ಗಳೂರು ಬದಲಾಗುತ್ತಿದೆ ಹಾಗೂ ಅಭಿವೃದ್ಧಿ ಆಗುತ್ತಿದೆ ಎನ್ನುವುದು ತಿಳಿದಿರುವ ವಿಚಾರ. ಇದೀಗ ಬೆಂಗಳೂರಿನಲ್ಲಿ ಐದು ಮಹಾನಗರ ಪಾಲಿಕೆಗಳು ರಚನೆ ಆಗಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಆಗಿದೆ. ಇದೇ ಸಂದರ್ಭದಲ್ಲಿ ಬೆಂಗಳೂರಿಗೆ ಯಾವ ಹೊಸ ಪ್ರದೇಶ ಸೇರ್ಪಡೆ ಆಗಿದೆ ಹಾಗೂ ಯಾವ ಪ್ರದೇಶಗಳನ್ನು ಕೈಬಿಡಲಾಗಿದೆ ಎನ್ನುವ ಚರ್ಚೆ ಜೋರಾಗಿದೆ. ಇನ್ನು ಬೆಂಗಳೂರಿನ 5 ಮಹಾನಗರ ಪಾಲಿಕೆಗಳಿಗೆ ಹೊಸ ಪ್ರದೇಶಗಳು ಸೇರ್ಪಡೆಯಾಗಿದ್ದು ಆಸ್ತಿದಾರರಿಗೆ ಖುಷಿ ಕೊಟ್ಟಿದೆ. ಹೊಸದಾಗಿ ಸೇರ್ಪಡೆಯಾದ ಪ್ರದೇಶಗಳಲ್ಲಿ ಭೂಮಿಗೆ ಬಂಗಾರದ ಬೆಲೆ ಬರುವ ನಿರೀಕ್ಷೆ ಮೂಡಿದೆ.
ಬೆಂಗಳೂರು ಆಡಳಿತ ಯಂತ್ರದ ಮೇಲೆ ಒತ್ತಡ ಜಾಸ್ತಿ ಆಗುತ್ತಿದೆ ಹಾಗೂ ಬೆಂಗಳೂರಿನ ಜನಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಜನಸಂಖ್ಯೆಗೆ ಅನುಗುಣವಾಗಿ ಐದು ಪಾಲಿಕೆಗಳನ್ನು ಮಾಡುವುದಾಗಿ ಹಾಗೂ ಆ ಐದು ಮಹಾನಗರ ಪಾಲಿಕೆಗಳಿಗೂ ಏಕಕಾಲದಲ್ಲಿ ಚುನಾವಣೆ ನಡೆಸುವುದಾಗಿ ರಾಜ್ಯ ಕಾಂಗ್ರೆಸ್ ಸರ್ಕಾರವು ಹೇಳಿತ್ತು. ಇದರಂತೆ ಬೆಂಗಳೂರಿನಲ್ಲಿ ಐದು ಮಹಾನಗರ ಪಾಲಿಕೆಗಳ ರಚನೆ ಸೆಪ್ಟೆಂಬರ್ 02ರ ಮಂಗಳವಾರ ಆಗಿದೆ. ಇದರ ಬೆನ್ನಲ್ಲೇ ಹೊಸ ಪ್ರದೇಶಗಳ ಸೇರ್ಪಡೆಯ ಅಪ್ಡೇಟ್ಸ್ ಸಹ ಸಿಕ್ಕಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಅಸ್ತಿತ್ವಕ್ಕೆ ಬಂದಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ'ದ (ಜಿಬಿಎ) ಅಡಿಯಲ್ಲಿ ಐದು ನಗರ ಪಾಲಿಕೆಗಳನ್ನು ರಚಿಸಿರುವ ಬೆನ್ನಲ್ಲೇ ಹಲವು ಮಹತ್ವದ ಬದಲಾವಣೆಗಳು ಆಗಿವೆ. ಇನ್ನು ಹೊಸ ಐದು ನಗರ ಪಾಲಿಕೆಗಳನ್ನು ಬಿಬಿಎಂಪಿ ಚುನಾವಣೆ ನಡೆದಿದ್ದ 198 ವಾರ್ಡ್‌ಗಳಿಗೆ ಅನುಗುಣವಾಗಿ ವಿಂಗಡಣೆ ಮಾಡಲಾಗಿದೆ. ಅಲ್ಲದೇ 225 ವಾರ್ಡ್‌ಗಳ ವಿಂಗಡಣೆ ಸಮಯದಲ್ಲಿ ಸೇರಿಸಲಾದ ಪ್ರದೇಶಗಳನ್ನು ಇದರೊಂದಿಗೆ ಸೇರಿಸಿಕೊಳ್ಳಲಾಗಿದೆ.
ಬೆಂಗಳೂರಿನಲ್ಲಿ ಅಸ್ತಿತ್ವದಲ್ಲಿದ್ದ ಬಿಬಿಎಂಪಿಯು 712 ಚದರ ಕಿ.ಮೀ. ವ್ಯಾಪ್ತಿಯಲ್ಲಿ 5 ನಗರ ಪಾಲಿಕೆಗಳನ್ನು ರಚಿಸಿ ಕರಡು ಅಧಿಸೂಚನೆ ಹೊರಡಿಸಲಾಗಿತ್ತು. ಇದರಲ್ಲಿ ಆನೇಕಲ್ ವಿಧಾನಸಭೆ ಕ್ಷೇತ್ರದ ಸಿಂಗಸಂದ್ರ (ಕೂಡ್ಲು) ವಾರ್ಡ್ ಸೇರಿದಂತೆ 225 ವಾರ್ಡ್‌ಗಳನ್ನು ಪುನರ್ ವಿಂಗಡಣೆ ಮಾಡಿದಾಗ ಸೇರಿಸಲಾಗಿದ್ದ ಪ್ರದೇಶಗಳನ್ನೂ ಸೇರಿಸಿಕೊಂಡು 9 ಚದರ ಕಿ.ಮೀ. ವಿಸ್ತೀರ್ಣ ಮಾಡಿಕೊಂಡು ಒಟ್ಟು 720.9 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಇದೀಗ ಹೊಸ ಐದು ನಗರ ಪಾಲಿಕೆಗಳ ಗಡಿಗಳನ್ನು ಗುರುತಿಸಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.
ಇನ್ನಷ್ಟು ಪ್ರದೇಶಗಳ ಸೇರ್ಪಡೆ ಸಾಧ್ಯತೆ: ಇನ್ನು ಬೆಂಗಳೂರಿಗೆ ಹೊಸ ಪ್ರದೇಶಗಳ ಸೇರ್ಪಡೆ ಇದೇ ಅಂತಿಮವಲ್ಲ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರದೇಶಗಳನ್ನು ಈಗ ರಚನೆಯಾಗಿರುವ ಹೊಸ ಪ್ರದೇಶಗಳ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಿದ್ದೇವೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಹೀಗಾಗಿ, ಈಗ ರಚನೆಯಾಗಿರುವ ಐದು ಪಾಲಿಕೆಗಳ ಗಡಿ ಭಾಗದಲ್ಲಿ ಇರುವ ಕೆಲವು ಪ್ರದೇಶಗಳೂ ಸಹ ಬೆಂಗಳೂರಿನ ಹೊಸ ಪಾಲಿಕೆಗಳ ವ್ಯಾಪ್ತಿಗೆ ಸೇರ್ಪಡೆ ಆಗಲಿದ್ದು, ಈ ಭಾಗದ ಆಸ್ತಿದಾರರು ಕೋಟ್ಯಾಧಿಪತಿಗಳಾಗಲಿದ್ದಾರೆ ಹಾಗೂ ಭೂಮಿಗೆ ಚಿನ್ನದ ಬೆಲೆ ಬರಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.
Post a Comment