ಮನೆಯಲ್ಲೇ ಇದ್ದರೂ ಪೊಲೀಸರನ್ನೇ ಅಲೆದಾಡಿಸಿದ ಎಐ ಸಮೀರನ ಮನೆಗೆ ಕೋರ್ಟ್ ವಾರೆಂಟ್‌ನೊಂದಿಗೆ ಎಂಟ್ರಿ!


  ಗಳೂರು/ಆನೇಕಲ್ (ಸೆ.04): ಕೃತಕ ಬುದ್ಧಿಮತ್ತೆ (AI) ವಿಡಿಯೋ ಒಂದಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಗಾಗಿ, ಬೆಳ್ತಂಗಡಿ ಪೊಲೀಸರು ಯೂಟ್ಯೂಬರ್ ಸಮೀರ್ ಅವರ ಬೆಂಗಳೂರಿನ ಮನೆಗೆ ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದುಕೊಂಡು ಪರಿಶೀಲನೆ ನಡೆಸಿದ್ದಾರೆ.

 ಶನಿವಾರ ಬೆಳಿಗ್ಗೆ ಬನ್ನೇರುಘಟ್ಟ ಸಮೀಪವಿರುವ ಸಮೀರ್ ಅವರ ಬಾಡಿಗೆ ಮನೆಗೆ ಬೆಳ್ತಂಗಡಿ ಸರ್ಕಲ್ ಇನ್‌ಸ್ಪೆಕ್ಟರ್ ನಾಗೇಶ್ ಕದ್ರಿ ನೇತೃತ್ವದ ತಂಡ ಮತ್ತು ಎಫ್.ಎಸ್.ಎಲ್ (FSL) ವಿಭಾಗದ ಸಿಬ್ಬಂದಿ ತೆರಳಿದ್ದಾರೆ. ಮೊದಲಿಗೆ ಪೊಲೀಸರು ಮನೆ ಬಾಗಿಲು ಬಡಿದರೂ, ಯಾರೂ ಬಾಗಿಲು ತೆಗೆದಿಲ್ಲ. ಇದರಿಂದಾಗಿ ಮನೆಯಲ್ಲಿ ಯಾರೂ ಇಲ್ಲ ಎಂದು ಭಾವಿಸಿ ಪೊಲೀಸರು ವಾಪಸ್ ಹೋಗಲು ಸಿದ್ಧರಾಗಿದ್ದರು. ಆದರೆ, ನಂತರ ಸಮೀರ್ ಅವರಿಗೆ ದೂರವಾಣಿ ಕರೆ ಮಾಡಿ ಪೊಲೀಸರು ವಿಚಾರಿಸಿದಾಗ, ಸಮೀರ್ ಮನೆಯಲ್ಲೇ ಇರುವುದು ತಿಳಿದುಬಂದಿದೆ. ಬಳಿಕ ಸಮೀರ್ ಕುಟುಂಬದವರು ಬಾಗಿಲು ತೆರೆದಿದ್ದು, ಪೊಲೀಸರು ಮನೆಯೊಳಗೆ ಪ್ರವೇಶಿಸಿದ್ದಾರೆ.


ನ್ಯಾಯಾಲಯದ ಸರ್ಚ್ ವಾರಂಟ್ ಆಧಾರದ ಮೇಲೆ ಪೊಲೀಸರು ಈ ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಮಾಡಲು ಬಳಸಿದ ಕಂಪ್ಯೂಟರ್ ಹಾಗೂ ಮೊಬೈಲ್ ಫೋನ್‌ಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ತನಿಖೆಗೆ ಯೂಟ್ಯೂಬರ್ ಸಮೀರ್ ಸರಿಯಾಗಿ ಸಹಕರಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.


ಧಾರ್ಮಿಕ ಶ್ರದ್ಧಾಕೇಂದ್ರ ಧರ್ಮಸ್ಥಳದ ವಿರುದ್ಧವಾಗಿ ಎಐ ರೀಲ್ಸ್‌ಗಳನ್ನು ರಚಿಸಿ ಅಪಪ್ರಚಾರ ಎಸಗಿದ್ದ ಆರೋಪದ ಮೇಲೆ ಪೊಲೀಸರಿಂದ ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಸಮೀರ್‌ ಎಂಡಿ ವಿಚಾರಣೆ ನಡೆಯುತ್ತಿದೆ. ಇದರ ನಡುವೆ ಬೆಳ್ತಂಗಡಿ ಪೊಲೀಸರು ಎಂಡಿ ಸಮೀರ್‌ನ ಯೂಟ್ಯೂಬ್‌ ಆದಾಯದ ಮೂಲದ ಬಗ್ಗೆಯೂ ತನಿಖೆ ಮಾಡುತ್ತಿದ್ದಾರೆ. ಪ್ರಕರಣದ ತನಿಖೆಗೆ ಬಹಳ ಮುಖ್ಯವಾದ ಹಣಕಾಸು ಸಾಕ್ಷ್ಯ ಸಂಗ್ರಹ ಮಾಡಲಾಗುತ್ತಿದೆ. ಯೂಟ್ಯೂಬ್ ಆದಾಯದ ದಾಖಲೆಗಳನ್ನು ತನಿಖಾಧಿಕಾರಿ‌ ಕೇಳಿದ್ದಾರೆ. ವೀಡಿಯೊ ಮಾಡಿದ ಉದ್ದೇಶ 'ಹಣಕಾಸು ಲಾಭ' ಆಗಿದೆಯೇ ಎಂದು ಪತ್ತೆ ಮಾಡಲು ದಾಖಲೆ ಸಂಗ್ರಹ ಮಾಡುತ್ತಿದ್ದಾರೆ. ಹೆಚ್ಚಿನ ಅದಾಯಕ್ಕಾಗಿ ತಪ್ಪು ಹಾಗೂ ಸುಳ್ಳು ವಿಷಯ ಹಂಚಿದ್ದಾನೆಯೇ ಎಂದು ದೃಢಪಡಿಸಲು ದಾಖಲೆಗಳನ್ನು ಸಿದ್ಧಮಾಡುತ್ತಿದ್ದಾರೆ.


YouTube Monetization (AdSense account) ಮೂಲಕ ಬಂದ ಆದಾಯವೆಷ್ಟು? ಬ್ಯಾಂಕ್ ಖಾತೆಗೆ ಟ್ರಾನ್ಸ್‌ಫರ್ ಆದ ಹಣದ ದಾಖಲೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಯಾವುದೇ third-party sponsorship ಅಥವಾ paid promotion ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಚಾನೆಲ್‌ಅನ್ನು ಸಮೀರ್‌ನೇ ಆರಂಭಿಸಿದ್ದಾ ಅಥವಾ ಯಾರಾದರೂ ಜೊತೆಯಾಗಿ ನಡೆಸುತ್ತಿದ್ದಾರಾ ಎಂದು ಪರಿಶೀಲನೆ ಮಾಡಲಾಗುತ್ತದೆ. ಚಾನಲ್‌ಗೆ ಸಂಬಂಧಿಸಿದ AdSense ಖಾತೆ ಯಾರ ಹೆಸರಿನಲ್ಲಿದೆ ಎಂಬ ಮಾಹಿತಿ ಸಂಗ್ರಹ ಕೂಡ ಮಾಡಲಾಗುತ್ತಿದೆ.


ಯೂಟ್ಯೂಬ್ ಚಾನಲ್‌ನಿಂದ ತಿಂಗಳಿಗೆ ಸರಾಸರಿ ಎಷ್ಟು ಆದಾಯ ಬರುತ್ತದೆ ಎಂಬ ವಿವರ ಪಡೆದುಕೊಳ್ಳಲಿದ್ದು, 2025ರ ಜುಲೈ ತಿಂಗಳಲ್ಲಿ ಈ ವೀಡಿಯೊ upload ಆದ ನಂತರ ಆದಾಯದಲ್ಲಿ ಏರಿಕೆ ಕಂಡಿದ್ದರೆ ಅದರ ಬಗ್ಗೆ ಮಾಹಿತಿ ಕಲೆ ಹಾಕಲಿದ್ದಾರೆ. Google/YouTube ನಿಂದ ಹಣ ಯಾವ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ ಎಂಬ ಮಾಹಿತಿಯನ್ನೂ ಪಡೆಯಲಿದ್ದಾರೆ. 'Dootha' ಚಾನಲ್‌ಗೆ ಯಾವುದೇ ರಾಜಕೀಯ/ಸಾಮಾಜಿಕ ಸಂಘಟನೆಗಳಿಂದ ಹಣಕಾಸು ಸಹಾಯ ಸಿಕ್ಕಿದೆಯೇ ಎಂಬ ವಿವರ ಕೂಡ ಸಂಗ್ರಹವಾಗಲಿದೆ.

Post a Comment

Previous Post Next Post