ಟ ಕಿಚ್ಚ ಸುದೀಪ್ ಅವರು ದಿಢೀರ್ ಸುದ್ದಿಗೋಷ್ಠಿ ಕರೆದು, ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ರಾಜಕೀಯಕ್ಕೆ ಬರುವ ಬಗ್ಗೆಯೂ ಸುದೀಪ್ ಮಾತನಾಡಿದ್ದು, ಇದೇ ವೇಳೆ ನಟ್ಟು ಬೋಲ್ಟ್ ಟೈಟ್ ಮಾಡುವ ವಿಚಾರಕ್ಕೂ ಕ್ಲಾರಿಟಿ ಕೊಟ್ಟಿದ್ದಾರೆ. ಈ ಹಿಂದೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಚಿತ್ರರಂಗದವರ ನಟ್ಟು ಬೋಲ್ಟ್ ಟೈಟ್ ಮಾಡೋದು ಗೊತ್ತಿದೆ ಎಂದಿದ್ದರು.
ಇದಕ್ಕೆ ತಿರುಗೇಟು ನೀಡಿದ್ದ ಸುದೀಪ್, ಎಲ್ಲರ ನಟ್ಟು-ಬೋಲ್ಟ್ ಟೈಟ್ ಇದೆ ಎಂದಿದ್ದರು. ಈ ವಿಚಾರದ ಬಗ್ಗೆ ಸುದೀಪ್ ಮತ್ತೆ ಮಾತನಾಡಿದ್ದಾರೆ.
ಸಿದ್ದರಾಮಯ್ಯ ಅವರೊಂದಿಗೆ ಇತ್ತೀಚಿನ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಬಗ್ಗೆಯೂ ಸುದೀಪ್ ಸ್ಪಷ್ಟನೆ ನೀಡಿದ್ದಾರೆ. ' ಸಿದ್ದರಾಮಯ್ಯ ಅವರಿಗೆ ಅವರದ್ದೇ ಆದ ತಲೆನೋವುಗಳಿವೆ. ಇನ್ನ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಅಲೋಚನೆ ಅವರಿಗಿಲ್ಲ. ನಾನು ನನ್ನ ಕೆಲವು ಕಾರ್ಯಕ್ರಮಗಳಿಗಾಗಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುತ್ತೇನೆ ಅಷ್ಟೆ. ಅವರ ಮೇಲೆ ತುಂಬಾ ಗೌರವ ಇದೆ' ಎಂದು ಕಿಚ್ಚ ಕ್ಲಾರಿಟಿ ಕೊಟ್ಟಿದ್ದಾರೆ.
ರಾಜಕೀಯಕ್ಕೆ ಬರ್ತೀರಾ? ಎಂಬ ಪ್ರಶ್ನೆಗೆ ಸುದೀಪ್ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ. 'ರಾಜಕೀಯಕ್ಕೆ ಬರೋದು ಗೊತ್ತಿಲ್ಲ. ಆದರೆ ಆಗಾಗ ರಾಜಕೀಯಕ್ಕೆ ಬರಬೇಕು ಅನಿಸುತ್ತೆ. ಕೆಲವರು ಹಾಗೆ ಮಾಡುತ್ತಿರುತ್ತಾರೆ ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ರಾಜಕೀಯಕ್ಕೆ ಹೋದವರೆಲ್ಲ ಬದಲಾಗ್ತಾರೆ ಅಂತೀರಲ್ಲ? ನಾನು ಚೇಂಜ್ ಆಗದೇ ಇರೋ ತರ ನಟ್ಟು ಬೋಲ್ಟು ಟೈಟ್ ಮಾಡಿಕೊಳ್ತೀನಿ' ಎಂದೂ ಸುದೀಪ್ ಹೇಳಿದ್ದಾರೆ.
'ನಟ್ ಬೋಲ್ಟ್ ಕಿತಾಪತಿ ಮಾಡಿದ್ದು ಡಿಕೆ ಸಾಹೇಬ್ರಲ್ಲ!'
'ನಟ್ಟು ಬೋಲ್ಟು ಎಂದ್ರೆ ಡಿಕೆ ಶಿವಕುಮಾರ್ ಸಾಹೇಬ್ರು ಮಾತ್ರವೇ ನೆನಪಿಗೆ ಬರ್ತಾರಾ? ನಿಜ ಹೇಳಬೇಕು ಅಂದ್ರೆ ನಟ್ಟು ಬೋಲ್ಟು ವಿಚಾರದಲ್ಲಿ ಡಿಕೆ ಶಿವಕುಮಾರ್ ಅವರದ್ದು ಏನಿಲ್ಲ. ಈ ಎಲ್ಲ ಕಿತಾಪತಿ ಮಾಡಿದವರು ಸಾಧುಕೋಕಿಲ ಎಂದು ಸುದೀಪ್ ಸ್ಪಷ್ಟನೆ ನೀಡಿದ್ದಾರೆ. ಎಲ್ಲರನ್ನೂ ಕಾರ್ಯಕ್ರಮಕ್ಕೆ ಕರೆದರೆ ನಾನು ಹೇಗೆ ನಿಭಾಯಿಸಲಿ? ಯಾರಿಗೆ ಸೆಕ್ಯುರಿಟಿ ಕೊಡಲಿ? ಎಂದು ಸಾಧು ಕೋಕಿಲ ಅವರು ಆ ಮೇಲೆ ಹೇಳ್ತಾರೆ. ಇದನ್ನು ಅವರು ಮೊದಲೇ ಹೇಳಬಹುದಿತ್ತಲ್ವಾ? ಅಂದು ಡಿಕೆ ಶಿವಕುಮಾರ್ ಅವರು ಹೇಳಿದಾಗ ಸಾಧು ಸುಮ್ಮನೆ ನಿಂತಿದ್ರು' ಎಂದು ತಮಾಷೆಯಾಗಿ ಕಾಲೆಳೆದಿದ್ದಾರೆ.
'ಹೇಳಿದ್ದು ತಪ್ಪಲ್ಲ, ವಿಚಾರ ತಿಳಿಯಬೇಕು'
'ಈಗಲೂ ನಾನು ಹೇಳೋದನ್ನ ಸಾಧು ಕೇಳಿಸಿಕೊಂಡಿರುತ್ತಾರೆ. ಇದೆಲ್ಲ ಕಿತಾಪತಿ ಸಾಧು ಅವರದ್ದೇ ಎಂದಿದ್ದಾರೆ. ಇಂಡಸ್ಟ್ರಿಯಲ್ಲಿ ವೈಯಕ್ತಿಕವಾಗಿ ಯಾರನ್ನೆಲ್ಲ ಕರೆದಿದ್ದರೋ ಅವರೆಲ್ಲ ಆ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಕರೆಯದೆ ಹೇಗೆ ಹೋಗ್ತಾರೆ? ಇನ್ನೂ ಕೆಲವರಿಗೆ ಬರೋಕೆ ಆಗಲಿಲ್ಲ, ಇನ್ನೂ ಕೆಲವರು ದೊಡ್ಡ ದೊಡ್ಡ ಮಾತುಗಳನ್ನಾಡಿದ್ರು, ಪರವಾಗಿಲ್ಲ. ಅದರಲ್ಲಿ ತಪ್ಪೇನಿಲ್ಲ, ಆದರೆ ಮೊದಲೇ ವಿಚಾರ ಏನು ಅಂತ ತಿಳಿದುಕೊಳ್ಳಬೇಕು. ಇದರಲ್ಲಿ ಸಾಧುಕೋಕಿಲ ಅವರದ್ದೂ ತಪ್ಪಿಲ್ಲ, ಅವರು ಇರೋದೇ ತಮಾಷೆ ಮಾಡಿಕೊಂಡು' ಎಂದು ನಟ್ ಬೋಲ್ಟ್ ವಿವಾದಕ್ಕೆ ತೆರೆ ಸುದೀಪ್ ತೆರೆ ಎಳೆದಿದ್ದಾರೆ.
Post a Comment