ಇಂದಿನಿಂದ ರಾಜ್ಯದ 1 ಲಕ್ಷಕ್ಕೂ ಅಧಿಕ ಪೊಲೀಸರ ಕ್ಯಾಪ್‌ ಬದಲು


 ಗಳೂರು: ರಾಜ್ಯದ ಪೊಲೀಸ್ ಸಿಬ್ಬಂದಿ ಧರಿಸುತ್ತಿದ್ದ ಹಳೇ ಕಾಲದ ಸ್ಲೋಚ್ ಹ್ಯಾಟ್‌ ಯುಗ ಕೊನೆಗೂ ಅಂತ್ಯಗೊಂಡಿದ್ದು ಅ.28ರಿಂದ (ಮಂಗಳವಾರ) ಹೊಸ ಕ್ಯಾಪ್‌ ಚಾಲ್ತಿಗೆ ಬರಲಿದೆ. ಈ ಮೂಲಕ ರಾಜ್ಯದ ಪೊಲೀಸರ ಬರೋಬ್ಬರಿ 4 ದಶಕಗಳ ಬೇಡಿಕೆ ಈಡೇರಿದಂತಾಗಿದೆ.

ಮೈಸೂರು ಮಹಾರಾಜರ ಕಾಲದ ಪೇಟಾ ಟೋಪಿಗೆ ವಿದಾಯ ಹಾಡಿ ಆಗಿನ ಮುಖ್ಯಮಂತ್ರಿ ಆರ್‌.

 ಗುಂಡೂರಾವ್‌ ಅವರು ಖಾಕಿ ಬಣ್ಣದ ಮಡಿಕೆಯ ಸ್ಲೋಚ್‌ ಟೋಪಿಗಳಿಗೆ ನಾಂದಿ ಹಾಡಿದ್ದರು. ಅಂದಿನಿಂದ ಇಂದಿನವರೆಗೆ ರಾಜ್ಯದ ಕಾನ್‌ಸ್ಟೇಬಲ್‌ಗಳು ಮತ್ತು ಹೆಡ್‌ ಕಾನ್‌ಸ್ಟೇಬಲ್‌ಗಳು ಇದೇ ಹ್ಯಾಟ್‌ ಅನ್ನು ಬಳಸುತ್ತಿದ್ದರು. ಆದರೆ, ಪೊಲೀಸರ ಈ ಸ್ಲೋಚ್‌ ಹ್ಯಾಟ್‌ಗಳ ಬಗ್ಗೆ ಕೆಲವು ಅಪಸ್ವರಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಹೊಸ ಮಾದರಿಯ ನೇವಿ ಬ್ಲೂ ಬಣ್ಣದ ಪೀಕ್‌ ಕ್ಯಾಪ್‌ಗಳಿಗೆ ಸರ್ಕಾರ ಅಸ್ತು ಎಂದಿದೆ. ಈ ಕ್ಯಾಪ್‌ಗಳು ಇನ್ನು ಮುಂದೆ ರಾಜ್ಯದ ಪೊಲೀಸರ ತಲೆ ಮೇಲೆ ರಾರಾಜಿಸಲಿವೆ.


ನೂತನ ನೀಲಿ ಬಣ್ಣದ ಪೀಕ್‌ ಕ್ಯಾಪ್‌ನಲ್ಲಿ ಕಪ್ಪು ಬಣ್ಣದ ಟರ್ಬನ್, ಮುಂಭಾಗದ ಬಿಲ್ಲೆಯಲ್ಲಿ ರಾಜ್ಯದ ಲಾಂಛನ ಗಂಡಬೇರುಢ ಮತ್ತು ಮೇಲ್ಭಾಗದಲ್ಲಿ 3 ತಲೆಯ ಸಿಂಹ ಇರಲಿದೆ. ಎಲಾಸ್ಟಿಕ್‌ ಹೊಂದಿರುವ ಈ ಕ್ಯಾಪ್‌ಗಳು ಪೊಲೀಸರ ತಲೆಗೆ ಸಮಪರ್ಕವಾಗಿ ಕೂರಲಿವೆ. ಇದರಿಂದ ರಾಜ್ಯದ ಅಂದಾಜು 1 ಲಕ್ಷ ಪೊಲೀಸರಿಗೆ ಅನುಕೂಲವಾಗಲಿದೆ ಎಂದು ತಿಳಿದು ಬಂದಿದೆ. ಈಗಾಗಲೇ ನೆರೆಯ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳದಲ್ಲಿ ಇದೇ ಮಾದರಿ ಕ್ಯಾಪ್‌ಗಳನ್ನು ಪೊಲೀಸರು ಬಳಸುತ್ತಿದ್ದಾರೆ.


ಸಿಎಂ ಸಾಂಕೇತಿಕ ಚಾಲನೆ:

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಮಂಗಳವಾರ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಗೃಹ ಸಚಿವ ಡಾ ಜಿ.ಪರಮೇಶ್ವರ್‌ ಅವರು ಪೊಲೀಸ್ ಸಿಬ್ಬಂದಿಗೆ ಸಾಂಕೇತಿಕವಾಗಿ ನೂತನ ಪೀಕ್‌ ಕ್ಯಾಪ್‌ ವಿತರಿಸಲಿದ್ದಾರೆ.


ಕಾರ್ಯಕ್ರಮದಲ್ಲಿ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್‌, ಪರಿಷತ್ ಸಭಾಪತಿ ಬಸವರಾಜ ಎಸ್‌.ಹೊರಟ್ಟಿ, ಜತೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ, ನಗರ ಪೊಲೀಸ್ ಆಯುಕ್ತ ಸೀಮಂತ್‌ ಕುಮಾರ್ ಸಿಂಗ್‌, ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಸೌಮೇಂದು ಮುಖರ್ಜಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.


ಸ್ಲೋಚ್‌ ಹ್ಯಾಟ್‌ ಯುಗಾಂತ್ಯ


ಹಳೇ ಕಾಲದ ಸ್ಲೋಚ್ ಹ್ಯಾಟ್‌ಗೆ ಕೊನೆಗೂ ವಿದಾಯ


- ಇಂದಿನಿಂದಲೇ ಪೊಲೀಸರ ತಲೆಯನ್ನೇರಲಿದೆ ಹೊಸ ಕ್ಯಾಪ್


- ಈಡೇರಿತು ಪೊಲೀಸರ ಬರೋಬ್ಬರಿ 4 ದಶಕಗಳ ಬೇಡಿಕೆ


- ಹೊಸ ಮಾದರಿಯ ನೇವಿ ಬ್ಲೂ ಬಣ್ಣದ ಪೀಕ್‌ ಕ್ಯಾಪ್‌ಗಳಿಗೆ ಸರ್ಕಾರ ಅಸ್ತು


- ಹೊಸ ಟೋಪಿಯಲ್ಲಿಕಪ್ಪು ಬಣ್ಣದ ಟರ್ಬನ್, ಮುಂಭಾಗದ ಬಿಲ್ಲೆಯಲ್ಲಿ ರಾಜ್ಯದ ಲಾಂಛನ ಗಂಡಬೇರುಢ, ಮೇಲ್ಭಾಗದಲ್ಲಿ 3 ತಲೆಯ ಸಿಂಹ ಇರಲಿದೆ


- ಎಲಾಸ್ಟಿಕ್‌ ಹೊಂದಿರುವ ಈ ಕ್ಯಾಪ್‌ಗಳು ಪೊಲೀಸರ ತಲೆಗೆ ಸಮಪರ್ಕವಾಗಿ ಕೂರಲಿವೆ

Post a Comment

Previous Post Next Post