ಚಿಕ್ಕಮಗಳೂರು: ಎಂಟಿಎಂನಿಂದ (ATM) ಹಣ ತೆಗೆಯಲು (Money Draw) ಸಹಾಯ (Help) ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್ (ATM Card) ಬದಲಾಯಿಸಿ ವಂಚಿಸುತ್ತಿದ್ದ ಆರೋಪಿಯನ್ನು (Accused) ಬಂಧಿಸುವಲ್ಲಿ ಚಿಕ್ಕಮಗಳೂರು ಪೊಲೀಸರು (Chikkamagalur Police) ಯಶಸ್ವಿಯಾಗಿದ್ದಾರೆ. ತಮಿಳುನಾಡು (Tamil Nadu) ರಾಜ್ಯದ ತೇನಿ ಜಿಲ್ಲೆಯ ತಂಬಿರಜು ಬಂಧಿತ ಆರೋಪಿ. ಇತ್ತೀಚೆಗೆ ಮೂಡಿಗೆರೆ ಪಟ್ಟಣದ ಕಾಫಿ ಬೆಳೆಗಾರ ಉದಯಕುಮಾರ್ ಎಂಬುವರು ಕರ್ನಾಟಕ ಬ್ಯಾಂಕ್ ಎಟಿಎಂನಲ್ಲಿ (Karnataka Bank ATM) ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ಆರೋಪಿ ತಂಬಿರಜು ಎಟಿಎಂ ಕಾರ್ಡ್‍ನ್ನು ಬದಲಾ ಯಿಸಿ ವಂಚಿಸಿದ್ದ.
ಕಾರ್ಡ್ ಎಗರಿಸಿ, ಚಿನ್ನ ಖರೀದಿಸಿದ್ಚಕ್ಕಮಗಳೂರು ನಗರದಲ್ಲಿ 25 ಸಾವಿರ ರೂ. ಡ್ರಾ ಮಾಡಿ ಬಳಿಕ ಜ್ಯೂವೆಲರಿ ಶಾಪ್ ವೊಂದರಲ್ಲಿ 75 ಸಾವಿರ ರೂ. ಸ್ವೈಪ್ ಮಾಡಿ ಚಿನ್ನ ಖರೀದಿಸಿದ್ದ ಈ ಸಂಬಂಧ ಉದಯಕುಮಾರ್ ಅವರು ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು
ಆರೋಪಿ ಬಂಧನಕ್ಕಾಗಿ ಪೊಲೀಸ್ ತಂಡ
ವಂಚನೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಆರೋಪಿ ಬಂಧನಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್ ಹಾಗೂ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ತಂಡವನ್ನು ರಚಿಸಲಾಗಿತ್ತ
ಈ ತಂಡದಲ್ಲಿ ವಂಚನೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಆರೋಪಿ ಬಂಧ ನಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್ ಹಾಗೂ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ಮೂಡಿಗೆರೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಆದರ್ಶ, ಗೋಣಿಬೀಡು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಧನಂಜಯ್, ಸಿಬ್ಬಂದಿ ಗಿರೀಶ್, ಲೋಹಿತ್, ವಸಂತಕುಮಾರ್, ಲೋಕೇಶ್, ಸುನೀಲ್, ಪ್ರದೀಪ್, ಉಮೇಶ್ ಮತ್ತಿತರರು ಇದ್ದ
ಇದನ್ನೂ ಓದಿ: Kuja Dosha: ಪ್ರೀತಿಸಿದವನ ಜೊತೆ ಮದುವೆಗೆ ಕುಜದೋಷವೇ ಅಡ್ಡಿಯಾಯ್ತು! ನೊಂದ ಲೇಡಿ ಕಾನ್ಸ್‌ಟೇಬಲ್ ಸಾವಿಗೆ
ಮಡಿಕೇರಿಯಲ್ಲಿ ಆರೋಪಿಗೆ ಕೋ
ತಕ್ಷಣ ಕಾರ್ಯಾಪ್ರವೃತ್ತವಾದ ಈ ತಂಡ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದು, ಮಡಕೇರಿಯಲ್ಲಿ ಆರೋಪಿ ತಂಬಿರಜು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ
ವಿಚಾರಣೆ ವೇಳೆ ಹಲವು ಪ್ರಕರಣಗಳು ಬೆಳಕಿ
ಹೆಚ್ಚಿನ ವಿಚಾರಣೆಗೆ ಆರೋಪಿಯನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ತರೀಕೆರೆ, ಮಂಡ್ಯ ಜಿಲ್ಲೆಯ ಮಳವಳ್ಳಿ, ಕೆ.ಆರ್. ಪೇಟೆ, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರಿ ಹಾಗೂ ಬೆಂಗಳೂರಿನಲ್ಲಿ ಎಟಿಎಂನಲ್ಲಿ ಹಣ ಡ್ರಾ ಮಾಡಲು ಸಹಾ ಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್ ಬದಲಾಯಿಸಿ ಮೋಸ ಮಾಡಿರುವ ಕೃತ್ಯ ಬೆಳಕಿಗೆ ಬಂದಿ
ತಮಿಳುನಾಡಲ್ಲೂ 11 ಪ್ರಕರಣ ದಾ
ಎಟಿಎಂ ಕಾರ್ಡ್ ಬದಲಾಯಿಸಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದ ಈತ ನಂತರ ಜ್ಯೂವೆಲೆರಿ ಶಾಪ್‍ಗಳಲ್ಲಿ ತೆರಳಿ ಕಾರ್ಡ್ ಸ್ವೈಪ್ ಮಾಡಿ ಚಿನ್ನವನ್ನು ಖರೀದಿಸುತ್ತಿದ್ದನೆಂಬುದು ತನಿಖೆ ವೇಳೆ ತಿಳಿದು ಬಂದಿದೆ. ಈತನ ಮೇಲೆ ತಮಿಳುನಾಡಿನಲ್ಲಿ 11ಪ್ರಕರಣಗಳು ದಾಖಲಾಗಿದ್ದು, ವಿಚಾರಣೆ ಹಂತದಲ್ಲಿ
ಇದನ್ನೂ ಓದಿ: Hubballi: ಸಹೋದರರಿಗೆ ಚಾಕುವಿನಿಂದ ಇರಿದು ಎಸ್ಕೇಪ್; ಇಂದು ನೇರವಾಗಿ ಕೋರ್ಟ್ಗೆ ಬಂದು ಶರಣಾದ ಆರೋಪಿ
ಬಂಧಿತನಿಂದ ಹಣ, ಕಾರ್ಡ್, ಚಿನ್ನಾಭರಣ ಜ
ಬಂಧಿತ ಆರೋಪಿಯಿಂದ 70 ವಿವಿಧ ಬ್ಯಾಂಕ್‍ಗಳ ಎಟಿಎಂ ಕಾರ್ಡ್, 60 ಗ್ರಾಂ. ಚಿನ್ನ, 35 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ 7 ಪ್ರಕರಣಗಳು ದಾಖಲಾಗಿದ್ದು ತನಿಖೆ ಮುಂದುವರೆಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್. ಅಕ್ಷಯ್ ತಿಳಿಸಿದ್ದಾರೆ.ಪ್ತಿಗಳುದೆ.ಖಲುದೆ.ಗೆರು.ಳ ಶರಣುರು..ರಚನೆ.ಪಿಷ್ಠಾಧಿಕಾರಿ ಎಂ.ಎಚ್. ಅಕ್ಷಯ್ ತಿಳಿಸಿದ್ದಾರೆ.

Post a Comment