ತ್ತೀಚಿನ ದಿನಗಳಲ್ಲಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚುತ್ತಿರುವುದರಿಂದ ಹೊಟ್ಟೆ ಉಬ್ಬರ (Bloating) ಬಹಳ ಸಾಮಾನ್ಯವಾಗಿದೆ. ಕೆಲವರಲ್ಲಿ ಇದು ಅಷ್ಟು ತೀವ್ರವಾಗುತ್ತದೆ ಎಂದರೆ ಉಸಿರಾಟಕ್ಕೂ ತೊಂದರೆ ಉಂಟಾಗುತ್ತದೆ. ಸಾಮಾನ್ಯವಾಗಿ ಜನರು ಔಷಧಿಯ ಸೇವನೆಗೆ ಮೊರೆಹೋಗುತ್ತಾರೆ.
ಆದರೆ ನೈಸರ್ಗಿಕ ವಿಧಾನಗಳ ಮೂಲಕವೂ ಈ ಸಮಸ್ಯೆಯಿಂದ ಬೇಗನೇ ಪರಿಹಾರ ಪಡೆಯಬಹುದಾಗಿದೆ ಎಂದು ಪೌಷ್ಠಿಕ ತಜ್ಞೆ ನೇಹಾ ಸಹಾಯ್ ತಿಳಿಸಿದ್ದಾರೆ. ನೇಹಾ ಸಹಾಯ್ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊ ಹಂಚಿಕೊಂಡಿದ್ದು, ಸುಲಭವಾಗಿ ಮನೆಯಲ್ಲೇ ತಯಾರಿಸಬಹುದಾದ ಒಂದು ಪಾನೀಯವು ಹೊಟ್ಟೆ ಉಬ್ಬರಕ್ಕೆ ಪರಿಣಾಮಕಾರಿ ಎಂದು ಹೇಳಿದ್ದಾರೆ.
ಹೊಟ್ಟೆ ಉಬ್ಬರ ನಿವಾರಣೆಗೆ ಮನೆಮದ್ದು - ಬೇಕಾಗುವ ಪದಾರ್ಥಗಳು
ಕೇವಲ ನಾಲ್ಕು ಸಾಮಾನ್ಯ ಪದಾರ್ಥಗಳ ಬಳಕೆಯಿಂದ ಈ ಪಾನೀಯ ತಯಾರಿಸಬಹುದು:
1-2 ಸಣ್ಣ ಚಮಚ ಸಕ್ಕರೆ
1 ತುಂಡು ಶುಂಠಿ
4-5 ಪುದೀನ ಎಲೆಗಳು
ಸ್ವಲ್ಪ ನಿಂಬೆ ರಸ
ಈ ಪದಾರ್ಥಗಳನ್ನು ಒಂದು ಲೋಟ ಬೆಚ್ಚಗಿನ ನೀರಿಗೆ ಹಾಕಿ, ಸುಮಾರು 5 ನಿಮಿಷಗಳ ಕಾಲ ಮುಚ್ಚಿಡಬೇಕು. ನಂತರ ನೀರನ್ನು ಸೋಸಿಕೊಂಡು ನಿಧಾನವಾಗಿ ಕುಡಿಯಬೇಕು. ನೀರು ತುಂಬಾ ಬಿಸಿಯಾಗಿರಬಾರದು ಎಂದು ಸೂಚಿಸಲಾಗಿದೆ.
ಈ ಮಿಶ್ರಣ ಆರೋಗ್ಯಕ್ಕೆ ಹೇಗೆ ಕೆಲಸ ಮಾಡುತ್ತದೆ?
ಶುಂಠಿ ಜೀರ್ಣಕ್ರಿಯೆಯನ್ನು ವೇಗಗೊಳಿಸಿ ಎದೆಯುರಿ ಕಡಿಮೆ ಮಾಡಲು ಸಹಾಯಕ.
ಪುದೀನ ದೇಹವನ್ನು ತಂಪಾಗಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ನಿಂಬೆ ದೇಹದಲ್ಲಿರುವ ಹೆಚ್ಚುವರಿ ಸೋಡಿಯಂ ಹಾಗೂ ಅನಗತ್ಯ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.
ಈ ಮಿಶ್ರಣ ಅನಿಲವನ್ನು ಹೊರಹಾಕಿ ಹೊಟ್ಟೆಯ ಊತ ಕಡಿಮೆ ಮಾಡುತ್ತದೆ.
ಪೌಷ್ಠಿಕ ತಜ್ಞರ ಪ್ರಕಾರ, ಬೆಚ್ಚಗಿನ ನೀರಿನೊಂದಿಗೆ ಈ ಪದಾರ್ಥಗಳನ್ನು ಸೇರ್ಪಡಿಸಿ ಸೇವನೆ ಮಾಡಿದರೆ ಹೊಟ್ಟೆ ಉಬ್ಬರ ಹಾಗೂ ಜೀರ್ಣಕಾರಿ ಸಮಸ್ಯೆಗಳಲ್ಲಿ ತ್ವರಿತ ಪರಿಹಾರ ಸಿಗಬಹುದು.

Post a Comment