ಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ (Karnataka Police Department) ಪೊಲೀಸ್ ಪೇದೆ ನೇಮಕಕ್ಕೆ ಸಿಎಂ ಸಿದ್ದರಾಮಯ್ಯ ಅನುಮತಿ ನೀಡಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ (Dr̤ G Parameshwar) ಅವರು ಹೇಳಿದ್ದಾರೆ.
8,500 ಪೊಲೀಸ್ ಪೇದೆ ನೇಮಕ
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಕಡೆಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ 'ಪೊಲೀಸ್ ಸಿಬ್ಬಂದಿಗಳ ಪೀಕ್ ಕ್ಯಾಪ್ ಪರಿಚಯ ಮತ್ತು ವಿತರಣೆ' ಹಾಗೂ 'ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ANTF) ಉದ್ಘಾಟನೆ' ಮತ್ತು 'ಸನ್ಮಿತ್ರ ಬಿಡುಗಡೆ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದು, ರಾಜ್ಯದಲ್ಲಿ 8,500 ಪೊಲೀಸ್ ಪೇದೆ ನೇಮಕಕ್ಕೆ ಸಿಎಂ ಸಿದ್ದರಾಮಯ್ಯ ಅನುಮತಿ ಕೊಟ್ಟಿದ್ದು, ಬಹಳ ಬೇಗ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಸದ್ಯ ರಾಜ್ಯದಲ್ಲಿ ಪೇದೆ, ಪಿಎಸ್‌ಐ ನೇಮಕಾತಿ ಮಾಡಲು ಮುಖ್ಯಮಂತ್ರಿಗಳು ಅನುಮತಿ ನೀಡಿದ್ದಾರೆ. ನಮ್ಮಲ್ಲಿ ಕೆಎಸ್‌ಆರ್‌ಪಿ, ಸಿಎಆರ್, ಸಿವಿಲ್ ಸೇರಿದಂತೆ ಸುಮಾರು 16 ಸಾವಿರ ಪೊಲೀಸ್ ಪೇದೆ ಹುದ್ದೆಗಳು ಖಾಲಿ ಇವೆ. ಹಾಗಾಗಿ ಈಗ 8500 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ನಮ್ಮ ಪೊಲೀಸ್ ವ್ಯವಸ್ಥೆ ನಂಬರ್ 1 ಸ್ಥಾನದಲ್ಲಿದೆ
ಅಲ್ಲದೇ, ನಮ್ಮ ರಾಜ್ಯ ಪೊಲೀಸ್ ವ್ಯವಸ್ಥೆಯು ದೇಶದಲ್ಲಿಯೇ ಉತ್ತವಾದ ಪೊಲೀಸ್ ವ್ಯವಸ್ಥೆಯಾಗಿದೆ. ಈ ವಿಚಾರದಲ್ಲಿ ನನಗೆ ತುಂಬಾ ಹೆಮ್ಮೆ ಇದೆ. ಈ ವಿಚಾರ ಇಂಡಿಯಾ ಜಸ್ಟೀಸ್ ಸಮೀಕ್ಷೆಯ ರಿಪೋರ್ಟ್ ನಲ್ಲಿ ಬಹಿರಂಗವಾಗಿದೆ. ಈ ಸಮೀಕ್ಷೆಯನ್ನ ಪೊಲೀಸ್ ಇಲಾಖೆಗಳು ಯಾವ ರೀತಿ ಕೆಲಸ ಮಾಡುತ್ತದೆ, ನಾಗರಿಕರಿಗೆ ನ್ಯಾಯ ಹೇಗೆ ಸಿಗುತ್ತದೆ ಎಂಬೆಲ್ಲಾ ಅನೇಕ ಮಾನದಂಡಗಳನ್ನ ಇಟ್ಟುಕೊಂಡು ಮಾಡಲಾಗುತ್ತದೆ. ಈ ಸಮೀಕ್ಷೆಯ ಪ್ರಕಾರ ಕರ್ನಾಟಕ ನಂಬರ್ 1 ಸ್ಥಾನದಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಹಿಂದೆ ಬ್ರಿಟಿಷರ ಕಾಲದಲ್ಲಿ ನಮ್ಮ ದೇಶದ ಪೊಲೀಸರಿಗೆ ಬೇರೆ ರೀತಿಯ ಸಮವಸ್ತ್ರ ಕೊಡುತ್ತಿದ್ದರು. ಅಲ್ಲದೇ ಬೇರೆ ರೀತಿಯಾಗಿ ನಡೆಸಿಕೊಳ್ಳುತ್ತಿದ್ದರು. ಆದರೆ ಸ್ವಾತಂತ್ರ್ಯ ಬಂದ ನಂತರ ನಮ್ಮ ಪೊಲೀಸ್ ಇಲಾಖೆಯಲ್ಲಿ ಅನೇಕ ಬದಲಾವಣೆಗಳನ್ನ ಮಾಡಲಾಗಿದೆ. ಬ್ರಿಟೀಷರ ಸಮಯದಲ್ಲಿ ಸ್ಲೋಚ್ ಹ್ಯಾಟ್ ಹಾಕಿಕೊಳ್ಳುತ್ತಿದ್ದರು. 1953ರಲ್ಲಿ ಆರ್ಮ್ ಫೋರ್ಸ್‌ಗೆ ಹ್ಯಾಟ್ ಹಾಕುವುದನ್ನ ಆರಂಭ ಮಾಡಲಾಯಿತು. 1973ರಲ್ಲಿ ದೇವರಾಜು ಅರಸು ಅವರು ಸಿಎಂ ಆಗಿದ್ದ ಸಮಯದಲ್ಲಿ ಪೊಲೀಸ್ ಇಲಾಖೆಗೆ ಸ್ಲೋಚ್ ಹ್ಯಾಟ್ ಪರಿಚಯ ಮಾಡಿದ್ದು, ಅಲ್ಲಿಂದ ಇಲ್ಲಿಯವರೆಗೆ ಯಾವುದೇ ಬದಲಾವಣೆ ಆಗಿಲ್ಲ ಎಂದು ತಿಳಿಸಿದ್ದಾರೆ.
ಪೊಲೀಸರಿಗೆ ಈ ಕ್ಯಾಪ್‌ನಿಂದ ಬಹಳ ಸಮಸ್ಯೆ ಆಗುತ್ತಿದೆ. ಮಳೆ ಬಂದ ಸಮಯದಲ್ಲಿ ಅದರ ತೂಕ ಜಾಸ್ತಿ ಆಗುತ್ತದೆ ಹಾಗೂ ನೋಡುವುದಕ್ಕೆ ಸಹ ಚೆನ್ನಾಗಿ ಕಾಣುವುದಿಲ್ಲ ಎಂದು ಅದನ್ನ ಬದಲಾವಣೆ ಮಾಡಲು ಅನೇಕ ಬಾರಿ ಬೇಡಿಕೆ ಇಟ್ಟಿದ್ದಾರೆ. 2015ರಲ್ಲಿ ನಾನು ಗೃಹ ಸಚಿವನಾಗಿದ್ದ ಸಮಯದಲ್ಲಿ ಸಹ ಬದಲಾವಣೆ ಮಾಡಲು ಮನವಿ ಮಾಡಿದ್ದರು, ಆದರೆ ಕೆಲವೊಂದು ಕಾರಣಗಳಿಂದ ಅದನ್ನ ಮಾಡಲು ಆಗಿಲ್ಲ.
ಈ ಬಾರಿ ಪ್ರಸ್ತಾವನೆ ಬಂದಾಗ ಅವುಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಬೇರೆ ರಾಜ್ಯದಲ್ಲಿ ಯಾವ ರೀತಿ ಕ್ಯಾಪ್ ಧರಿಸುತ್ತಾರೆ ಎಂಬ ಮಾಹಿತಿ ಪಡೆದುಕೊಂಡು ಸದ್ಯ ನೀಲಿ ಬಣ್ಣದ ಕ್ಯಾಪ್ ಅನ್ನು ಸಿಎಂ ಸಿದ್ದರಾಮಯ್ಯ ಸೆಲೆಕ್ಟ್ ಮಾಡಿದ್ದಾರೆ. ಪೊಲೀಸ್ ಇಲಾಖೆಗೆ ಇಂದು ಐತಿಹಾಸಿಕ ದಿನ ಎಂದು ಪರಮೇಶ್ವರ್ ಹೇಳಿದ್ದಾರೆ.

Post a Comment