ಟದಲ್ಲಿರೋ ಬಿಎಂಟಿಸಿ ದರ ಏರಿಕೆ ಮಾಡೋದು ಅನಿವಾರ್ಯ ಎಂದು ಹೇಳುತ್ತಿದೆ. ಈ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ  ಪರಿಶೀಲನೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ.

2 ಬಾರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾಬಸ್ ಪ್ರಯಾಣ ದರ ಏರಿಕೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಈಗಾಗಲೇ ಬಿಎಂಟಿಸಿ ಪ್ರಸ್ತಾವನೆ ಸಲ್ಲಿಸಿದೆ. 2 ಬಾರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಮೊದಲ ಬಾರಿ ಶೇ.20ರಷ್ಟು ಬಸ್ ಟಿಕೆಟ್ ದರ ಏರಿಕೆಗೆ ಪ್ರಸ್ತಾಪಿಸಿತ್ತು. ಈಗ 2ನೇ ಪ್ರಸ್ತಾವನೆಯಲ್ಲಿ ಶೇ.35ರಷ್ಟು ದರ ಏರಿಕೆಗೆ ಬೇಡಿಕೆ ಇಟ್ಟಿದೆ. 2 ತಿಂಗಳ ಹಿಂದಷ್ಟೇ ಬಿಎಂಟಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಒಪ್ಪಿದರೆ ಬಿಎಂಟಿಸಿ ಬಸ್ ಪ್ರಯಾಣ ದರ ಹೆಚ್ಚಳವಾಗುವ ಸಾಧ್ಯತೆ ಇದೆ

ಜನರಿಗೆ ಬಿಎಂಟಿಸಿ ಟಿಕೆಟ್ ದರ ಹೆಚ್ಚಳದ ಆ

ಏಪ್ರಿಲ್ ತಿಂಗಳಿನಲ್ಲಿ ಇಂಧನ, ಗ್ಯಾಸ್, ಹೋಟೆಲ್ ತಿಂಡಿ ದರ ಏರಿಕೆ ಬೆನ್ನಲ್ಲೇ ಜನರಿಗೆ ಬಿಎಂಟಿಸಿ ಟಿಕೆಟ್ ದರ ಹೆಚ್ಚಳದ ಆತಂಕ ಶುರುವಾಗಿದ್ದು, ಸತತವಾಗಿ ಭಾರೀ ನಷ್ಟದಲ್ಲಿ ಮುನ್ನಡೆಯುತ್ತಿರುವ ಬಿಎಂಟಿಸಿ ಮೇಲೆತ್ತಲು ಪ್ರಯಾಣ ದರ ಏರಿಕೆ ಅಗತ್ಯ ಎಂದು ಪ್ರಯಾಣ ಟಿಕೆಟ್ ದರ ಹೆಚ್ಚಿಸಲು ಮುಂದಾಗಿ

ಇದನ್ನೂ ಓದಿ: Basavaraj Bommai: ‘ನೂಪುರ್ ಶರ್ಮಾ ಹೇಳಿಕೆ ಖಂಡಿಸಿ ಪ್ರತಿಭಟನೆ; ಶೂಟ್ ಆನ್ ಸೈಟ್ ಆರ್ಡರ್ ಕೊಡೋ ಅಗತ್ಯವಿಲ್ಲ

ನಷ್ಟದಲ್ಲಿ ಬಿಎಂಟಿಸಿ 

ಬಿಎಂಟಿಸಿ ನಷ್ಟದಲ್ಲಿ ಸಾಗುತ್ತಿದೆ. ಈ ಬಾರಿ ಬಸ್ ದರ ಏರಿಸದಿದ್ದರೆ ಬಸ್ ಓಡಿಸುವುದು ಕಷ್ಟ ಎಂದು ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಬಿಎಂಟಿಸಿ ಸಂಸ್ಥೆ ಮನವರಿಕೆ ಮಾಡಿಕೊಟ್ಟಿದೆ. ಸದ್ಯ ಈ ಬಗ್ಗೆ ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ

ಟಿಕೆಟ್ ದರ ಶೇ.35ರಷ್ಟು ದರ ಏರಿಕೆ

ಟಿಕೆಟ್ ದರ ಶೇ.35ರಷ್ಟು ದರ ಏರಿಕೆ ಅಸಾಧ್ಯ, ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಮಾಡುತ್ತೇನೆ ಎಂದು ಸಿಎಂ ಬೊಮ್ಮಾಯಿ ಟಿಕೆಟ್ ದರ ಏರಿಕೆ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಮುಖ್ಯಮಂತ್ರಿಗಳು ಒಪ್ಪಿದರೆ ಜನರ ಜೇಬಿಗೆ ಕತ್ತರಿ ಬೀಳುವುದಂತು ಖಂ

ಇದನ್ನೂ ಓದಿ: Council Election: ಪ್ರಭಾಕರ್ ಕೋರೆ ಭೇಟಿಯಾದ ಸಿಎಂ ಬೊಮ್ಮಾಯಿ; ಯಾರಾದ್ರೂ ಬಿ ಟೀಂ ಆಗಲಿ, ನಾವ್ ಮಾತ್ರ ಎ 

ಸ್ಟೇಜ್ ವೈಸ್ ದರವೂ ಹೆಚ್ಚಲಿ

ಬಿಎಂಟಿಸಿ ಬಸ್ ದರ ಶೇ.35ರಷ್ಟು ಏರಿಕೆಯಾದರೆ ಸ್ಟೇಜ್ (ಹಂತ) ವೈಸ್ ದರವೂ ಹೆಚ್ಚಾಗಲಿದೆ. ಆರಂಭಿಕ ದರ ಈಗ 5 ರೂ. ಇದ್ದು, ಶೇ.35 ಹೆಚ್ಚಾದ ನಂತರ 6.75 ಪೈಸೆ ಆಗಲಿದೆ. ಈ ವೇಳೆ ಚಿಲ್ಲರೆ ಸಮಸ್ಯೆ ಒಡ್ಡಿ ಬಿಎಂಟಿಸಿ 7 ರೂ.ಗೆ ಹೆಚ್ಚಳ ಮಾಡಬಹುದು. ಇನ್ನು ಇದೇ ವೇಳೆ 10 ರೂ. ಇರುವ ದರ 13 ರೂ. 15 ಇರುವ ದರ 20 ರೂ. ಹೀಗೆ ಏರಿಕೆ ಆಗಲಿದೆ. ಬಿಎಂಟಿಸಿ ಬಸ್ ಪ್ರಯಾಣ ದರ ಹೆಚ್ಚಳ ಪ್ರಸ್ತಾವನೆ ಜಾರಿಗೆ ಬಂದರೆ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆದೆಟೀಂಡಿತ.!?.ಇಲಾಖೆ‘ದೆ.ತಂಕ.ವನೆಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ

Post a Comment

Previous Post Next Post